• Follow NativePlanet
Share
» »ಬೃಹದೀಶ್ವರ ದೇವಾಲಯದ ವಿಶೇಷತೆ....!

ಬೃಹದೀಶ್ವರ ದೇವಾಲಯದ ವಿಶೇಷತೆ....!

Posted By:

ತಂಜಾವೂರ್‍ನ ಬೃಹದೀಶ್ವರ ದೇವಾಲಯಕ್ಕೆ ಅನೇಕ ವಿಶೇಷತೆಗಳಿವೆ. ಸುಮಾರು ಸಾವಿರ ವರ್ಷಗಳ ಚರಿತ್ರೆ ಹೊಂದಿರುವ ಈ ಪ್ರದೇಶಕ್ಕೆ ಅವಿನಾಭಾವ ಸಂಬಂಧವಿದೆ. ಪೂರ್ವದಲ್ಲಿ "ತಂಜನ್" ಎಂಬ ರಾಕ್ಷಸ ರಾಜನು ವಿಜೃಂಬಣೆಯಿಂದ ಆಳ್ವಿಕೆ ಮಾಡಿದ ಈ ಪ್ರದೇಶ ಇದಾಗಿದೆ. ಆ ನಂತರ ಆತನ ಹೆಸರಿನಲ್ಲಿಯೇ ಈ ಪ್ರದೇಶವನ್ನು ಕರೆಯಲಾಯಿತು. ತಂಜಾವೂರು ಚೋಳರ ಕಾಲದಲ್ಲಿ ಸ್ವರ್ಣಯುಗವಾಗಿ ಶ್ರೀಮಂತವಾಗಿ ಮೆರೆದಿತ್ತು. ಒಂದು ಕಾಲದಲ್ಲಿ ಈ ಪ್ರದೇಶವು ಅತಿ ಹೆಚ್ಚು ಬೆಟ್ಟಗಳಿಂದ ಕೂಡಿತ್ತು. ತಂಜಾವೂರಿನಲ್ಲಿ ಅನೇಕ ಅದ್ಭುತವಾದ ದೇವಾಲಯಗಳಿವೆ, ಅನೇಕ ದೇವಾಲಯಗಳು ಯುನೆಸ್ಕೋ ಸಂಸ್ಥೆಯಿಂದ ವಿಶ್ವ ಪಾರಂಪರಿಕ ಸಂಪತ್ತು ಎಂದು ಗುರುತಿಸಿಕೊಂಡಿದೆ.

ತಂಜಾವೂರು ಉಪಜಿಲ್ಲೆಯಾಗಿದ್ದು, ಅದೇ ಹೆಸರಿನ ಜಿಲ್ಲೆಯಲ್ಲಿನ ಒಂದು ಮುನಿಸಿಪಾಲಿಟಿ. ತಂಜಾವೂರುನ್ನು ತಮ್ಮ ರಾಜಧಾನಿ ಮಾಡಿಕೊಂಡ ಚೋಳ ರಾಜರು, ತಮ್ಮ ಆಳ್ವಿಕೆಯ ಕಾಲದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿತ್ತು. ತಂಜಾವೂರು 18 ನೇ ಶತಮಾನದ ಕೊನೆಯಲ್ಲಿ ದೇಶದಲ್ಲಿನ ಸಾಂಸ್ಕøತಿಕ ಕೇಂದ್ರ ಬಿಂದುವಾಗಿತ್ತು. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

1.ಬೃಹದೀಶ್ವರ ದೇವಾಲಯ

1.ಬೃಹದೀಶ್ವರ ದೇವಾಲಯ

Photo Courtesy: Arian Zwegers

ತಂಜಾವೂರಿನಲ್ಲಿಯೇ ಅಲ್ಲ...ದಕ್ಷಿಣ ಭಾರತ ದೇಶದಲ್ಲಿಯೇ ಅತಿ ದೊಡ್ಡ ದೇವಾಲಯ ಎಂದು ಪ್ರಖ್ಯಾತಿ ಪಡೆದಿರುವ ಈ ದೇವಾಲಯವು, ತನ್ನದೇ ಆದ ಶಿಲ್ಪಕಲೆ ಹಾಗು ಸಾಂಸ್ಕøತಿಕ ಚರಿತ್ರೆಗೆ ಪ್ರತೀಕವಾಗಿ ನಿಂತಿದೆ. ಇನ್ನು ಚರಿತ್ರೆಯ ವಿಷಯಕ್ಕೆ ಬಂದರೆ ಕ್ರಿ.ಶ 11 ನೇ ಶತಮಾನದಲ್ಲಿ ಒಂದನೇ ರಾಜ ರಾಜ ಚೋಳ ತನ್ನ ಸೈನಿಕ ಬಳಗದಿಂದ ಸುತ್ತಮುತ್ತ ಪ್ರದೇಶಗಳ ಮೇಲೆಯು ಕೂಡ ಯುದ್ಧವನ್ನು ಮಾಡಿದನು. ತನ್ನ ಅಧೀನಕ್ಕೆ ಬಂದ ಪ್ರದೇಶದಲ್ಲಿ ಬೃಹದೀಶ್ವರ ದೇವಾಲಯವನ್ನು ನಿರ್ಮಾಣ ಮಾಡಿದನು ಎಂದು ಚರಿತ್ರೆ ಕಥೆ.

ಅಂದಿನಿಂದ ರಾಜ ರಾಜ ಚೋಳನಿಗೆ ಸೋಲು ಎನ್ನುವುದು ಇಲ್ಲದೇ ಹೋಯಿತು. ತನ್ನ ರಾಜ್ಯ ಸುಭೀಕ್ಷೆಯಾಗಿ ಸಸ್ಯಶ್ಯಾಮಲವಾಗಿತ್ತು. ನೂರಾರು ಜನರಿಗೆ ಅನ್ನಪೂರ್ಣವಾಗಿ ಮಾರ್ಪಾಟು ಮಾಡಿದನು. ಇದೆಲ್ಲಾ ಹೇಗೆ ನಡೆಯಿತು ಎಂದರೆ? ಇದು ಪರಮಶಿವನ ಕೃಪೆ ಎಂದೇ ಹೇಳಬಹುದು. ಹಾಗಾಗಿಯೇ ನಿತ್ಯವು ಧೂಪ-ದೀಪ ನೈವೇದ್ಯದಿಂದ ಭಕ್ತರು ಶಿವನಾಮ ಸ್ಮರಣೆಯಿಂದ ಬೃಹದೀಶ್ವರ ದೇವಾಲಯವು ಕಂಗೊಳಿಸುತ್ತಿರುತ್ತದೆ.

2.ಮಹಾ ನಂದಿ

2.ಮಹಾ ನಂದಿ

Photo Courtesy: Arian Zwegers

ಈ ದೇವಾಲಯದಲ್ಲಿ ಸುಮಾರು 12 ಅಡಿ ಎತ್ತರದ ಶಿವಲಿಂಗ ಸಾಕ್ಷಾತ್ಕರಿಸುತ್ತಾ ಭಕ್ತರನ್ನು ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಅದಕ್ಕೆ ತಕ್ಕಂತೆ...ದೇವಾಲಯದ ಮುಖ ದ್ವಾರದಲ್ಲಿ 12 ಅಡಿಯ ಮಹಾನಂದಿಯು ಕ್ಷೇತ್ರ ಪಾಲಕನಾಗಿ....ದ್ವಾರ ಪಾಲಕನಾಗಿ... ನೆಲೆಸಿರುವುದು ವಿಶೇಷ. ಇದು ದೇವಾಲಯದ ಮುಖ ದ್ವಾರದ ಸಮೀಪದಲ್ಲಿ ಪ್ರತಿಷ್ಟಾಪಿಸಲಾಗಿದೆ.

