Search
  • Follow NativePlanet
Share
» »ತೆಲುಗು ನಾಡು ಉಂಟಾಗಿದ್ದು ಈ ಕ್ಷೇತ್ರಗಳಿಂದಲೆ!

ತೆಲುಗು ನಾಡು ಉಂಟಾಗಿದ್ದು ಈ ಕ್ಷೇತ್ರಗಳಿಂದಲೆ!

By Vijay

ಭಾರತದ ದಕ್ಷಿಣ ಭಾಗವು ನಾಲ್ಕು ಪ್ರಮುಖ ಸಂಸ್ಕೃತಿಗಳಿಂದ ಕೂಡಿದ ಭಾಗವಾಗಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಶ್ರೀಮಂತ ಇತಿಹಾಸ, ಆಯಾ ಭಾಷೆಯ ಸಂಸ್ಕೃತಿ-ಸಂಪ್ರದಾಯಗಳು ಕ್ರಮವಾಗಿ ಆಯಾ ಭಾಷೆಗಳ ರಾಜ್ಯಗಳಲ್ಲಿ ಹಾಸು ಹೊಕ್ಕಾಗಿರುವುದನ್ನು ಕಾಣಬಹುದು.

ಅದರಂತೆ ತೆಲುಗು ಭಾಷೆಯೂ ಸಹ ತನ್ನದೆ ಆದ ವಿಶೇಷ ಇತಿಹಾಸ ಹಾಗೂ ಶ್ರೀಮಂತಿಕೆಯನ್ನು ಹೊಂದಿದೆ. ಹೆಚ್ಚಾಗಿ ತೆಲುಗು ಭಾಷೆಯನ್ನಾಡುವ ಪ್ರದೇಶವು ತೆಲುಗು ನಾಡಾಗಿ ಗುರುತಿಸಿಕೊಂಡಿದೆ. ಈ ಪ್ರದೇಶದ ಸ್ಥಳ ಪುರಾಣದ ಪ್ರಕಾರ, ಶಿವನು ಲಿಂಗರೂಪಿಯಾಗಿ ಭೂಮಿಯ ಮೇಲೆ ಮೂರು ವಿವಿಧ ಪ್ರದೇಶಗಳಲ್ಲಿ ಇಳಿದುಬಂದು ತೆಲುಗು ನಾಡಿನ ಗಡಿಯನ್ನು ಗುರುತಿಸಿದನಂತೆ!

ನೂತನ ತೆಲಂಗಾಣ ರಾಜ್ಯದ ಪ್ರವಾಸಿ ಸ್ಥಳಗಳು!

ಹೀಗೆ ಶಿವನು ಇಳಿದು ಬಂದ ಕ್ಷೇತ್ರಗಳೆ ತ್ರಿಲಿಂಗ ಕ್ಷೇತ್ರಗಳೆಂದು ಪ್ರಖ್ಯಾತವಾಗಿದೆ. ಇನ್ನೊಂದು ಮೂಲದ ಪ್ರಕಾರ ಪ್ರಸ್ತುತ ತೆಲಂಗಾಣ ರಾಜ್ಯಕ್ಕೆ ಹೆಸರೂ ಸಹ ತ್ರಿಲಿಂಗ ಎಂಬ ಪದದಿಂದಲೆ ಬಂದುದಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ತ್ರಿಲಿಂಗ ಕ್ಷೇತ್ರಗಳು ತೆಲುಗು ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನ ಮಾನಗಳನ್ನೆ ಪಡೆದಿದೆ ಅಂತ ಹೇಳಬಹುದು.

ಅಲ್ಲದೆ, ಪ್ರಸ್ತುತ ಆ ತ್ರಿಲಿಂಗ ಕ್ಷೇತ್ರಗಳು ಪ್ರಮುಖವಾದ ಧಾರ್ಮಿಕ ಕ್ಷೇತ್ರಗಳಾಗಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಹಾಗೂ ಪ್ರವಾಸಿಗರನ್ನೂ ಆಕರ್ಷಿಸುತ್ತವೆ. ಹಾಗಾದರೆ ತೆಲುಗುವಿನ ಆ ಪ್ರಸಿದ್ಧ ತ್ರಿಲಿಂಗ ಕ್ಷೇತ್ರಗಳು ಯಾವುವು ಹಾಗೂ ಅವು ಎಲ್ಲೆಲ್ಲಿವೆ ಎಂಬುದರ ಕುರಿತು ಮಾಹಿತಿಯನ್ನು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ.

