Search
  • Follow NativePlanet
Share
» »ಆನಂದದಾಯಕ ಮತ್ತು ವಿಶ್ರಾಂತಿಯನ್ನು ಪಡೆಯಬಹುದಾದಂತಹ ಬೆಂಗಳೂರಿನ ವ್ಯಾಪ್ತಿಯಲ್ಲಿರುವ 5 ತಾಣಗಳು

ಆನಂದದಾಯಕ ಮತ್ತು ವಿಶ್ರಾಂತಿಯನ್ನು ಪಡೆಯಬಹುದಾದಂತಹ ಬೆಂಗಳೂರಿನ ವ್ಯಾಪ್ತಿಯಲ್ಲಿರುವ 5 ತಾಣಗಳು

By Manjula Balaraj Tantry

ಜೀವನವೆಂದರೆ ಸರಿಯಾದ ಸ್ಥಳಕ್ಕೆ ತಲುಪುವುದು ಮತ್ತು ಇದ್ದುದರಲ್ಲಿ ಅಥವಾ ಇಲ್ಲದುದರಲ್ಲಿ ಎಲ್ಲಕ್ಕಿಂತ ಉತ್ತಮವಾದುದನ್ನು ಮಾಡುವುದಾಗಿದೆ.ಕೆಲವರು ಶ್ರೀಮಂತಿಕೆಯ ಜೀವನವನ್ನು ಬಯಸುತ್ತಾ ಬಯಸುತ್ತಾ ಅದರ ಹುಡುಕಾಟದಲ್ಲಿ ನಿರಂತರರಾಗಿರುವುದರಿಂದ ಎಲ್ಲೋ ಒಂದು ಕಡೆ ದೈನಂದಿನ ಜೀವನದಿಂದ ಉತ್ಸಾಹವನ್ನು ಕಳೆದುಕೊಳ್ಳುತ್ತಾರೆ .

ಹೊರ ಜಗತ್ತಿಗೆ ನೀವು ಹೇರಳವಾದ ಸಮಯವನ್ನು ಕೊಡುತ್ತಿರುವಾಗ, ನೀವು ನಿಮ್ಮ ಸಂತೋಷ ಹಾಗೂ ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ಏಕೆ ಮೀಸಲಿಡಬಾರದು? ಅದರ ಜೊತೆಗೆ ನಿಮ್ಮ ಆಂತರಿಕ ಧ್ಯಾನಕ್ಕೆ, ಶಾಂತಿಗೆ ಸಮಯವನ್ನು ಕೊಡಿ.

ಇವೆಲ್ಲವುಗಳಿಂದ ಮುಕ್ತಿ ಪಡೆಯಲು ಎಲ್ಲಿಗಾದರೂ ನೆಮ್ಮದಿಯ ಮತ್ತು ಏಕಾಂತ ಸ್ಥಳಕ್ಕೆ ಹೋಗಲು ಬಯಸುತ್ತಿದ್ದಲ್ಲಿ ಖಂಡಿತವಾಗಿಯೂ ನೀವು ಸರಿಯಾದ ಲೇಖನವನ್ನು ಓದುತ್ತಿರುವಿರಿ . ಮೋಜು ಮತ್ತು ವಿಶ್ರಾಂತಿಯನ್ನು ಪಡೆಯಬಹುದಾದಂತಹ ಬೆಂಗಳೂರಿನ ವ್ಯಾಪ್ತಿಯಲ್ಲಿರುವ 5 ಪ್ರಮುಖ ತಾಣಗಳ ಬಗ್ಗೆ ಮಾಹಿತಿ ಇಲ್ಲಿವೆ.

ಯೆರ್ಕಾಡ್

ಯೆರ್ಕಾಡ್

PC: Aruna

(ಅಂದಾಜು ಸುಮಾರು 220 ಕಿಮೀ ದೂರದಲ್ಲಿದೆ )

ಯೆರ್ಕಾಡ್ ತಮಿಳುನಾಡಿನ ಸೇಲಂ ಜಿಲ್ಲೆಯ ಪೂರ್ವ ಘಟ್ಟಗಳ ಶೇವರೋಯ್ ಬೆಟ್ಟಗಳಲ್ಲಿರುವ ಸುಂದರವಾದ ಸಣ್ಣ ಗಿರಿಧಾಮವಾಗಿದೆ. ಸಾಮಾನ್ಯವಾಗಿ ಇದನ್ನು ಬಡವರ ಊಟಿ ಎಂದು ಕರೆಯಲಾಗುತ್ತದೆ. ಈ ಅದ್ಬುತವಾದ ಸ್ಥಳವು ಅನೇಕ ಪ್ರಸಿದ್ದ ದೇವಾಲಯಗಳು, ಜಲಪಾತಗಳು,ಉದ್ಯಾನವನಗಳು ಮತ್ತು ಇನ್ನೂ ಅನೇಕ ನಯನ ಮನೋಹರ ಸೌಂದರ್ಯತೆಗಳ ನೆಲೆಯಾಗಿದೆ.

