Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಆಕರ್ಷಣೆಗಳು » ನರ್ತಿಯಾಂಗ್

ನರ್ತಿಯಾಂಗ್, ಜಯನ್ತಿಯ ಹಿಲ್ಸ್

1

ನರ್ತಿಯಾಂಗ್ ಜೈನ್ತಿಯಾ ರಾಜರುಗಳ ಬೇಸಿಗೆಯ ರಾಜಧಾನಿಯಾಗಿತ್ತು. ಇಂದು ಪ್ರವಾಸಿಗರು ಮತ್ತು ಭಕ್ತರು ವಿಶ್ವದೆಲ್ಲೆಡೆಯಿಂದ ಇಲ್ಲಿಗೆ ಭೇಟಿ ನೀಡಿ ಪ್ರಾಚೀನ ಸಂಸ್ಕೃತಿ ಮತ್ತು ಧರ್ಮಕ್ಕೆ ಸಾಕ್ಷಿಯಾಗಲು ಬಯಸುತ್ತಾರೆ.ನರ್ತಿಯಾಂಗ್ ನಲ್ಲಿರುವ ದುರ್ಗಾ ದೇವಸ್ಥಾನ ಈ ಸಾಮ್ರಾಜ್ಯದ ಹಿಂದೂ ಪರಂಪರೆಯ ದೃಢೀಕರಣದಂತಿದೆ. ಮಂದಿರದ ಮೂಲ ವಿನ್ಯಾಸವನ್ನು ಬದಲಾಯಿಸಲಾಗಿದೆ. ಆದರೆ ದುರ್ಗಾ ಮಾತೆಗೆ ಬಲಿಕೊಡಲು ಶತಮಾನದ ಮೊದಲು ಬಳಸಲಾಗುತ್ತಿದ್ದ ಮೂರ್ತಿ, ಬಲಿಪೀಠ ಮತ್ತು ಖಡ್ಗ ಕಾಣಸಿಗುತ್ತದೆ.

ಇಲ್ಲೇ ಒಂದು ಶಿವನ ಮಂದಿರವಿದೆ. ನರ್ತಿಯಾಂಗ್ ಮಾರುಕಟ್ಟೆಗೆ ಒಂದು ದಂತಕಥೆಯಿದೆ. ಯು ಮಾರ್ ಫಲ್ಯನ್ಗಕಿ ಎನ್ನುವಾತ ರಲಿಯಾಂಗ್ ಮಾರ್ಕೆಟ್ ನಿಂದ ನರ್ತಿಯಾಂಗ್ ತನಕ ದೊಡ್ಡ ಚಪ್ಪಡಿಯೊಂದನ್ನು ಹೊತ್ತುಕೊಂಡು ತಂದಿದ್ದ. ಹಲವಾರು ಏಕಶಿಲೆಗಳೊಂದಿಗೆ ಇರುವ ನರ್ತಿಯಾಂಗ್ ಮಾರುಕಟ್ಟೆಯನ್ನು ಇಂದು ಕೂಡ ನೋಡಬಹುದಾಗಿದೆ. ಮಾರುಕಟ್ಟೆಯಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದ ಪುರುಷರು ಮತ್ತು ಮಹಿಳೆಯರು ಸಣ್ಣ ಹುಲ್ಲುಛಾವಣೆಯುಳ್ಳ ಅಂಗಡಿಯಲ್ಲಿ ಕುಳಿತು ಹಣ್ಣು, ತರಕಾರಿ, ಸ್ಥಳೀಯ ಖಾದ್ಯಗಳು ಮತ್ತು ಬೆತ್ತದ ಬುಟ್ಟಿಗಳನ್ನು ಮಾರುವುದನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ.

ನರ್ತಿಯಾಂಗ್ ಗೆ ಹೋಗುವ ಮಾರ್ಗದಲ್ಲಿ ಸುಂದರ ಥಡ್ಲಸ್ಕೈನ್ ಸರೋವರವಿದೆ. ಮುಸ್ಸಂಜೆ ಹೊತ್ತಿನಲ್ಲಿ ಈ ಸರೋವರದಲ್ಲಿ ಬೋಟಿಂಗ್ ಹೋಗುವಾಗ ಮುಖವನ್ನು ಮುತ್ತಿಕ್ಕಿ ಬರುವ ತಂಗಾಳಿಯ ಅನುಭವ ಅನನ್ಯ.ಶಿಲ್ಲಾಂಗ್ ನಿಂದ ಟೂರಿಸ್ಟ್ ಕ್ಯಾಬ್ ಮೂಲಕ ನರ್ತಿಯಾಂಗ್ ಗೆ ತಲುಪುವುದು ಸುಲಭ ಮಾರ್ಗ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue