• Follow NativePlanet
Share
» »ಬಾಲಿವುಡ್ ಫಿಲ್ಮ್ ಸ್ಟಾರ್ಸ್ ಜೊತೆ ಸೆಲ್ಫಿ ಬೇಕಾದರೆ ಇಲ್ಲಿಗೆ ಹೋಗಿ

ಬಾಲಿವುಡ್ ಫಿಲ್ಮ್ ಸ್ಟಾರ್ಸ್ ಜೊತೆ ಸೆಲ್ಫಿ ಬೇಕಾದರೆ ಇಲ್ಲಿಗೆ ಹೋಗಿ

Written By: Rajatha

ಮಾಯಾನಗರಿ ಎಂದೇ ಕರೆಯಲ್ಪಡುವ ಮುಂಬೈನ ಅನೇಕ ಬೃಹತ್ ಸಿಟಿಗಳಲ್ಲಿ ಬಾಂದ್ರಾ ಕೂಡಾ ಒಂದು. ಉಪನಗರವಾಗಿರುವ ಬಾಂದ್ರಾದಲ್ಲಿ ಪ್ರೇಕ್ಷಕರಿಗೆ ನೋಡುವಂತಹ ಹಲವಾರು ಸ್ಥಳಗಳಿವೆ. ಮುಂಬೈನ್ನು ಕನಸಿನ ನಗರ ಎಂದು ಕರೆದರೆ ಬಾಂದ್ರಾ ಅನೇಕ ತಾರೆಯರ ಮನೆಯಾಗಿದೆ. ನೀವು ಮುಂಬೈಗೆ ತಿರುಗಾಡಲು ಹೋಗುತ್ತಿದ್ದೀರೆಂದಾರೆ ಬಾಂದ್ರಾದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಮರೆಯದಿರಿ.

ಬಾಂದ್ರಾ ವರ್ಲಿ ಲಿಂಕ್

ಬಾಂದ್ರಾ ವರ್ಲಿ ಲಿಂಕ್

Pc: flicker
ಬಾಂದ್ರಾದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವನ್ನು ನೀವು ಸಾಕಷ್ಟು ಸಿನಿಮಾಗಳಲ್ಲಿ ನೋಡಿರಬಹುದು. ಈ ಬ್ರಿಡ್ಜ್ ಬಾಂದ್ರಾವನ್ನು ವರ್ಲಿವರೆಗೆ ಕನೆಕ್ಟ್ ಮಾಡುತ್ತದೆ. ಇಲ್ಲಿಂದ ಅರಬ್ ಸಾಗರದ ಅದ್ಭುತ ದೃಶ್ಯ ಕಾಣಸಿಗುತ್ತದೆ.

ಬಾಂದ್ರಾ ಕೋಟೆ

ಬಾಂದ್ರಾ ಕೋಟೆ

Pc:Asheshshah
ಮುಂಬೈನಲ್ಲಿರುವ ಹಳೆಯ ಶಾಸನಗಳ ಅವಶೇಷಗಳಲ್ಲಿ ಇದೂ ಒಂದು. ಇದು ಮಹಾರಾಷ್ಟ್ರದ ಸಮುದ್ರ ಕೋಟೆಗಳಲ್ಲಿ ಒಂದು. ಮುಂಬೈನ ಬಂದರ್ ಒಳಗೆ ಪ್ರವೇಶಿಸಲು ಚೆಕ್ ಪಾಯಿಂಟ್ ರೂಪದಲ್ಲಿ ಇದನ್ನು ಬಳಸಲಾಗುತ್ತಿತ್ತು. ಇಂದು ಈ ಬಾಂದ್ರಾ ಕೋಟೆ ಪಿಕ್ನಿಕ್ ಸ್ಪಾಟ್ ಆಗಿದ್ದು, ಫಿಲ್ಮ್ ಶೂಟಿಂಗ್‌ಗಾಗಿ ಬಳಸಲಾಗುತ್ತಿದೆ.