ಯೆರ್ಕಾಡಿನ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಶೆವರಾಯ್ ದೇವಾಲಯ ಮಾತ್ರವಲ್ಲದೆ ಇಲ್ಲಿಯ ಬೊಟಾನಿಕಲ್ ಗಾರ್ಡನ್, ಕಿಲಿಯೂರ್ ಜಲಪಾತ, ಪಗೋಡಾ ಪಾಯಿಂಟ್ ಇತ್ಯಾದಿಗಳಿಗೂ ಭೇಟಿಕೊಡಿ. ದಕ್ಷಿಣದ ರತ್ನದಂತಿರುವ ಸ್ಥಳಗಳಾದ ಯಾರ್ಕಾಡ್ ಸರೋವರ, ಶೇವರಾಯ್ ದೇವಾಲಯ ಮತ್ತು ಲೇಡಿಸ್ ಸೀಟ್ ಇವುಗಳನ್ನು ಭೇಟಿಕೊಡಲು ಮರೆಯದಿರಿ. ಎರ್ಕಾಡಿಗೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಜೂನ್ ಮಧ್ಯದವರೆಗೆ, ಈ ಸಮಯದಲ್ಲಿ ವಾತಾವರಣವು ತಿರುಗಾಟಕ್ಕೆ ಆಹ್ಲಾದಕರವಾಗಿರುತ್ತದೆ.

ವಯನಾಡ್

ವಯನಾಡ್

PC: Stalinsunnykvj

(ಸರಿ ಸುಮಾರು 290 ಕಿ.ಮೀ ಅಂತರ)

ಟ್ರಕ್ಕಿಂಗ್ ಗೆ ಯೋಗ್ಯವಾದ ಸ್ಥಳಗಳು ಅಥವಾ ನಿಮ್ಮ ಹೋಟೆಲುಗಳಲ್ಲಿ ವಿಶ್ರಾಂತಿ ಪಡೆದು ಇಲ್ಲಿಯ ಸುತ್ತಮುತ್ತಲಿನ ಸುಂದರವಾದ ಮತ್ತು ಭವ್ಯವಾದ ಪ್ರದೇಶಗಳನ್ನು ನೋಡಿ ಸಂತೋಷಗೊಳ್ಳ ಬಯಸುವಿರಾದರೆ ನಿಮ್ಮ ಪ್ರಯಾಣ ಪಟ್ಟಿಯಲ್ಲಿ ವಯನಾಡನ್ನು ಸೇರಿಸುವುದು ಉತ್ತಮವಾದುದಾಗಿದೆ. ಕೇರಳದ ಈಶಾನ್ಯ ಮತ್ತು ಎತ್ತರದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದ್ದು ಇದು ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳವಾಗಿದೆ ಆದ್ದರಿಂದ ಇಲ್ಲಿ ಶಾಂತಿ ಮತ್ತು ವಿಶ್ರಾಂತಿ ನೀಡುವ ಎಲ್ಲಾ ಲಕ್ಷಣಗಳೂ ಇವೆ.

ಚೆಂಬ್ರಾ ಪೀಕ್, ಎಡಕ್ಕಲ್ ಗುಹೆಗಳು, ಮೀನ್ಮುಟ್ಟಿ ಜಲಪಾತ, ಬನಸುರ ಸಾಗರ್ ಅಣೆಕಟ್ಟು ಮತ್ತು ಇನ್ನೂ ಹೆಚ್ಚಿನ ಪ್ರಮುಖವಾದ ಸ್ಥಳಗಳಿವೆ. ಅಲ್ಲದೆ ಇಲ್ಲಿ ಜನಪ್ರಿಯ ಪೂಕೊಡೆ ಸರೋವರವನ್ನೂ ಭೇಟಿಕೊಡಬಹುದು ಮತ್ತು ಪ್ರಕೃತಿಯ ಸೌಂದರ್ಯದ ಜೊತೆಗೆ ಯಾವುದೇ ತೊಂದರೆಯಿಲ್ಲದೆ ಮನಸ್ಸಿಗೆ ವಿಶ್ರಾಂತಿಯನ್ನು ಇಲ್ಲಿ ಪಡೆಯಬಹುದಾಗಿದೆ.

ವಯನಾಡಿಗೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ.

