Search
  • Follow NativePlanet
Share
» »ಭಾರತದಲ್ಲಿರುವ ಅತ್ಯುತ್ತಮ ಯೋಗಕೇಂದ್ರಗಳು

ಭಾರತದಲ್ಲಿರುವ ಅತ್ಯುತ್ತಮ ಯೋಗಕೇಂದ್ರಗಳು

By Vijay

ಸನಾತನ ಧರ್ಮದಲ್ಲಿ ಉಲ್ಲೇಖಿಸಲ್ಪಟ್ಟಿರುವ ಯೋಗವು ಆಧ್ಯಾತ್ಮಿಕ, ಮಾನಸಿಕ, ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ದೇಹವನ್ನು ಆರೋಗ್ಯಕರವಾಗಿಯೂ ಸದೃಢವಾಗಿಯೂ ಇಟ್ಟುಕೊಳಲು ಅನುಸರಿಸಬೇಕಾದ ಕೆಲವು ಆಸನಗಳ ಕ್ರಮವಾಗಿದೆ. ಯೋಗ ಚಟುವಟಿಕೆಯು ಭಾರತೀಯರಿಗೆ ಮೊದಲಿನಿಂದಲೂ ಚಿರಪರಿಚಿತ.

ಇತ್ತೀಚಿಗಷ್ಟೆ ಯೋಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆತಿದ್ದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿನ ಜನಪ್ರೀಯತೆಯನ್ನುಗಳಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ಇಷ್ಟಾಗ್ಯೂ 2015 ರಿಂದ ಭಾರತದ ಪ್ರಧಾನಿ ಕರೆಗೆ ಓಗೊಟ್ಟು ವಿಶ್ವಸಂಸ್ಥೆಯು ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಸಮ್ಪ್ರದಾಯಕ್ಕೆ ನಾಂದಿ ಹಾಡಿತು.

ನಿಮಗಿಷ್ಟವಾಗಬಹುದಾದ : ಭಾರತದಲ್ಲಿರುವ ಶಿವನ ಮುಖ್ಯ ದೇವಾಲಯಗಳು

ಜೂನ್ 21, ಉತ್ತರಾರ್ಧಗೋಳದಲ್ಲಿ ವರ್ಷದಲ್ಲಿ ಹೆಚ್ಚಿನ ದಿನದ ಸಮಯವನ್ನು ಹೊಂದಿರುವ ದಿನವಾಗಿದ್ದು ಹಲವು ರಾಷ್ಟ್ರಗಳಲ್ಲಿ ಮಹತ್ವ ಪಡೆದಿರುವುದರಿಂದ, ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇದೆ ದಿನವನ್ನು ಯೋಗ ದಿನವನ್ನಾಗಿ ಆಚರಿಸಬೇಕೆಂದು ವಿಶ್ವಸಂಸ್ಥೆಗೆ ಸಲಹೆ ನೀಡಿದ್ದರು.

ಇಂದು ಯೋಗ ಪ್ರವಾಸೋದ್ಯಮವು ಭಾರತದಲ್ಲಿ ಮೊದಲಿನಿಗಿಂತಲೂ ಉತ್ತಮವಾಗಿ ಬೆಳೆಯುತ್ತಿದೆ. ಯೋಗದಿಂದಾಗುವ ಅದ್ಭುತ ಲಾಭಗಳನ್ನು ಮನಗಂಡ ಸಾಕಷ್ಟು ಜನರು ಈ ಪುರಾತನ ವಿದ್ಯೆಯನ್ನು ಕಲಿಯಲು ಜಗತ್ತಿನ ಮೂಲೆ ಮೂಲೆಗಳಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಸ್ತುತ ಲೇಖನದ ಮೂಲಕ ಭಾರತದ ಕೆಲವು ಅತ್ಯುತ್ತಮ ಯೋಗ ಕೇಂದ್ರಗಳು ಯಾವುವೆಂಬುದರ ಕುರಿತು ತಿಳಿಯಿರಿ.

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಪರಮಾರ್ಥ ನಿಕೇತನ ಆಶ್ರಮ : ಹಿಮಾಲಯದ ಸುಂದರ ಒಡಲಿನಲಿ, ಪವಿತ್ರ ಗಂಗೆಯ ತಟದಲಿ ನೆಲೆಸಿರುವ ಪರ್ಮಾರ್ಥ ನಿಕೇತನ, ಉತ್ತರಾಖಂಡ ರಾಜ್ಯದ ರಿಶಿಕೇಶದಲ್ಲಿರುವ ಒಂದು ಆಶ್ರಮವಾಗಿದೆ.

