Search
  • Follow NativePlanet
Share
» »ಮೋಡಿ ಮಾಡುವ ಟಾಪ್ ಸ್ಟೇಷನ್ ನೋಡಿ!

ಮೋಡಿ ಮಾಡುವ ಟಾಪ್ ಸ್ಟೇಷನ್ ನೋಡಿ!

By Vijay

ನಿದ್ದೆಯಿಂದೆದ್ದ ಪುಟ್ಟ ಮಗು ಅಳಲಾರಂಭಿಸುತ್ತಿದ್ದಂತೆ ತನ್ನೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಓಡೋಡಿ ಬರುವಳು ತಾಯಿ. ತಾಯಿಯ ಕರುಣಾಭರಿತ ಆ ಪ್ರೀತಿಯ ಮೊಗ ನೋಡುತ್ತಲೆ ಕಣ್ಣೀರ ಸುರಿಸುತ್ತಿದ್ದ ಕಂದಮ್ಮನ ಕಣ್ಣುಗಳು ಪ್ರಕಾಶಿಸುವುದಲ್ಲದೆ ತುಟಿಗಳಲ್ಲಿ ಮಂದಹಾಸ ಮೂಡಿ ಮತ್ತೆ ಹುರುಪು ಕಾಣುತ್ತದಲ್ಲವೆ?

ಖಂಡಿತ ಹೌದು, ತಾಯಿಯ ಆ ವಾತ್ಸಲ್ಯವೆ ಹಾಗೆ, ಮನದಡಿಯಲಿ ಜನಿಸಿದ ಚಡಪಡಿಸುವ ದುಗುಡವ ಓಡಿಸುವುದಲ್ಲದೆ ಹುರುಪು-ಉತ್ಸಾಹಗಳ ನಡಿಗೆಗಳು ಹಾಯುವಂತೆ ಮಾಡುತ್ತದೆ. ಅದೇ ರೀತಿಯಾಗಿ ಒತ್ತಡದಿ ಬಳಲಿ ಬೆಂಡಾಗಿ ಬಸವಳಿಯುವ ಮನುಜನನ್ನು ಕಂಡಾದ ಆ ಪ್ರಕೃತಿ ಮಾತೆ ಕ್ಷಣ ಮಾತ್ರದಲ್ಲೆ ಅವನಿಗೆ ಉತ್ಸಾಹ ಬರುವಂತೆ ಮಾಡುತ್ತಾಳೆ.

ಅಂತೆಯೆ ಇಂದಿಗೂ, ಯಾರೆ ಇರಲಿ ಪ್ರಕೃತಿಯ ಅದ್ಭುತವಾದ ಸಹಜ ಸೌಂದರ್ಯವನ್ನು ಕಣ್ಣಾರೆ ಸವಿದು ಅನುಭವಿಸಿದಾಗ ಕಿಂಚಿತ್ತಾದರೂ ಸರಿ ಅವರಲ್ಲಿ ಹುರುಪು-ಉತ್ಸಾಹಗಳು ಮೂಡುವುದು ಖಚಿತ. ಇನ್ನೂ ಅಪಾರವಾದ ಸೃಷ್ಟಿ ಸೌಂದರ್ಯದ ಸಮ್ಪತ್ತಿನಿಂದ ಕಂಗೊಳಿಸುವ ಭಾರತದಲ್ಲಿ ಆಕರ್ಷಣೆಗಳಿಗೇನೂ ಕಮ್ಮಿ ಇಲ್ಲ.

