ಮೇಘಾಲಯ ಪ್ರವಾಸೋದ್ಯಮ : ಮೋಡಗಳ ಮಧ್ಯದಲ್ಲೊಂದು ಪಯಣ

ಮುಖಪುಟ » ಸ್ಥಳಗಳು » » ಮುನ್ನೋಟ

1972 ರಲ್ಲಿ ರಚಿಸಲ್ಪಟ್ಟ ಮೇಘಾಲಯ ರಾಜ್ಯವು ಖಾಸಿ, ಜಯನ್ತಿಯಾ ಮತ್ತು ಗಾರೊ ಬುಡಕಟ್ಟು ಜನಾಂಗದವರ ಪ್ರಮುಖ ನೆಲೆಯಾಗಿದೆ. ಇಳಿಜಾರಿನ ಸ್ತರಗಳಲ್ಲಿ ನೆಲೆಗೊಂಡಿರುವ ಇಲ್ಲಿನ ಬೆಟ್ಟ ಗುಡ್ಡಗಳು ಹಣ್ಣು ಹಂಪಲಗಳು ಹಾಗು ಅಡಿಕೆಗಳನ್ನು ಬೆಳೆಯಲು ಪ್ರಶಸ್ತವಾಗಿದೆ. ಮೆಘಾಲಯದ ರಾಜಧಾನಿ ಐಜ಼ಾಲ್ ಆಗಿದ್ದು, ಇದು ಭಾರತದ ಜನಸಂಖ್ಯೆಯ ದೃಷ್ಟಿಯಿಂದ 23 ನೇಯ ದೊಡ್ಡ ರಾಜ್ಯವಾಗಿದೆ.

ಉತ್ತರದಲ್ಲಿ ಅಸ್ಸಾಂ ಹಾಗು ದಕ್ಷಿಣದಲ್ಲಿ ಬಾಂಗ್ಲಾ ದೇಶದಿಂದ ಮೇಘಾಲಯವು ಸುತ್ತುವರೆದಿದೆ. ರಾಜ್ಯದ ಒಂದರ ಮೂರನೆಯ ಭಾಗದಷ್ಟು ಪ್ರದೇಶವು ಕಾಡುಗಳಿಂದ ಆವರಿಸಿದೆ. ಮೆಘಾಲಯದ ಕಾಡುಗಳು ತನ್ನಲ್ಲಿರುವ ವೈವಿಧ್ಯಮಯ ಪ್ರಾಣಿ ಪಕ್ಷಿಗಳಿಂದಾಗಿ ಹೆಸರುವಾಸಿಯಾಗಿದೆ. ಈ ಕಾಡುಗಳಲ್ಲಿರುವ ಅಗಾಧವಾದ ಸಸ್ಯ ಹಾಗು ಪ್ರಾಣಿ ಸಂಪತ್ತು ಒಂದು ವಿಶಿಷ್ಟವಾದ ಅನುಭವವನ್ನು ಪ್ರವಾಸಿಗರ ಮನದಲ್ಲಿ ಮೂಡಿಸುತ್ತದೆ.

ಮೇಘಾಲಯದ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಮೇಘಾಲಯ ಪ್ರವಾಸೋದ್ಯಮವು ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಗೆ ಪ್ರಾಕೃತಿಕ ಸೌಂದರ್ಯದ ಅದ್ಭುತವಾದ ಪ್ರವಾಸವನ್ನು ಮಾಡಿಸುತ್ತದೆ. ಈ ರಾಜಯದ ನೆರೆಯಲ್ಲಿರುವ ಮಿಜೋರಮ್ ಕೂಡ ತನ್ನ ಸೌಂದರ್ಯದತ್ತ ಭೂದೃಶ್ಯಾವಳಿಗಳಿಂದ ಹಾಗು ಹಿತಕರವಾದ ವಾತವರಣದಿಂದ ಪ್ರಖ್ಯಾತವಾಗಿದೆ. ಮಿಜೋರಮ್ ನಲ್ಲಿ ಕಂಡು ಬರುವ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಮುರ್ಲೇನ್ ರಾಷ್ಟ್ರೀಯ ಉದ್ಯಾನ ಮತ್ತು ಡಂಪಾ ಹುಲಿ ಮೀಸಲು ಅರಣ್ಯ. ಹೆಸರಿಸಬಹುದಾದ ಕೆಲವು ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಪಲಕ್ ದಿಲ್, ತಮ್ ದಿಲ್ ಮತ್ತು ವಾಂಟ್ವಾಂಗ್ ಜಲಪಾತ.