ಚಿತ್ರಕೃಪೆ: רוליג

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ರಿಶಿಕೇಷದಲ್ಲಿರುವ ಅತಿ ದೊಡ್ಡ ಆಶ್ರಮ ಇದಾಗಿದ್ದು ಸಾವಿರಕ್ಕೂ ಅಧಿಕ ಕೋಣೆಗಳು ಇಲ್ಲಿಗೆ ಭೇಟಿ ನೀಡಬಯಸುವ ಅತಿಥಿಗಳಿಗೆಂದು ನಿರ್ಮಿಸಲಾಗಿದೆ. ಈ ಆಶ್ರಮದಲ್ಲಿ ಪ್ರಮುಖವಾಗಿ ಗಂಗಾ-ಆರತಿ ನೋಡಲೇಬೇಕಾದ ಮುಖ್ಯ ಚಟುವಟಿಕೆಯಾಗಿದ್ದು ಯೋಗವನ್ನೂ ಸಹ ವ್ಯವಸ್ಥಿತವಾಗಿ ಕಲಿಸಲಾಗುತ್ತದೆ.

ಚಿತ್ರಕೃಪೆ: Ekabhishek

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಮುಖ್ಯವಾಗಿ ವಿನ್ಯಾಸ ಯೋಗ, ಹಟ ಯೋಗ ಹಾಗೂ ಯೋಗ ನಿದ್ರಾ ಯೋಗಗಳನ್ನು ನಿಪುಣ ತಜ್ಞರ ಅಣತಿಯಂತೆ ಇಲ್ಲಿ ಅಭ್ಯಸಿಸಬಹುದಾಗಿದೆ. ಇತರೆ ದೇಶಗಳಿಂದ ಸಾಕಷ್ಟು ಯೋಗ ಕಲಿಯಬಯಸುವ ವಿದೇಶಿ ಪ್ರವಾಸಿಗರು ಈ ಆಶ್ರಮಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ. ಅಂತಾರಾಷ್ಟ್ರೀಯ ಯೋಗದಿನವನ್ನು ಇಲ್ಲಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Eran Sandler

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಕೈವಲ್ಯಧಾಮ ಆರೋಗ್ಯ ಮತ್ತು ಯೋಗ ಸಂಶೋಧನಾ ಕೇಂದ್ರ : 1924 ರಲ್ಲೆ ಸ್ಥಾಪನೆಗೊಂಡ ಕೈವಲ್ಯಧಾಮ ಆರೋಗ್ಯ ಮತ್ತು ಯೋಗ ಸಂಶೋಧನಾ ಕೇಂದ್ರವು ಭಾರತದ ಅತಿ ಹಳೆಯ ಯೋಗ ವಿದ್ಯಾಲಯ ಕೇಂದ್ರಗಳಲ್ಲೊಂದಾಗಿದೆ. ಮಹಾರಾಷ್ಟ್ರದ ಪ್ರಖ್ಯಾತ ಪ್ರೇಕ್ಷಣೀಯ ಸ್ಥಳವಾದ ಲೋಣಾವಲಾ ಪ್ರದೇಶದಲ್ಲಿ ಈ ಯೋಗ ಕೇಂದ್ರವಿದೆ.

ಚಿತ್ರಕೃಪೆ: Sashimikid

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಇಲ್ಲಿ ಯೋಗ ಕಲಿಯಬಯಸಿರುವವರು ಕೆಲ ದಿನಗಳ ಕಾಲ ತಂಗಿ ಯೋಗಾಭ್ಯಾಸ ಮಾಡಬಹುದಾದ ವ್ಯವಸ್ಥೆಯಿದೆ. ಅಲ್ಲದೆ ನ್ಯಾಚುರೋಪತಿ ಹಾಗೂ ಇತರೆ ಯೋಗಿಕ ಪ್ರಾಕಾರಗಳಲ್ಲಿ ಅಧ್ಯಯನ ಮಾಡಬಹುದಾದ ವ್ಯವಸ್ಥೆಯಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jon Fife

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ದಿ ಯೋಗಾ ಇನ್ಸ್ಟಿಟ್ಯೂಟ್ : ಭಾರತದ ಪುರಾತನ ಯೋಗ ಸಂಸ್ಥೆಯಾದ ಯೋಗ ವಿದ್ಯಾಲಯ ಅಥವಾ ದಿ ಯೋಗಾ ಇನ್ಸ್ಟಿಟ್ಯೂಟ್ 1918 ರಲ್ಲಿ ಶ್ರೀ ಯೋಗೇಂದ್ರಜೀ ಅವರಿಂದ ಸ್ಥಾಪಿಸಲ್ಪಟ್ಟಿದೆ. ಮುಂಬೈನ ಸಾಂತಾಕ್ರುಜ್ ಸ್ಥಳದಲ್ಲಿ ಈ ಯೋಗ ವಿದ್ಯಾಲಯವಿದ್ದು ಎಲ್ಲ ವರ್ಗದ ಜನರು ಈ ಯೋಗ ವಿದ್ಯಾಲಯಕ್ಕೆ ಭೇಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: innacoz