 ಊಟಿ

ಊಟಿ

PC: svn919

(ಸರಿ ಸುಮಾರು 310ಕಿ.ಮೀ ಅಂತರ)

ಉದಕಮಂಡಲವನ್ನು ಪ್ರೀತಿಯಿಂದ ಊಟಿ ಎಂದು ಕರೆಯಲಾಗಿದ್ದು, ಇದು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಈ ಸ್ಥಳವನ್ನು ಸುತ್ತಲೂ ವಿಸ್ಮಯ ಮತ್ತು ಆಕರ್ಷಣೆಯಿಂದ ಸಂಪೂರ್ಣವಾಗಿ ಹೊರತೆಗೆಯಲು ಸಾಧ್ಯವಿಲ್ಲ.

ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿರುವ ಊಟಿಯು ಹಸಿರುಮಯ ಪರ್ವತ ಶ್ರೇಣಿಗಳು ಮತ್ತು ಪರ್ವತ ಕಣಿವೆಗಳನ್ನೊಳಗೊಂಡಿರುವ ಕಾರಣದಿಂದ ಗಿರಿಧಾಮಗಳ ರಾಣಿ ಎಂದು ಕರೆಯಲ್ಪಡುತ್ತದೆ. ಊಟಿ ಸರೋವರ, ಬೊಟೊನಿಕಲ್ ಗಾರ್ಡನ್, ದಕ್ಷಿಣ ಭಾರತದ ಅತೀ ಎತ್ತರದ ಶಿಖರಗಳಲ್ಲೊಂದಾದ ದೊಡ್ಡಬೆಟ್ಟ ಶಿಖರ, ಟೀ ಮ್ಯೂಸಿಯಂ ಪೈನ್ ಅರಣ್ಯ ಮತ್ತು ಪೈಕಾರಾ ಜಲಪಾತ. ಇವು ಇಲ್ಲಿರುವ ಪ್ರಮುಖ ಆಕರ್ಷಣೆಗಳಾಗಿದೆ.

ನಿಮ್ಮ ಸಮಯವನ್ನು ಅಚ್ಚರಿಗಳಿಂದ ಮತ್ತು ಮೋಜಿನಿಂದ ಕಳೆಯಬೇಕೆಂದಿದ್ದಲ್ಲಿ ಊಟಿಯು ಅದಕ್ಕೆ ಯೋಗ್ಯವಾದುದಾಗಿದೆ. ಊಟಿಯನ್ನು ಭೇಟಿ ಮಾಡಲು ಅತ್ಯುತ್ತಮ ಸಮಯವೆಂದರೆ ಮಾರ್ಚ್ ನಿಂದ ಜೂನ್ ಕೊನೆಯವರೆಗೆ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ಅಂತ್ಯದವರೆಗೆ.

ಮೈಸೂರು

ಮೈಸೂರು

PC: Raghuapara

(ಅಂದಾಜು ಸುಮಾರು 250ಕಿ.ಮೀ)

ಭವ್ಯವಾದ ಹಾಗೂ ಪ್ರೇಕ್ಷಣೀಯ ಹಾಗೂ ಸುಂದರವಾದ ಪ್ರಕೃತಿಯ ಮಧ್ಯೆಯಲ್ಲಿರುವ ಐತಿಹಾಸಿಕ ಮಹತ್ವವನ್ನೊಳಗೊಂಡ ಭೇಟಿಕೊಡಬಹುದಾದ ಈ ಸ್ಥಳವನ್ನು ಮೆಚ್ಚಿಗೆಗೆ ಪಾತ್ರವಾಗದೆ ಇರುವುದೇ? ನೀವು ನಿಜವಾಯೂ ವಿಶ್ರಾಂತಿಗೆ ಯೋಗ್ಯವಾದ ಪರಿಸರದೊಂದಿಗೆ ಮತ್ತು ಐತಿಹಾಸಿಕ ಸೌಂದರ್ಯತೆಯನ್ನು ಒಳಗೊಂಡ ಸ್ಥಳಗಳ ಅನ್ವೇಷಿಸಲು ತಯಾರಾಗಿದ್ದಲ್ಲಿ ಖಂಡಿತವಾಗಿಯೂ ಮೈಸೂರು ಅಂತಹ ಸ್ಥಳಗಳಲ್ಲಿ ಒಂದಾಗಿದೆ.

ಕರ್ನಾಟಕ ರಾಜ್ಯದ ಚಾಮುಂಡಿ ಬೆಟ್ಟಗಳ ತಪ್ಪಲಿನಲ್ಲಿರುವ ಮೈಸೂರು ತನ್ನ ಐತಿಹಾಸಿಕ ಸಂಸ್ಕೃತಿ ಮತ್ತು ಸ್ಮಾರಕಗಳಿಗೆ ಪ್ರಸಿದ್ಧವಾಗಿದೆ.ಇದು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೂ ಕರೆಯಲ್ಪಡುತ್ತದೆ ಮತ್ತು ಇಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಸಾಂಸ್ಕೃತಿಕ ಸ್ಪರ್ಶವನ್ನು ನೋಡಬಹುದಾಗಿದೆ. ಇಲ್ಲಿಯ ಕೋಟೆಗಳು ಮತ್ತು ಅರಮನೆಗಳ ಹೊರತಾಗಿಯೂ ಇಲ್ಲಿ ಉದ್ಯಾನವನಗಳು, ಸರೋವರಗಳು, ಇತ್ಯಾದಿಗಳು ಮೈಸೂರಿನ ಪ್ರಕ್ರೃತಿ ಸೌಂದರ್ಯತೆಯನ್ನು ವಿವರಿಸುತ್ತವೆ