3.ನೆರಳು

3.ನೆರಳು

Photo Courtesy: Varun Shiv Kapur

ಬೃಹದೀಶ್ವರ ದೇವಾಲಯದಲ್ಲಿ ನಮಗೆ ತಿಳಿಯದ ಒಂದು ವಿಶೇಷತೆಗಳು ಏನೆಂದರೆ...ಗೊಧೋಳಿಯ ಸಮಯದಲ್ಲಿ ಈ ದೇವಾಲಯದ "ಛಾಯೆ" ಯು ಕಾಣಿಸುವುದಿಲ್ಲ. ವರ್ಷದ ಉದ್ದಕ್ಕೂ....ಯಾವ ದಿನವೂ ಸಂಜೆಯ ಸಮಯದಲ್ಲಿ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೆ ಇರುವುದು ಬಗೆಹರಿಸಲಾಗದ ರಹಸ್ಯವಾಗಿಯೇ ಉಳಿದಿದೆ. ಶಾಸ್ತ್ರ ಪರಿಶೋಧಕರು...ಪುರಾತತ್ತ್ವ ಶಾಸ್ತ್ರಜ್ಞರು ಯಾವ ರೀತಿ ನೋಡಿದರು ಕೂಡ ಉತ್ತರ ಮಾತ್ರ ಅವರಿಗೆ ದೊರೆಯುತ್ತಿಲ್ಲ.

4.ಮೊಟ್ಟ ಮೊದಲ ಗ್ರಾನೈಟ್ ದೇವಾಲಯ

4.ಮೊಟ್ಟ ಮೊದಲ ಗ್ರಾನೈಟ್ ದೇವಾಲಯ

Photo Courtesy: Jean-Pierre Dalbéra

ಪ್ರಪಂಚದಲ್ಲಿನ ಮೊಟ್ಟ ಮೊದಲ ಬಾರಿಗೆ ಪೂರ್ತಿಯಾಗಿ ಗ್ರಾನೈಟ್‍ನಿಂದ ನಿರ್ಮಾಣ ಮಾಡಿದ ದೇವಾಲಯ ಇದಾಗಿದೆ. ಆದರೆ ಸಾವಿರ ಕಿ.ಮೀ ದೂರದಲ್ಲಿ ಎಲ್ಲೂ ಕೂಡ ಗ್ರಾನೈಟ್ ಎಂಬುದು ಕಾಣಿಸುವುದಿಲ್ಲ. ಗ್ರಾನೈಟ್ ಅನ್ನು ಹೇಗೆ ಇಲ್ಲಿಗೆ ತೆಗೆದುಕೊಂಡು ಬಂದರು? ಎಷ್ಟು ಕಾಲ ತೆಗೆದುಕೊಂಡಿತು ದೇವಾಲಯದ ನಿರ್ಮಾಣಕ್ಕೆ ಎಂಬ ಪ್ರಶ್ನೆಗಳಿಗೆ ಮಾತ್ರ ಇಂದಿಗೂ ಕೂಡ ಉತ್ತರ ದೊರೆತಿಲ್ಲ. ಗ್ರಾನೈಟ್ ಕಲ್ಲನ್ನು ದೇವಾಲಯದ ಮೇಲ್ಭಾಗದಲ್ಲಿ ನಿರ್ಮಾಣ ಮಾಡುವುದು ಕಷ್ಟ ಸಾಧ್ಯವಾದುದು. ಅಂಥಹದು ಅಷ್ಟು ದೂರದಿಂದ ಕಲ್ಲನ್ನು ತೆಗೆದುಕೊಂಡು ಬಂದು.... ಇಲ್ಲಿ ಹೇಗೆ ಪ್ರತಿಷ್ಟಾಪಿಸಿದರು ತಿಳಿದಿಲ್ಲ.

ಅಂದಿನ ಶಿಲ್ಪಕಲಾ, ಕಲಾಕಾರರು ಎಷ್ಟು ಶ್ರಮ ಪಟ್ಟಿದ್ದಾರೆಯೋ? ಪ್ರತಿದಿನ 50 ಟನ್ನುಗಳಷ್ಟು ಗ್ರಾನೈಟ್ ಶಿಲೆಗಳನ್ನು ತೆಗೆದುಕೊಂಡು ನಿರ್ಮಾಣ ಮಾಡುತ್ತಿದ್ದರು ಎಂದು ಅಲ್ಲಿನ ಸ್ಥಳೀಯರ ಕಥೆಯಾಗಿದೆ. ಕ್ರಿ.ಶ 1003 ರಂದು ಬೃಹದೀಶ್ವರ ದೇವಾಲಯಕ್ಕೆ ಸಂಬಂಧಿಸಿದ ಮಹತ್ತರ ಕಾರ್ಯಕ್ರಮಗಳು ಮುಗಿಯಿತು.

