» »ಚೆನ್ನೈನಲ್ಲಿ ಅರಳಿದ ಅರ್ಮೇನಿಯನ್ ಚರ್ಚ್

ಚೆನ್ನೈನಲ್ಲಿ ಅರಳಿದ ಅರ್ಮೇನಿಯನ್ ಚರ್ಚ್

By: Divya

ದಕ್ಷಿಣ ಭಾರತದಲ್ಲಿ ಚೆನ್ನೈ ಒಂದು ಪ್ರಮುಖ ಪ್ರವಾಸ ತಾಣ. ಭಾರತದಲ್ಲಿ ನೋಡಬಹುದಾದಂತಹ ಪ್ರಸಿದ್ಧ ದೇವಸ್ಥಾನಗಳು, ಸಮುದ್ರ ತೀರಗಳು, ಅದ್ಭುತ ಸ್ಮಾರಕಗಳೆಲ್ಲವೂ ಇಲ್ಲಿವೆ. ಅದರಲ್ಲಿ ಅರ್ಮೇನಿಯನ್ ಚರ್ಚ್ ಒಂದು ಅದ್ಭುತ ಆಕರ್ಷಣಾ ಕೇಂದ್ರ. ಹಾಗಾದರೆ ಇನ್ನೇಕೆ ತಡ? ಬನ್ನಿ ಸುಂದರವಾದ ಈ ಚರ್ಚ್‍ನ ಇತಿಹಾಸವನ್ನು ಅರಿಯೋಣ.

1712ರಲ್ಲಿ ನಿರ್ಮಾಣಗೊಂಡ ಈ ಚರ್ಚ್, ಭಾರತದಲ್ಲಿರುವ ಪುರಾತನ ಚರ್ಚ್‍ಗಳಲ್ಲಿ ಒಂದು. ಚನ್ನೈನಲ್ಲಿರುವ ಅರ್ಮೇನಿಯನ್ ಸ್ಟ್ರೀಟ್‍ನಲ್ಲಿ ಬರುತ್ತದೆ. ಇಂದು ಈ ಚರ್ಚ್ಅನ್ನು ಒಂದು ಪಾರಂಪರಿಕ ತಾಣ ಎಂದು ಗುರುತಿಸಲಾಗಿದೆ.

ಚೆನ್ನೈ ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Armenian Church in Chennai

PC: wikipedia.org

ಇತಿಹಾಸ
ಅರ್ಮೇನಿಯನ್‍ರು ಭಾರತಕ್ಕೆ ವಸಾಹತು ಶಾಹಿಗಳಾಗಿ ಬಂದವರು ಹಲವೆಡೆ ತಮ್ಮ ಚರ್ಚ್‍ಗಳನ್ನು ನಿರ್ಮಿಸಿದ್ದರು. ಅದರಲ್ಲಿ ಚೆನ್ನೈನ ಅರ್ಮೇನಿಯನ್ ಚರ್ಚ್ ಸಹ ಒಂದು. ಇದೇ ರೀತಿಯ ಚರ್ಚ್‍ಗಳನ್ನು ಮುಂಬೈ ಹಾಗೂ ಕೋಲ್ಕತ್ತಾದಲ್ಲಿರುವುದನ್ನು ಕಾಣಬಹುದು. ಆ ಕಾಲದಲ್ಲಿ ಚೆನ್ನೈನಲ್ಲಿರುವ ಈ ಚರ್ಚ್ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು ಎಂದು ಹೇಳಲಾಗುತ್ತದೆ.

Armenian Church in Chennai

PC: wikipedia.org

ಆಕರ್ಷಣೆ
ಇದರಲ್ಲಿರುವ ವಿಶೇಷ ಎಂದರೆ ಘಂಟೆ ಗೋಪುರ. ಇಲ್ಲಿ ವಿವಿಧ ಬಗೆಯ ಆರು ಗೋಪುರಗಳಿವೆ. ಪ್ರತಿಯೊಂದು ಘಂಟೆಯು ಸುಮಾರು 150 ಕೆ.ಜಿ. ತೂಕ ಇರಬಹುದು ಎಂದು ಹೇಳಲಾಗುತ್ತದೆ. ವಿವಿಧ ಉದ್ದ-ಅಳತೆ ಹೊಂದಿರುವ ಘಂಟೆ ಗೋಪುರವು ತನ್ನದೇ ಆದ ಇತಿಹಾಸವನ್ನು ಒಳಗೊಂಡಿವೆ. ಈ ಘಂಟೆಯು ಪ್ರತಿ ಭಾನುವಾರ ಬೆಳಗ್ಗೆ 9.30 ಕ್ಕೆ ಬಾರಿಸುತ್ತವೆ. ಇವೆಲ್ಲವೂ ಚರ್ಚ್‍ನ ಸಂರಕ್ಷಣಾ ಅಧಿಕಾರಿಗಳ ಹಿಡಿತದಲ್ಲಿರುತ್ತವೆ.
ಇಲ್ಲಿಯ ಇನ್ನೊಂದು ಆಕರ್ಷಣೆಯೆಂದರೆ ಚರ್ಚ್‍ನ ಆವರಣದಲ್ಲಿ ಸಮಾಧಿಗಳಿರುವುದು. ಸುಮಾರು 350 ಅರ್ಮೇನಿಯನ್‍ರ ಸಮಾಧಿ ಇರುವುದನ್ನು ಕಾಣಬಹುದು. ಈ ಚರ್ಚ್‍ಗೆ ಬರಲು ಪ್ರತಿದಿನ 9 ರಿಂದ 2.30ರ ವರೆಗೆ ಅನುಮತಿಯಿರುತ್ತದೆ.

Armenian Church in Chennai

PC: wikipedia.org

ಬರುವ ದಾರಿ
ಚೆನ್ನೈನ ಜಾರ್ಜ್ ಟೌನ್‍ನ ಪೆರೀಸ್ ಕಾರ್ನರ್ ರಸ್ತೆಯಲ್ಲಿ ಅರ್ಮೇನಿಯನ್ ಚರ್ಚ್ ಇದೆ. ಚನ್ನೈ ಬೀಚ್ ರೈಲ್ವೆ ಸ್ಟೇಷನ್‍ನಿಂದ 5 ನಿಮಿಷದ ಕಾಲ್ನಡಿಗೆ ದಾರಿ. ನಿಮಗೆ ಬೇಕಾದರೆ ಆಟೋ ಅಥವಾ ಟ್ಯಾಕ್ಸಿಯಲ್ಲಿ ಸುತ್ತಲಿನ ಸಿಟಿ ಹಾಗೂ ಚರ್ಚ್ಅನ್ನು ನೋಡಬಹುದು.

Read more about: chennai
Please Wait while comments are loading...