ವಾಕ್ ಆಫ್ ದಿ ಸ್ಟಾರ್ಸ್

ವಾಕ್ ಆಫ್ ದಿ ಸ್ಟಾರ್ಸ್

Pc:Bollywood Dreamz
ಇದು ಬಾಲಿವುಡ್ ನಟ,ನಟಿಯರಿಗೆ ಸಮರ್ಪಿತವಾಗಿರುವುದು. ಇಲ್ಲಿ ನೀವು ಬಾಲಿವುಡ್ ತಾರೆಯರ ಮೂರ್ತಿಗಳು, ಫೋಟೋಗಳು, ಹಸ್ತಾಕ್ಷರವನ್ನು ಕಾಣಬಹುದು. ಇದು ಹಾಲಿವುಡ್‌ನ ವಾಕ್ ಆಫ್ ದಿ ಫೇಮ್ ನಿಂದ ಪ್ರೇರಿತವಾಗಿದೆ.

 ಕಾರ್ಟರ್ ರೋಡ್ ಪ್ರೊಮೆನೆ

ಕಾರ್ಟರ್ ರೋಡ್ ಪ್ರೊಮೆನೆ

Pc: flicker
ಇದು ಬಾಂದ್ರಾದ ಸುಂದರವಾದ ಸಮುದ್ರಕಿನಾರೆಯ ಹ್ಯಾಂಗ್‌ಔಟ್ ಪಾಯಿಂಟ್ ಆಗಿದೆ. ಇದು ಜೋಕ್ ಬ್ಯಾಂಡ್‌ಸ್ಟ್ಯಾಂಡ್‌ನ ಪಕ್ಕದಲ್ಲಿದೆ. ಇದರಲ್ಲಿ ಪಬ್, ಸ್ಟೋರ್ ಹಾಗೂ ರೆಸ್ಟೋರೆಂಟ್ ಇದೆ

ಮೌಂಟ್ ಮೇರಿ ಚರ್ಚ್

ಮೌಂಟ್ ಮೇರಿ ಚರ್ಚ್

Pc: Marshmir
ಮುಂಬೈನಲ್ಲಿರುವ ಪ್ರತಿಷ್ಠಿತ ಚರ್ಚ್ ಇದಾಗಿದೆ. "ಬಾಸಿಲಿಕಾ ಆಫ್ ಅವರ್ ಲೇಡಿ ಆಫ್ ದಿ ಮೌಂಟ್" ಇದನ್ನು ಮೌಂಟ್ ಮೇರಿ ಚರ್ಚ್ ಎಂದೂ ಕರೆಯುತ್ತಾರೆ. ಸಮುದ್ರ ಮಟ್ಟದಿಂದ 80 ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ನೀವು ಅರಬ್ ಸಾಗರದ ದೃಶ್ಯವನ್ನು ನೋಡಬಹುದು.

ತಾರೆಯರನ್ನು ನೋಡಿ

ತಾರೆಯರನ್ನು ನೋಡಿ

Pc:Mayur.thakare
ಇಲ್ಲಿ ಬಾಲಿವುಡ್‌ನ ತಾರೆಯರನ್ನು ಕಾಣಬಹುದು. ಬಾಂದ್ರಾದಲ್ಲಿ ಬಹುತೇಕ ತಾರೆಯರ ಮನೆ ಇದೆ. ಅಭಿಮಾನಿಗಳೂ ತಮಗಿಷ್ಟವಾದ ತಾರೆಯರನ್ನು ಕಾಣಲು ಅವರ ಮನೆಯ ಮುಂದೆ ನೆರೆದಿರುತ್ತಾರೆ. ಸ್ಟಾರ್‌ಗಳೂ ಕೂಡಾ ತಮ್ಮ ಮನೆಯಿಂದ ಹೊರಗೆ ಬಂದು ತಮ್ಮ ಫ್ಯಾನ್ಸ್‌ಗಳಿಗೆ ಧನ್ಯವಾದ ತಿಳಿಸುತ್ತಾರೆ. ಕೆಲವೊಮ್ಮೆ ಇವರ ಜೊತೆ ಸೆಲ್ಫಿ ಕೂಡಾ ತೆಗೆಯುತ್ತಾರೆ. ಶಾರೂಖ್ ಖಾನ್, ಅಮಿರ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಹಾಗೂ ಇನ್ನಿತರ ಬಾಲಿವುಡ್ ನಟ, ನಟಿಯರು ಬಾಂದ್ರಾದಲ್ಲೇ ನೆಲೆಸಿದ್ದಾರೆ.

Read more about: bollywood mumbai

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