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಪ್ರತಿ ದಿನ ಸಾವಿರಕ್ಕೂ ಅಧಿಕ ಜನ ಭೆಟಿ ನೀಡುವ ಈ ಕೇಂದ್ರದಲ್ಲಿ ಮಕ್ಕಳಿಗೆ, ವಯಸ್ಕರಿಗೆ ಹಾಗೂ ಹಿರಿಯರಿಗೆ ಅನುಕೂಲವಾಗುವ ಯೋಗಾಭ್ಯಾಸಗಳನ್ನು ಮಾಡಿಸಲಾಗುತ್ತದೆ. ಕೇಂದ್ರವು ಹೇಳುವಂತೆ ರಕತದೊತ್ತಡ, ಶ್ವಾಸಕೋಶ ತೊಂದರೆಗಳು, ಮಧುಮೇಹ ಹೀಗೆ ಹಲವು ರೀತಿಯ ತೊಂದರೆಗಳನ್ನು ದೂರ ಮಾಡುವಂತಹ ಯೋಗಾಸನಗಳನ್ನು ಇಲ್ಲಿ ಹೆಳಿಕೊಡಲಾಗುತ್ತದೆ. ಪ್ರಸ್ತುತ, ಈ ಯೋಗ ಕೇಂದ್ರವು ಶ್ರೀ ಯೋಗೇಂದ್ರಜಿ ಅವರ ಮಗನಾದ ಡಾ.ಜಯದೇವ ಯೋಗೇಂದ್ರವರಿಂದ ನಿರ್ವಹಿಸಲ್ಪಡುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Herry Lawford

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಅಯ್ಯಂಗಾರ್ ಯೋಗಶಾಲೆ : ಮುಂಬೈನ ಲೋವರ್ ಪರೇಲ್ ನಲ್ಲಿರುವ ಭಾರತದ ಪ್ರಖ್ಯಾತ ಯೋಗ ಗುರುಗಳಾದ ಶ್ರೀ ಬಿ ಕೆ ಎಸ್ ಅಯ್ಯಂಗಾರ್ ಅವರ ಯೋಗಶಾಲೆ ಬಲು ಪ್ರಸಿದ್ಧವಾಗಿದೆ. ಅಯ್ಯಂಗಾರ್ ಅವರು ಯೋಗದ ಇನ್ನೂರಕ್ಕೂ ಹೆಚ್ಚು ಆಸನಗಳನ್ನು ಆಧುನೀಕರಣಗೊಳಿಸಿದವರು. ಕಷ್ಟಕರ ಆಸನಗಳನ್ನು ನಿರ್ದಿಷ್ಟವಾಗ ಹಾಗೂ ನಿಯಮಿತವಾಗಿ ಅಭ್ಯಸಿಸುವುದರ ಮೂಲಕ ಅವುಗಳ ಮೇಲೆ ನೈಪುಣ್ಯತೆಯನ್ನು ಸಾಧಿಸುವುದು ಹೇಗೆಂದು ತಿಳಿಸಿಕೊಟ್ಟವರು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Kotket1909

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಈ ಯೋಗಶಾಲೆಯಲ್ಲಿ ಸಾಕಷ್ಟು ಪರಿಕರಗಳು, ಬೆನ್ನಾಧಾರವಿಲ್ಲದ ಕುರ್ಚಿಗಳು, ಕಟ್ಟಿಗೆ ಆಧಾರಗಳು, ಗೋಡೆಗಳಿಗೆ ಕಟ್ಟಲಾದ ಸಹಾಯಕಗಳನ್ನು ನೋಡಬಹುದು. ಇವುಗಳನ್ನು ಸರಳವಾಗಿ ಹೇಗೆ ಬಳಸಿಕೊಂಡು ಯಾವ್ಯಾವ ರೀತಿಯ ಅತ್ಯುತ್ತಮ ಆಸನಗಳನ್ನು ಹಾಕಬಹುದೆಂದು ನುರಿತ ಗುರುಗಳಿಂದ ಕಲಿಸಿಕೊಡಲಾಗುತ್ತದೆ. ಪ್ರವೇಶ ಸಂಖ್ಯೆ ಕಡಿಮೆಯಿರುವುದರಿಂದ ವರ್ಷಪೂರ್ತಿ ಈ ಯೋಗಶಾಲೆ ಭರ್ತಿಯಾಗಿರುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Akshiyogashala