ಭಾರತದ ಪ್ರತಿ ರಾಜ್ಯಗಳಲ್ಲೂ ಅದ್ಭುತವಾದ ಪ್ರಾಕೃತಿಕ ನೋಟಗಳಿರುವ ನೂರಾರು ತಾಣಗಳನ್ನು ನೋಡಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ಸುಂದರವಾದ ಪ್ರಾಕೃತಿಕ ತಾಣ ಅದರಲ್ಲೂ ವಿಶೇಷವಾಗಿ ಹೇಳಬೇಕೆಂದರೆ ವೀಕ್ಷಣಾ ಸ್ಥಳದ ಕುರಿತು ತಿಳಿಸಲಾಗಿದೆ. ಅದೆ ಟಾಪ್ ಸ್ಟೇಷನ್. ಅಂದರೆ ಕನ್ನಡದಲ್ಲಿ ಎತ್ತರದ ಅಥವಾ ಉಚ್ಛ ನಿಲ್ದಾಣವೆಂದು ಅರ್ಥೈಸಿಕೊಳ್ಳಬಹುದು.

ವೀಕ್ಷಣಾ ಕೇಂದ್ರ

ವೀಕ್ಷಣಾ ಕೇಂದ್ರ

ಟಾಪ್ ಸ್ಟೇಷನ್ ಮೂಲತಃ ಒಂದು ವೀಕ್ಷಣಾ ಕೇಂದ್ರವಾಗಿದ್ದು ದೇವರ ಸ್ವಂತ ನಾಡು ಎಂದೆ ಜನಜನಿತವಾಗಿರುವ ಕೇರಳ ಹಾಗೂ ತಮಿಳುನಾಡಿನ ಗಡಿಯ ಬಳಿ ಸ್ಥಿತವಿದೆ. ಅಧಿಕೃತವಾಗಿ ತಮಿಳುನಾಡಿನ ತೇಣಿ ಜಿಲ್ಲೆಗೆ ಒಳಪಡುತ್ತದೆ ಟಾಪ್ ಸ್ಟೇಷನ್.

ಚಿತ್ರಕೃಪೆ: George1603

ತಮಿಳುನಾಡು

ತಮಿಳುನಾಡು

ಆದಾಗ್ಯೂ ಟಾಪ್ ಸ್ಟೇಷನ್ ಮುನ್ನಾರ್ ಪ್ರವಾಸೋದ್ಯಮದ ಅವಿಭಜಿತ ಅಂಗವೆಂದೆ ಹೇಳಬಹುದು. ಜನಪ್ರೀಯ ಪ್ರವಾಸಿ ಆಕರ್ಷಣೆಯಾಗಿರುವ ಈ ಸ್ಥಳವು ತನ್ನಲ್ಲಿ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು ಸದಾ ಕಾಲ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Issacsam

ಅದ್ಭುತ ನೋಟ

ಅದ್ಭುತ ನೋಟ

ಟಾಪ್ ಸ್ಟೇಷನ್ ಕೇರಳದ ಇಡುಕ್ಕಿ ಜಿಲ್ಲೆಯ ಪ್ರಖ್ಯಾತ ಗಿರಿಧಾಮವಾದ ಮುನ್ನಾರ್ ಬಳಿ ಸ್ಥಿತವಿದೆ. ಕಣ್ಣನ ದೇವನ್ ಬೆಟ್ಟಗಳ ಸಾಲಿನಲ್ಲಿ ಎಲೆ ಮರೆಯ ಕಾಯಿಯಂತೆ ಅವಿತು ಕುಳಿತಿರುವ ಟಾಪ್ ಸ್ಟೇಷನ್ ಕೇಂದ್ರವು ನಿಜಕ್ಕೂ ನಯನ ಮನೋಹರವಾದ ದೃಶ್ಯಾವಳಿಗಳನ್ನು ನೋದುಗರಿಗೆ ಉಣಬಡಿಸುತ್ತದೆ.

