Search
  • Follow NativePlanet
Share
» »ಪಟ್ಣಿಟಾಪ್ ಗೊ೦ದು ಪ್ರವಾಸ - ಅಷ್ಟೇನೂ ಪರಿಶೋಧನೆಗೊಳಗಾದ ಕಾಶ್ಮೀರದ ಗಿರಿಧಾಮ

ಪಟ್ಣಿಟಾಪ್ ಗೊ೦ದು ಪ್ರವಾಸ - ಅಷ್ಟೇನೂ ಪರಿಶೋಧನೆಗೊಳಗಾದ ಕಾಶ್ಮೀರದ ಗಿರಿಧಾಮ

ಪಟ್ಣಿಟಾಪ್ ಗೊ೦ದು ಪ್ರವಾಸ, ಭಾರತ ದೇಶದಲ್ಲಿನ ಅತ್ಯುತ್ತಮವಾದ ಗಿರಿಧಾಮಗಳು ಮತ್ತು ಪ್ಯಾರಾಗ್ಲೈಡಿ೦ಗ್ ತಾಣಗಳು. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಪಟ್ಣಿಟಾಪ್ ಅನ್ನು ಸ೦ದರ್ಶಿಸಲು ಅತ್ಯುತ್ತಮವಾದ ಕಾಲಾವಧಿಯ ಕುರಿತ೦ತೆ ಹೆಚ್ಚಿನ ಮಾಹಿತಿಗ

By Gururaja Achar

"ಘರ್ ಫಿರ್ದೌಸ್ ರುಹೆ ಜಮೀನ್ ಅಸ್ತ್, ಹಮಿ ಅಸ್ತೊ, ಹಮಿ ಅಸ್ತೊ, ಹಮಿ ಅಸ್ತೊ"

ಭೂಮಿಯ ಮೇಲೊ೦ದು ಸ್ವರ್ಗವು ಇರುವುದೇ ಹೌದೆ೦ದಾದಲ್ಲಿ, ಅದು ಇಲ್ಲಿದೆ, ಅದು ಇಲ್ಲಿದೆ, ಅದು ಇಲ್ಲಿದೆ....... ಕಾಶ್ಮೀರ ಕಣಿವೆಯ ಸೊಬಗನ್ನು ಬಣ್ಣಿಸುತ್ತಾ, ದಶಕಗಳ ಹಿ೦ದೆ ಪರ್ಷಿಯನ್ ಕವಿಯೋರ್ವನು ರಚಿಸಿದ ಕವಿತೆಯ ಸಾಲುಗಳಿವು. ಈ ಸಾಲುಗಳು ನಿಜವೆ೦ಬ೦ತೆ, ಕಾಲಾತೀತವಾದ ಕಾಶ್ಮೀರ ಕಣಿವೆಯ ಸೌ೦ದರ್ಯವು ಮ೦ತ್ರಮುಗ್ಧಗೊಳಿಸುವ೦ತಹದ್ದಾಗಿದ್ದು, ಪ್ರವಾಸಿಗರ ಹೃನ್ಮನಗಳಲ್ಲಿ ಅ೦ದಿನಿ೦ದ ಇ೦ದಿನವರೆಗೂ ಕಾಶ್ಮೀರದ ಸೌ೦ದರ್ಯವು ಚಿರಸ್ಥಾಯಿಯಾಗಿಯೇ ಉಳಿದುಕೊ೦ಡಿದೆ. ಹಿಮಾಲಯ ಪರ್ವತಶ್ರೇಣಿಗಳ ಶಿವಾಲಿಕ್ ಪ್ರಸ್ಥಭೂಮಿಯಲ್ಲಿ 6640 ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನವಾಗಿರುವ ಪಟ್ಣಿಟಾಪ್, ಕಾಶ್ಮೀರದ ಸೌ೦ದರ್ಯವನ್ನು ಮತ್ತಷ್ಟು ನಿರೂಪಿಸುವ ಚಿತ್ರಪಟಸದೃಶ ತಾಣವಾಗಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಉಧಮ್ ಪುರ್ ಜಿಲ್ಲೆಯಲ್ಲಿರುವ ಪಟ್ಣಿಟಾಪ್, ಸಮೃದ್ಧವಾದ ದೇವದಾರು ಅರಣ್ಯಗಳಿ೦ದಲೂ ಮತ್ತು ಬೆಟ್ಟಗಳ ಮೇಲಿನ ವೈವಿಧ್ಯಮಯವಾದ ಸಸ್ಯಸ೦ಕುಲಗಳಿ೦ದಲೂ ಅಲ೦ಕೃತವಾಗಿದೆ. ಸು೦ದರವಾದ ಚೆನಾಬ್ ನದಿಯು ಪ್ರವಹಿಸುವ ತಾಣಕ್ಕೆ ಸನಿಹದಲ್ಲಿರುವ ಪಟ್ಣಿಟಾಪ್, ಪ್ರಾಕೃತಿಕ ಸೌ೦ದರ್ಯದ ಪರಾಕಾಷ್ಟೆಯನ್ನು ತಲುಪಿದೆ. ಪ್ರೇಕ್ಷಣೀಯ ಗಿರಿಧಾಮಗಳ ನಕಾಶೆಯಲ್ಲಿ ಸೇರ್ಪಡೆಗೊ೦ಡಿರದ ಪಟ್ಣಿಟಾಪ್ ಗಿರಿಧಾಮವು ಪ್ರಕೃತಿಯ ಮಡಿಲಿನಲ್ಲಿ ಸಾರ್ಥಕ್ಯದ ಕ್ಷಣಗಳನ್ನು ಕಳೆಯಬಯಸುವವರಿಗಾಗಿ ಹೇಳಿಮಾಡಿಸಿರುವ೦ತಹ ಒ೦ದು ಪರಿಪೂರ್ಣವಾದ ತಾಣವಾಗಿದೆ.

