• Follow NativePlanet
Share
» »ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ಸರೋವರಗಳು

ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ಸರೋವರಗಳು

Posted By: Manjula Balaraj Tantry

ಕೆಲವು ದಶಕಗಳ ಹಿಂದೆ ಬೆಂಗಳೂರು ಇಂದಿನಂತೆ ದೊಡ್ಡ ಮೆಟ್ರೋ ನಗರವಾಗಿರಲಿಲ್ಲ. ಇದು ಸುಂದರವಾದ ಗಿರಿಧಾಮಗಳಿಂದ ಸುತ್ತುವರದಿತ್ತು ಮತ್ತು ಸುತ್ತಲೂ ನೈಸರ್ಗಿಕ ಸೌಂದರ್ಯತೆ ಹಾಗೂ ಉಸಿರಾಡಲು ಸ್ವಚ್ಚವಾದ ಗಾಳಿಸಿಗುತ್ತಿತ್ತು. ವರ್ಷಗಳು ಉರುಳಿದಂತೆ, ಬೆಂಗಳೂರಿನ ಈ ಹಸಿರು ಕಡಿಮೆಯಾಗುತ್ತಾ ಬಂತು ಮತ್ತು ಈ ಹಸಿರು ವಾತಾವರಣವನ್ನು ಎತ್ತರವಾದ ಕಟ್ಟಡಗಳು, ರಸ್ತೆಗಳು ಮತ್ತು ಇತರ ಆಧುನಿಕತೆಗಳು ಆಕ್ರಮಿಸಿಕೊಂಡವು.

ಆದರೂ ಇಂದಿಗೂ ಪ್ರಕೃತಿಯಿಂದ ಚದುರಲ್ಪಟ್ಟ ಕೆಲವು ತುಣುಕುಗಳನ್ನು ಬೆಂಗಳೂರಿನ ಒಳಗೆ ಮತ್ತು ಸುತ್ತಮುತ್ತ ನೋಡಬಹುದು ಇಲ್ಲಿ ನೀವು ನಗರದ ಸದ್ದು ಗದ್ದಲಗಳಿಂದ ಪಾರಾಗಿ ಈ ಜಾಗಗಳಲ್ಲಿ ಹೋಗಿ ವಿಶ್ರಾಂತಿ ಪಡೆದುಕೊಳ್ಳಬಹುದು. ಆದುದರಿಂದ ಬೆಂಗಳೂರು ಒಂದು ಅಭಿವೃದ್ದಿ ಹೊಂದಿದ ಪಟ್ಟಣವಾಗಿದ್ದರೂ ಇಂದಿಗೂ ಸಹ ಭಾರತದ ತೋಟಗಳ ನಗರ (ಗಾರ್ಡನ್ ಸಿಟಿ) ಎಂದೇ ಕರೆಯಲ್ಪಡುತ್ತಿದೆ.

ಬೆಂಗಳೂರಿನ ಹೆಚ್ಚಿನ ಸರೋವರಗಳು ಮಾಲಿನ್ಯತೆಯಿಂದಾಗಿ ಬತ್ತಿಹೋಗಿ ಅವುಗಳು ಮಾನ್ಯತೆ ಪಡೆದಿಲ್ಲವಾದರೂ ನಾವು ಕೆಲವು ಸರೋವರಗಳನ್ನು ಇಂದಿಗೂ ಜನರ ಒತ್ತಡದ ಜೀವನದಿಂದ ಪಾರುಮಾಡುವ ಮತ್ತು ನೆಮ್ಮದಿಯನ್ನು ಕೊಡುವಲ್ಲಿ ಸಫಲವಾಗಿರುವಂತಹ ಸರೋವರಗಳನ್ನು ಕಾಣಬಹುದು. ನಿಮ್ಮ ಮನಸ್ಸನ್ನು ಮತ್ತು ನಿಮ್ಮ ಆತ್ಮವನ್ನು ತನ್ಮಯಗೊಳಿಸುವ ಈ ಸರೋವರಗಳಲ್ಲಿ ಕೆಲವನ್ನು ಭೇಟಿ ಮಾಡಿದರೆ ಹೇಗಿರುತ್ತದೆ?

