• Follow NativePlanet
Share
» »ಸರಿಸಾಟಿಯಿಲ್ಲದ ನಿದರ್ಶನವಾದ ಅಗ್ರಮಾನ್ಯ ರಾಕ್-ಕಟ್ ಸ್ಮಾರಕಗಳು

ಸರಿಸಾಟಿಯಿಲ್ಲದ ನಿದರ್ಶನವಾದ ಅಗ್ರಮಾನ್ಯ ರಾಕ್-ಕಟ್ ಸ್ಮಾರಕಗಳು

Posted By: Manjula Balaraj Tantry

1500 ಕ್ಕಿಂತಲೂ ಹೆಚ್ಚು ರಾಕ್ ಕಟ್ ಸ್ಮಾರಕಗಳೊಂದಿಗೆ, ಭಾರತವು ವಾಸ್ತುಶಿಲ್ಪದ ಸೌಂದರ್ಯವನ್ನು ಹೊಂದಿದೆ ಮತ್ತು ಪ್ರಪಂಚದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಭಾರತದಲ್ಲಿ ಹಲವು ಸ್ಥಳಗಳು ಅತ್ಯುತ್ತಮ ರಾಕ್ ಕಟ್ ರಚನೆಗಳನ್ನು ಹೊಂದಿರುವ ಸ್ಥಳಗಳನ್ನು ಹೊಂದಿದ್ದು ಇವುಗಳ ಐತಿಹಾಸಿಕ ಮಹತ್ವ ಅದ್ಬುತಗಳಿಗಾಗಿ ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಐಹೊಳೆ, ಬಾದಾಮಿ ಮತ್ತು ಲೆನ್ಯಾದ್ರಿ ಸೇರಿದಂತೆ ಈ ಋತುವಿನಲ್ಲಿ ಈ ಸ್ಥಳಗಳಿಗೆ ಭೇಟಿ ಕೊಟ್ಟರೆ ಹೇಗೆ?

ನಿಸ್ಸಂಶಯವಾಗಿಯೂ ಭಾರತವು ಜನಜೀವನವನ್ನು ಹೊಂದಿರುವ ಜಗತ್ತಿನ ಅತ್ಯಂತ ಪ್ರಾಚೀನವಾದ ದೇಶವಾಗಿದೆ ಆದುದರಿಂದ ಇದು ಅದ್ಬುತಗಳ ಗಣಿಯಾಗಿದೆ. ಇಂದು ಇದರ ಶ್ರೀಮಂತವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಮಾತ್ರವಲ್ಲದೆ ಇದರ ನೈಸರ್ಗಿಕ ಶ್ರಿಮಂತಿಕೆ ಮತು ಐತಿಹಾಸಿಕ ಸೌಂದರ್ಯತೆಗಳ ಕಾರಣದಿಂದಾಗಿ ಜಗತ್ತಿನ ಅತೀ ಹೆಚ್ಚು ಭೇಟಿ ಕೊಡುವ ಸ್ಥಳಗಳಲ್ಲೊಂದಾಗಿದೆ.

ಇದನ್ನೂ ಓದಿ: ಭಾರತದ ಭವ್ಯವಾದ ಶಿಲೆಯಲ್ಲಿ ನಿರ್ಮಿತವಾದ ದೇವಾಲಯಗಳು

ಭಾರತದಲ್ಲಿಯ ಶಿಲೆಗಳಿಂದ ಕೆತ್ತಲಾದ ಸ್ಮಾರಕಗಳ ಕಡೆಗೆ ಒಂದು ನೋಟ ಹರಿಸೋಣ. ಈ ಸ್ಮಾರಕಗಳು ಖಚಿತವಾಗಿಯೂ ಎಲ್ಲಾ ಪದಗಳಲ್ಲಿಯೂ ಸಮಾನರಹಿತ ಮತ್ತು ಅತ್ಯುತ್ಕೃಷ್ಟತೆಯನ್ನು ಹೊಂದಿದ್ದು, ಅದರ ವಾಸ್ತುಶಿಲ್ಪ, ರಚನೆ, ಇತಿಹಾಸ ಅಥವಾ ಸಾಂತ್ವನ ನೀಡುವ ಎಲ್ಲವೂ ನಿಮಗೆ ಸಂತೋಷ ನೀಡುವಂತಹವಾಗಿದೆ.

ಗುಹೆಗಳಿಂದ ದೇವಾಲಯಗಳವರೆಗೆ ಭಾರತವು ತನ್ನಲ್ಲಿ ಶಿಲೆಯಲ್ಲಿ ಎಲ್ಲಾ ರೀತಿಯಿಂದ ಕೆತ್ತಲಾದ ವಾಸ್ತುಶಿಲ್ಪವನ್ನು ಹೊಂದಿದೆ ಇದು ಖಂಡಿತವಾಗಿಯೂ ಸಾಟಿಯಿಲ್ಲದ ಸೌಂದರ್ಯದ ನಿರ್ದಿಷ್ಟ ನಿದರ್ಶನಗಳಾಗಿವೆ

ಕನ್ಹೇರೀ ಗುಹೆಗಳು

ಕನ್ಹೇರೀ ಗುಹೆಗಳು

PC- A.Savin

ಮುಂಬೈನ ಸಂಜಯಗಾಂಧೀ ರಾಷ್ಟ್ರೀಯ ಉದ್ಯಾನವನದಲ್ಲಿ ಶಾಂತವಾಗಿ ನೆಲೆಸಿರುವ ಕನ್ಹೇರಿ ಗುಹೆಯು ಕೊಡಲೇ ಭೇಟಿ ಬೇಕಾದ ತಾಣವಾಗಿದೆ. ನೀವು ನಿಮ್ಮ ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಐತಿಹಾಸಿಕ ಸೌಂದರ್ಯತೆಯಲ್ಲಿ ದಟ್ಟವಾದ ಪ್ರಕೃತಿ ಮತ್ತು ಮಧುರವಾದ ಪರಿಸರದಲ್ಲಿ ಕಳೆಯಲು ನೋಡುತ್ತಿದ್ದಲ್ಲಿ ಈ ಸ್ಥಳವು ನೀವು ಭೇಟಿ ಕೊಡಲೇಬೇಕಾದ ಸ್ಥಳವಾಗಿದೆ.

ದೊಡ್ಡದಾದ ಕೋಣೆಗಳು, ದೊಡ್ಡದಾದ ಕಂಬಗಳು ಮತ್ತು ಸ್ಮಾರಕ ಶಿಲ್ಪಗಳು ಇವೆಲ್ಲವನ್ನೂ ಹೊಂದಿರುವ ಕನ್ಹೇರಿ ಗುಹೆಗಳು ಎತ್ತರದ ಹಸಿರುಮಯ ಬೆಟ್ಟಗಳಲ್ಲಿ ನೆಲೆಸಿದ್ದು ಇದು ಇತಿಹಾಸದ ಸಾರ ಮತ್ತು ಪ್ರಕೃತಿಯನ್ನು ಅನ್ವೇಷಿಸ ಬಯಸುವ ಸಾವಿರಾರು ಜನ ಸಂದರ್ಶಕರನ್ನು ಪ್ರತಿ ವರ್ಷ ಆಕರ್ಷಿಸುತ್ತದೆ.

ಕನ್ಹೇರಿ ಗುಹೆಗಳ ಬಗ್ಗೆ ಇನ್ನಷ್ಟು ಓದಿ

100ಕ್ಕಿಂತಲೂ ಹೆಚ್ಚು ಪ್ರವೇಶದ್ವಾರಗಳನ್ನು ಹೊಂದಿರುವ ಕಾನ್ಹೆರಿ ಗುಹೆಗಳು ಧ್ಯಾನ ಮತ್ತು ಕಲಿಕೆ ಕೇಂದ್ರಗಳಿಗಾಗಿ ನಿರ್ಮಿಸಲ್ಪಟ್ಟವು. ಅಲ್ಲಿ ಆಧ್ಯಾತ್ಮಿಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರ, ವಿಜ್ಞಾನ ಮತ್ತು ಕಲೆಗಳಂತಹ ವಿವಿಧ ವಿಷಯಗಳ ಬಗ್ಗೆ ಜ್ಞಾನವನ್ನು ಕೊಡುವುದರ ಹೊರತಾಗಿ ಜೀವನದ ಕೆಲವು ಅಂಶಗಳ ಬಗ್ಗೆ ಉಪನ್ಯಾಸಗಳನ್ನು ಈ ಗುಹೆಗಳಲ್ಲಿ ನೀಡುತ್ತಿದ್ದರು. ಈ ಸುಂದರವಾದ ಗುಹೆಗಳಿಗೆ ಪ್ರವಾಸ ಮಾಡಲು ಯೋಜನೆ ಮಾಡಿದರೆ ಹೇಗೆ?

ಲೆನ್ಯಾದ್ರಿ ಗುಹೆಗಳು

ಲೆನ್ಯಾದ್ರಿ ಗುಹೆಗಳು

PC- Niemru

ಮಹಾರಾಷ್ಟ್ರದ ಪೂನೆ ಜಿಲ್ಲೆಯಲ್ಲಿ ನೆಲೆಸಿರುವ ಇನ್ನೊಂದು ಅದ್ಬುತವೆಂದರೆ ಅದುವೇ ಲೆನ್ಯಾದ್ರಿ ಗುಹೆಗಳು ಇದು ಬೌದ್ದ ಧರ್ಮಕ್ಕೆ ಸಮರ್ಪಿತವಾದ 30 ಸರಣಿಗಳ ಶಿಲೆಯಲ್ಲಿ ಕೆತ್ತಲಾದ ಗುಹೆಗಳಾಗಿದೆ. 1ನೇ ಶತಮಾನಕ್ಕೆ ಸಂಬಂಧಿಸಿದ ಅನೇಕ ಗುಹೆಗಳನ್ನು ಹೊಂದಿರುವ ಲೆನ್ಯಾದ್ರಿ ಒಂದು ಪ್ರಾಚೀನವಾದ ಗುಹೆಯಾಗಿದ್ದು ಗುಹೆಗಳ ರೂಪದಲ್ಲಿರುವ ಅನೇಕ ಶಿಲೆಯಲ್ಲಿ ಕೆತ್ತಲಾದ ಸ್ಮಾರಕಗಳಿಗೆ ನೆಲೆಯಾಗಿದೆ.

ಇಂದು ಅನೇಕ ಗುಹೆಗಳನ್ನು ಹಿಂದೂ ದೇವಾಲಯಗಳಾಗಿ ಪರಿವರ್ತನೆ ಮಾಡಲಾಗಿದೆ ಮತ್ತು ಅನೇಕ ಹಿಂದೂ ಭಕ್ತರು ಇಲ್ಲಿಗೆ ಬಂದು ದೇವರಿಗೆ ತಮ್ಮ ಗೌರವವನ್ನು ಅರ್ಪಿಸುವುದನ್ನು ಕಾಣಬಹುದಾಗಿದೆ. ಲೆನ್ಯಾದ್ರೀ ಗುಹೆಗಳ ಸೌಂದರ್ಯವು ಅದರ ಸುಂದರವಾದ ಸ್ತಂಭಗಳಲ್ಲಿ, ಅಲಂಕೃತ ಗೋಡೆಗಳು ಮತ್ತು ಸುಂದರ ಮೇಲ್ಚಾವಣಿಗಳಲ್ಲಿ ಕಾಣಬಹುದು. ಈ ಐತಿಹಾಸಿಕ ಯುಗಗಳ ಲೆನ್ಯಾದ್ರಿ ಗುಹೆಗಳ ದಾರಿಯಲ್ಲಿ ಒಮ್ಮೆ ಹಾದು ಹೋದರೆ ಹೇಗೆ?

ಐಹೊಳೆಯಲ್ಲಿರುವ ಸ್ಮಾರಕಗಳ ಗುಂಪು

ಐಹೊಳೆಯಲ್ಲಿರುವ ಸ್ಮಾರಕಗಳ ಗುಂಪು

PC- Ms Sarah Welch

ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಐಹೊಳೆಯಲ್ಲಿ ನಿರ್ಮಿಸಲಾದ ಸ್ಮಾರಕಗಳು ರಾಕ್ ಕಟ್ ವಾಸ್ತುಶಿಲ್ಪದ ಇತರ ದೋಷರಹಿತ ನಿದರ್ಶನಗಳಾಗಿವೆ. 4 ನೇ ಶತಮಾನದ ಯುಗದ ಹಿಂದೂ, ಜೈನ ಮತ್ತು ಬೌದ್ಧ ದೇವಾಲಯಗಳನ್ನು ಒಳಗೊಂಡ ಕೆಲವು ಮಠಗಳು ಐಹೊಳೆಯ ಸಂಕೀರ್ಣವನ್ನು ಆವರಿಸಿದೆ.

ಶಿವ ಮತ್ತು ದುರ್ಗಾ ದೇವತೆಗೆ ಸಮರ್ಪಿತವಾಗಿರುವ ದೇವಾಲಯಗಳ ಸಮೂಹಕ್ಕೆ ಇದು ಹೆಸರುವಾಸಿಯಾಗಿದೆ. ಐಹೊಳೆಯ ಪ್ರಮುಖ ಸ್ಮಾರಕಗಳು ಐತಿಹಾಸಿಕ ಪ್ರಾಮುಖ್ಯತೆ ಮತ್ತು ಪುರಾತತ್ವ ಶಾಸ್ತ್ರದ ಪ್ರಾಮುಖ್ಯತೆಯನ್ನು ಹೊಂದಿದೆ.

ಮಹಾಬಲಿಪುರಂ

ಮಹಾಬಲಿಪುರಂ

PC- Karthik Easvur

ಚೆನ್ನೈನ ಕೋರಮಂಡಲ್ ತೀರದಲ್ಲಿರುವ, ಸುಮಾರು 400 ಪುರಾತನ ಸ್ಮಾರಕಗಳನ್ನು ಹೊಂದಿರುವ ಶಿಲೆಯಲ್ಲಿ ನಿರ್ಮಿತವಾದ ಸ್ಮಾರಕಗಳನ್ನೊಳಗೊಂಡ ಭಾರತದ ಅನೇಕ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.ಪಲ್ಲವ ರಾಜವಂಶದ ಆಳ್ವಿಕೆಯಲ್ಲಿ 7 ನೇ ಶತಮಾನದ ಅವಧಿಯಲ್ಲಿ ಈ ಕಲ್ಲಿನ ಸ್ಮಾರಕಗಳನ್ನು ಒಳಗೊಂಡ ದೇವಾಲಯವನ್ನು ಮಹಾಬಲಿಪುರಂನಲ್ಲಿರುವ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ಮಹಾಬಲಿಪುರಂ ಕಡಲತೀರದ ಜೊತೆಗೆ ಇಲ್ಲಿಯ ಶೋರ್ ದೇವಾಲಯದ ಪ್ರವಾಸಿಗರಲ್ಲಿ ಪ್ರಸಿದ್ಧವಾಗಿದೆ, ಇದು ಉತ್ತಮ ವಾಸ್ತುಶಿಲ್ಪವನ್ನು ಹೊಂದಿದೆ. ಈ ಜೀವಂತಿಕೆ ಇರುವ ಕಡಲತೀರದ ವಾತಾವರಣದಲ್ಲಿ ದೇವಾಲಯಗಳಲ್ಲಿ ಮತ್ತು ಬಂಡೆಗಳಿಂದ ಸುತ್ತುವರಿದಿರುವ ಪ್ರದೇಶದಲ್ಲಿ ಇದ್ದರೆ ಹೇಗೆ?

ಬಾದಾಮಿ ಗುಹಾಂತರ ದೇವಾಲಯಗಳು

ಬಾದಾಮಿ ಗುಹಾಂತರ ದೇವಾಲಯಗಳು

PC- Anirudh Bhat

ಜಾತ್ಯತೀತತೆಯನ್ನು ಆಚರಿಸಲು ಪರಿಪೂರ್ಣ ಸ್ಥಳವಾಗಿರುವ ಬಾದಾಮಿ ಅನೇಕ ಹಿಂದು ದೇವಾಲಯಗಳಿಗೆ ನೆಲೆಯಾಗಿದೆ.ಜೈನ ಮತ್ತು ಬೌದ್ದ ದೇವಾಲಯಗಳು ಮತ್ತು ಗುಹಾಂತರ ದೇವಾಲಯಗಳ ಸಂಕೀರ್ಣಗಳು ಭಾರತದ ಅತ್ಯುತ್ತಮ ವಾಸ್ತುಶಿಲ್ಪ ಕೆಲಸಗಳನ್ನು ಹೊಂದಿದೆ

ಚಾಲುಕ್ಯರ ಸಾಮ್ರಾಜ್ಯದ ಕಾಲದಿಂದಲೂ ಇರುವ ಈ ಬಾದಾಮಿ ಗುಹಾಂತರ ದೇವಾಲಯಗಳು ಅನೇಕ ಪ್ರಾಚೀನ ಹಿಂದೂ ದೇವಾಲಯಗಳಿಗೆ ನೆಲೆಯಾಗಿದೆ. ಹಿಂದು ದೇವಾಲಯಗಳು ಶಿವ ಮತ್ತು ವಿಷ್ಣುದೇವರಿಗೆ ಸಮರ್ಪಿತವಾದುದಾಗಿದೆ.

ಇದರ ಚೌಕಟ್ಟಿನಲ್ಲಿ ಆರು ಗುಹೆಗಳನ್ನು ಹೊಂದಿರುವ ಬಾದಾಮಿಯು ಖಚಿತವಾಗಿಯೂ ತನ್ನ ಶಾಶ್ವತ ಸೌಂದರ್ಯದಿಂದಾಗಿ ಶತಮಾನಗಳಷ್ಟು ಹಳೆಯ ಸ್ಥಂಭಗಳು ಮತ್ತು ಅಲಂಕೃತವಾದ ಗೋಡೆಗಳಿಂದ ಸುತ್ತುವರಿದಿದ್ದು ನೋಡಲು ಯೋಗ್ಯವಾದ ಸ್ಥಳವಾಗಿದೆ.

ಎಲ್ಲೋರಾದ ಗುಹೆಗಳು

ಎಲ್ಲೋರಾದ ಗುಹೆಗಳು

PC- Ms Sarah Welch

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿರುವ ಇದು ಮಹಾರಾಷ್ಟ್ರ ರಾಜ್ಯದಲ್ಲಿ ನೆಲೆಸಿದೆ. ಎಲ್ಲೋರಾ ಗುಹೆಗಳು ಪ್ರತಿಯೊಬ್ಬ ಉತ್ಸಾಹಿಗಳಿಗೆ ಮೊದಲ ಮತ್ತು ಪ್ರಮುಖವಾದ ಸ್ಥಳವಾಗಿದ್ದು, ಗುಹೆಗಳು ಮತ್ತು ದೇವಾಲಯಗಳ ರೂಪದಲ್ಲಿ ಕಲ್ಲಿನ ಸ್ಮಾರಕಗಳ ವಾಸ್ತುಶಿಲ್ಪದ ಸೌಂದರ್ಯವನ್ನು ಸೆರೆಹಿಡಿಯಲು ಪ್ರೇರೇಪಿಸುವಂತಿದೆ. ವಿಶ್ವದಲ್ಲೇ ಏಕೈಕ ಏಕಶಿಲೆಯ ರಾಕ್-ಕಟ್ ಸ್ಮಾರಕವೆಂದು ನಂಬಲಾದ ಕೈಲಾಶ ದೇವಸ್ಥಾನದ ನೆಲೆಯಾಗಿದೆ,

ಎಲ್ಲೋರಾ ಗುಹೆಗಳು ಹಿಂದೂ, ಬೌದ್ದ ಹಾಗೂ ಜೈನ ಧರ್ಮಗಳಿಗೆ ಸಮರ್ಪಿತವಾದ ಅನೇಕ ಗುಹಾಂತರ ದೇವಾಲಯಗಳನ್ನೊಳಗೊಂಡ ಸಂಕೀರ್ಣವಾಗಿದೆ.ಆದುದರಿಂದ ಭಾರತದಲ್ಲಿಯ ಅತೀ ಹೆಚ್ಚು ಭೇಟಿ ನೀಡಲ್ಪಡುವ ಸ್ಥಳಗಳಲ್ಲೊಂದಾಗಿದೆ. 100 ಕ್ಕೂ ಹೆಚ್ಚಿನ ಗುಹೆಗಳನ್ನು ಹೊಂದಿರುವ, ಇದು ವಿಶ್ವದಲ್ಲೇ ಅತಿ ದೊಡ್ಡ ರಾಕ್ ಕಟ್ ಸಂಕೀರ್ಣಗಳಲ್ಲಿ ಒಂದಾಗಿದೆ.ಎಲ್ಲೋರಾದ ಈ ತಾಣಗಳಿಗೆ ಭೇಟಿ ನೀಡಿದರೆ ಹೇಗೆ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