Search
  • Follow NativePlanet
Share
» »ಒಂದು ದಿನದ ಪ್ರವಾಸಕ್ಕೆ ಬೆಂಗಳೂರಿನಿಂದ ಉಂಚಳಿ ಜಲಪಾತದಡೆಗೆ ಪಯಣ

ಒಂದು ದಿನದ ಪ್ರವಾಸಕ್ಕೆ ಬೆಂಗಳೂರಿನಿಂದ ಉಂಚಳಿ ಜಲಪಾತದಡೆಗೆ ಪಯಣ

ಉಂಚಳಿ ಜಲಪಾತ ಅತ್ಯಂತ ಮನಮೋಕವಾದ ಪ್ರವಾಸಿತಾಣವಾಗಿದೆ. ಈ ಜಲಪಾತವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಸುಮಾರು 25 ಕಿ,ಮೀ ದೂರದಲ್ಲಿದ್ದು ಇದರ ಎತ್ತರವು ಸುಮಾರು 119 ಮೀಟರ್‍ನಷ್ಟಿದೆ. ಈ ಜಲಪಾತವನ್ನು 1843ರಲ್ಲಿ ಬ್ರಿಟಿಷ್ ಅಧಿಕಾರ

ವಾರಾಂತ್ಯದಲ್ಲಿ ಒಮ್ಮೆ ಜಲಪಾತದ ಪ್ರವಾಸಕ್ಕೆ ಹೋಗಬೇಕು ಆದರೆ ಈ ಕೆಲಸದ ನಡುವೆ ಮೂರು ನಾಲ್ಕು ದಿನ ರಜಾ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ದಿನದ ಮಟ್ಟಿಗೆ ಪ್ರಕೃತಿಯ ಮಡಿಲಲ್ಲಿ ಇದ್ದು ಸ್ನೇಹಿತರ ಜೊತೆ ಸಂತೋಷದಿಂದ ಇರಬೇಕು ಎಂದೆನಿಸಿದರೆ ಕೂಡಲೇ ಉಂಚಳಿ ಜಲಪಾತಕ್ಕೊಮ್ಮೆ ಭೇಟಿ ಕೋಡಿ.

ಉಂಚಳಿ ಜಲಪಾತ

PC:Balaji Narayanan

ಉಂಚಳಿ ಜಲಪಾತ ಅತ್ಯಂತ ಮನಮೋಕವಾದ ಪ್ರವಾಸಿತಾಣವಾಗಿದೆ. ಈ ಜಲಪಾತವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಸುಮಾರು 25 ಕಿ,ಮೀ ದೂರದಲ್ಲಿದ್ದು ಇದರ ಎತ್ತರವು ಸುಮಾರು 119 ಮೀಟರ್‍ನಷ್ಟಿದೆ. ಈ ಜಲಪಾತವನ್ನು 1843ರಲ್ಲಿ ಬ್ರಿಟಿಷ್ ಅಧಿಕಾರಿ ಜೆ.ಡಿ ಲುಷಿಂಗ್ಟನ್ ಪತ್ತೆಹಚ್ಚಿದರು. ಲುಷಿಂಗ್ಟನ್ ಈ ಜಲಪಾತವನ್ನು ಅನ್ವೇಷಿಸಿದ ಕಾರಣ ಅವರ ಹೆಸರನ್ನೆ ಈ ಜಲಪಾತಕ್ಕೆ ಇಡಲಾಗಿದೆ. ಉಂಚಳಿ ಜಲಪಾತಕ್ಕೆ ಕೆಪ್ಪ ಜೋಗ ಎಂದೂ ಕೂಡ ಸ್ಥಳೀಯರು ಕರೆಯುತ್ತಾರೆ.

ಉಂಚಳಿ ಜಲಪಾತ

PC:Sachin Bv

ಉಂಚಳಿ ಜಲಪಾತದ ಪ್ರಾಕೃತಿಕ ಸೊಬಗು

ಈ ಜಲಪಾತವು ಹಾಲೀನ ನೊರೆಯಂತಿದ್ದು ನೋಡುಗರನ್ನು ನಿಬ್ಬೆರಗಾಗೂವಂತೆ ಮಾಡುತ್ತದೆ. ಈ ಜಲಪಾತದ ಸುತ್ತಮುತ್ತಲಿನ ಸೌಂದರ್ಯ ಅಪೂರ್ವವಾದುದು ಇಲ್ಲಿನ ಅಡಿಕೆ ತೋಟಗಳು, ದಟ್ಟವಾದ ಅರಣ್ಯ, ಸುಂದರವಾದ ಕಂದರಗಳು, ತಂಪಾದ ಗಾಳಿ, ಪಕ್ಷಿಗಳ ಚಿಲಿಪಿಲಿ ಶಬ್ದಗಳು ಅಲ್ಲಿನ ವಿಶೇಷ ಪ್ರಕೃತಿಯನ್ನು ಸೊಬಗನ್ನು ಕಣ್ಣು ತುಂಬಿಕೊಳ್ಳಬಹುದು. ಇಂತಹ ರಮಣೀಯವಾದ ತಾಣ ಯಾರಿಗೆ ಇಷ್ಟವಾಗುಲ್ಲ ಹೇಳಿ?

