» »ಭಾರತದ ಭ್ಯವವಾದ 10 ಗುಹೆಗಳು

ಭಾರತದ ಭ್ಯವವಾದ 10 ಗುಹೆಗಳು

Written By: Sowmyabhai

ಗುಹೆಗಳೆಂದರೆ ಏನು ಒಂದು ಬಗೆಯ ಕುತೂಹಲ, ಅಪರೂಪದ ದೃಶ್ಯವಿದ್ದಂತೆ. ಭಾರತದಲ್ಲಿ ಹಲವಾರು ಗುಹೆಗಳಿವೆ ಒಂದೊಂದು ಗುಹೆಯು ತನ್ನದೇ ಆದ ಮಹತ್ವವನ್ನು ಪಡೆದಿದೆ. ಕೆಲವು ಗುಹೆಗಳು ಬೌದ್ದ ಧರ್ಮದ ಗುಹೆಗಳಾಗಿದ್ದರೆ ಇನ್ನು ಕೆಲವು ದೇವರಿಗೆ ಮುಡಿಪಾದ ಗುಹಾ ದೇವಾಲಯಗಳು ಹಾಗೂ ಗುಪ್ತವಾದ ಸ್ಥಳಕ್ಕಾಗಿ ರಾಜರು ಗುಹೆಗಳನ್ನು ನಿರ್ಮಿಸುತ್ತಿದ್ದರು. ಈ ಗುಹೆಗಳು ಅತ್ಯಂತ ರಮಣೀಯವಾದ ಕಣ್ಮನ ಸೆಳೆಯುವ ವಾಸ್ತು ಶಿಲ್ಪಗಳನ್ನು ಹೊಂದಿವೆ. ನೋಡುಗರನ್ನು ನಿಬ್ಬೆರುಗು ಮಾಡುವಂತ ಚಿತ್ತಾರ್ಕಷಕ ಸೌಂದರ್ಯವನ್ನು ಹೊಂದಿದೆ. ಗುಹೆಗಳಿಗೆ ದೇಶ ವಿದೇಶಗಳಿಂದ ಹಲವಾರು ಪ್ರವಾಸಿಗರು ಭೇಟಿ ನೀಡಿ ಅಪರೂಪದ ಕಲಾತ್ಮಕತೆಯಿಂದ ಕೂಡಿದ ದೃಶ್ಯವನ್ನು ಕಣ್ಣು ತುಂಬಿಕೊಳ್ಳುತ್ತಾರೆ. ಇಂತಹ ಭವ್ಯವಾದ ಗುಹೆಗಳ ಬಗ್ಗೆ ಪ್ರಸುತ್ತ ಲೇಖನದಲ್ಲಿ ಭಾರತದ ಪ್ರಸಿದ್ದವಾದ 10 ಗುಹೆಗಳನ್ನು ನಾವು ತಿಳಿಯೋಣ.

ಅಜಂತಾ ಮತ್ತು ಎಲ್ಲೋರ ಗುಹೆಗಳು

ಅಜಂತಾ ಮತ್ತು ಎಲ್ಲೋರ ಗುಹೆಗಳು

ಮಹಾರಾಷ್ಟ್ರದಲ್ಲಿರುವ ಅಜಂತಾ ಹಾಗೂ ಎಲ್ಲೋರ ಗುಹೆಗಳು ಭಾರತದ ಅತ್ಯಂತ ಹೆಸರುವಾಸಿ ಗುಹೆಗಳು. ಈ ಗುಹೆಯನ್ನು ಬಂಡೆಯಿಂದ ಶಿಲ್ಪಗಳನ್ನು ಕೆತ್ತಲಾಗಿದೆ. ಈ ಗುಹೆಯು ಅತ್ಯಂತ ಸುಂದರವಾದ ವಾಸ್ತುಶಿಲ್ಪ ಹೊಂದಿದೆ. ಎಲ್ಲೋರಾದಲ್ಲಿ ಸುಮಾರು 34 ವಿಶಿಷ್ಟವಾದ ಗುಹೆಗಳಿವೆ. ಈ ಗುಹೆಗಳು 6 ರಿಂದ 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗೇಯೆ ಅಜಂತಾದಲ್ಲಿಯೂ ಕೂಡ ಸುಮಾರು 29 ಗುಹೆಗಳಿವೆ. ಅಜಂತಾ ಗುಹೆಗಳೆಲ್ಲಾ ಬೌದ್ದ ಧರ್ಮದ ಶಿಲ್ಪಗಳಾಗಿದ್ದರೆ, ಎಲ್ಲೋರದಲ್ಲಿ ಬೌದ್ದ, ಹಿಂದೂ ಹಾಗೂ ಜೈನ ಧರ್ಮದ ಶಿಲ್ಪಗಳನ್ನು ಹೊಂದಿರುವ ಗುಹೆಗಳಾಗಿವೆ.
PC:Yashasvi nagda

ಎಲಿಫಾಂಟ ದ್ವೀಪದ ಗುಹೆ

ಎಲಿಫಾಂಟ ದ್ವೀಪದ ಗುಹೆ

ಎಲಿಫಾಂಟ ಗುಹೆಯು ಮಹಾರಾಷ್ಟ್ರದಲ್ಲಿದ್ದು, ಹಲವಾರು ಪ್ರವಾಸಿಗರನ್ನು ದಿನನಿತ್ಯ ಬರ ಮಾಡಿಕೊಳ್ಳುತ್ತದೆ. ಈ ಗುಹೆಯು ಮಹಾರಾಷ್ಟ್ರದ ಮಹಾನಗರಿ ಮುಂಬೈನ ಕರಾವಳಿ ಬಳಿ ಇದೆ. ಈ ಗುಹೆಯು ಅತ್ಯಂತ ಪ್ರಾಚೀನವಾದ 7 ಗುಹೆಗಳನ್ನು ಹೊಂದಿದೆ. ಒಟ್ಟು 7 ಗುಹೆಗಳಲ್ಲಿ ಒಂದು ಗುಹೆಯು ಅತ್ಯಂತ ದೊಡ್ಡದಾದ ಹಾಗೂ ಹೆಸರುವಾಸಿಯಾದ ಗುಹೆ ಎಂದರೆ ಅದು ಶಿವನ ದೇವಾಲಯದ ಗುಹೆ.
PC:Sahil Ahuja

ಬಾದಾಮಿ

ಬಾದಾಮಿ

ಗುಹೆಗಳಲ್ಲಿ ನಮ್ಮ ಕರ್ನಾಟಕದಲ್ಲಿರುವ ಬಾದಾಮಿ ಗುಹೆಯನ್ನು ಮರೆಯುವಂತಿಲ್ಲ. ಬಾದಾಮಿ ಗುಹೆಯು ಭಾರತದ ಅತಿ ಪ್ರಖ್ಯಾತ ಗುಹೆಗಳಲ್ಲಿ ಒಂದಾಗಿದೆ. ಬಾದಾಮಿಯಲ್ಲಿ ಹಲವಾರು ಸುಂದರ ದೇವಾಲಯಗಳಿವೆ. ಇಲ್ಲಿನ 4 ದೇವಾಲಯಗಳು ಸದಾ ಪ್ರವಾಸಿಗರಿಗಾಗಿ ತೆರೆದಿರಲಾಗುತ್ತದೆ. ಇಲ್ಲಿನ 4 ಗುಹೆಗಳಲ್ಲಿ ಶಿವ, ವಿಷ್ಣು, ಮತ್ತು ಜೈನನ ಮೂರ್ತಿಗಳಿರುವ ಗುಹಾ ದೇವಾಲಯಗಳಿವೆ.
PC:Ramnath Bhat

ಉದಯಗಿರಿ ಮತ್ತು ಖಂದಗಿರಿ ಗುಹೆಗಳು.

ಉದಯಗಿರಿ ಮತ್ತು ಖಂದಗಿರಿ ಗುಹೆಗಳು.

ಉದಯಗಿರಿ ಮತ್ತು ಖಂದಗಿರಿ ಗುಹೆಗಳು ಭವ್ಯವಾದ ಸೊಬಗನ್ನು ಹೊಂದಿರುವ ಗುಹೆಗಳು. ಈ ಗುಹೆಗಳು ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿದೆ. ಇಲ್ಲಿ ಹಲವಾರು ಪ್ರಾಚೀನವಾದ ಗುಹೆಗಳನ್ನು ಕಾಣಬಹುದಾಗಿದೆ. ಉದಯಗಿರಿಯನ್ನು ಸೂರ್ಯೋದಯದ ಬೆಟ್ಟ ಎಂದು ಸಹಾ ಕರೆಯುತ್ತಾರೆ. ಈ ಗುಹೆಗಳಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದಂತೆ ಹಲವಾರು ಶಿಲ್ಪ ಹಾಗು ಜೈನ ಧರ್ಮದಲ್ಲಿನ ವಾಸ್ತುಶಿಲ್ಪದಂತೆ ಡೊಂಕಾಗಿರುವ ಗುಹೆಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ರಹಸ್ಯವಾದ ಸಿಂಹದ ಗುಹೆ ಇದ್ದು, ಗುಹೆಯ ಪ್ರವೇಶ ದ್ವಾರವು ಸಿಂಹದ ಬಾಯಿಯ ಮೂಲಕ ಒಳಗೆ ಸಾಗಬೇಕಾಗುತ್ತದೆ. ಹಾಗೇಯೆ ರಾಣಿಯ ಅರಮನೆಯ ಗುಹೆಯು ಕೂಡ ಇದೆ.
PC:G41rn8

