» » ಗುಜರಾತನ್ನು ಪ್ರೀತಿಸುವಂತೆ ಮಾಡುವ ಅಲ್ಲಿಯ ಪ್ರಮುಖ ಆಕರ್ಷಣೆಗಳು.

ಗುಜರಾತನ್ನು ಪ್ರೀತಿಸುವಂತೆ ಮಾಡುವ ಅಲ್ಲಿಯ ಪ್ರಮುಖ ಆಕರ್ಷಣೆಗಳು.

Posted By: Manjula Balaraj Tantry

ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್, ಇತ್ತೀಚಿನ ಸಮಯದವರೆಗೂ ಪ್ರವಾಸಿ ನಕ್ಷೆಯಲ್ಲಿ ಅದರ ಉಪಸ್ಥಿತಿಯನ್ನು ಕಂಡುಕೊಂಡಿರಲಿಲ್ಲ.ದೇಶದ ಬೇರೆ ಬೇರೆ ಜಾಗಗಳಂತೆ ಇಲ್ಲಿಯೂ ಕೂಡ ಆಸಕ್ತಿದಾಯಕ ವಿಷಯಗಳು, ಸ್ಥಳಗಳು ಮತ್ತು ಈ ಸ್ಥಳದ ಬಗ್ಗೆ ತಿಳಿಯದೇ ಇರುವವರಿಗೆ ಕುತೂಹಲಕಾರಿ ಎನಿಸುವಂತಹ ಜಾಗಗಳಿವೆ. ಗುಜರಾತ್ ರಾಜ್ಯದ ಪ್ರತೀಯೊಂದೂ ಜಾಗವೂ ಕೂಡಾ ನಿಜವಾಗಿಯೂ ರತ್ನದಂತೆ ಮೌಲ್ಯಯುತವಾಗಿದ್ದು ಖಂಡಿತವಾಗಿಯೂ ಇದನ್ನು ಭೇಟಿ ಮಾಡಿ ಅನುಭವಿಸುವಂತದಾಗಿದೆ

ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್, ಇತ್ತೀಚಿನ ಸಮಯದವರೆಗೂ ಪ್ರವಾಸಿ ನಕ್ಷೆಯಲ್ಲಿ ಅದರ ಉಪಸ್ಥಿತಿಯನ್ನು ಕಂಡುಕೊಂಡಿರಲಿಲ್ಲ. ಈ ರಾಜ್ಯವು ಹೆಚ್ಚಿನ ಸಂಖ್ಯೆಯ ಅದ್ಬುತವಾದ ಆಕರ್ಷಣೆಗಳಿಗೆ ನೆಲೆಯಾಗಿದೆ. ಅವು ತುಂಬಾ ವಿಭಿನ್ನ ವಾದುದಾಗಿದ್ದು,

ಅದ್ಬುತವಾದ ವಾಸ್ತುಶೈಲಿಗಳ ರಚನೆಗಳಿಂದ ಪ್ರಾರಂಭವಾಗಿ ವನ್ಯಜೀವಿಗಳವರೆಗೆ ಈ ರಾಜ್ಯದಲ್ಲಿವೆ. ಈ ಸ್ಥಳವು ಪ್ರವಾಸಕ್ಕೆ ಯೋಗ್ಯವಾದುದಾಗಿದೆ ಮತ್ತು ಮೆಟ್ರೋ ಪಾಲಿಟನ್ ನಗರಗಳ ಜಂಜಾಟದಿಂದ ವಿರಾಮ ಬಯಸುವವರಿಗೆ ಪರಿಪೂರ್ಣವಾದ ಸ್ಥಳವಾಗಿದೆ.

ದೇಶದ ಬೇರೆ ಬೇರೆ ಜಾಗಗಳಂತೆ ಇಲ್ಲಿಯೂ ಕೂಡ ಆಸಕ್ತಿದಾಯಕ ವಿಷಯಗಳು, ಸ್ಥಳಗಳು ಮತ್ತು ಈ ಸ್ಥಳದ ಬಗ್ಗೆ ತಿಳಿಯದೇ ಇರುವವರಿಗೆ ಕುತೂಹಲಕಾರಿ ಎನಿಸುವಂತಹ ಜಾಗಗಳಿವೆ. ಗುಜರಾತ್ ರಾಜ್ಯದ ಪ್ರತೀಯೊಂದೂ ಜಾಗವೂ ಕೂಡಾ ನಿಜವಾಗಿಯೂ ರತ್ನದಂತೆ ಮೌಲ್ಯಯುತವಾಗಿದ್ದು ಖಂಡಿತವಾಗಿಯೂ ಇದನ್ನು ಭೇಟಿ ಮಾಡಿ ಅನುಭವಿಸುವಂತದಾಗಿದೆ. ಕೆಲವು ಪ್ರಸಿದ್ದವಾದ ಮತ್ತು ಅಷ್ಟೇನೂ ಪ್ರಸಿದ್ದಿ ಹೊಂದಿರದ ಸ್ಥಳಗಳ ಕಡೆಗೆ ಒಂದು ನೋಟ ಹರಿಸೋಣ. ಮತ್ತು ನೀವು ಯಾವ ಜಾಗಕ್ಕೆ ಮೊದಲು ಹೋಗ ಬಯಸುವಿರಿ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಚಂಪಾನೇರ್ - ಪಾವಗಡ್ ಆರ್ಕಿಯಾಲಾಜಿಕಲ್ ಪಾರ್ಕ್

ಚಂಪಾನೇರ್ - ಪಾವಗಡ್ ಆರ್ಕಿಯಾಲಾಜಿಕಲ್ ಪಾರ್ಕ್

PC: Ankush.sabharwal

ಇದು ದೇಶದ ಯುನೆಸ್ಕೋದ ವಿಶ್ವ ಪರಂಪರೆ ತಾಣಗಳಲ್ಲಿನ ಒಂದು ಕಡಿಮೆ ಖ್ಯಾತಿ ಪಡೆದ ಸ್ಥಳವಾಗಿದೆ. ಚಂಪಾನೇರ್ ಇದು ಐತಿಹಾಸಿಕ ವಾಸ್ತುಶಿಲ್ಪ ಮತ್ತು ಪುರಾತತ್ವ ಸಂಪತ್ತುಗಳಿಂದ ತುಂಬಿದುದಾಗಿದೆ. 8 ಮತ್ತು 14 ನೇ ಶತಮಾನಗಳ ನಡುವಿನ ಸಮಯದ ಮುಸ್ಲಿಂ ಮತ್ತು ಹಿಂದೂ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ. ಈ ಪ್ರದೇಶವು ಬೆಟ್ಟದ ಮೇಲೆ ಕೋಟೆಗಳು, ಪೂಜಾ ಸ್ಥಳಗಳು, ವಸತಿ ಪ್ರದೇಶಗಳು, ಜಲಾಶಯಗಳು ಇನ್ನೂ ಅನೇಕ ಸ್ಥಳಗಳನ್ನು ಹೊಂದಿದೆ.

ಸಪುತಾರಾ

ಸಪುತಾರಾ

PC: Manisitlani

ಸಪುತಾರವೆಂದರೆ ಸರ್ಪಗಳ ವಾಸಸ್ಥಾನವೆಂದು ಅರ್ಥೈಸುತ್ತದೆ. ಇದು ಸಹ್ಯಾದ್ರಿ ಶ್ರೇಣಿಯ ಮೇಲೆ ದಟ್ಟವಾದ ಕಾಡಿನ ಪ್ರಸ್ಥಭೂಮಿಯ ಮೇಲೆ ಇದೆ. ಸಪುತಾರವನ್ನು ಗುಜರಾತಿನ ಏಕೈಕ ಗಿರಿಧಾಮವೆಂದು ಪರಿಗಣಿಸಲಾಗುತ್ತದೆ. ಮತ್ತು ಇಲ್ಲಿಯ ಪ್ರವಾಸೀ ಕೇಂದ್ರಗಳನ್ನು ಕೆಲವು ಆಕರ್ಷಣೆಗಳಿಂದ ಅಭಿವೃದ್ದಿ ಗೊಳಿಸಲಾಗಿದೆ.

ಈ ಬೆಟ್ಟಗಳ ತಪ್ಪಲುಗಳು ರಜಾದಿನಗಳನ್ನು ಕಳೆಯಲು ಅದೂ ವಿಶೇಷವಾಗಿ ಮಾನ್ಸೂನ್ ಮಳೆಗಾಲದಲ್ಲಿ ಒಂದು ಉತ್ತಮವಾದ ಸ್ಥಳವಾಗಿದೆ.

ಮರೀನ್ ರಾಷ್ರ್ಟೀಯ ಉದ್ಯಾನವನ

ಮರೀನ್ ರಾಷ್ರ್ಟೀಯ ಉದ್ಯಾನವನ

PC: Arpingstone

ಈ ಉದ್ಯಾನವನವು ದ್ವಾರಕಾ ಮಾರ್ಗದಲ್ಲಿ ಕರಾವಳಿಯುದ್ದಕ್ಕೂ ಇದೆ, ರಾಷ್ಟ್ರೀಯ ಉದ್ಯಾನವನ್ನು 1982 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ದೇಶದಲ್ಲಿ ಒಂದು ವಿಭಿನ್ನವಾದುದಾಗಿದೆ. ಈ ಸುಂದರವಾದ ರಾಷ್ಟ್ರೀಯ ಉದ್ಯಾನವನವು ಹೆಚ್ಚಿನ ಜನರಿಗೆ ಇನ್ನೂ ತಿಳಿದಿಲ್ಲ.

42 ದ್ವೀಪಗಳನ್ನು ಹೊಂದಿರುವ, ಅವುಗಳಲ್ಲಿ 33 ಹವಳದ ದಂಡೆಗಳಿಂದ ಸುತ್ತುವರಿದಿದೆ ಇಲ್ಲಿಯ ಸಮುದ್ರವು ಅಪರೂಪವಾದ ಮತ್ತು ವೈವಿಧ್ಯಮಯವಾದ ಏವಿಯನ್ ಪ್ರಭೇದಗಳ ನೆಲೆಯಾಗಿದೆ. ಈ ಸ್ಥಳಕ್ಕೆ ಚಳಿಗಾಲದ ತಿಂಗಳುಗಳಲ್ಲಿ ಭೇಟಿ ಮಾಡಿ ಮತ್ತು ಸಮುದ್ರದ ಮೇಲೆ ನಿಮ್ಮ ಪಾದಗಳನ್ನು ಆಳದ ನೀರಿನಲ್ಲಿ ಇಳಿಸಲು ಸಿದ್ದರಾಗಿ.

ರಾಣಿ ಕಿ ವವ್

ರಾಣಿ ಕಿ ವವ್

PC: Mahima Bhargava

ಇದು ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿದ್ದು, ರಾಣಿ ಕಿ ವಾವ್ ಎಂಬುದು 11 ನೇ ಶತಮಾನದಷ್ಟು ಪುರಾತನದಾಗಿದ್ದು ಇದನ್ನು ಇದು ಸೋಳಂಕಿ ರಾಜವಂಶದ ಕಾಲದಲ್ಲಿ ಭೀಮದೇವ್ I ಅವರ ನೆನಪಿಗಾಗಿ ಅವರ ವಿಧವೆ ಪತ್ನಿಯಿಂದ ನಿರ್ಮಿಸಲ್ಪಟ್ಟಿದೆ.ಈ ಕಟ್ಟಡವು ಏಳು ಅಂತಸ್ತಿನ ಮಹಡಿಗಳನ್ನು ಹೊಂದಿದೆ ಮತ್ತು 500 ಕ್ಕೂ ಹೆಚ್ಚಿನ ಶಿಲ್ಪಗಳನ್ನು ಈ ಪ್ಯಾನಲ್ ಗಳನ್ನು ಹೊಂದಿದೆ.

ಮೊಡೇರಾದ ಸೂರ್ಯದೇವಾಲಯ

ಮೊಡೇರಾದ ಸೂರ್ಯದೇವಾಲಯ

PC: Unmesh Dinda

ಮೊಡೇರಾ ಹಳ್ಳಿಯಲ್ಲಿರುವ ಸೂರ್ಯ ದೇವಸ್ಥಾನವು ದೇಶದ ಪ್ರಮುಖ ಸೂರ್ಯ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 11ನೇ ಶತಮಾನದಲ್ಲಿ ಸೋಲಂಕಿ ರಾಜವಂಶಸ್ಥರಿಂದ ನಿರ್ಮಾಣವಾಯಿತು. ಈ ದೇವಾಲಯವು ಬೆರಗುಗೊಳಿಸುವಂತಹ ರಚನೆಯನ್ನು ಹೊಂದಿದ್ದು ಮುಖ್ಯ ಕೆತ್ತನೆಗಳನ್ನು ಹೊರತುಪಡಿಸಿ ಇಲ್ಲಿ ಮೆಟ್ಟಿಲುಗಳಿರುವ ಕೆತ್ತನೆಯ ತೊಟ್ಟಿಯನ್ನು ಮತ್ತು ಸಭಾಂಗಣವನ್ನು ಹೊಂದಿದೆ. ದೇವಾಲಯದ ಗರ್ಭಗುಡಿಯನ್ನು ಹೇಗೆ ಕಟ್ಟಲಾಗಿದೆಯೆಂದರೆ, ಬೆಳಗಿನ ಸೂರ್ಯನ ಮೊದಲ ಕಿರಣಗಳು ಮೊದಲನೆಯದಾಗಿ ಗರ್ಭಗುಡಿಯನ್ನು ಸ್ಪರ್ಶಿಸುವಂತೆ ನಿರ್ಮಿಸಲಾಗಿದೆ.