ಚಿತ್ರಕೃಪೆ: Varkeyparakkal

ಅದಕ್ಕೆ ಮುನ್ನಾರ್

ಅದಕ್ಕೆ ಮುನ್ನಾರ್

ಟಾಪ್ ಸ್ಟೇಷನ್ ಮೂರು ಅದ್ಭುತ ಪರ್ವತ ನದಿಗಳು ಸಂಗಮ ಹೊಂದುವ ಸ್ಥಳದಲ್ಲಿ ಕಂಡುಬರುತ್ತದೆ. ಆ ಸ್ಥಳವೆ ಮುನ್ನಾರ್ ಆಗಿದ್ದು ಅಲ್ಲಿಂದ ಮುನ್ನಾರ್ - ಕೊಡೈಕೆನಲ್ ರಸ್ತೆಯಲ್ಲಿ ಮುನ್ನಾರ್ ನಿಂದ ಕೇವಲ 32 ಕಿ.ಮೀ ಗಳಷ್ಟು ದೂರ ಕ್ರಮಿಸಿದರೆ ಸಾಅಕು ಟಾಪ್ ಸ್ಟೇಷನ್ ವೀಕ್ಷಣಾ ತಾಣವನ್ನು ತಲುಪಬಹುದಾಗಿದೆ.

ಚಿತ್ರಕೃಪೆ: RanjithSiji

ರಸ್ತೆ ಮಾರ್ಗ

ರಸ್ತೆ ಮಾರ್ಗ

ಟಾಪ್ ಸ್ಟೇಷನ್ ಮುನ್ನಾರ್-ಕೊಡೈಕೆನಲ್ ಮಾರ್ಗದಲ್ಲೆ ಸ್ಥಿತವಿರುವ ಅತ್ಯಂತ ಎತ್ತರದ ವೀಕ್ಷಣಾ ಕೇಂದ್ರವಾಗಿದ್ದು ಮುನ್ನಾರ್ ಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗ ಈ ವೀಕ್ಷಣಾ ಕೇಂದ್ರಕ್ಕೆ ಭೇಟಿ ನೀಡದೆ ಮನೆಗೆ ಮರಳಲಾರ. ಅಷ್ಟೊಂದು ಸುಂದರವಾಗಿದೆ ಟಾಪ್ ಸ್ಟೇಷನ್.

ಚಿತ್ರಕೃಪೆ: Manoj M Shenoy

ಅತಿ ಎತ್ತರದ

ಅತಿ ಎತ್ತರದ

ಆದರೆ ಈ ತಾಣಕ್ಕೆ ಟಾಪ್ ಸ್ಟೇಷನ್ ಎಂಬ ಹೆಸರು ಏಕೆ ಮತ್ತು ಹೇಗೆ ಬಂತು? ಎಂಬ ಪ್ರಶ್ನೆಗಳು ಬಹು ಜನರಿಗೆ ಕಾಡಬಹುದು. ಅದಕ್ಕೆ ಉತ್ತರವೆಂದರೆ ಹಿಂದೆ ಕಣ್ಣನ್ ದೇವನ್ ಬೆಟ್ಟಗಳಲ್ಲಿ ಸಂಗ್ರಹಿಸಲಾಗುತ್ತಿದ್ದ ಚಹಾ ಎಲೆಗಳನ್ನು ಈ ತಾಣದಿಂದಲೆ ಇದಕ್ಕಿಂತ ಕೆಳ ಸ್ತರದಲ್ಲಿರುವ ಕೊಟ್ಟಗುಡಿ ಎಂಬಲ್ಲಿಗೆ ಕೇಬಲ್ ಕಾರುಗಳ ಮೂಲಕ ಸಾಗಿಸಲಾಗುತ್ತಿತ್ತು.

ಚಿತ್ರಕೃಪೆ: Lakshmichandrakanth

ಕೊಟ್ಟಗುಡಿ

ಕೊಟ್ಟಗುಡಿ

ಅಂದರೆ ಈ ಸ್ಥಳವೆ ಅತ್ಯಂತ ಎತ್ತರದ ಸ್ಥಳದಲ್ಲಿತ್ತು ಹಾಗೂ ಅಲ್ಲಿಂದ ಇಳಿಮುಖವಾಗಿ ಸುಮಾರು ಐದು ಕಿ.ಮೀ ಚಲಿಸಿದಾಗ ದೊರೆಯುವ ತಾಣ ಕೊಟ್ಟಗುಡಿ. ಇನ್ನೂ ಕೇಬಲ್ ಕಾರುಗಳನ್ನು ವಿವಿಧ ಸ್ಟೇಷನ್ ಗಳ ಮೂಲಕ ಓಡಾಡಿಸಲಾಗುತ್ತದೆ. ಈ ತಾಣವು ಅತ್ಯಂತೆ ಮೇಲೆ ಸ್ಥಿತವಿದ್ದುದರಿಂದ ಇದಕ್ಕೆ ಟಾಪ್ ಸ್ಟೇಷನ್ ಎಂಬ ಹೆಸರು ಬಂದಿತು.

ಚಿತ್ರಕೃಪೆ: Shanmugamp7

ಕೈಗೆಟುಕುವ ಮೋಡಗಳು

ಕೈಗೆಟುಕುವ ಮೋಡಗಳು

ಆ ಹೆಸರೆ ಇಂದಿಗೂ ಶಾಶ್ವತವಾಗಿ ಉಳಿದಿದ್ದು ಅದೆ ಹೆಸರಿನಿಂದ ಈ ವೀಕ್ಷಣಾ ಕೇಂದ್ರ ಪ್ರಖ್ಯಾತಿಗಳಿಸಿದೆ. ಈ ಒಂದು ವೀಕ್ಷಣ ಕೇಂದ್ರವು ಎಷ್ಟು ಎತ್ತರದಲ್ಲಿ ಸ್ಥಿತವಿದೆ ಎಂದರೆ ಇಲ್ಲಿಂದ ನೋಡಿದಾಗ ಮೋಡಗಳೆ ನಿಮ್ಮ ಕೆಳಗಿವೆ ಎಂತಲೂ ಅವುಗಳನ್ನು ಬರಿಗೈನಲ್ಲೆ ಮುಟ್ಟು ಬಹುದೆಂತಲೂ ನಿಮಗೆ ಅನಿಸದೆ ಇರಲಾರದು.

ಚಿತ್ರಕೃಪೆ: Shanmugamp7

ಕ್ಯಾಂಪಿಂಗ್

ಕ್ಯಾಂಪಿಂಗ್

ತೇಣಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಅತಿ ಮನಮೋಹಕ ದೃಶ್ಯಗಳು ಇಲ್ಲಿ ನೋಡಲು ನಿಮಗೆ ಕಾಣಸಿಗುತ್ತವೆ. ರಾತ್ರಿ ಕ್ಯಾಂಪಿಂಗ್ ಸಹ ಕೆಲವರು ಇಲ್ಲಿ ಮಾಡಬಯಸುತ್ತಾರೆ. ದಟ್ಟ ಹಸಿರಿನ ಕಾಡುಗಳು, ಅದ್ಭುತ ಸೂರ್ಯಾಸ್ತ ಹಾಗೂ ಸೂರ್ಯೋದಯದ ದೃಶ್ಯಗಳು ನೀವು ಮತ್ತೆ ಹುರುಪುಗೊಳ್ಳುವಂತೆ ಮಾಡುತ್ತವೆ.

ಚಿತ್ರಕೃಪೆ: Issacsam

ನೀಲಕುರಿಂಜಿ

ನೀಲಕುರಿಂಜಿ

ಈ ಸ್ಥಳದ ಮತ್ತೊಂದು ವಿಶೇಷವೆಂದರೆ ಇಲ್ಲಿ ಕಂಡುಬರುವ ನೀಲಕುರಿಂಜಿ ಹೂವುಗಳು. ನಿಜಕ್ಕೂ ಇವು ಅಪರೂಪದ ಹೂವುಗಳಾಗಿವೆ. ಗಾಢ ನೀಳ ವರ್ಣದಿಂದ ಕಂಗೊಳಿಸುವ ಈ ಹೂವುಗಳು ತಮ್ಮ ಪ್ರಭಾವದಿಂದಾಗಿ ಸುತ್ತಲಿನ ವಾತಾವರಣಕ್ಕೆ ಮತ್ತಷ್ಟು ಕಳೆ ಕಟ್ಟಿ ಕೊಡುತ್ತದೆ.

