Search
  • Follow NativePlanet
Share
» »ತಲೆಕೆಳಗಾಗಿರುವ ಈ ಕೋಟೆಯ ರಹಸ್ಯ ಏನು ಗೊತ್ತಾ?

ತಲೆಕೆಳಗಾಗಿರುವ ಈ ಕೋಟೆಯ ರಹಸ್ಯ ಏನು ಗೊತ್ತಾ?

ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪುರಾತನ ಕೋಟೆಗಳಿವೆ. ಪ್ರತಿಯೊಂದು ಕೋಟೆಯು ತನ್ನದೇ ಆದ ಕಥೆಯನ್ನು ಹೊಂದಿದೆ. ರಾಜರ ಕಾಲದಲ್ಲಿ ಇಂತಹ ಕೋಟೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಎಂದಾದರೂ ನೀವು ಉಲ್ಟಾ ಕೋಟೆಯನ್ನು ನೋಡಿದ್ದೀರಾ? ಅಂದರೆ ತಲೆಕೆಳಗಾಗಿರುವ ಕೋಟೆಯನ್ನು ನೋಡಿದ್ದೀರಾ? ಈ ಬಗ್ಗೆ ಕೇಳಿದ್ದೀರಾ?

ಎಲ್ಲಿದೆ ಈ ಕೋಟೆ?

ಎಲ್ಲಿದೆ ಈ ಕೋಟೆ?

ತಲೆಕೆಳಗಾದ ಕೋಟೆಯು ಉತ್ತರಖಂಡದ ಉದಮ್‌ ಸಿಂಗ್‌ ನಲ್ಲಿನ ಕಾಶಿಪುರದಲ್ಲಿದೆ. ಈ ಕೋಟೆಯ ಉಪ್ಪರಿಗೆ ಮೇಲೆ ನೆಲವಿದೆ. ಹಾಗೂ ಕೋಟೆಯ ಕೆಳಗಿನ ಭಾಗದಲ್ಲಿ ಆಕಾಶವಿದೆಯಂತೆ. ಈ ವರೆಗೂ ಈ ಬಗ್ಗೆ ಯಾರಿಗೂ ತಿಳಿದಿದರಲಿಲ್ಲ. ಆ ಸ್ಥಳದಲ್ಲಿ ಅವಶೇಷಗಳೂ ಸಿಗಲಾರಂಭಿಸಿದ ನಂತರ ಪುರಾತತ್ವ ವಿಭಾಗ ಇದರ ಪರಿಶೀಲನೆ ನಡೆಸಿದೆ.

ಈ ಮಂದಿರದ ಹೆಸರು ಕೇಳಿದ್ರೆ ಪಾಕಿಸ್ತಾನವೂ ಹೆದರುತ್ತಂತೆ!ಈ ಮಂದಿರದ ಹೆಸರು ಕೇಳಿದ್ರೆ ಪಾಕಿಸ್ತಾನವೂ ಹೆದರುತ್ತಂತೆ!

ಪಾಂಡವರು ನಿರ್ಮಿಸಿದ್ದು

ಪಾಂಡವರು ನಿರ್ಮಿಸಿದ್ದು

ಈ ಕೋಟೆಯು ಮಹಾಭಾರತದ ಕಾಲದ್ದು ಎನ್ನಲಾಗುತ್ತದೆ. ಪಾಂಡವರು ನಿರ್ಮಿಸಿದ್ದು ಎನ್ನಲಾಗುತ್ತದೆ. ಪಾಂಡವರು ಶಿಕ್ಷಣ ಪಡೆದಿದ್ದು ಇಲ್ಲಿಯೇ, ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ನೀಡಿದ್ದು ಎನ್ನಲಾಗುತ್ತದೆ. ಹಾಗಾಗಿ ದ್ರೋಣಾಚಾರ್ಯರು ಇಲ್ಲಿ ನೆಲೆಸಿದ್ದರು. ದ್ರೋಣಾಚಾರ್ಯರು ಅರ್ಜುನನಿಗೆ ಬಿಲ್ಲುವಿದ್ಯೆ ಕಲಿಸಿದ್ದು ಇಲ್ಲೇ ಎನ್ನಲಾಗುತ್ತದೆ.

