Search
  • Follow NativePlanet
Share
» »ಈ ಮಳೆಗಾಲದಲ್ಲಿ ಮೇಘಾಲಯಕ್ಕೆ ಭೇಟಿ ನೀಡಲು 5 ಕಾರಣಗಳು

ಈ ಮಳೆಗಾಲದಲ್ಲಿ ಮೇಘಾಲಯಕ್ಕೆ ಭೇಟಿ ನೀಡಲು 5 ಕಾರಣಗಳು

By Manjula Balaraj Tantry

ಮಾನ್ಸೂನ್ ಮಳೆಗಾಲದಲ್ಲಿ ಬೆಟ್ಟಗಳು, ಕಣಿವೆಗಳು ಮತ್ತು ಬಯಲು ಪ್ರದೇಶಗಳಾದ್ಯಂತ ನೈಸರ್ಗಿಕ ಸೌಂದರ್ಯಕ್ಕಿಂತಲೂ ಉತ್ತಮವಾದದ್ದು ಏನಿದೆ? ಭಾರತದಲ್ಲಿ ಈ ಕಾಲದಲ್ಲಿ ಹೂ ಬಿಡುವಂತಹ ಕೆಲವು ಸ್ಥಳಗಳನ್ನು ನಾವು ಕಾಣಬಹುದಾಗಿದೆ. ಈ ಸಮಯದಲ್ಲಿ ಎಲ್ಲವೂ ತಾಜಾ ಮತ್ತು ಶುದ್ದವಾಗಿ ಕಾಣುವುದರಿಂದ ಇದರ ಗಡಿಯೊಳಗೆ ಸ್ವರ್ಗದ ಅನುಭವವನ್ನು ಅನುಭವಿಸಬಹುದಾಗಿದೆ.

ತಂತ್ರ-ಮಂತ್ರದಲ್ಲಿ ವಿಶ್ವಾಸ ಇರುವವರು ಹೋಗಲೇ ಬೇಕಾದ ಮಂದಿರಗಳಿವುತಂತ್ರ-ಮಂತ್ರದಲ್ಲಿ ವಿಶ್ವಾಸ ಇರುವವರು ಹೋಗಲೇ ಬೇಕಾದ ಮಂದಿರಗಳಿವು

ಈ ಪ್ರಕೃತಿಯ ಒಂದು ವಿಸ್ತಾರವಾದ ಸೌಂದರ್ಯತೆಯನ್ನು ಅನುಭವಿಸುವಲ್ಲಿ ಯಾರೂ ಕೂಡ ತಪ್ಪಿಸಿಕೊಳ್ಳಲು ಇಚ್ಚಿಸುವುದಿಲ್ಲ ಆದುದರಿಂದ ನೀವು ಈ ಮಾನ್ಸೂನ್ ಮಳೆಗಾಲದಲ್ಲಿ ನೀವು ಉತ್ತಮವಾದ ಸ್ಥಳಕ್ಕೆ ಭೇಟಿ ಕೊಡಲು ಬಯಸಿದಲ್ಲಿ, ನೀವು ಮೇಘಾಲಯಕ್ಕೆ ಭೇಟಿ ಕೊಡುವುದು ಹೆಚ್ಚು ಸೂಕ್ತ ಇದು ಮೋಡಗಳ ವಾಸಸ್ಥಾನವೆಂದೂ ಕೂಡಾ ಕರೆಯಲ್ಪಡುತ್ತದೆ.