ಚಿತ್ರಕೃಪೆ: S Rahul Bose

ಬಲು ಅಪರೂಪ

ಬಲು ಅಪರೂಪ

ಈ ಹೂವುಗಳ ಪ್ರಮುಖ ಗುಣಲಕ್ಷಣವೆಂದರೆ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಮಾತ್ರ ಇವು ಅರಳುತ್ತವೆ. ಹೌದು ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಮಾತ್ರ! ಹೀಗಾಗಿ ಈ ಹೂವುಗಳು ಅರಳುವ ಸಮಯಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರವಾಸಿಗರು ಟಾಪ್ ಸ್ಟೇಷನ್ ಗೆ ಭೇಟಿ ನೀಡಬಯಸುತ್ತಾರೆ.

ಚಿತ್ರಕೃಪೆ: Bimal K C

ಅರಳಿತ್ತು

ಅರಳಿತ್ತು

ಈ ಹಿಂದೆ 2006 ರಲ್ಲಿ ಈ ಹೂವುಗಳು ಅರಳಿದ್ದು ಇನ್ನೇನೂ ಮುಂದಿನ ಅರಳುವಿಕೆಗೆ 2018 ರವರೆಗೆ ಕಾಯಬೇಕು. ಟಾಪ್ ಸ್ಟೇಷನ್ ವೀಕ್ಷಣಾ ಕೆಂದ್ರವನ್ನು ವರ್ಷದ ಎಲ್ಲ ಸಮಯದಲ್ಲು ಭೇಟಿ ಮಾದಬಹುದಾದರೂ ಏಪ್ರಿಲ್ ಹಾಗೂ ಮೇ ಸಂದರ್ಭ ಹೆಚ್ಚು ಅದ್ಭುತ ಅನುಭವ ನೀಡುತ್ತವೆ ಎನ್ನಲಾಗುತ್ತದೆ.

ಚಿತ್ರಕೃಪೆ: Arshad.ka5

ವನ್ಯಜೀವಿಧಾಮ

ವನ್ಯಜೀವಿಧಾಮ

ಕೇವಲ ವೀಕ್ಷಣೆಗಲ್ಲದೆ ಟಾಪ್ ಸ್ಟೇಷನ್ ಬಳಿ ಕುರಿಂಜಿಮಲ ವನ್ಯಜೀವಿಧಾಮವೂ ಸಹ ಇದ್ದು ಪಶ್ಚಿಮಘಟ್ಟಗಳ ಅಪರೂಪದ ಜೀವಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೆ ನೀಲ್ಗಿರಿ ತಾಹ್ರ್, ಜಿಂಕೆ ಹಾಗೂ ಆನೆಗಳ ಸಹಜ ಚಲನವಲನಗಳನ್ನು ಇಲ್ಲಿ ಗಮನಿಸಬಹುದು.

ಚಿತ್ರಕೃಪೆ: Bimal K C

ಹೇಗೆ ತಲುಪಬಹುದು?

ಹೇಗೆ ತಲುಪಬಹುದು?

ಟಾಪ್ ಸ್ಟೇಷನ್ ತಲುಪುವುದು ಬಹಳವೆ ಸುಲಭವಾಗಿದೆ. ಮುನ್ನಾರ್ ನಿಂದ ಕೇವಲ 32 ಕಿ.ಮೀ ಗಳಷ್ಟು ದೂರದಲ್ಲಿರುವ ಈ ತಾಣಕ್ಕೆ ಕರೆದೊಯ್ಯಲು ಸಾಕಷ್ಟು ಬಸ್ಸುಗಳು, ಬಾಡಿಗೆ ಕಾರುಗಳು ಮುನ್ನಾರ್ ನಿಂದ ದೊರೆಯುತ್ತವೆ. ಅಲ್ಲದೆ ನಿಮ್ಮದೆ ಆದ ಸ್ವಂತ ವಾಹನಗಳಿದ್ದರೆ ಅದರ ಮುಲಕವೂ ಸಹ ತಲುಪಬಹುದು.

ಚಿತ್ರಕೃಪೆ: Solom09

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X