ಮುಕ್ತೇಶ್ವರ ಸ್ವಾಮಿ

ಮುಕ್ತೇಶ್ವರ ಸ್ವಾಮಿ

ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯ ಮಹಾದೇವಪುರ ತಾಲೂಕಿನಲ್ಲಿರುವ ಕಾಲೇಶ್ವರಂ ಕ್ಷೇತ್ರವು ಶಿವನ ದೇವಾಲಯದಿಂದಾಗಿ ಅಪಾರ ಖ್ಯಾತಿಗಳಿಸಿದೆ. ಇಲ್ಲಿರುವ ಪ್ರಮುಖ ದೇವಾಲಯವಾದ ಮುಕ್ತೇಶ್ವರ ಸ್ವಾಮಿಯು ತನ್ನದೆ ಆದ ವಿಶೇಷತೆಯನ್ನು ಹೊಂದಿದೆ.

ಚಿತ್ರಕೃಪೆ: kaleshwaramtemple.in

ಇನ್ನೊಂದು ಶಿವ!

ಇನ್ನೊಂದು ಶಿವ!

ಈ ದೇವಾಲಯವು ಒಂದೆ ಕಟ್ಟೆಯ ಮೇಲೆ ಎರಡು ಶಿವಲಿಂಗಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಒಂದು ಶಿವಲಿಂಗವನ್ನು ಯಮ ಅಥವಾ ಕಾಲ ಎಂದು ಪೂಜಿಸಲಾದರೆ ಇನ್ನೊಂದು ಲಿಂಗವನ್ನು ಶಿವನ ರೂಪವಾಗಿ ಪೂಜಿಸಲಾಗುತ್ತದೆ. ಹಾಗಾಗಿಯೆ ಈ ಕ್ಷೇತ್ರಕ್ಕೆ ಕಾಲೇಶ್ವರ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: kaleshwaramtemple.in

ದಕ್ಷಿಣ ತ್ರಿವೇಣಿ

ದಕ್ಷಿಣ ತ್ರಿವೇಣಿ

ತೆಲುಗುವಿನ ತ್ರಿಲಿಂಗ ದೇಶಂನಲ್ಲಿ ಉಲ್ಲೇಖಿಸಲಾದ ಮೂರು ಶಿವಲಿಂಗ ಕ್ಷೇತ್ರಗಳ ಪೈಕಿ ಒಂದಾಗಿದೆ ಕಾಲೇಶ್ವರಂ. ಇದನ್ನು ದಕ್ಷಿಣ ತ್ರಿವೇಣಿ ಸಂಗಮ ಕ್ಷೇತ್ರ ಎಂತಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: kaleshwaramtemple.in

ಪ್ರಾಣಹಿತ

ಪ್ರಾಣಹಿತ

ಈ ಕ್ಷೇತ್ರವು ಎರಡು ಪವಿತ್ರ ನದಿಗಳಾದ ಗೋದಾವರಿ ಹಾಗೂ ಪ್ರಾಣಹಿತ ನದಿಗಳು ಸಂಗಮಿಸುವ ಸ್ಥಳದಲ್ಲಿದೆ. ಅಲ್ಲದೆ ರಹಸ್ಯಮಯವಾದ ಅಂತರ್ವಾಹಿನಿ ನದಿಯೂ ಸಹ ಇವುಗಳೊಂದಿಗೆ ಸಂಗಮ ಹೊಂದುತ್ತದೆ ಎಂಬ ನಂಬಿಕೆಯಿರುವುದರಿಂದ ಇದು ದಕ್ಷಿಣದ ತ್ರಿವೇಣಿ ಸಂಗಮ ಎಂತಲೂ ಕರೆಸಿಕೊಂಡಿದೆ.

ಚಿತ್ರಕೃಪೆ: kaleshwaramtemple.in

ಅಭಿಶೇಕ ಮಾಡಿದ್ದ

ಅಭಿಶೇಕ ಮಾಡಿದ್ದ

ದಂತಕಥೆಯಂತೆ ಹಿಂದೆ ವೈಷ್ಯನೋರ್ವ ಇಲ್ಲಿರುವ ಮುಕ್ತೇಶ್ವರ ಹಾಗೂ ಕಾಲೇಶ್ವರನಿಗೆ ನೂರಾರು ಮಡಕೆಗಳಷ್ಟು ಹಾಲನ್ನು ಅಭಿಶೇಕ ಮಾಡಿದ. ತದನಂತರ ಇಲ್ಲಿನ ಸಂಗಮ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆ ಕ್ಷೀರ ಉತ್ಪತ್ತಿಯಾಯಿತು ಅಥವಾ ವಿಕಸನಗೊಂಡಿತು ಎಂಬ ನಂಬಿಕೆಯಿದೆ. ಆದ್ದರಿಂದ ದಕ್ಷಿಣ ಗಂಗೋತ್ರಿ ಎಮ್ಬ ಹೆಸರನ್ನೂ ಸಹ ಇದು ಪಡೆಯಿತೆನ್ನಲಾಗಿದೆ.