1. ನಿಮ್ಮೊಳಗೆ ತಾಜಾತನವನ್ನು ಪುನರುಜ್ಜೀವನಗೊಳಿಸಿ

1. ನಿಮ್ಮೊಳಗೆ ತಾಜಾತನವನ್ನು ಪುನರುಜ್ಜೀವನಗೊಳಿಸಿ

NEHA198530

ಜೀವನದ ತಾಜಾತನವನ್ನು ಅನುಭವಿಸಲು ಮಲಿನಗೊಳ್ಳದೇ ಇರುವ ಮತ್ತು ಪ್ರಶಾಂತವಾದ ಪ್ರಕೃತಿಯ ಮಧ್ಯೆ ಕಳೆಯಲು ಯಾರು ತಾನೆ ಆಸೆಪಡುವುದಿಲ್ಲ? ಮಳೆಗಾಲದಲ್ಲಿ ಮೇಘಾಲಯವು ತನ್ನ ಸುತ್ತಮುತ್ತಲಿನ ಸುಂದರ ಪ್ರಕೃತಿಯ ಕಾರಣದಿಂದಾಗಿ ನಿಮ್ಮನ್ನು ಸಮತೋಲನದ ಜಗತ್ತಿಗೆ ಕರೆದೊಯ್ಯಬಹುದು ಅಲ್ಲಿಂದ ಮೈ ಮನಸ್ಸು ಮತ್ತು ದೇಹಕ್ಕೆ ಹಿತವಾದ ಅನುಭವವನ್ನು ನೀಡಬಹುದು.

ಈ ಹಸಿರು ಪರಿಸರದ ಸಂಪೂರ್ಣ ಮೌನವು ಇಲ್ಲಿಯ ಸುಂದರ ತೊರೆಗಳ ಮತ್ತು ತಂಪಾದ ಗಾಳಿಯ ಹಿತಕರವಾದ ಪರಿಸರದ ಜೊತೆಗೆ ಸೇರಿ ಒಂದು ಮಧುರವಾದ ರಾಗವನ್ನೇ ಉಂಟುಮಾಡುತ್ತವೆ ಇವೆಲ್ಲವುಗಳೂ ಸೇರಿ ಪೂರ್ತಿ ಸ್ಥಳವನ್ನು ಒಂದು ಸಣ್ಣ ಸ್ವರ್ಗವೇ ಧರೆಗೆ ಬಂದಂತಹ ಅನುಭವವನ್ನು ನೀಡುತ್ತದೆ. ಇಂತಹ ಅದ್ಬುತವಾದ ಪರಿಸರದಲ್ಲಿ ನಿಮ್ಮಲ್ಲಿಯ ತಾಜಾತನವನ್ನು ಪುನರುಜ್ಜೀವನಗೊಳಿಸಿಕೊಳ್ಳಬಹುದು ಮತ್ತು ಇಲ್ಲಿ ನೀವು ಅತ್ಯಂತ ಆನಂದವನ್ನು ಮತ್ತು ತೃಪ್ತಿಯನ್ನು ಪಡೆಯಬಹುದಾಗಿದೆ.

2. ಸುತ್ತಮುತ್ತಲಿನ ಪ್ರೀತಿ- ಪ್ರಣಯದಂತೆ ಕಾಣುವ ಪರಿಸರ

2. ಸುತ್ತಮುತ್ತಲಿನ ಪ್ರೀತಿ- ಪ್ರಣಯದಂತೆ ಕಾಣುವ ಪರಿಸರ

Rudra23

ಮೇಘಾಲಯವು ಭಾರತದ ದಂಪತಿಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇರುವ ಸ್ಥಳವೆನಿಸಿದೆ. ಅದೂ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಈ ಪೂರ್ತಿ ಪರಿಸರವೇ ಒಂದು ರೋಮಾಂಚನಗೊಳಿಸುವಂತಹುದಾಗಿದೆ. ನಿಮ್ಮ ಸುತ್ತಮುತ್ತಲಿನ ಪರಿಸರವು ನವಿರಾದ ಹಸಿರು ಎಲೆಗಳಿಂದ ಅಲಂಕರಿಸಲ್ಪಟ್ಟು ಮಳೆಯ ಮೃದುವಾದ ಹನಿಗಳ ಮಧ್ಯೆ ನಿಮ್ಮ ಸಂಗಾತಿಯು ಉತ್ಸುಕರಾಗದೇ ಇರಲು ಸಾಧ್ಯವೇ ಇಲ್ಲ.

