Search
  • Follow NativePlanet
Share
» »ಭಾರತದ 5 ಸುಂದರ ಹಾಗೂ ದೊಡ್ಡ ಕೆರೆಗಳು

ಭಾರತದ 5 ಸುಂದರ ಹಾಗೂ ದೊಡ್ಡ ಕೆರೆಗಳು

By Vijay

ಭಾರತದಲ್ಲಿ ಸಾಕಷ್ಟು ನೀರಿನ ಮೂಲಗಳಿವೆ. ಕೆರೆಗಳು, ನದಿ, ಹಿನ್ನೀರು ಹೀಗೆ ಹತ್ತು ಹಲವು ನೀರಿನ ಮೂಲಗಳನ್ನು ಕಾಣಬಹುದು. ಈ ನೀರಿನ ಮೂಲಗಳು ಪ್ರವಾಸಿ ಆಕರ್ಷಣೆಗಳೆಂದರೂ ತಪ್ಪಾಗಲಾರದು. ಕೆಲವು ಸರೋವರ ಅಥವಾ ಕೆರೆಗಳಂತೂ ಎಷ್ಟು ಸುಂದರವಾಗಿವೆಯೆಂದರೆ ಅದರ ತಟದಲ್ಲಿ ಕುಳಿತರೆ ಸಾಕು ಸಮಯ ಕಳೆಯುವುದೆ ಗೊತ್ತಾಗುವುದಿಲ್ಲ.

ದಕ್ಷಿಣ ಭಾರತದಲ್ಲಿರುವ ಸುಂದರ ಕೆರೆಗಳಿವು!

ಆ ಕೆರೆಗಳು ತನ್ನ ಸುತ್ತಮುತ್ತಲಿರುವ ಅಪಾರ ಪ್ರಕೃತಿ ಸೌಂದರ್ಯ, ತನ್ನಲ್ಲಿ ಹರಡಿಕೊಂಡಿರುವ ಪ್ರಶಾಂತತೆ ಹಾಗೂ ಕೆಲವು ಸಾಹಸಮಯ ಜಲ ಕ್ರೀಡೆ ಹಾಗೂ ದೋಣಿ ವಿಹಾರಗಳಿಂದಲೂ ಹೆಸರುವಾಸಿಯಾಗಿರುತ್ತವೆ. ಭಾರತದಲ್ಲಿ ನೂರಾರು ಸಂಖ್ಯೆಯಲ್ಲಿ ಕೆರೆಗಳನ್ನು ನೋಡಬಹುದಾದರೂ ಇಲ್ಲಿ ಹೇಳಲಾಗಿರುವ ಕೆಲವು ಕೆರೆಗಳು ಅತ್ಯಂತ ಸುಂದರವಾದ ಕೆರೆಗಳೆಂದು ಕೆಲ ಮೂಲಗಳ ಪ್ರಕಾರ ಪರಿಗಣಿಸಲ್ಪಟ್ಟಿವೆ.

ಹಾಗಾದರೆ ನಿಮಗೂ ಕುತೂಹಲ ಕೆರಳಿರಬೇಕಲ್ಲವೆ ಆ ಕೆರೆಗಳು ಯಾವುವು ಎಂದು ತಿಳಿಯಲು?

ಭಾರತದ 5 ಸುಂದರ ಹಾಗೂ ದೊಡ್ಡ ಕೆರೆಗಳು

ಗುರುದೊಂಗ್ಮಾರ್ ಕೆರೆ, ಚಿತ್ರಕೃಪೆ: Virtous One

ಗುರುದೊಂಗ್ಮಾರ್ ಕರೆ : ಜಗತ್ತಿನಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ಕೆರೆಗಳ ಪೈಕಿ ಒಂದಾಗಿರುವ ಈ ಸುಂದರ ಕೆರೆಯು ಸಮುದ್ರ ಮಟ್ಟದಿಂದ 17,800 ಅಡಿಗಳಷ್ಟು ಎತ್ತರದಲ್ಲಿದೆ. ಸಿಕ್ಕಿಂ ರಾಜ್ಯದ ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿ ಸ್ಥಿತವಿರುವ ಈ ಕೆರೆಯು ಬೌದ್ಧ ಹಾಗೂ ಸಿಖ್ಖರಿಬ್ಬರಿಗೂ ಪವಿತ್ರವಾದ ಕೆರೆಯಾಗಿದೆ. ಗ್ಯಾಂಗ್ಟಕ್ ನಗರದಿಂದ 190 ಕಿ.ಮೀ ದೂರವಿರುವ ಈ ಕೆರೆ ಚೀನಾ ದೇಶದ ಗಡಿಗೆ ಬಹಳ ಹತ್ತಿರದಲ್ಲಿದೆ.

ವೂಲಾರ್ ಕರೆ : ಜಮ್ಮು ಮತ್ತು ಕಾಶ್ಮೀರ ರಾಜಯದ ಬಂಡಿಪೋರ ಜಿಲ್ಲೆಯಲ್ಲಿರುವ ತಾಜಾ ನೀರಿನ ಅತಿ ದೊಡ್ಡ ಕೆರೆ ಇದಾಗಿದೆ. ಏಷಿಯಾದಲ್ಲಿ ಕಂಡುಬರುವ ಅತಿ ದೊಡ್ಡ ತಾಜಾಅ ನೀರಿನ ಕೆರೆಗಳಲ್ಲಿ ಒಂದಾಗಿರುವ ವೂಲಾರ್ ಕೆರೆ ಝೀಲಂ ನದಿಯ ಮೂಲವನ್ನು ಹೊಂದಿದೆ.

ಭಾರತದ 5 ಸುಂದರ ಹಾಗೂ ದೊಡ್ಡ ಕೆರೆಗಳು

ವೂಲಾರ್ ಕೆರೆ, ಚಿತ್ರಕೃಪೆ: Eye.Ess.Ohh

ದಂದಮಾ ಕೆರೆ : ಹರ್ಯಾಣ ರಾಜ್ಯದ ಗುರ್ಗಾಂವ್ ಜಿಲ್ಲೆಯ ಸೋಹ್ನಾ ಎಂಬಲ್ಲಿದೆ ಈ ಅಗಾಧ ಗಾತ್ರ ಕೆರೆ. ನಗರದ ನಿವಾಸಿಗಳಿಗೆ ವಾರಾಂತ್ಯದ ರಜಾ ಸಮಯವನ್ನು ಕಳೆಯುವ ಅದ್ಭುತ ಅವಕಾಶ ಒದಗಿಸುವ ಈ ಕೆರೆ ಸುಮಾರು 3000 ಎಕರೆಗಳಷ್ಟು ಪ್ರದೇಶದಲ್ಲಿ ವಿಶಾಲವಾಗಿ ವ್ಯಾಪಿಸಿದೆ. ಇದೊಂದು ಅತಿ ಜನಪ್ರೀಯ ಪಿಕ್ನಿಕ್ ಸ್ಥಳವೂ ಆಗಿದೆ. ಸಾಕಷ್ಟು ಜಲಕ್ರೀಡೆಗಳು ಇಲ್ಲಿ ಲಭ್ಯವಿದೆ.