ಮೇಘಾಲಯದ ಭೌಗೋಳಿಕತೆ

ಮೇಘಾಲಯವು ಭಾರತದ ಏಳು ಸಹೋದರಿ ರಾಜ್ಯಗಳಲ್ಲೊಂದಾಗಿದೆ. ಇಲ್ಲಿ ಸಾಕಷ್ಟು ನದಿ ಕೆರೆಗಳನ್ನು ಕಾಣಬಹುದು. ಗಾರೊ ಬೆಟ್ಟಗಳ ಶ್ರೇಣಿಯಲ್ಲಿ ಹರಿಯುವ ಪ್ರಮುಖ ನದಿಗಳೆಂದರೆ ದರಿಂಗ್, ಸಂದಾ, ಬಂದ್ರಾ, ಭೋಗಾಯ್, ದರೇಂಗ್, ಸಿಮ್ಸಂಗ್, ನಿತೈ ಮತ್ತು ಭುಪೈ. ಇನ್ನುಳಿದಂತೆ ಕೇಮ್ದ್ರೀಯ ಹಾಗು ಪೂರ್ವ ಪ್ರಸ್ತಭೂಮಿಗಳಲ್ಲಿ ಹರಿದಿರುವ ನದಿಗಳೆಂದರೆ ಉಮ್ಖ್ರಿ, ದಿಗಾರು, ಉಮಿಯಮ್ ಅಥವಾ ಬಾರಾಪಾನಿ, ಮಿಂಗಾತ್ ಮತ್ತು ಮೀಟುಡು. ದಕ್ಷಿಣದ ಖಾಸಿ ಪರ್ವತ ಪ್ರದೇಶದಲ್ಲಿ ಈ ನದಿಗಳು ಹಲವಾರು ಸುಂದರ ಕೆರೆಗಳು ಹಾಗು ಜಲಪಾತಗಳನ್ನು ನಿರ್ಮಿಸಿವೆ.

ಮೇಘಾಲಯದ ಸಂಸ್ಕೃತಿ ಮತ್ತು ಸಮಾಜ

ಮೇಘಾಲಯದ ಜನರು ಸರಳ ಹಾಗು ಸಜ್ಜನ ಸ್ವಭಾವದವರು. ಆದರಾತಿಥ್ಯಕ್ಕೆ ಹೆಸರಾದವರು. ಇಲ್ಲಿ ಮುಖ್ಯವಾಗಿ ಖಾಸಿಸ್, ಗರೊ ಮತ್ತು ಜಯನ್ತಿಯಾ ಪಂಗಡದವರು ಕಂಡುಬರುತ್ತಾರೆ. ಇಲ್ಲಿನ ಜನರ ವಿಶಿಷ್ಟತೆಯೆಂದರೆ ಇವರು ಮಾತೃಸಂತತಿಯ ಪದ್ಧತಿ(ಮಹಿಳೆಗೆ ಪ್ರಾಧಾನ್ಯತೆ ನೀಡುವುದು)ಯನ್ನು ಅನುಸರಿಸುತ್ತಿರುವುದು.

ಖಾಸಿ ಹಾಗು ಜಯನ್ತಿಯಾ ಪಂಗಡದವರು ಸಾಂಪ್ರದಾಯಿಕ ಮಾತೃ ಸಂತತಿ ಪದ್ಧತಿಯನ್ನು ಅನುಸರಿಸಿದರೆ ಗಾರೊ ಜನಾಂಗದವರು ವಂಶಾವಳಿ ಪದ್ಧತಿ (ಅಂದರೆ ಮನೆತನದ ಕಿರಿಯ ಹೆಣ್ಣು ಮಗಳು ಪೂರ್ವನಿಯೋಜಿತವಾಗಿ ಆಸ್ತಿಯನ್ನು ಪಡೆದುಕೊಳ್ಳುವಿಕೆ ಅದು ಕೂಡ ಪಾಲಕರು ಮತ್ತೊಬ್ಬ ಹೆಣ್ಣು ಮಗಳ ಹೆಸರನ್ನು ನಮೂದಿಸಿಲ್ಲದಿದ್ದಾಗ) ಯನ್ನು ಅನುಸರಿಸುತ್ತಾರೆ. ನಂತರ ಅವಳನ್ನು ನೊಕ್ನಾ ಎಂಬ ಹುದ್ದೆಯನ್ನು ಪಡೆಯುತ್ತಾಳೆ. ನೊಕ್ನಾ ಎಂದರೆ ಮನೆ ಎಂಬರ್ಥವಾಗುತ್ತದೆ.