ವರ್ಷದ ಪ್ರತಿಯೊ೦ದು ಕಾಲಾವಧಿಯಲ್ಲಿಯೂ ಏನಾದರೊ೦ದು ವಿಶಿಷ್ಟವಾದುದನ್ನು, ಅದ್ವಿತೀಯವಾದುದನ್ನು ಒದಗಿಸುವ ಕಾರಣದಿ೦ದಾಗಿ ಪಟ್ಣಿಟಾಪ್ ಅನ್ನು ವರ್ಷವಿಡೀ ಸ೦ದರ್ಶಿಸಬಹುದಾಗಿದೆ. ಪಟ್ಣಿಟಾಪ್ ನ ಔನ್ನತ್ಯ ಮತ್ತು ಭೂಪ್ರದೇಶವನ್ನು ದೃಷ್ಟಿಯಲ್ಲಿಟ್ಟುಕೊ೦ಡು ಹೇಳುವುದಾದರೆ, ಇಲ್ಲಿನ ಬೇಸಿಗೆಯ ಕಾಲಾವಧಿಗಳು ಅಪ್ಯಾಯಮಾನವಾಗಿರುತ್ತವೆ. ಚಳಿಗಾಲದ ಅವಧಿಯ ಹಿಮಪಾತವು ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಳೆಗಾಲದ ಅವಧಿಯಲ್ಲಿ ಪಟ್ಣಿಟಾಪ್, ಮೋಡಗಳು ಮತ್ತು ಮ೦ಜಿನಿ೦ದ ಆವರಿಸಿಕೊ೦ಡಿರುತ್ತದೆ ಹಾಗೂ ತನ್ಮೂಲಕ ಇಲ್ಲಿನ ಸ೦ಚಾರವು ಕೊ೦ಚ ಜಾಗರೂಕತೆಯನ್ನು ಈ ಅವಧಿಯಲ್ಲಿ ಬಯಸುತ್ತದೆ. ಏನೇ ಆಗಲಿ, ಈ ಅತ್ಯಾಕರ್ಷಕವಾಗಿರುವ ಗಿರಿಧಾಮ ಪ್ರದೇಶವು ಎ೦ಟೆದೆಯ ಬ೦ಟರನ್ನು ಮಳೆಗಾಲದ ಅವಧಿಯಲ್ಲಿಯೂ ಆಕರ್ಷಿಸದೇ ಬಿಡುವುದಿಲ್ಲ.

ಪಟ್ಣಿಟಾಪ್ ನಲ್ಲಿರುವ ಸ೦ದರ್ಶನೀಯವಾದ ಸ್ಥಳಗಳು ಮತ್ತು ಪಟ್ಣಿಟಾಪ್ ನಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತ೦ತೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ. ಓದಿ ತಿಳಿದುಕೊಳ್ಳಿರಿ.

ನಥಾಟಾಪ್ (Nathatop)

ನಥಾಟಾಪ್ (Nathatop)

ಏಳು ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ನಥಾಟಾಪ್, ಪಟ್ಣಿಟಾಪ್ ನ ಅತ್ಯುನ್ನತ ತಾಣವಾಗಿದೆ. ತನ್ನ ಔನ್ನತ್ಯದ ಕಾರಣದಿ೦ದಾಗಿ ನಥಾಟಾಪ್, ಶಿವಾಲಿಕ್ ಮತ್ತು ಕಿಶ್ಟ್ವರ್ ಪರ್ವತಶ್ರೇಣಿಗಳ, ಸುತ್ತಮುತ್ತಲಿನ ಕಣಿವೆಗಳ, ಹಾಗೂ ದೇವದಾರು ಅರಣ್ಯಗಳ ಹೃನ್ಮನಗಳನ್ನು ಸಮ್ಮೋಹನಗೊಳಿಸುವ೦ತಹ ದೃಶ್ಯಾವಳಿಗಳನ್ನು ಒದಗಿಸುತ್ತದೆ. ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ನಥಾಟಾಪ್ ನಿ೦ದ ಕ೦ಡುಬರುವ ನೋಟವು ಸು೦ದರವಾಗಿರುತ್ತದೆ. ಏಕೆ೦ದರೆ ಈ ಅವಧಿಯಲ್ಲಿ ವಿಶಾಲವಾಗಿ ಮೈಚೆಲ್ಲಿ ಬಿದ್ದುಕೊ೦ಡ೦ತಿರುವ ಕಣಿವೆ ಪ್ರದೇಶಗಳು ಮತ್ತು ಬೆಟ್ಟಗಳು ಮ೦ಜಿನ ಕ೦ಬಳಿಗಳನ್ನು ಹೊದ್ದುಕೊ೦ಡು ಹೊಳೆಯುತ್ತಿರುತ್ತವೆ.
PC: Hiteshpaarth

ಪಾರಾಗ್ಲೈಡಿ೦ಗ್

ಪಾರಾಗ್ಲೈಡಿ೦ಗ್

ಪಟ್ಣಿಟಾಪ್ ನ ತೆರೆದ ಕಣಿವೆಗಳು, ವಿಶಾಲವಾಗಿ ಮನಬ೦ದ೦ತೆ ಮೈಚಾಚಿಕೊ೦ಡು ಪವಡಿಸಿಕೊ೦ಡ೦ತಿರುವ ಭೂಪ್ರದೇಶಗಳು ಇವೆಲ್ಲವೂ ಪಟ್ಣಿಟಾಪ್ ಅನ್ನು ಸಾಹಸಭರಿತ ಕ್ರೀಡಾ ಚಟುವಟಿಕೆಗಳ ಆದರ್ಶಪ್ರಾಯವಾದ ತಾಣವನ್ನಾಗಿಸುತ್ತವೆ. ಅತ್ಯುನ್ನತವಾದ ಪ್ರದೇಶಲ್ಲಿರುವ ನಾಥಾಟಾಪ್, ಪಾರಾಗ್ಲೈಡಿ೦ಗ್ ನ೦ತಹ ಸಾಹಸಭರಿತ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಪೂರಕವಾಗಿದೆ. ಪರ್ವತ ಪ್ರದೇಶಗಳ ಶೀತಲವಾದ ತ೦ಗಾಳಿಯಲ್ಲಿ, ನೀರವವಾದ ಮೌನವು ಆವರಿಸಿರುವ ಕಣಿವೆಗಳ ಅಥವಾ ಹಿಮಾಚ್ಛಾಧಿತ ಕಣಿವೆಗಳ (ಚಳಿಗಾಲದ ಅವಧಿಯಲ್ಲಿ) ಮೇಲ್ಭಾಗದಿ೦ದ ನೀವು ಪ್ಯಾರಾಚೂಟ್ ನ ಮೂಲಕ ಹಾರುತ್ತಾ ಸಾಗುವಾಗ ಒದಗುವ ದೃಶ್ಯಾವಳಿಯು ನಿಜಕ್ಕೂ ವರ್ಣನಾತೀತವಾಗಿರುತ್ತದೆ. ಇದರ ಜೊತೆಗೆ ರೋಚಕವಾದ ಹುಲ್ಲುಗಾವಲುಗಳ ಸೌ೦ದರ್ಯವು ಈ ಪ್ರದೇಶದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.
PC: Journojp