5.ಸಂಗೀತ ಸ್ತಂಭಗಳು

5.ಸಂಗೀತ ಸ್ತಂಭಗಳು

Photo Courtesy: Varun Shiv Kapur

ದೇವಾಲಯದ ಪ್ರವೇಶ ದ್ವಾರದ ಒಳಗೆ ಪ್ರವೇಶಿಸುತ್ತಿದ್ದಂತೆ ಮೊದಲು ಗಣಪತಿಯು ದರ್ಶನ ನೀಡುತ್ತಾನೆ. ಇಲ್ಲಿನ ಶಿಲ್ಪಗಳು ಪ್ರವಾಸಿಗರಿಗೆ ಹಾಗು ಭಕ್ತರಿಗೆ ಆಕರ್ಷಿಸುತ್ತದೆ. ಇಲ್ಲಿನ ಕಲ್ಲುಗಳು ಸಂಗೀತವನ್ನು ಹಾಡುತ್ತದೆಯಂತೆ ಇದೇ ಇಂದಿನ ವಿಶೇಷತೆ.

6.ಹಬ್ಬಗಳು

6.ಹಬ್ಬಗಳು

Photo Courtesy: Arian Zwegers

ರಾಜ ರಾಜ ಚೋಳನ ಜನ್ಮದಿನ ಸಂದರ್ಭವಾಗಿ ಇಲ್ಲಿನ ಪ್ರತಿ ತಿಂಗಳು ಹಬ್ಬದ ವಾತಾವರಣವಿರುತ್ತದೆ. ಆ ಮಹಾರಾಜನ ಹೆಸರಿನ ಮೇಲೆ ಉತ್ಸವಗಳು ಪೂಜಾದಿ ಕಾರ್ಯಕ್ರಮಗಳು ನಿರ್ವಹಿಸುತ್ತಿರುತ್ತಾರೆ. ಅಷ್ಟೇ ಅಲ್ಲ ವೈಶಾಖ ಮಾಸದಲ್ಲಿ 9 ದಿನಗಳ ಕಾಲ ಬೃಹದೀಶ್ವರ ದೇವಾಲಯದಲ್ಲಿ ನಡೆಯುವ ಹಬ್ಬಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇನ್ನು ದೇವಾಲಯದ ವೈಭವವನ್ನು ಹಾಗು ಶಿಲ್ಪ ಕಲಾ ಚಾತುರ್ಯವನ್ನು ವರ್ಣಿಸಲು ಮಾತುಗಳೇ ಸಾಲದು.

7.ಮರಾಠ ಪ್ಯಾಲೆಸ್

7.ಮರಾಠ ಪ್ಯಾಲೆಸ್

Photo Courtesy: Jean-Pierre Dalbéra

ಈ ಪ್ಯಾಲೆಸ್ ಅನ್ನು ಮೊಟ್ಟ ಮೊದಲ ಬಾರಿಗೆ ತಂಜಾವೂರ್ ನಾಯಕ್ ವಂಶಿಕರು ನಿರ್ಮಾಣ ಮಾಡಿದರು. ಅವರ ಪತನದ ನಂತರ ಇದು ಮರಾಠ ಅಧಿಕಾರಿಗಳ ನಿವಾಸವಾಗಿತ್ತು. 1674 ರಿಂದ 1885 ರವರೆಗೆ ತಂಜಾವೂರ್ ಅನ್ನು ಆಳ್ವಿಕೆ ಮಾಡಿದ ಭೋಂಸ್ಲೆ ಕುಟುಂಬವು ಇದನ್ನು ನಿವಾಸವಾಗಿ ಮಾಡಿಕೊಂಡಿದ್ದರು. ಈ ಕೋಟೆ ಅಂದಿನ ಚರಿತ್ರೆಗೆ ನಿದರ್ಶನವಾಗಿದೆ. ಈ ಕೋಟೆಯನ್ನು 1799 ರ ವರ್ಷದಲ್ಲಿ ಬ್ರಿಟೀಷ್‍ರ ಕೈಗೆ ಹೋಗದಂತೆ ಇರುವುದಕ್ಕೆ ಕೋಟೆಯ ಸುತ್ತ ರಕ್ಷಣ ವಲಯವನ್ನು ಏರ್ಪಾಟು ಮಾಡಿದರು.

