ಜೈನ್ತಿಯಾ ಭಾಷೆಯಲ್ಲಿ ಸಯ್ನತು ಕಸೈರ ಎಂದರೆ ಸ್ವರ್ಣ ಪುಷ್ಪವೆಂದರ್ಥ. ಇದೇ ಸ್ಥಳದಿಂದ ಕಿಯಾಂಗ್ ನೊಂಗ್ಬಹ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಿದ್ದ. ಇದು ಮಯ್ನತ್ದು ನದಿಯ ದಡದಲ್ಲಿದೆ.
ಇಂದು ಸಯ್ನತು ಕಸೈರ ಸ್ಥಳೀಯರಿಗೆ ಜನಪ್ರಿಯ ಪಿಕ್ನಿಕ್ ಸ್ಪಾಟ್ ಆಗಿದೆ. ಮಕ್ಕಳು ಮತ್ತು ಹಿರಿಯರು ಈ ನದಿಯಲ್ಲಿ ಸ್ನಾನ ಮಾಡುವುದು ಮತ್ತು ಈಜುವುದನ್ನು ಯಾವಾಗಲೂ ಕಂಡುಬರುತ್ತದೆ. ಈ ನದಿಗೆ ಅಡ್ಡಲಾಗಿ ಸುಂದರವಾದ ವೈಯರ್ ಸಸ್ಪೆನ್ಸ್ ಸೇತುವೆಯನ್ನು ಕಟ್ಟಲಾಗಿದೆ. ನದಿಯ ಉದ್ದಕ್ಕೂ ನೀರಿನ ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
ವಿರಮಿಸಲು ಮತ್ತು ಕುಟುಂಬದೊಂದಿಗೆ ಬಂದು ನದಿ ದಡದಲ್ಲಿ ತಂಪಾದ ಮಂಜು, ಮಿತವಾದ ಬಿಸಿಲ ಸ್ನಾನ ಮಾಡಲು ಪ್ರವಾಸಿಗರು ಬರುವಂತಹ ಜೊವಾಯಿಯ ಒಂದು ಸ್ಥಳವಾಗಿದೆ. ಸಯ್ನತು ಕಸೈರಗೆ ತಲುಪಲು ಶಿಲ್ಲಾಂಗ್ ನಿಂದ ಪ್ರವಾಸಿ ವಾಹನವನ್ನು ಬುಕ್ಕಿಂಗ್ ಮಾಡುವುದು ಒಳ್ಳೆಯ ಮಾರ್ಗ.