ಅಲ್ಸೂರ್ ಸರೋವರ

ಅಲ್ಸೂರ್ ಸರೋವರ

ಬೆಂಗಳೂರಿನ ಅತಿದೊಡ್ಡ ಸರೋವರವಾಗಿದ್ದು, ನಗರದ ಅದ್ಭುತವಾದ ಮತ್ತು ಸುಂದರವಾದ ವಾತಾವರಣದಿಂದಾಗಿ ನಗರದ ಹೆಮ್ಮೆಯೆನಿಸಿದೆ. ಹಸಿರಿನಿಂದ ಒಳಗೊಂಡಿರುವ ಪ್ರಶಾಂತವಾದ ವಾತಾವರಣವು ನಗರದ ನಿರತ ಜೀವನದಿಂದ ತಪ್ಪಿಸಿಕೊಂಡು ವಿಶ್ರಾಂತಿ ಪಡೆಯಬಹುದಾದ ಒಂದು ಸುಂದರವಾದ ಸ್ಥಳವಾಗಿದೆ.

ಇದು ಸುತ್ತಲೂ ಶ್ರೀಮಂತ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳನ್ನು ಹೊಂದಿದೆ, ಇಲ್ಲಿಯ ದೃಶ್ಯಗಳು ಮತ್ತು ಸ್ಥಳಗಳು ಛಾಯಾಗ್ರಹಣಕ್ಕೆ ಸೂಕ್ತ ಪ್ರವಾಸಿ ತಾಣವಾಗಿದೆ. ಆದ್ದರಿಂದ, ಈ 123.6 ಎಕರೆಗಳಷ್ಟು ದೊಡ್ಡ ಸರೋವರದ ಭೇಟಿ ಮತ್ತು ಅದರ ಮಾಂತ್ರಿಕ ಸೌಂದರ್ಯತೆಯ ಅನುಭವವನ್ನು ಪಡೆಯುವುದರ ಬಗ್ಗೆ ಏನು ಹೇಳುವಿರಿ?

PC - Silver Blue

ಹೆಬ್ಬಾಳ ಸರೋವರ

ಹೆಬ್ಬಾಳ ಸರೋವರ

ಇದು ಕಾಲೋಚಿತವಾಗಿ ತುಂಬುವ ಸರೋವರವಾಗಿದ್ದು ಬೇಸಿಗೆಯಲ್ಲಿ ಒಣಗಿರುತ್ತದೆ. ಆದುದರಿಂದ ಈ ಸರೋವರಕ್ಕೆ ಭೇಟಿ ನೀಡಲು ಮಳೆಗಾಲ ಅಥವಾ ಚಳಿಗಾಲ ಸೂಕ್ತವಾದುದಾಗಿದೆ. ಸುತ್ತಲೂ ಸುಂದರವಾದ ತೋಟಗಳಿಂದ ಸುತ್ತುವರೆದಿರುವ ಹೆಬ್ಬಾಳ ಸರೋವರವು ಬೆಂಗಳೂರಿನ ಅತ್ಯಂತ ಹಳೆಯ ಸರೋವರಗಳಲ್ಲೊಂದಾಗಿದೆ ಮತ್ತು ಇದು ಕೆಂಪೇಗೌಡ ಅವರ ರಚನೆಯ ನಂತರದಿಂದಲೂ ಇದು ಒಂದು ಪ್ರಮುಖ ಆಕರ್ಷಣೆಯಾಗಿದೆ.