8.ಸರಸ್ವತಿ ಮಹಲ್

8.ಸರಸ್ವತಿ ಮಹಲ್

Photo Courtesy: Wiki-uk

ಲೈಬ್ರರಿ ತಂಜಾವೂರ್‍ನ ಸರಸ್ವತಿ ಮಹಲ್ ಲೈಬ್ರರಿ ಏಶಿಯಾದಲ್ಲಿಯೇ ಅತ್ಯಂತ ಪುರಾತನವಾದುದುಗಳಲ್ಲಿ ಒಂದಾಗಿದೆ. ಇಲ್ಲಿನ ತಾಳೆಪತ್ರೆ ಮತ್ತು ತಮಿಳು. ಮರಾಠಿ, ತೆಲುಗು ಮತ್ತು ಆಂಗ್ಲ ಭಾಷೆಯಲ್ಲಿನ ಅಚ್ಚು ಪತ್ರಗಳ ಅಸಾಧಾರಣವಾದ ಶೇಖರಣೆಗಳಿವೆ. ಸರಸ್ವತಿ ಮಹಲ್ ಲೈಬ್ರರಿ ಕ್ರಿ.ಶ 1535-1675 ರಿಂದ ಆಳ್ವಿಕೆ ಮಾಡಿದ ನಾಯಕ್ ರಾಯಲ್ ಲೈಬ್ರರಿಯನ್ನು ಪ್ರಾರಂಭಿಸಿದರು. 1918 ರಿಂದ ಈ ಲೈಬ್ರರಿ ತಮಿಳುನಾಡು ರಾಜ್ಯದ ನಿಯಂತ್ರಣದಲ್ಲಿ ಇದೆ.

9.ತಂಜಾವೂರಿಗೆ ತೆರಳುವ ಬಗೆ ಹೇಗೆ?

9.ತಂಜಾವೂರಿಗೆ ತೆರಳುವ ಬಗೆ ಹೇಗೆ?

ವಿಮಾನ ಮಾರ್ಗದ ಮೂಲಕ
ತಂಜಾವೂರಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ..ತಿರುಚಿರಾಪಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ತಂಜಾವೂರಿಗೆ ಸುಮಾರು 56 ಕಿ.ಮೀ ದೂರದಲ್ಲಿದೆ. ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದಲ್ಲಿನ ಎಲ್ಲಾ ಪ್ರಧಾನವಾದ
ನಗರಗಳಾದ ದೆಹಲಿ, ಬೆಂಗಳೂರು, ಹೈದ್ರಾಬಾದ್, ವಿಶಾಖ ಪಟ್ಟಣ, ವಿಜಯವಾಡ ಇನ್ನಿತರ ನಗರಗಳಿಂದ ನಿತ್ಯವು ಇಲ್ಲಿಗೆ ವಿಮಾನಗಳು ಸಂಪರ್ಕ ಸಾಧಿಸುತ್ತವೆ.

10.ರೈಲ್ವೆ ಮಾರ್ಗದ ಮೂಲಕ

10.ರೈಲ್ವೆ ಮಾರ್ಗದ ಮೂಲಕ

Photo Courtesy: Prince Gladson

ತಂಜಾವೂರ್‍ನಲ್ಲಿ ರೈಲ್ವೆ ನಿಲ್ದಾಣವಿದೆ. ಇದು ಒಂದು ಪ್ರಧಾನವಾದ ರೈಲ್ವೆ ಜಂಕ್ಷನ್ ಆಗಿದೆ. ಇಲ್ಲಿಗೆ ನಿತ್ಯವು ರೈಲುಗಳು ಸಂಪರ್ಕ ಸಾಧಿಸುತ್ತಿರುತ್ತದೆ. ದೇಶದಲ್ಲಿನ ಮುಖ್ಯ ಪಟ್ಟಣಗಳಿಂದ ಇಲ್ಲಿಗೆ ಸುಲಭವಾಗಿ ಸೇರಿಕೊಳ್ಳಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