Search
  • Follow NativePlanet
Share
» »ದ್ವಾದಶ ಜ್ಯೋತಿರ್ಲಿಂಗದ ಜಾಗೇಶ್ವರಕ್ಕೊಂದು ಭೇಟಿ

ದ್ವಾದಶ ಜ್ಯೋತಿರ್ಲಿಂಗದ ಜಾಗೇಶ್ವರಕ್ಕೊಂದು ಭೇಟಿ

By Vijay

ದೇವ ಭೂಮಿ ಉತ್ತರಾಖಂಡ ರಾಜ್ಯದಲ್ಲಿ ಬೆರಗಾಗುವಷ್ಟು ಸಂಖ್ಯೆಯಲ್ಲಿ ಧಾರ್ಮಿಕ ತಾಣಗಳಿವೆ, ದೇವಾಲಯಗಳಿವೆ. ಪ್ರತಿಯೊಂದು ಸ್ಥಳಗಳೂ ಸಹ ರೋಚಕ ಹಿನ್ನಿಲೆಯಿಂದ ಕೂಡಿರುವುದನ್ನು ಗಮನಿಸಬಹುದು. ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ಸ್ಥಳ ಹಾಗೂ ದೇವಾಲಯದ ಕುರಿತು ತಿಳಿಸಲಾಗಿದೆ.

ಹನ್ನೆರಡು ಜ್ಯೋತಿರ್ಲಿಂಗಗಳ ಯಾತ್ರೆ

ಆಸಕ್ತಿಕರ ವಿಷಯವೆಂದರೆ ಅನೇಕರು ಇದನ್ನು ನಾಗೇಶ್ ಜ್ಯೋತಿರ್ಲಿಂಗದ ತಾಣ ಎಂದೂ ಸಹ ಹೇಳುತ್ತಾರೆ. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಇದು ಒಂದಾಗಿದೆ ಎಂದು ಹೇಳಲಾಗಿದೆ. ಇದನ್ನ್ಯ್ ಜಾಗೇಶ್ವರ ಜ್ಯೋತಿರ್ಲಿಂಗವೆಂದು ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಎಂಟನೇಯದೆಂದು ಹೇಳಲಾಗುತ್ತದೆ.

ದ್ವಾದಶ ಜ್ಯೋತಿರ್ಲಿಂಗದ ಜಾಗೇಶ್ವರಕ್ಕೊಂದು ಭೇಟಿ

ಚಿತ್ರಕೃಪೆ: wikipedia

ಜುಲೈ 15 ರಿಂದ ಅಗಸ್ಟ್ 15 ರವರೆಗಿನ ಸಮಯದಲ್ಲಿ ಇಲ್ಲಿ ಮಳೆಗಾಲದ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಜಾಗೇಶ್ವರ ದೇವಾಲಯವಿರುವುದು ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ಜಾಗೇಶ್ವರ ಎಂಬ ಪಟ್ಟಣದಲ್ಲಿ.

ಸ್ಥಳ ಪುರಾಣದಂತೆ ಹಿಂದೆ ಈ ಸ್ಥಳವು ಲಕುಲಿಶ ಶೈವರ ಸ್ಥಾನವಾಗಿತ್ತಂತೆ. ಲಕುಲಿಶ ಶಿವನ 28 ನೇಯ ಅವತಾರವೆಂದು ನಂಬಲಾಗಿದ್ದು ಕೆಲವರ ಪ್ರಕಾರ ಪಾಶುಪತ ಸಿದ್ದಾಂತವನ್ನು ಆತ ಪ್ರತಿಪಾದಿಸಿದವ. ಗುಜರಾತ್ ಮೂಲದ ಈ ಸಂತನು ತನ್ನ ಕೈಯಲ್ಲಿ ಕಟ್ಟಿಗೆಯೊಂದನ್ನು ಹಿಡಿದು ಅಲೆದಾಡುತ್ತಿದ್ದವ. ಇಂದಿಗೂ ಇಲ್ಲಿನ ಕುಮೌನಿ ಭಾಷೆಯು ಗುಜರಾತಿ ಭಾಷೆಯೊಂದಿಗೆ ಕೆಲವು ಸಾಮ್ಯತೆ ಹೊಂದಿದೆ.

ದ್ವಾದಶ ಜ್ಯೋತಿರ್ಲಿಂಗದ ಜಾಗೇಶ್ವರಕ್ಕೊಂದು ಭೇಟಿ

ಚಿತ್ರಕೃಪೆ: Varun Shiv Kapur

ಸ್ಥಳ ಪುರಾಣದಂತೆ ಹಿಂದೆ ಶಿವನು ತಪಸ್ಸಿಗಾಗಿ ಈ ಸ್ಥಳ ಆಯ್ದುಕೊಂಡ. ಆದರೆ ರಕ್ಕಸರು ಅವನ ತಪಸ್ಸಿಗೆ ಭಂಗ ತರಲು ಪ್ರಾರಂಭಿಸಿದರು. ಇದಕ್ಕೆ ಪರಿಹಾರವಾಗಿ "ಸಂ" ದೇವತೆಯು ತ್ರಿನೇತ್ರಧಾರಿಯಾಗಿ ತನ್ನ ಗಣಗಳನ್ನು ಕಳಿಸಿ ಆ ರಕ್ಕಸರನ್ನು ಸಂಹರಿಸಿದನು ಹಾಗೂ ಈ ಸ್ಥಳವು ಶಿವನ ತಪಸ್ಸಿಗೆಂದೆ ಮೀಸಲಾಗಿರಿಸಿದನು.

ದ್ವಾದಶ ಜ್ಯೋತಿರ್ಲಿಂಗದ ಜಾಗೇಶ್ವರಕ್ಕೊಂದು ಭೇಟಿ

ಚಿತ್ರಕೃಪೆ: Varun Shiv Kapur

ಮುಂದೆ ಆದಿ ಶಂಕರಾಚಾರ್ಯರು ತಮ್ಮ ಪರ್ಯಟನೆಯಲ್ಲಿರುವಾಗ ಈ ಕ್ಷೇತ್ರಕ್ಕೆ ಬಂದು ಇಲ್ಲಿನ ಜಾಗೇಶ್ವರ ಮುಖ್ಯ ದೇವಾಲಯವನ್ನು ನವೀಕರಣಗೊಳಿಸಲು ನೋಡಿದಾಗ ಅದು ಅವರಿಂದ ಸಾಧ್ಯವಾಗಲಿಲ್ಲ. ಎಕೆಂದರೆ ಇದು ಮೊದಲೇ ಶಿವ ತಪಸ್ಸಿಗೆ ಮೀಸಲಾಗಿತ್ತು. ಅದನ್ನರಿತ ಅವರು ಇದನ್ನು ಹೊರತುಪಡಿಸಿ ಮಿಕ್ಕ ಹಲವು ದೇವಾಲಯಗಳನ್ನು ಪುನರ್ ಪ್ರತಿಷ್ಠಾಪಿಸಿದರಂತೆ.

ಆದಿ ಶಂಕರರು ಜನಸಿದ ಕಾಲಡಿಗೊಂದು ಭೆಟಿ

ಇದೊಂದು ಪುರಾತತ್ವ ಇಲಾಖೆಗೆ ಒಳಪಟ್ಟ ಕ್ಷೇತ್ರವಾಗಿದ್ದು ಇಲ್ಲಿ ನೂರಾರು ಹಲವು ದೇಗುಲಗಳ ಅವಶೇಷಗಳನ್ನು ನೋದಬಹುದಾಗಿದೆ. ದೇವಾಲಯಗಳ ನಗರ ಎಂತಲೂ ಜಾಗೇಶ್ವರ ಪ್ರಸಿದ್ಧಿ ಪಡೆದಿದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಸುತ್ತ ಮುತ್ತಲಿನಿಂದ ಸಾಕಷ್ಟು ಜನ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more