 ಜಲಪಾತದ ರಭಸ

PC:Sukruth

ಈ ಜಲಪಾತದ ರಭಸವು ಅತ್ಯಂತ ವೇಗವಾಗಿದ್ದು 13 ಕಿ,ಮೀ ದೂರದಲ್ಲಿರುವವರಿಗೂ ಜಲಪಾತದ ನೀರಿನ ಶಬ್ದ ಕೇಳಿಸುತ್ತದೆಯಂತೆ. ಈ ಜಲಪಾತಕ್ಕೆ ಧೈರ್ಯ ಇದ್ದವರು ಮಾತ್ರ ಇಳಿಯಬಹುದಾಗಿದೆ. ಜಲಪಾತಕ್ಕೆ ಭೇಡಿ ನೀಡಲು ಬೇಸಿಗೆಯ ಕಾಲ ಅತ್ಯಂತ ಸೂಕ್ತಕಾಲವಾದ್ದರಿಂದ ಜಲಪಾತದ ಮೇಲೆ ಹತ್ತಬಹುದು, ಟ್ರೆಕ್ಕಿಂಗ್‍ಗೆ ತೆರಳಬಹುದು, ಕಾಡಿನ ಬೆಟ್ಟಗಳನ್ನು ಅನ್ವೇಷಿಸಬಹುದು. ಉಂಚಳ್ಳಿ ಜಲಪಾತದ ಬಳಿ ಹಲವಾರು ನೋಡುವ ಪ್ರವಾಸಿ ತಾಣಗಳಿವೆ ಹಾಗೂ ಯಾವೆಲ್ಲಾ ತಾಣಗಳಿಗೆ ತೆರಳಬುಹುದು ಎಂಬುದಕ್ಕೆ ಸ್ಥಳೀಯ ಮಾರ್ಗದರ್ಶಕರು ಇರುತ್ತಾರೆ. ಇಲ್ಲಿ ಕೇವಲ ಜಲಪಾತವೇ ಅಲ್ಲದೇ ಸಣ್ಣ ಪುಟ್ಟ ಗುಹೆಗಳಿವೆ ಹಾಗೂ ಹಲವಾರು ಪಕ್ಷಿಗಳು, ಪ್ರಾಣಿಗಳನ್ನು ನೋಡಬಹುದಾಗಿದೆ.

 ಅರಣ್ಯ

PC:Dinesh Valke

ಉಂಚಳಿ ಜಲಪಾತದ ಪ್ರವೇಶ ಸಮಯ
ಈ ಜಲಪಾತವನ್ನು ವೀಕ್ಷಿಸಲು ಸೋಮವಾರದಿಂದ ಭಾನುವಾರದವರೆವಿಗೂ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವೇಶಕ್ಕೆ ಅವಕಾಶಗಳಿವೆ.

ತಲುಪುವ ಬಗೆ
ಉಂಚಳಿ ಜಲಪಾತವು ಬೆಂಗಳೂರಿನಿಂದ 400 ಕಿ,ಮೀ ಅಂತರದಲ್ಲಿದ್ದು ಶಿರಸಿಯಿಂದ ಕೇವಲ 25 ಕಿ,ಮೀ ಅಂತರದಲ್ಲಿದೆ. ಬೆಂಗಳೂರಿನಿಂದ ಹಲವಾರು ಬಸ್‍ಗಳ ಸೌಲಭ್ಯವಿರುವುದರಿಂದ ಈ ಜಲಪಾತಕ್ಕೆ ಸುಲಭವಾಗಿ ಭೇಟಿ ನೀಡಬಹುದಾಗಿದೆ.

 ಅರಣ್ಯ

PC:Kim Siever

ಭೇಟಿ ನೀಡಬೇಕಾದ ತಾಣಗಳು
ಶಿರಸಿಯಲ್ಲಿ ಶ್ರೀ ಮಾರಿಕಾಂಬ ದೇವಾಲಯ, ಶ್ರೀ ವೆಂಕಟರಮಣ ದೇವಾಲಯ, ಪ್ರಗತಿ ಹೋಂ ಸ್ಟೇ ಇನ್ನೂ ಹಲವಾರು ಸುಂದರ ಪ್ರವಾಸಿತಾಣಗಳಿವೆ ಇವನೆಲ್ಲಾ ಒಮ್ಮೆ ನೋಡಿ ಬನ್ನಿ.

ಉತ್ತಮ ಕಾಲಾವಧಿ.
ಈ ಉಂಚಳಿ ಜಲಪಾತಕ್ಕೆ ಭೇಟಿ ನೀಡಲು ಪ್ರಶ್ಯಸ್ತವಾದ ಸಮಯವೆಂದರೆ ಅಕ್ಟೋಬರ್‍ನಿಂದ ಮೇ ತಿಂಗಳು ಈ ತಾಣಕ್ಕೆ ಭೇಟಿಯಾಗಲು ಉತ್ತಮವಾದ ಕಾಲವಾಗಿದೆ. ಏಕೆಂದರೆ ಮಳೆಗಾಲದಲ್ಲಿ ಈ ಬಂಡೆಗಳ ಮೇಲೆ ಕಾಲಿಟ್ಟರೆ ಜಾರುವುದರಿಂದ ಬೇಸಿಗೆ ಕಾಲದಲ್ಲಿ ಭೇಟಿ ನೀಡುವುದು ಸೂಕ್ತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X