ಈ ಬೆರಗುಗೊಳಿಸುವ ಸರೋವರದ ವೈಶಿಷ್ಟ್ಯತೆಯೇನೆಂದರೆ ಇಲ್ಲಿಯ ಸಸ್ಯಗಳು ಮತ್ತು ಜಲಚರ ವೈವಿಧ್ಯತೆಗಳು. ಅಲ್ಲದೆ ಇಲ್ಲಿ ಅನೇಕ ವಲಸೆ ಬಂದಿರುವ ಪಕ್ಷಿಗಳು ತಮ್ಮ ಗೂಡು ಕಟ್ಟಿಕೊಳ್ಳುತ್ತಿರುವುದನ್ನು ಮತ್ತು ಸುತ್ತಲೂ ಹಾರಾಡುವುದನ್ನು ಕಾಣಬಹುದು. ಇಲ್ಲಿಯ ಕೆಲವು ಸುಂದರವಾದ ದೃಶ್ಯಗಳನ್ನು ಸೆರೆಹಿಡಿಯಬಯಸುವಿರಾದರೆ ಹೆಬ್ಬಾಳ ಸರೋವರವು ನಿಮಗೆ ಸೂಕ್ತವಾದ ಸ್ಥಳವಾಗಿದೆ.

PC- Rishabh Mathur

ಲಾಲ್ ಬಾಗ್ ಸರೋವರ

ಲಾಲ್ ಬಾಗ್ ಸರೋವರ

ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್ ದಕ್ಷಿಣ ತುದಿಯಲ್ಲಿದೆ ಮತ್ತು ಇದು ನಗರದ ಹೃದಯಭಾಗದಲ್ಲಿರುವ ಈ ಸರೋವರವು 3.5 ಮೀಟರ್ಗಳಷ್ಟು ಆಳವಿದ್ದು 40 ಎಕರೆಗಳಿಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿದೆ. 1760 ರಲ್ಲಿ ಹೈದರ್ ಅಲಿ ಖಾನ್ ಈ ಭವ್ಯವಾದ ಬೊಟಾನಿಕಲ್ ಉದ್ಯಾನವನ್ನು ಸ್ಥಾಪಿಸಿದನು.

ಲಾಲ್ ಬಾಗ್ ಸರೋವರವು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಸರೋವರದ ಕಾರಣದಿಂದಾಗಿ ಇಲ್ಲಿ ಶಾಂತಿಯುತ ಪರಿಸರವು ನಿರ್ಮಾಣವಾಗಿದೆ.ನೀವು ಸುಂದರವಾದ ಮರಗಳ ಮಧ್ಯೆ ಮತ್ತು ಹೂಗಳ ಸೌಗಂಧಯುಕ್ತ ಪರಿಮಳಗಳ ಮಧ್ಯೆ ಕುಳಿತುಕೊಳ್ಳಬೇಕೆಂದಿದ್ದರೆ ಮತ್ತು ಈ ಆಕರ್ಷಕವಾದ ಸರೋವರದ ನೀರಿನಿಂದ ಆನಂದ ಹೊಂದಲು ಈ ಸ್ಥಳಕ್ಕೆ ಭೇಟಿಕೊಡಿ.

PC- Ramesh NG

ಅಗರ ಸರೋವರ

ಅಗರ ಸರೋವರ

ಅಗರ ಸರೋವರವು ಬೆಂಗಳೂರಿನಲ್ಲಿ ನೀವು ನೋಡಬಹುದಾದ ಒಂದು ಅತೀ ಸುಂದರವಾದ ಸರೋವರವಾಗಿದೆ. ಇದು ಇಲ್ಲಿಯ ಹಸಿರು ಮತ್ತು ತಂಪಾದ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಈ ಸರೋವರದಲ್ಲಿ ಪ್ರಕೃತಿ ಪ್ರೇಮಿಗಳಿಗೆ ಬೇಕಾದ ಎಲ್ಲವೂ ಇದೆ.