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಬಿಹಾರ್ ಯೋಗ ಶಾಲೆ : ಬಿಹಾರ್ ಸ್ಕೂಲ್ ಆಫ್ ಯೋಗಾ ಎಂದು ಕರೆಯಲ್ಪಡುವ ಈ ಯೋಗ ಕೇಂದ್ರವು ಐತಿಹಾಸಿಕ ಕಥೆ ಸಾರುವ ಮುಂಗೇರ್ ಕೋಟೆಯಲ್ಲಿದ್ದು ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವಂತೆ ಯೋಗಾಭ್ಯಾಸಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: The Yoga People

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಶಿವಾನಂದ ಯೋಗ ವೇದಾಂತ ಧನ್ವಂತರಿ : ಕೇರಳದ ತಿರುವನಂತಪುರಂ ಜಿಲ್ಲೆಯ ನೆಯ್ಯಾರ್ ಆಣಕಟ್ಟೆಯ ಬಳಿಯಿರುವ ಈ ಯೋಗ ಕೇಂದ್ರವು ಮುಖ್ಯವಾಗಿ ಯೋಗದ ಐದು ಪ್ರಮುಖ ಅಂಶಗಳ ಮೇಲೆ ಯೋಗಾಸನಗಳನ್ನು ಕಲಿಸಿಕೊಡುತ್ತದೆ. ಅವುಗಳೆಂದರೆ ಭಂಗಿ, ಉಸಿರಾಟ, ವಿಶ್ರಾಂತಿ, ಧ್ಯಾನ ಹಾಗೂ ಪಥ್ಯೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Joellepearson

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಅಷ್ಟಾಂಗ ಯೋಗ ಸಂಶೋಧನಾ ಕೇಂದ್ರ : ಪ್ರಖ್ಯಾತ ಭಾರತೀಯ ಯೋಗ ಗುರುಗಳಾದ ಶ್ರೀ ಕೃಷ್ಣ ಪಟ್ಟಾಭಿ ಜೋಯೀಸ (26 ಜುಲೈ 1915 - 18 ಮೇ 2009) ರಿಂದ ಮೈಸೂರಿನಲ್ಲಿ ಸ್ಥಾಪಿಸಲಾದ ಅಷ್ಟಾಂಗ ಯೋಗ ಸಂಶೋಧನಾ ಕೇಂದ್ರವು ಅಷ್ಟಾಂಗ ವಿನ್ಯಾಸದ ಯೋಗಾಸನಗಳನ್ನು ಕಲಿಸಿಕೊಡುವಲ್ಲಿ ನಿರತವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿಗರು ಈ ಯೋಗಾಭ್ಯಾಸ ಕಲಿಯಲು ಇಲ್ಲಿಗೆ ಬರುತ್ತಾರೆ. ಜೋಯಿಸರ ನಿವಾಸದ ಮನೆಯ ಮುಂದೆ.

ಚಿತ್ರಕೃಪೆ: Evan Lovely

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಇಶಾ ಯೋಗಾ ಕೇಂದ್ರ : ಸದ್ಗುರು ಜಗ್ಗಿ ವಾಸುದೇವ ಅವರಿಂದ ಸ್ಥಾಪಿಸಲಾದ ಇಶಾ ಫೌಂಡೇಷನ್ ಯೋಗದ ವಿವಿಧ ಕೋರ್ಸುಗಳನ್ನು ಕಲಿಸಿಕೊಡುತ್ತದೆ. ಶೂನ್ಯ, ಹಠ ಯೋಗ, ಸಂಯಮ ಹೀಗೆ ಹಲವು ಪ್ರಕಾರದ ಯೋಗಾಸನಗಳನ್ನು ಶಿಸ್ತುಬದ್ಧವಾಗಿ ಮಾನಸಿಕ, ಬೌದ್ಧಿಕ ಹಾಗೂ ದೈಹಿಕವಾಗಿ ವಿಕಸನ ಹೊಂದಲು ಇಲ್ಲಿ ಹೇಳಿ ಕೊಡಲಾಗುತ್ತದೆ.

ಚಿತ್ರಕೃಪೆ: Regstuff

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಭಾರತದ ಪ್ರಖ್ಯಾತ ಯೋಗಕೇಂದ್ರಗಳು:

ಕೇವಲ ಯೋಗವಲ್ಲದೆ ಗುರುಗಳಾದ ಸದ್ಗುರು ವಾಸುದೇವ ಜಗ್ಗಿ ಅವರಿಂದ ಧ್ಯಾನದ ಮಹತ್ವ ಹಾಗೂ ಮುಡುವುದರ ಕುರಿತೂ ಸಹ ತಿಳಿಸಿಕೊಡಲಾಗುತ್ತದೆ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈ ಯೋಗ ಶಾಲೆಯಲ್ಲಿ.

ಚಿತ್ರಕೃಪೆ: Regstuff

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X