ಭಾರತದ 5 ಸುಂದರ ಹಾಗೂ ದೊಡ್ಡ ಕೆರೆಗಳು

ದಂದಮಾ ಕೆರೆ, ಚಿತ್ರಕೃಪೆ: Ekabhishek

ದಾಲ್ ಕೆರೆ : ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿರುವ ದಾಲ್ ಸರೋವರ ದೇಶದಲ್ಲೆ ಪ್ರವಾಸಿ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದ ಹಾಗೂ ಅಷ್ಟೆ ನಯಮನೋಹರವಾದ ಸರೋವರವಾಗಿದೆ. ಜುಳು ಜುಳು ಎನ್ನುವ ಮಿಂಚಿನ ಅಲೆಗಳು, ಅಬ್ಬರ -ಏರಿಳಿತವಿಲ್ಲದ ಹರಿವು, ಶಾಂತ ಪರಿಸರ, ಸುತ್ತಲೂ ಅದ್ಭುತವಾದ ಹಿಮಚ್ಛಾದಿತ ಗಿರಿ ಪರ್ವತಗಳು, ಅಲ್ಲಲ್ಲಿ ಕಂಡುಬರುವ ಹಸಿರಿನ ವರ್ಣ ಸಂಪತ್ತು, ಸುಂದರವಾದ ದೋಣಿ ಇವು ದಾಲ್ ಸರೋವರದ ವಿಶೇಷತೆಗಳು.

ಭಾರತದ 5 ಸುಂದರ ಹಾಗೂ ದೊಡ್ಡ ಕೆರೆಗಳು

ದಾಲ್ ಕೆರೆ, ಚಿತ್ರಕೃಪೆ: draskd

ಲೋಕ್ತಕ್ ಕೆರೆ : ಇದೊಂದು ರೀತಿಯಲ್ಲಿ "ತೇಲುವ ಕೆರೆ" ಎಂಬ ಬಿರುದನ್ನು ಪಡೆದಿದೆ. ಈ ರೀತಿಯ ಕೆರೆಯ ವಿಧದಲ್ಲಿ ಇದು ಜಗತ್ತಿನಲ್ಲೆ ಏಕೈಕ ಕೆರೆಯಾಗಿದ್ದು, ಅದರಲ್ಲೂ ಭಾರತದಲ್ಲಿರುವುದು ಹೆಮ್ಮೆಯ ವಿಚಾರ. ಮೂಲವಾಗಿ ಇದಿರುವುದು ಈಶಾನ್ಯ ಭಾರತ ರಾಜ್ಯವಾದ ಮಣಿಪುರದ ಬಿಷ್ಣುಪುರ(ವಿಷ್ಣುಪುರ) ಜಿಲ್ಲೆಯಲ್ಲಿರುವ ಮೋಯಿರಾಂಗ್ ಎಂಬ ಪಟ್ಟಣದಲ್ಲಿ.

ಭಾರತದ 5 ಸುಂದರ ಹಾಗೂ ದೊಡ್ಡ ಕೆರೆಗಳು

ಲೋಕ್ತಕ್ ಕೆರೆ, ಚಿತ್ರಕೃಪೆ: Sharada Prasad CS

ಈ ಪಟ್ಟಣದಲ್ಲಿರುವ ಲೋಕ್ತಕ್ ಕೆರೆಯು ಈಶಾನ್ಯ ಭಾರತದ ಅತಿ ದೊಡ್ಡ ಸಿಹಿ ನೀರಿನ ಕೆರೆಯಾಗಿದ್ದು ತೇಲುವ ಚಿಕ್ಕ ಚಿಕ್ಕ ಗುಡ್ಡೆಗಳನ್ನು ಒಳಗೊಂಡಿದೆ. ಈ ಗುಡ್ಡೆಗಳು ವಿಘಟಿಸುತ್ತಿರುವ ಸಸ್ಯದ್ರವ್ಯ, ಮಣ್ಣು ಹಾಗೂ ಇತರೆ ಜೈವಿಕ ಉತ್ಪನ್ನಗಳಿಂದ ಉತ್ಪತಿಯಾಗಿವೆ. ಈ ಒಂದು ಕಾರಣದಿಂದಲೆ ಈ ಕೆರೆಯನ್ನು ತೇಲುವ ಕೆರೆ ಎಂದು ಕರೆಯಲಾಗಿದೆ. ಈ ಕೆರೆಯು ಲೋಕ ನೋಡಿದಷ್ಟೂ (ಕಣ್ಣು ಹಾಯಿಸಿದಷ್ಟು) ವಿಶಾಲವಾಗಿರುವುದರಿಂದ ಲೋಕ್ತಕ್ ಎಂಬ ಹೆಸರು ಪಡೆದುಕೊಂಡಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more