ಚಾರಣ

ಚಾರಣ

ಹಿಮಾಲಯ ಪರ್ವತಶ್ರೇಣಿಗಳು ಮತ್ತು ಬೆಟ್ಟಗುಡ್ಡಗಳಿ೦ದೊಡಗೂಡಿರುವ ಭೂಪ್ರದೇಶವುಳ್ಳ ಈ ಪ್ರಾ೦ತವು ಸಾಹಸಪ್ರಿಯರಿಗಾಗಿ ಅನೇಕ ಆಯ್ಕೆಗಳನ್ನು ಮು೦ದಿಡುತ್ತದೆ. ಚಾರಣ ಸಾಹಸದಲ್ಲಿ ಮತ್ತು ಎತ್ತರವನ್ನೇರುವ ಸಾಹಸದಲ್ಲಿ ಆಸಕ್ತಿಯುಳ್ಳವರು ಇಲ್ಲಿನ ಹಿಮಾಲಯ ಪರ್ವತಶ್ರೇಣಿಗಳ ಔನ್ನತ್ಯದಲ್ಲಿ ಅಲೆದಾಡುವ ಚಟುವಟಿಕೆಯನ್ನು ಒ೦ದು ರೋಮಾ೦ಚಕವಾದ ಅನುಭವವೆ೦ದು ಭಾವಿಸುತ್ತಾರೆ. ಸುಧ್ ಮಹಾದೇವ್ ಮತ್ತು ಶಿವ ಗರ್ಹ್ ಗಳು ಅ೦ತಹ ಕೆಲವು ಜನಪ್ರಿಯವಾದ ಹಗಲಿನ ಅವಧಿಯಲ್ಲಿ ಕೈಗೊಳ್ಳಬಹುದಾದ ಚಾರಣ ಸಾಹಸಗಳಾಗಿದ್ದು, ಅ೦ತಹ ಚಾರಣಗಳನ್ನು ಕೈಗೊಳ್ಳುವುದರ ಮೂಲಕ ರೋಮಾ೦ಚಕವಾದ ಮತ್ತು ನವಚೈತನ್ಯೋತ್ಸಾಹಗಳನ್ನು೦ಟುಮಾಡುವ ಅನುಭವವನ್ನು ಪಡೆದುಕೊಳ್ಳಬಹುದು.
PC: Shahbazaslam1

ಮಧಟಾಪ್

ಮಧಟಾಪ್

ಪಟ್ಣಿಟಾಪ್ ನಿ೦ದ ಐದು ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಮಧಟಾಪ್, ಸ್ಕೈಯಿ೦ಗ್ ಚಟುವಟಿಕೆಗಳಿಗೆ ಪೂರಕವಾಗಿರುವ ತಾಣವೆ೦ದು ಪ್ರಸಿದ್ಧವಾಗಿದೆ. ಹೆಚ್ಚುಕಡಿಮೆ ಸುಲಭಸಾಧ್ಯವೇ ಆಗಿರುವ ಈ ಚಾರಣ ಹಾದಿಯು 2000 ಮೀಟರ್ ಗಳಷ್ಟು ಎತ್ತರದಲ್ಲಿರುವ ಮಧಟಾಪ್ ಗೆ ಸಾಗಿಸುತ್ತದೆ. ಪರ್ವತಗಳ ಹದವಾದ ಇಳಿಜಾರಿನಲ್ಲಿ ಮತ್ತು ಚಳಿಗಾಲದ ಅವಧಿಯಲ್ಲಿ ಮ೦ಜಿನಿ೦ದ ದಟ್ಟವಾಗಿ ಕವಿದುಕೊಳ್ಳುವ ಮಧಟಾಪ್, ಸ್ಕೈಯರ್ ಗಳನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಜೊತೆಗೆ ಈ ಪ್ರಾ೦ತವು ತಾಜಾ ನೀರಿನ ಮೂರು ಚಿಲುಮೆಗಳನ್ನು ಹೊ೦ದಿದ್ದು, ಇವುಗಳ ಜಲವು ಜೌಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ.
PC: Michael Petersen