ತಲೆಕೆಳಗಾಗಿದೆ

ತಲೆಕೆಳಗಾಗಿದೆ

ಯಾವುದೋ ಶಕ್ತಿ ಮೂಲಕ ಇದನ್ನು ಉಲ್ಟಾ ಮಾಡಲಾಗಿದೆ ಎನ್ನಲಾಗುತ್ತದೆ. ಯುಗ ಬದಲಾಗುವ ಜೊತೆಗೆ ಈ ಕೋಟೆಯು ನೆಲದೊಳಗೆ ಹುದುಗಿ ಹೋಗಿದೆ ಎನ್ನಲಾಗುತ್ತದೆ. ಈ ನೆಲದೊಳಗೆ ಯುಗಪುರಾಣ ರಹಸ್ಯ ಅಡಗಿದೆ ಎನ್ನಲಾಗುತ್ತದೆ. ಪುರಾತತ್ವ ವಿಭಾಗವು ಈ ನೆಲವನ್ನು ಅಗೆದು ಪರೀಶೀಲನೆ ನಡೆಸಿದ್ದಾರೆ.

ಬೆಂಗಳೂರಿಗೆ ಸಮೀಪದ ದಂಡಿಗನ ಹಳ್ಳಿ ಡ್ಯಾಮ್ ನೋಡಿದ್ದೀರಾ? ಬೆಂಗಳೂರಿಗೆ ಸಮೀಪದ ದಂಡಿಗನ ಹಳ್ಳಿ ಡ್ಯಾಮ್ ನೋಡಿದ್ದೀರಾ?

ಮಹಾಭಾರತದ ಕಾಲದ ವಸ್ತುಗಳು

ಮಹಾಭಾರತದ ಕಾಲದ ವಸ್ತುಗಳು

ಪುರಾತತ್ವ ವಿಭಾಗ ಪರಿಶೀಲನೆಯಿಂದ ಅನೇಕ ಮೂರ್ತಿಗಳು ಸಿಕ್ಕಿವೆ. ಮಹಾಭಾರತದ ಕಾಲದ ವಸ್ತುಗಳು ಸಿಕ್ಕಿವೆ. ಈ ಕೋಟೆಯನ್ನು ಜನರು ಪವಿತ್ರ ಎನ್ನುತ್ತಾರೆ. ಹಿಂದೆ ಈ ಕೋಟೆ ಸರಿಯಾಗಿಯೇ ಇತ್ತು. ಆದರೆ ಯಾವುದೋ ಶಾಪದ ಕಾರಣದಿಂದ ಈ ಕೋಟೆ ತಲೆಕೆಳಗಾಗಿದೆ ಎನ್ನಲಾಗುತ್ತದೆ.

 ರಹಸ್ಯ ತಿಳಿದಿಲ್ಲ

ರಹಸ್ಯ ತಿಳಿದಿಲ್ಲ

ಪುರಾತತ್ವ ಇಲಾಖೆಯ ಪರಿಶೀಲನೆ ಇನ್ನೂ ಮುಗಿಯದ ಕಾರಣ ಈಗ ಇಲ್ಲಿ ಜನರಿಗೆ ಪ್ರವೇಶ ನಿಷೇಧಿಸಲಾಗಿದೆ. ಕಲ್ಲಿನ ಅವಶೇಷಗಳು ಸಿಗಲಾರಂಭಿಸಿದವು . ಈ ಕೋಟೆಯ ರಹಸ್ಯ ಯಾರಿಗೂ ಗೊತ್ತಿಲ್ಲ. ಇದನ್ನು ತಲೆಕೆಳಗಾಗಿಯೇ ನಿರ್ಮಿಸಲಾಗಿತ್ತಾ ಅಥವಾ ಜನರು ಹೇಳುವಂತೆ ಯಾವುದೋ ಶಕ್ತಿಯಿಂದಾಗಿ ಈ ಕೋಟೆ ತಲೆಕೆಳಗಾಗಿದೇಯಾ ಎನ್ನುವುದು ತಿಳಿದಿಲ್ಲ.

 ದ್ರೋಣ ಸಾಗರ

ದ್ರೋಣ ಸಾಗರ

ಈ ಕೋಟೆಯಿಂದ ಸ್ವಲ್ಪ ದೂರದಲ್ಲೇ ದ್ರೋಣ ಸಾಗರವಿದೆ. ಇದನ್ನು ದ್ರೋಣಾಚಾರ್ಯರ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು ಗಂಗಾ ನದಿಯಷ್ಟೇ ಪವಿತ್ರ ಎನ್ನಲಾಗುತ್ತದೆ. ಇಲ್ಲಿ ದ್ರೋಣಾಚಾರ್ಯರ ಶಿಷ್ಯರು ಸ್ನಾನ ಮಾಡುತ್ತಿದ್ದರು ಎನ್ನಲಾಗುತ್ತದೆ.

ಚಿಕ್ಕಮಗಳೂರಿನಲ್ಲಿದ್ದಾಳೆ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ ಚಿಕ್ಕಮಗಳೂರಿನಲ್ಲಿದ್ದಾಳೆ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X