ಟಬೂ

ಟಬೂ

ಆಧ್ಯಾತ್ಮಿಕವಾದ ಗುಹೆ ಎಂದರೆ ಅದು ಟಬೂ ಗುಹೆಯಾಗಿದೆ. ಈ ಗುಹೆಯ ಒಳಗೆ ಧ್ಯಾನ ಮಾಡಲು ಅತ್ಯಂತ ಪ್ರಶ್ಯಸ್ತವಾಗಿರುವ ಪ್ರವಾಸಿ ತಾಣವಾಗಿದೆ. ಟಬೂ ಗುಹೆಯು ಹಿಮಾಚಲ ಪ್ರದೇಶದಲ್ಲಿದೆ. ಟಬೂ ಪ್ರದೇಶದಲ್ಲಿ ಹಲವಾರು ಬೌದ್ದರಿಗೆ ನಿರ್ಮಲವಾಗಿ ಧ್ಯಾನ ಮಾಡಲು ಸೂಕ್ತವಾದ ಸ್ಥಳ ಇದಾಗಿತ್ತು. ಇಲ್ಲಿ ಹಲವಾರು ದೊಡ್ಡ ಹಾಗೂ ಚಿಕ್ಕದಾದ ಗುಹೆಗಳಿದ್ದು ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
PC:Michael Scalet

ಮೇಘಾಲಯದ ಗುಹೆಗಳು

ಮೇಘಾಲಯದ ಗುಹೆಗಳು

ಮೇಘಾಲಯದಲ್ಲಿ ಮೊಟ್ಟ ಮೊದಲು ಗುಹೆಗಳ ಅನ್ವೇಷಣೆ ನಡೆಯಿತು. ಮೇಘಾಲಯ ರಾಜ್ಯದಲ್ಲಿ ಹಲವಾರು ಗುಹೆಗಳಿವೆ. ಇಲ್ಲಿರುವ ಗುಹೆಗಳೆಲ್ಲವು ನೋಡುಗರನ್ನು ಬೆರಗು ಮೂಡಿಸುತ್ತದೆ. ಸೂರ್ಯೋದಯದ ಸಮಯ ಹಾಗೂ ಸೂರ್ಯಸ್ತದ ಸಮಯ ಇಲ್ಲಿನ ಗುಹೆಗಳನ್ನು ನೋಡುವುದೇ ಒಂದು ಅದ್ಭುತ ವೀಕ್ಷಣೆಯಾಗಿದೆ. ಗುಹೆಗಳ ತವರೂರು ಈ ಮೇಘಾಲಯ. ಒಮ್ಮೆ ಭೇಟಿ ನೀಡಲೇ ಬೇಕಾದ ಪ್ರವಾಸಿತಾಣವಾಗಿದೆ.
PC:Biospeleologist

ಜಮ್ಮು ಮತ್ತು ಕಾಶ್ಮೀರದ ಗುಹೆಗಳು

ಜಮ್ಮು ಮತ್ತು ಕಾಶ್ಮೀರದ ಗುಹೆಗಳು

ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಪ್ರಸಿದ್ದವಾದ ಗುಹೆಗಳನ್ನು ಕಾಣಬಹುದಾಗಿದೆ. ನಿರ್ದಿಷ್ಟವಾಗಿ ಶಿವನಿಗೆ ಸಂಬಂಧಿಸಿದಂತೆ 2 ಮುಖ್ಯ ಗುಹೆಗಳಿವೆ. ಈ ಗುಹಾ ದೇವಾಲಯವು ಭಾರತದಲ್ಲಿ ಅತ್ಯಂತ ಪ್ರಖ್ಯಾತವಾದ ತೀರ್ಥಕ್ಷೇತ್ರ. ಈ ಶಿವನ ಗುಹಾ ದೇವಾಲಯಕ್ಕೆ ದೇಶ ವಿದೇಶಗಳಿಂದ ಭೇಟಿ ನೀಡುತ್ತಾರೆ. ರಣಾಸು ಎಂಬಲ್ಲಿ ಸ್ವಾಲಿಕ್ ಬೆಟ್ಟದ ಮೇಲೆ ಶಿವನು ನೈಸರ್ಗಿಕವಾಗಿ ಗವಿಗಂಬದಂತೆ ನೆಲೆಸಿದ್ದಾನೆ. ಇಲ್ಲಿ ಅಮರನಾಥ್ ಗುಹೆಯು ಕೂಡ ಇದೆ.
PC:Nitin Badhwar