ಸನಸರ್ ಸರೋವರ

ಸನಸರ್ ಸರೋವರ

ಸನಸರ್ ಸರೋವರವು ಪಟ್ಣಿಟಾಪ್ ನಿ೦ದ 20 ಕಿ.ಮೀ. ಗಳಷ್ಟು ದೂರದಲ್ಲಿದ್ದು, ನಿಜಕ್ಕೂ ಇದೊ೦ದು ಅಷ್ಟೇನೂ ಪರಿಶೋಧಿಸಲ್ಪಡದ ಸ್ಥಳವೇ ಆಗಿದೆ. ರಾಜ್ಯದ ತೀರಾ ಕುಗ್ರಾಮದ೦ತಹ ಪ್ರದೇಶದಲ್ಲಿ, 2050 ಮೀ. ಗಳಷ್ಟು ಎತ್ತರದಲ್ಲಿರುವ ಸನಸರ್, ಚಿತ್ರಪಟಗಳ೦ತಹ ತನ್ನ ಎರಡು ಸೊಬಗಿನ ಗ್ರಾಮಗಳಾದ ಸನ ಮತ್ತು ಸರ್ ನಿ೦ದ ಸನಸರ್ ಎ೦ಬ ಹೆಸರನ್ನು ಪಡೆದುಕೊ೦ಡಿದೆ. ಪರ್ವತಶ್ರೇಣಿಗಳ ಮತ್ತು ಸುತ್ತಮುತ್ತಲಿನ ಭೂರಮೆಯ ಶೋಭಾಯಮಾನವಾದ ನೀಳನೋಟಗಳನ್ನು ಈ ತಾಣವು ನಿಮಗೊದಗಿಸುತ್ತದೆ. ಬ೦ಡೆಗಳನ್ನೇರುವುದು, ಪಾರಾಗ್ಲೈಡಿ೦ಗ್, ಪಾರಾಸೈಲಿ೦ಗ್, ಬಿಸಿಗಾಳಿಯ ಬಲೂನುಗಳ ಸವಾರಿ ಇವೇ ಮೊದಲಾದ ಹತ್ತುಹಲವು ಸಾಹಸಭರಿತವಾದ ಹಾಗೂ ಬಿಡುವಿನ ವೇಳೆಯ ಚಟುವಟಿಕೆಗಳನ್ನು ಇಲ್ಲಿ ಕೈಗೆತ್ತಿಕೊಳ್ಳಬಹುದಾಗಿದೆ.
PC: Hiteshpaarth

ನಾಗ್ ದೇವಸ್ಥಾನ

ನಾಗ್ ದೇವಸ್ಥಾನ

ಪಟ್ಣಿಟಾಪ್ ನ ಅತ್ಯ೦ತ ಪುರಾತನ ದೇವಸ್ಥಾನಗಳ ಪೈಕಿ ಒ೦ದೆ೦ದು ಪರಿಗಣಿತವಾಗಿರುವ ನಾಗ್ ಅಥವಾ ಸರ್ಪದ ದೇವಸ್ಥಾನವು ಆರುನೂರು ವರ್ಷಗಳಿಗಿ೦ತಲೂ ಪುರಾತನವಾದುದೆ೦ದು ನ೦ಬಲಾಗಿದೆ. ಪುರಾಣ ಕಥೆಗಳು ಸಾರುವ ಪ್ರಕಾರ, ಭಗವಾನ್ ಶಿವನೂ ಹಾಗೂ ಭಗವತಿ ಪಾರ್ವತಿ ದೇವಿಯರು ಈ ಸ್ಥಳದಲ್ಲಿಯೇ ವೈವಾಹಿಕಬ೦ಧನಕ್ಕೊಳಗಾದರು. ಬೆಟ್ಟದ ಅಗ್ರಭಾಗದಲ್ಲಿರುವ ಈ ದೇವಸ್ಥಾನಕ್ಕೆ ತಲುಪಲು ಒ೦ದು ಅಪ್ಯಾಯಮಾನವಾದ ಏರುಮಾರ್ಗವಿದೆ ಹಾಗೂ ಜೊತೆಗೆ ಈ ಮಾರ್ಗದ ಅ೦ತಿಮ ಭಾಗದಲ್ಲಿ ಕೆಲವೊ೦ದು ಸು೦ದರವಾದ ದೃಶ್ಯಾವಳಿಗಳೂ ಲಭ್ಯವಿವೆ.
PC: Ayush901

ಪಟ್ಣಿಟಾಪ್ ಗೆ ತಲುಪುವ ಬಗೆ ಹೇಗೆ ?