ಚಿತ್ರಕೃಪೆ: kaleshwaramtemple.in

ಮಹಾಶಿವರಾತ್ರಿ

ಮಹಾಶಿವರಾತ್ರಿ

ಸಾಮಾನ್ಯವಾಗಿ ಈ ಕ್ಷೇತ್ರಕ್ಕೆ ಕಾರ್ತಿಕ ಮಾಸದಲ್ಲಿ ಜನಸಾಗರವೆ ಹರಿದುಬರುತ್ತದೆ. ಮಿಕ್ಕಂತೆ ಮಹಾಶಿವರಾತ್ರಿಯ ಸಂದರ್ಭದಲ್ಲೂ ಸಹ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕಾಲೇಶ್ವರಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: kaleshwaramtemple.in

ಹೇಗೆ ತಲುಪಬಹುದು?

ಹೇಗೆ ತಲುಪಬಹುದು?

ಕಾಲೇಶ್ವರಂ ತೆಲಂಗಾಣದ ಕರೀಂನಗರದಿಂದ 135 ಕಿ.ಮೀ ಹಾಗೂ ವಾರಂಗಲ್ ನಿಂದ ಸುಮಾರು 122 ಕಿ.ಮೀ ಗಳಷ್ಟು ದೂರವಿದ್ದು ಈ ಎರಡೂ ನಗರಗಳಿಂದ ಸಾಕಷ್ಟು ಬಸ್ಸುಗಳು ಕಾಲೇಶ್ವರಂಗೆ ತೆರಳಲು ದೊರೆಯುತ್ತವೆ. ಇನ್ನೂ ಕರೀಂನಗರ ಹಾಗೂ ವಾರಂಗಲ್ ನಗರಗಳನ್ನು ರೈಲು ಹಾಗೂ ಬಸ್ಸಿನ ಮೂಲಕ ದಕ್ಷಿಣ ಭಾರತದ ಪ್ರಮುಖ ನಗರಗಳಿಂದ ತಲುಪಬಹುದು.

ಚಿತ್ರಕೃಪೆ: Tallamma

ದ್ರಕ್ಷರಾಮ

ದ್ರಕ್ಷರಾಮ

ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ರಾಮಚಂದ್ರಾಪುರಂ ಬಳಿಯ ದ್ರಕ್ಷರಾಮಂನಲ್ಲಿ ಈ ದೇವಸ್ಥಾನವಿದೆ. ಈ ದೇವಾಲಯ ದೊಡ್ಡದಾಗಿದ್ದು ಶಿವನು ಇಲ್ಲಿ ಭಿಮೇಶ್ವರನಾಗಿ ನೆಲೆಸಿದ್ದಾನೆ.

ಚಿತ್ರಕೃಪೆ: Aditya Gopal

ಆದರೆ ಪೂಜಿಸಿದ್ದ!

ಆದರೆ ಪೂಜಿಸಿದ್ದ!

ರಾಮನ ಯಾವುದೆ ರೀತಿಯ ಹಿನ್ನಿಲೆ ದೇವಸ್ಥಾನದ ಹಿನ್ನಿಲೆಯೊಂದಿಗೆ ಇಲ್ಲದೆ ಹೋದರೂ ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶಿವನನ್ನು ಶ್ರೀರಾಮನು ಪೂಜಿಸಿದ್ದನು. ನಂತರ ಸೂರ್ಯ ಹಾಗೂ ಇಂದ್ರನು ಪೂಜಿಸಿದ್ದರು. ಹಾಗಾಗಿ ಇದಕ್ಕೆ ದ್ರಕ್ಷರಾಮ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗಿದೆ.

ಚಿತ್ರಕೃಪೆ: Rishyankh

ಶ್ರೀಶೈಲಂ

ಶ್ರೀಶೈಲಂ

ಶ್ರೀಶೈಲಂ/ಶ್ರೀ ಶೈಲ ಹಿಂದುಗಳಿಗೆ ಧಾರ್ಮಿಕ ಸಂಪ್ರದಾಯಕ್ಕೆ ಪ್ರಾಮುಖ್ಯತೆಯನ್ನು ಪಡೆದಿರುವ ಪುಟ್ಟ ಪಟ್ಟಣ ಹಾಗು ತ್ರಿಲಿಂಗ ಕ್ಷೇತ್ರಗಳಲ್ಲೊಂದು. ಈ ಕ್ಷೇತ್ರವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಬೆಟ್ಟದ ಮೇಲೆ ಸ್ಥಿತವಿದ್ದು ಕೃಷ್ಣಾ ನದಿಯ ತಟದಲ್ಲಿ ನೆಲೆಸಿದೆ.