ಉಂದವಳ್ಳಿ ಮತ್ತು ಮೊಗಲರಾಜಪುರಂ ಗುಹೆಗಳು

ಉಂದವಳ್ಳಿ ಮತ್ತು ಮೊಗಲರಾಜಪುರಂ ಗುಹೆಗಳು

ಆಂಧ್ರ ಪ್ರದೇಶದ ಪ್ರಸಿದ್ದ ನಗರವಾದ ವಿಜಯವಾಡದಲ್ಲಿ 7 ನೇ ಶತಮಾನದ ಉಂದವಳ್ಳಿ ಗುಹಾ ದೇವಾಲಯವಿದೆ. ಈ ಗುಹೆಯಲ್ಲಿ ಹಿಂದೂ ದೈವವಾದ ಶಿವ, ವಿಷ್ಣು ಮತ್ತು ಬ್ರಹ್ಮನ ದೇವಾಲಯವಿದೆ. ಹಾಗೇಯೆ ಮೊಗಲರಾಜಪುರಂನ ಗುಹೆಯಲ್ಲಿ ಅತ್ಯಂತ ಸುಂದರವಾದ ವಾಸ್ತುಶಿಲ್ಪವಿರುವುದರಿಂದ ಈ ಗುಹೆಗೆ ಹಲವಾರು ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಿರುತ್ತಾರೆ.
PC:Aleksandar Cocek

ಟ್ರಿಚಿ ಕಲ್ಲುಕೋಟೆಯ ದೇವಾಲಯ ಮತ್ತು ಪಲ್ಲವರ ಗುಹೆ

ಟ್ರಿಚಿ ಕಲ್ಲುಕೋಟೆಯ ದೇವಾಲಯ ಮತ್ತು ಪಲ್ಲವರ ಗುಹೆ

ಈ ಟ್ರಿಚಿಯಲ್ಲಿ ಕಲ್ಲು ಕೋಟೆಯ ದೇವಾಲಯವು ಮುಖ್ಯ ಆಕರ್ಷಕ. ಈ ಕೋಟೆಯನ್ನು ಮಧುರೈನ ನಾಯಕರು ಸ್ಥಾಪಿಸಿದರು. ನಗರ ಮಟ್ಟದಿಂದ ಈ ದೇವಾಲಯವನ್ನು ಸುಮಾರು 237 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಈ ಕೋಟೆಯಿಂದ ನಗರವನ್ನು ವಿಕ್ಷೀಸಲು ಅತ್ಯಂತ ಆನಂದದಾಯಕವಾಗಿರುತ್ತದೆ. ಇಲ್ಲಿರುವ ಗುಹೆಯಲ್ಲಿ ಚಿತ್ತಾಕರ್ಷಕವಾದ ವಾಸ್ತು ಶಿಲ್ಪಗಳನ್ನು ಕಾಣಬಹುದಾಗಿದೆ.
PC:Alex Alishevskikh

ದುಂಗೇಶ್ವರಿ ಗುಹಾ ದೇವಾಲಯ

ದುಂಗೇಶ್ವರಿ ಗುಹಾ ದೇವಾಲಯ

ಈ ದುಂಗೇಶ್ವರಿ ಗುಹಾ ದೇವಾಲಯವು ಬಿಹಾರದಲ್ಲಿದೆ. ಈ ದೇವಾಲಯವು ಬುದ್ದರ ದೇವಾಲಯವಾಗಿ ಸುಂದರವಾದ ವಾಸ್ತು ಶಿಲ್ಪವನ್ನು ಹೊಂದಿ ಪ್ರಸಿದ್ದಿಪಡೆದಿದೆ. ದುಂಗೇಶ್ವರಿ ಗುಹಾ ದೇವಾಲಯವನ್ನು ಮಹಾಕಾಳ ಗುಹೆ ಎಂದು ಕರೆಯಲಾಗುತ್ತದೆ. ಬುದ್ದನು ಬುದ್ದಗಯಕ್ಕೆ ಹೋಗುವ ಮುಂಚೆ ಹಲವಾರು ವರ್ಷಗಳು ಈ ಗುಹೆಯಲ್ಲಿ ಧ್ಯಾನ ಮಾಡುತ್ತಿದ್ದ ಎಂಬ ಪ್ರತೀತಿ ಇದೆ. ಹಾಗೇಯೆ ಬುದ್ದನ ಸಹಚರರು ಈ ಗುಹೆಯೊಳಗೆ ಧ್ಯಾನವನ್ನು ಮಾಡುತ್ತಿದ್ದರು ಎನ್ನಲಾಗಿದೆ.
PC:Paul Arps

Please Wait while comments are loading...