ಇಂದು ಇದರ ನಿರ್ವಹಣೆಯು ಪ್ರಶ್ನೆಯಾಗಿ ಉಳಿದಿದ್ದರೂ ಸಹ ಈ ಸರೋವರದಲ್ಲಿ ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಈ ಸೊಗಸಾದ ಸರೋವರದ ಅದ್ಭುತ ದೃಶ್ಯಗಳು ನಿಮಗೆ ಆನಂದವನ್ನು ನೀಡುತ್ತದೆ. ಇಲ್ಲಿ ಜಾಗಿಂಗ್ ಮಾಡುವ ವಾಕಿಂಗ್ ಮಾಡುವ ಅನೇಕ ಮಂದಿಯನ್ನು ಕಾಣಬಹುದು ಮತ್ತು ಇಲ್ಲಿಗೆ ಬರುವ ಜನರು ತಮ್ಮ ಬೆಳಗಿನ ಮತ್ತು ಸಂಜೆ ಅತ್ಯುತ್ತಮವಾದ ಕ್ಷಣಗಳನ್ನು ಇಲ್ಲಿ ಆಸ್ವಾದಿಸುತ್ತಾರೆ.

ಬೆಂಗಳೂರಿನ ಈ ಸರೋವರಗಳಿಗೆ ನೀವು ಭೇಟಿಕೊಟ್ಟರೆ ಹೇಗಿರುತ್ತದೆ? ಅಲ್ಲದೆ ಈ ಕಾಲವು ಸರೋವರಗಳ ದೈವತ್ವವನ್ನು ಭೇಟಿ ಮಾಡುವ ಮತ್ತು ನಿಮ್ಮನ್ನು ಸಂತೋಷಗೊಳಿಸುವ ಋತುವಾಗಿರುತ್ತದೆ.

PC- Surajram Kumaravel


ಹೇಸರಘಟ್ಟ ಸರೋವರ

ಹೇಸರಘಟ್ಟ ಸರೋವರ

ಬೆಂಗಳೂರಿನಲ್ಲಿರುವ ಎಲ್ಲಾ ಸರೋವರಗಳು ಪ್ರಕೃತಿದತ್ತವಾದುದಲ್ಲ. ಬೆಂಗಳೂರಿನ ಅತ್ಯಂತ ಸುಂದರವಾದ ಸರೋವರಗಳಲ್ಲಿ ಒಂದನ್ನು 1894 ರಲ್ಲಿ ಜನರಿಗೆ ಸಿಹಿನೀರಿನ ಅಗತ್ಯಗಳನ್ನು ಪೂರೈಸಲು ನಿರ್ಮಿಸಲಾಯಿತು. ಈಗ ಹೇಸರಘಟ್ಟ ಸರೋವರ ವೈವಿಧ್ಯಮಯ ಹಕ್ಕಿಗಳಿಗೆ ಒಂದು ಹಿಮ್ಮೆಟ್ಟುವಿಕೆಯಾಗಿದೆ ಮತ್ತು ಇದು ಪ್ರಮುಖ ದೃಶ್ಯಗಳ ತಾಣವಾಗಿದ್ದು, ಅಲ್ಲಿ 2000 ಕ್ಕಿಂತಲೂ ಹೆಚ್ಚು ಜಲಪಕ್ಷಿಗಳು ಚಿರಪರಿಚಿತವಾಗಿದೆ ಮತ್ತು ಇಲ್ಲಿಯ ವಾತಾವರಣವನ್ನು ಹೆಚ್ಚು ಆಕರ್ಷಕವಾಗಿಸುತ್ತದೆ.

ಆದರೂ ಬೇಸಿಗೆಯಲ್ಲಿ ಈ ಸರೋವರದ ಒಣಗಿ ಬಂಜರು ಭೂಮಿ ತೋರುತ್ತದೆ. ಆ ಸಮಯದಲ್ಲೂ ಇಲ್ಲಿಯ ವಾತಾವರಣವು ಜನರಿಗೆ ವಾಕಿಂಗ್ ಮಾಡಲು ಮತ್ತು ಕೆಲವು ಪಕ್ಷಿಗಳನ್ನು ಕಾಣಲು ಅವಕಾಶಮಾಡಿಕೊಡುತ್ತದೆ.

PC- Nikkul

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