ಚಿತ್ರಕೃಪೆ: Anand t83

ದೇಶದ ಹಲವೆಡೆಗಳಿಂದ

ದೇಶದ ಹಲವೆಡೆಗಳಿಂದ

ಶ್ರೀಶೈಲಂ ಪಟ್ಟಣವು ಹಿಂದೂಗಳ ಪವಿತ್ರ ನಗರ ಎಂದು ಗುರುತಿಸಲ್ಪಟ್ಟಿದ್ದು, ಪ್ರತಿ ವರ್ಷ ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಯಾತ್ರಿಗಳು ಬರುತ್ತಾರೆ. ನಗರವು ಪ್ರಸಿದ್ಧ ದೇವಾಲಯಗಳನ್ನು ಹಾಗೂ ತೀರ್ಥ ತಟಗಳನ್ನೂ ಹೊಂದಿರುವುದರಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣವೂ ಆಗಿದೆ. ಶ್ರೀಶೈಲಂ ಆಣೆಕಟ್ಟು.

ಚಿತ್ರಕೃಪೆ: Krishna Bhagavatula

ಜ್ಯೋತಿರ್ಲಿಂಗ ತಾಣ

ಜ್ಯೋತಿರ್ಲಿಂಗ ತಾಣ

ಇಲ್ಲಿನ ಅತ್ಯಂತ ಪ್ರಮುಖವಾದ ದೇವಾಲಯಗಳೆಂದರೆ ಶಿವ ಹಾಗೂ ಆತನ ಪತ್ನಿ ದೇವಿ ಪಾರ್ವತಿಗೆ ಮೀಸಲಾದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ. ಇಲ್ಲಿ ಭಗವಾನ್ ಶಿವನನ್ನು ಮಲ್ಲಿಕಾರ್ಜುನ ಸ್ವಾಮಿ ಎಂತಲೂ ಹಾಗೂ ಪಾರ್ವತಿ ದೇವಿಯನ್ನು ಭ್ರಮರಾಂಭ ಎಂದೂ ಪೂಜಿಸಲಾಗುತ್ತದೆ.

ಚಿತ್ರಕೃಪೆ: Katta Srinivasa Rao

ಮಲ್ಲೇಲ ಜಲಪಾತ

ಮಲ್ಲೇಲ ಜಲಪಾತ

ಈ ದೇವಾಲಯವು ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳ ಎಂದು ಕರೆಸಿಕೊಳ್ಳುವುದಕ್ಕೆ ಕಾರಣ, ಈ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳ ನಡುವೆ ಇರುವುದು. ಮಲ್ಲೆಲಾ ತೀರ್ಥಂ ಧಾರ್ಮಿಕ ದೃಷ್ಟಿಯಿಂದ ಇನ್ನಷ್ಟು ಪ್ರಸಿದ್ಧಿಯನ್ನು ಗಳಿಸಿರುವ ಸ್ಥಳ. ಇದೊಂದು ಜಲಪಾತವಾಗಿದ್ದು, ಈ ತೀರ್ಥದ ನೀರಿನಲ್ಲಿ ಸ್ನಾನ ಮಾಡಿದರೆ ಸ್ನಾನ ಮಾಡಿದ ವ್ಯಕ್ತಿಯ ಪಾಪ ತೊಳೆದು ಹೋಗುತ್ತದೆ ಎನ್ನುವ ನಂಬಿಕೆಯಿದೆ.

ಚಿತ್ರಕೃಪೆ: Ylnr123

ಎಷ್ಟು ದೂರ?

ಎಷ್ಟು ದೂರ?

ಶ್ರೀಶೈಲವು ಪ್ರಸಿದ್ಧ ಸ್ಥಳ ಆಗಿದ್ದರೂ ಇಲ್ಲಿ ವಿಮಾನ ಹಾಗೂ ರೈಲ್ವೆ ನಿಲ್ದಾಣ ವ್ಯವಸ್ಥೆಗಳಿಲ್ಲ. ಶ್ರೀ ಶೈಲಂ ಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಚಳಿಗಾಲ. ಶ್ರೀ ಶೈಲಂ ಪಟ್ಟಣವು ಆಂಧ್ರ ಪ್ರದೇಶದ ರಾಜಧಾನಿ ಹೈದ್ರಾಬಾದ್ ನಗರದ ದಕ್ಷಿಣ ದಿಕ್ಕಿನಲ್ಲಿದೆ ಹಾಗೂ ಇಲ್ಲಿಂದ ಶ್ರೀ ಶೈಲಂ ಪಟ್ಟಣಕ್ಕೆ 212 ಕೀ.ಮಿ ದೂರ.

ಚಿತ್ರಕೃಪೆ: Rajib Ghosh

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more