ಜೊವಾಯಿಯ 60 ಕಿ.ಮೀ. ಪೂರ್ವದ ಲುಮ್ಸಂಗ್ ಗ್ರಾಮದಲ್ಲಿರುವ ಉಮ್ಲವನ್ ಗುಹೆ ಸಾಹಸಿ ಪ್ರವೃತ್ತಿಯ ಪ್ರವಾಸಿಗರಿಗೆ ಅತ್ಯಾಕರ್ಷಕ ತಾಣವಾಗಿದೆ. ಈ ಗುಹೆಯು ತುಂಬಾ ಸಮಯದಿಂದ ಸಾರ್ವಜನಿಕರಿಂದ ದೂರವಾಗಿಯೇ ಉಳಿದಿತ್ತು. ಆದರೆ ಇತ್ತೀಚೆಗೆ ನಡೆದ ಸರ್ವೇಯೊಂದು ಈ ಗುಹೆ ಉಪಖಂಡದಲ್ಲಿ ಅತ್ಯಂತ ಆಳ ಮತ್ತು ದೀರ್ಘವಾದ ಗುಹೆ ಎಂದು ಹೇಳಿದೆ.
ಉಮ್ಲವನ್ ಗುಹೆಯೊಂದಿಗೆ ಇನ್ನೆರಡು ಗುಹೆಗಳಾದ ಉಮ್ಸಕೊರ್ ಮತ್ತು ಕೊಟ್-ಸತಿ ಗುಹೆಗಳು ಸೇರುತ್ತದೆ. ಇವೆರಡರ ಉದ್ದ 21 ಕಿ.ಮಿ. 60 ಕಿ.ಮೀ. ಉದ್ದದಷ್ಟಿರುವ ಗುಹೆಗಳು ಹಲವಾರು ಸಣ್ಣ ಗುಹೆಗಳನ್ನು ಹೊಂದಿದೆ. ಇದರಲ್ಲಿ ಕೆಲವು ಮಾತ್ರ ಹೊರಜಗತ್ತಿಗೆ ತಿಳಿದುಬಂದಿದೆ. ತಮ್ಮದೇ ಆದ ಸಾಹಸ ಮಾಡಲು ಹಸಿದಿರುವವರಿಗೆ ಇದು ಅತ್ಯಾಕರ್ಷಕ ಮತ್ತು ಕೇಕ್ ಮೇಲೆ ಚೆರ್ರಿಯಂತಹ ಬೋನಸ್ ಆಗಿದೆ.
ಮಳೆಗಾಲದಲ್ಲಿ ಗುಹೆಯ ಪ್ರವೇಶದ್ವಾರದಲ್ಲಿ ನೀರು ತುಂಬಿರುವ ಕಾರಣ ಸ್ಥಳೀಯರು ಇಲ್ಲಿ ಬಟ್ಟೆ ಹೊಗೆಯುತ್ತಾರೆ ಮತ್ತು ಇದರೊಳಗೆ ಪ್ರವೇಶಿಸಲು ಈಜಬೇಕಾಗಿದೆ. ಗುಹೆಯೊಳಗೆ ನೀರ್ಗಲ್ಲು ಮತ್ತು ಗವಿಗಂಬ ರಚನೆಯಿಂದ ಅಲಂಕೃತಗೊಂಡಿದೆ. ಉಮ್ಲವನ್ ಗುಹೆಗೆ ಪ್ರಯಾಣಿಸಲು ಶಿಲ್ಲಾಂಗ್ ನಿಂದ ಖಾಸಗಿ ಕಾರನ್ನು ಬುಕ್ ಮಾಡಬಹುದು.