ಇಲ್ಲಿಯ ಪ್ರಮುಖ ಪ್ರವಾಸೀ ಕೇಂದ್ರಗಳೆಂದರೆ ಮೈಸೂರು ಅರಮನೆ, ಕಾರಂಜಿ ಸರೋವರ, ಚಾಮುಂಡಿ ಬೆಟ್ಟ, ಲಲಿತ ಮಹಲ್, ಸಂತ ಫಿಲೋಮಿನ ಚರ್ಚ್, ಬೃಂದಾವನ ಉದ್ಯಾನವನ, ರೈಲ್ವೇ ಮ್ಯುಸಿಯಂ ಇತ್ಯಾದಿ. ಮೈಸೂರುಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಚಳಿಗಾಲದ ಋತುವಿನಲ್ಲಿ. ನವೆಂಬರ್ ಮಧ್ಯದಿಂದ ಫೆಬ್ರವರಿ ವರೆಗೆ ತಾಪಮಾನವು ಈ ಸಮಯದಲ್ಲಿ ಅನುಕೂಲಕರವಾಗಿರುತ್ತದೆ.

ಕೂರ್ಗ್

ಕೂರ್ಗ್

PC: rajeeshtk

( ಅಂದಾಜು ಅಂತರ ಸುಮಾರು 150 ಕಿ.ಮೀ)

ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಈ ಪಟ್ಟಣವು ಮುಖ್ಯವಾಗಿ ಕಾಫಿ ತೋಟಗಳು ಮತ್ತು ಮರಗಳು ಮತ್ತು ಮಸಾಲೆಗಳ ಉತ್ಪಾದನೆಗೆ ಪ್ರಸಿದ್ದವಾಗಿದೆ. ಪೂರ್ವದ ಇಳಿಜಾರುಗಳಲ್ಲಿರುವ ಈ ಪಟ್ಟಣವು ಜಲಪಾತಗಳು, ಸರೋವರಗಳು ಮತ್ತು ಉದ್ಯಾನಗಳು ಇತ್ಯಾದಿಗಳನ್ನೊಳಗೊಂಡು ಭವ್ಯವಾದ ಪ್ರಕೃತಿ ನೋಟವನ್ನು ತನ್ನ ಸುತ್ತಲೂ ಒಳಗೊಂಡಿದೆ.

ಕೂರ್ಗ್ ನಲ್ಲಿ ಅಸಂಖ್ಯಾತ ಆಸಕ್ತಿದಾಯಕ ಕೇಂದ್ರಗಳಿವೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಅಬ್ಬೆ ಜಲಪಾತ , ತಲಕಾವೇರಿ, ಕಾವೇರಿ ನದಿಯ ಉಗಮ ಸ್ಥಾನ, ಇರಪ್ಪು ಜಲಪಾತ ಮತ್ತು ತದಿಯಾಂಡಮೋಲ್ ಶಿಖರ ಇದು ಕೂರ್ಗ್ ನ ಅತ್ಯಂತ ಎತ್ತರದ ಶಿಖರವಾಗಿದ್ದು 1748 ಮೀ ಎತ್ತರದಲ್ಲಿದೆ.

ಹೊನ್ನಮ್ಮನ ಕೆರೆ ಈ ಸ್ಥಳವು ಹೊನ್ನಮ್ಮನ ದೇವಿಯ ಹೆಸರು ಪಡೆದುಕೊಂಡಿದ್ದು, ಇದು ತನ್ನ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ . ಆಯುರ್ವೇದ ಸ್ಪಾಗಳು ಮತ್ತು ರೆಸಾರ್ಟ್ಗಳ ಉಪಸ್ಥಿತಿಯನ್ನು ಸಹ ಆನಂದಿಸಬಹುದು ಮತ್ತು ಈ ನಿಶ್ಯಬ್ದ ಪರಿಸರದಲ್ಲಿ ವಿಶ್ರಾಂತಿಯನ್ನು ಪಡೆಯಬಹುದಾಗಿದೆ. ಕೂರ್ಗ್ ವರ್ಷವಿಡೀ ಭೇಟಿ ನೀಡಬಹುದಾದ ಸ್ಥಳವಾಗಿದೆ ಆದರೂ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ನಿಂದ ಏಪ್ರಿಲ್ ಕೊನೆಯವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more