ಮೇಘಾಲಯ ಉತ್ಸವಗಳು

ಮೇಘಾಲಯದ ಬುಡಕಟ್ಟು ಜನಾಂಗದವರು ಹಲವಾರು ವೈವಿಧ್ಯಮಯ ಉತ್ಸವಗಳನ್ನು ಅತಿ ಸಡಗರದಿಂದ ಆಚರಿಸುತ್ತಾರೆ. ಖಾಸಿ ಜನಾಂಗದ ಪ್ರತಿಯೊಂದು ಉತ್ಸವದಲ್ಲಿ ನೃತ್ಯ ಅಥವಾ ಕುಣಿತವು ಒಂದು ಅವಿಭಾಜ್ಯ ಅಂಗವಾಗಿರುತ್ತದೆ. ನೃತ್ಯವು ಪ್ರತ್ಯೇಕವಾಗಿ ಹಳ್ಳಿಗಳಿಂದ ಅಥವಾ ಹಳ್ಳಿಗಳ ಸಮೂಹದಿಂದ ಆಚರಿಸಲ್ಪಡುತ್ತವೆ. ಸ್ಥಳೀಯ ರಂಗುರಂಗಾದ ಚೌಕಟ್ಟುಗಳಿಂದ ಝಗಮಗಿಸುವ ನೃತ್ಯಗಳು ಖಾಸಿ ಸಂಸ್ಕೃತಿಯನ್ನು ಅಪ್ಯಾಯಮಾನವಾಗಿಸುತ್ತವೆ.

ಖಾಸಿ ಉತ್ಸವಗಳ ಪ್ರಕಾರಗಳೆಂದರೆ ಕಾ ಶಾದ್ ಸುಕ್ ಮಿನ್ಸಿಯೆಮ್, ಕಾ ಪೊಮ್-ಬ್ಲಾಂಗ್ ನೊಗ್‍ಕ್ರೆಮ್, ಕಾ ಶಾದ್ ಶಿಂಗ್ವಿಯಾಂಗ್ ಥಂಗಿಯಾಪ್, ಕಾ ಶಾದ್ ಕಿಂಜೋಹ್ ಖಾಸ್ಕೈನ್, ಕಾ ಬಾಮ್ ಖಾನಾ ಶೊಂಗ್, ಉಮ್ಸನ್ ನೊಂಗ್‍ಖರೈ, ಶಾದ್ ಬೈ ಸಿಯರ್.

ಜಯನ್ತಿಯ ಪರ್ವತ ಉತ್ಸವಗಳು ಮಾನವ ಹಾಗು ಪರಿಸರದ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಸಹಾಯಕವಾಗಿದೆ. ಜನಗಳ ಮಧ್ಯದಲ್ಲಿನ ಭತೃತ್ವವನ್ನು ಹೆಚ್ಚಿಸುವಲ್ಲಿಯೂ ಇದು ಮಹತ್ತರವಾದ ಪಾತ್ರವಹಿಸುತ್ತದೆ. ಜಯನ್ತಿಯ ಉತ್ಸವಗಳೆಂದರೆ ಬೆಹ್ಡೈಂಕ್ಲಾಮ್, ಲಾಹೊ ಡ್ಯಾನ್ಸ್, ಸೋವಿಂಗ್ ರಿಚುಯಲ್ ಸೆರೆಮನಿ.

ಇನ್ನು ಗಾರೊ ಜನಾಂಗದವರ ಹಬ್ಬಗಳೆಂದರೆ, ಡೆನ್ ಬಿಲ್ಸಿಯಾ, ವಂಗಾಲಾ, ರೊಂಗ್ಚು ಗಾಲಾ, ಮಿ ಅಮುವಾ, ಮಂಗೋನಾ, ಗ್ರೆಂಗ್ಡಿಕ್ ಬಾ, ಜಾಮಂಗ್ ಸಿಯಾ, ಜಾ ಮೆಗಾಪಾ, ಸಾ ಸಟ್ ರಾ ಚಾಕಾ, ಅಜೆಯೋರ್ ಅಹೋವಾ, ಡೊರೆ ರಾಟಾ ನೃತ್ಯ, ಚಂಬಿಲ್ ಮೆಸಾರಾ, ಡು ಕ್ರುಸುವಾ, ಸರಮ್ ಚಾ, ಆ ಸೆ ಮಾನಿಯಾ ಅಥವಾ ಟಾಟಾ.

ಮೇಘಾಲಯದಲ್ಲಿನ ಹವಾಮಾನ

ಈ ರಾಜ್ಯದ ಹವಾಮಾನವು ಮಧ್ಯಮವಾಗಿದ್ದರೂ ಆರ್ದ್ರತೆಯಿಂದ ಕೂಡಿರುತ್ತದೆ. ಇಲ್ಲಿನ ಗರಿಷ್ಠ ತಾಪಮಾನವು 28 ಡಿಗ್ರಿಯನ್ನು ದಾಟುವುದೆ ಅಪರೂಪ. ಖಾಸ್ ವಲಯದಲ್ಲಿನ ಚಿರಾಪುಂಜಿ ಜಗತ್ತಿನಲ್ಲೆ ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಮಾರ್ಚ್ ಹಾಗು ಜುಲೈ ನಡುವಿನ ಅವಧಿಯಲ್ಲಿ ಈ ರಾಜ್ಯಕ್ಕೆ ಭೇಟಿ ನೀಡುವುದು ಸೂಕ್ತ.

Please Wait while comments are loading...