ಈ ಅದ್ಬುತವಾದ ಕ್ಷಣಗಳನ್ನು ಹೊಂದಿರುವ ಮೇಘಾಲಯವು ನಿಮ್ಮನ್ನು ನಿಮ್ಮ ಸಂಗಾತಿಯೊಂದಿಗೆ ಇನ್ನೂ ನಿಕಟವಾಗುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. ಇಂತಹ ಒಂದು ಶಾಶ್ವತ ಅನುಭವವನ್ನು ಕೊಡುವ ಮತ್ತು ನಿಮ್ಮ ಸಮಯವನ್ನು ಒಂದು ರೋಮಾಂಚಕತೆಯಿಂದ ಕಳೆಯಬಹುದಾದಂತಹ ಸ್ಥಳದಲ್ಲಿ ಇರಲು ಬಯಸುವುದಿಲ್ಲವೇ ? ಹೌದು ಎಂದಾದಲ್ಲಿ ನೀವು ಮೇಘಾಲಯಕ್ಕೆ ಹೋಗುವ ದಾರಿಯನ್ನು ಈ ಋತುವಿನಲ್ಲಿ ಆಯ್ದುಕೊಳ್ಳಿ.

3. ಪ್ರಚೋದಿಸುವಂತಹ ಸೊಂಪಾದ ಮತ್ತು ಹಸಿರುಮಯ ಕಾಡುಗಳು

3. ಪ್ರಚೋದಿಸುವಂತಹ ಸೊಂಪಾದ ಮತ್ತು ಹಸಿರುಮಯ ಕಾಡುಗಳು

Rudra23

ಮುಂದಕ್ಕೆ ಹೋಗಿ ಮೇಘಾಲಯದ ನಯನಮನೋಹರ ದೃಶ್ಯಗಳು ಮತ್ತು ನೈಸರ್ಗಿಕ ಚೌಕಟ್ಟನ್ನು ಸೆರೆಹಿಡಿದರೆ ಹೇಗಿರಬಹುದು? ಹೌದು ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಮೇಘಾಲಯದಲ್ಲಿಯ ಕಾಡುಗಳು ಮತ್ತು ದಟ್ಟವಾದ ಸಸ್ಯಗಳು ಹಸಿರು ಬಣ್ಣಕ್ಕೆ ತಿರುಗುತ್ತವೆ.

ಇಲ್ಲಿಂದ ಪೂರ್ತಿ ವಾತಾವರಣವನ್ನು ಪ್ರಚೋದಿಸುಂತಹ ಸೌಂದರ್ಯಗೆ ಗೆ ತಿರುಗುತ್ತದೆ. ಇಲ್ಲಿ ನೀವು ಜಗತ್ತಿನ ನೈಸರ್ಗಿಕ ಹಸಿರು ಹಾಸನ್ನು ನೋಡಬಹುದು. ಇದು ನಿಮ್ಮನ್ನು ಉತ್ಸುಕರನ್ನಾಗಿಸಲು ಸಾಕಾಗುವುದಿಲ್ಲವೆ? ಆದುದರಿಂದ ನೀವು ಯಾವುದೇ ಪ್ರಕೃತಿಯ ಹಸಿರನ್ನು ವರ್ಣನೆ ಮಾಡುವಂತಹ ಸ್ಥಳಕ್ಕೆ ಭೇಟಿ ಕೊಡದಿದ್ದಲ್ಲಿ, ನೀವು ಈ ಮಾನ್ಸೂನ್ ಮಳೆಗಾಲದಲ್ಲಿ ಮೇಘಾಲಯಕ್ಕೆ ಭೇಟಿ ಕೊಡಲೇ ಬೇಕು.