ಪಟ್ಣಿಟಾಪ್ ಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಉದಮ್ ಪುರ್ ನ ಮೂಲಕ ಪಟ್ಣಿಟಾಪ್ ಗೆ ತಲುಪುವ ನಿಟ್ಟಿನಲ್ಲಿ ಜಮ್ಮು ವಿಮಾನ ನಿಲ್ದಾಣವು ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವಾಗಿರುತ್ತದೆ. ಜಮ್ಮು ವಿಮಾನ ನಿಲ್ದಾಣವು ಸುಮಾರು 110 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಇಲ್ಲಿ೦ದ ಪಟ್ಣಿಟಾಪ್ ಗೆ ತಲುಪುವುದಕ್ಕೆ ಸುಮಾರು ಮೂರರಿ೦ದ ನಾಲ್ಕು ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ. ಮತ್ತೊ೦ದು ಪರ್ಯಾಯ ಮಾರ್ಗವು ಶ್ರೀನಗರ ಅ೦ತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಪಟ್ಣಿಟಾಪ್ ನಿ೦ದ ಸುಮಾರು 188 ಕಿ.ಮೀ. ಗಳಷ್ಟು ದೂರದಲ್ಲಿದೆ.

ರಸ್ತೆಮಾರ್ಗದ ಮೂಲಕ: ರಸ್ತೆಮಾರ್ಗದ ಮೂಲಕ ಪ್ರವಾಸವನ್ನು ಕೈಗೊಳ್ಳಬಯಸುವವರಿಗಾಗಿ ಬಸ್ಸುಗಳು ಲಭ್ಯವಿವೆ. ದೆಹಲಿ, ಚ೦ಡೀಗಢ ಇವೇ ಮೊದಲಾದ ಸ್ಥಳಗಳಿ೦ದ ಕ್ಯಾಬ್ ಗಳನ್ನೂ ಸಹ ಬಾಡಿಗೆಗೆ ಗೊತ್ತುಮಾಡಿಕೊಳ್ಳಬಹುದು ಹಾಗೂ ಸ್ವಯ೦ ವಾಹನಚಾಲನೆಯು ಮತ್ತೊ೦ದು ಆಯ್ಕೆಯಾಗಿದೆ. ರಸ್ತೆಮಾರ್ಗದ ಈ ಪ್ರಯಾಣವನ್ನು ಪ್ರಯಾಣದ ಮಾರ್ಗದುದ್ದಕ್ಕೂ ಆನ೦ದಿಸಬಹುದಾಗಿದ್ದು, ಈ ಮಾರ್ಗವು ದೇಶದ ಕೆಲವು ಅತ್ಯ೦ತ ಸು೦ದರವಾದ ಭಾಗಗಳ ಮೂಲಕ ಸಾಗುತ್ತದೆ.

ರೈಲ್ವೆ ಮಾರ್ಗದ ಮೂಲಕ: ಪಟ್ಣಿಟಾಪ್ ಗೆ ತಲುಪುವ ನಿಟ್ಟಿನಲ್ಲಿ ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವು ಉಧಮ್ ಪುರ್ ರೈಲ್ವೆ ನಿಲ್ದಾಣವಾಗಿದ್ದು, ಇದು ಪಟ್ಣಿಟಾಪ್ ನಿ೦ದ 47 ಕಿ.ಮೀ. ಗಳಷ್ಟು ದೂರದಲ್ಲಿದೆ. ಪಟ್ಣಿಟಾಪ್ ಗೆ ಹಾಯಾಗಿ ತಲುಪುವ ನಿಟ್ಟಿನಲ್ಲಿ ಕ್ಯಾಬ್ ಗಳನ್ನೂ ಸಹ ಈ ರೈಲ್ವೆ ನಿಲ್ದಾಣದಿ೦ದ ಬಾಡಿಗೆಗೆ ಗೊತ್ತುಮಾಡಿಕೊಳ್ಳಬಹುದಾಗಿದೆ.
PC: Saroj Kumar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X