4. ಎಲ್ಲವೂ ಕೈಗೆಟಕುವ ದರದಲ್ಲಿ

4. ಎಲ್ಲವೂ ಕೈಗೆಟಕುವ ದರದಲ್ಲಿ

Faraz.1903

ಮೇಘಾಲಯವು ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಅತ್ಯಂತ ಹೆಚ್ಚಿನ ಮಳೆಯನ್ನು ಅನುಭವಿಸುವ ಪ್ರದೇಶವಾದುದರಿಂದ ಇಲ್ಲಿಯ ಪ್ರತಿ ಮೂಲೆ ಮೂಲೆಯೂ ನೀರಿನಿಂದ ತುಂಬಿರುತ್ತದೆ ಆದುದರಿಂದ ಇದು ಈ ಸಮಯದಲ್ಲಿ ಪ್ರವಾಸಿಗರಿಂದ ಕಡಿಮೆ ಮಟ್ಟದಲ್ಲಿ ಭೇಟಿ ಕೊಡಲ್ಪಡುವಂತಹ ಸ್ಥಳವೆನಿಸಿದೆ.

ಆದುದರಿಂದ ಇಲ್ಲಿಯ ಹೋಟೇಲುಗಳು ಮತ್ತು ಹೋಮ್ ಸ್ಟೇ ಗಳು ಈ ಸ್ಥಳವನ್ನು ಕೈಗೆಟಕುವ ದರದ ಸ್ಥಳವನ್ನಾಗಿಸಲು ಈ ಸಮಯದಲ್ಲಿ ದರವನ್ನು ಕಡಿಮೆ ಮಾಡುತ್ತವೆ. ಆದುದರಿಂದ ಈ ಸಮಯದಲ್ಲಿ ಮೇಘಾಲಯಕ್ಕೆ ಭೇಟಿ ಕೊಡಲು ಇದೊಂದು ಉತ್ತಮವಾದ ಕಾರಣವಲ್ಲವೇ ? ನೀವು ಪ್ರಕೃತಿಯ ಸೌಂದರ್ಯತೆಗಳನ್ನು ಕಡಿಮೆ ವೆಚ್ಚದಲ್ಲಿ ಅನ್ವೇಷಿಸಬಹುದಾಗಿದೆ. ಆದುದರಿಂದ ನಿಮ್ಮ ಪ್ಯಾಕಿಂಗ್ ಕಾರ್ಯಕ್ರಮವನ್ನು ಮುಂದುವರೆಸಿ ಈ ಸ್ವರ್ಗಸದೃಶ್ಯ ಹಿನ್ನೆಲೆಯುಳ್ಳ ಸ್ಥಳಕ್ಕೆ ಈ ಮಾನ್ಸೂನ್ ಮಳೆಗಾಲದಲ್ಲಿ ಹೋಗಲು ತಯಾರಾಗ ಬಾರದೇಕೆ?

5. ಲಿವಿಂಗ್ ರೂಟ್ ಸೇತುವೆಗಳು

5. ಲಿವಿಂಗ್ ರೂಟ್ ಸೇತುವೆಗಳು

Fabian Lambeck

ಮಾನ್ಸೂನ್ ಮಳೆಗಾಲದಲ್ಲಿ ಮೇಘಾಲಯದಲ್ಲಿಯ ಸೌಂದರ್ಯತೆಯು ಇಲ್ಲಿಯ ಮೂಲ ಸೇತುವೆಗಳ ಆಕರ್ಷಣೆಯಲ್ಲಿ ಹುದುಗಿದೆ. ಈ ಸಮಯದಲ್ಲಿ ಈ ಮೂಲ ಸೇತುವೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಂದರ ತೊರೆಗಳು, ರೋಮಾಂಚಕ ಪ್ರಕೃತಿ ಮತ್ತು ಶ್ರೀಮಂತ ಪ್ರಾಣಿ ಜೀವಗಳ ನೆಲೆಯಾಗಿ ಮಾರ್ಪಟ್ಟು ಸ್ವರ್ಗವೇ ಧರೆಗಿಳಿದಂತೆ ಕಾಣುತ್ತದೆ. ಈ ಸಮ್ಮೋಹನಗೊಳಿಸುವ ಸೇತುವೆಗಳ ಮೇಲೆ ಅಡ್ಡಾಡುವ ಬಗ್ಗೆ ನೀವು ಏನು ಹೇಳುವಿರಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X