Search
  • Follow NativePlanet
Share
» »ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ವೆಂಕಟೇಶ್ವರ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ವೆಂಕಟೇಶ್ವರ ಸ್ವಾಮಿ..

ಪ್ರಮುಖ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ದೇಶ-ವಿದೇಶದಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿಯೇ ಯಾವಾಗ ನೋಡಿದರು ಕೂಡ ಶೇಷಾಚಲ ಬೆಟ್ಟದ ಮೇಲೆ ತಿರುನಾಮಸ್ಮರಣದಲ್ಲಿ ಲೀನರಾಗಿರುತ್ತಾರೆ. ಬ್ರಹ್ಮೋತ್ಸವ

ಪ್ರಮುಖ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ದೇಶ-ವಿದೇಶದಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿಯೇ ಯಾವಾಗ ನೋಡಿದರು ಕೂಡ ಶೇಷಾಚಲ ಬೆಟ್ಟದ ಮೇಲೆ ತಿರುನಾಮಸ್ಮರಣದಲ್ಲಿ ಲೀನರಾಗಿರುತ್ತಾರೆ. ಬ್ರಹ್ಮೋತ್ಸವದ ಸಮುದಲ್ಲಿ ಹೆಚ್ಚು ಭಕ್ತರು ಭಾಗವಹಿಸುತ್ತಾರೆ. ಭಕ್ತರು ಹಾಕುವ ಕಾಣಿಕೆಯ ರೂಪದಲ್ಲಿ ಪ್ರತಿದಿನ ವೆಂಕಟೇಶ್ವರಸ್ವಾಮಿಗೆ ಆದಾಯವು ಕೋಟಿಗಟ್ಟಲೇ ಇರುತ್ತದೆ.

ಆಂಧ್ರ ಪ್ರದೇಶದಲ್ಲಿನ ಚಿತ್ತೂರು ಜಿಲ್ಲೆಯಲ್ಲಿನ ಪೂರ್ವ ದಿಕ್ಕಿಗೆ ಇರುವ ತಿರುಪತಿಯು ಭಾರತ ದೇಶದಲ್ಲಿಯೇ ಸಾಂಸ್ಕøತಿಕವಾಗಿ ಅತ್ಯಂತ ವೈಭವವಾಗಿರುವ ನಗರದಲ್ಲಿ ಇದು ಕೂಡ ಒಂದು. ಸುಪ್ರಸಿದ್ಧ ತಿರುಪತಿ ದೇವಾಲಯ ಬೆಂಗಳೂರಿನಿಂದ ಸಮೀಪದಲ್ಲಿಯೇ ಇರುವುದರಿಂದ ಇದು ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಇಷ್ಟವಾದ ನಗರವೇ ಆಗಿದೆ. ತಿರುಪತಿ ಎಂಬ ಪದಕ್ಕೆ ಮೂಲ ಅರ್ಥ ಏನು ಎಂದು ಖಚಿತವಾಗಿ ಇಲ್ಲದೇ ಇದ್ದರು ಕೂಡ. "ತಿರು", "ಪತಿ" ಎಂಬ 2 ಪದಗಳ ಮೂಲಕ ಉತ್ಪತ್ತಿಯಾಗಿದೆ. ತಿರು ಎಂದರೆ ಗೌರವ ಪ್ರಧಾನವಾದುದು ಎಂದೂ, ಪತಿ ಎಂದರೆ ಗಂಡ ಎಂಬ ಅರ್ಥವೂ ಬರುತ್ತದೆ. ಹೀಗಾಗಿ "ಗೌರವ ಪ್ರಧಾನವಾದ ಪತಿ" ಎಂಬ ಅರ್ಥವೇ ಆಗಿದೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ನಗರಕ್ಕೆ ಅತ್ಯಂತ ಸಮೀಪದಲ್ಲಿರುವ ತಿರುಮಲ ಬೆಟ್ಟವು ಪ್ರಪಂಚದಲ್ಲಿಯೇ 2 ನೇ ಅತ್ಯಂತ ಪ್ರಾಚೀನವಾದ ಬೆಟ್ಟ ಎಂದು ಗುರುತಿಸಿಕೊಂಡಿದೆ. ತಿರುಪತಿ ದೇವಾಲಯವನ್ನು ಯಾರು? ಯಾವಾಗ? ನಿರ್ಮಾಣ ಮಾಡಿದರು ಎಂಬುದಕ್ಕೆ ಖಚಿತವಾದ ಸಾಕ್ಷ್ಯಿಗಳು ಇಲ್ಲ. ಕ್ರಿ.ಶ 4 ನೇ ಶತಮಾನದಿಂದ ವಿವಿಧ ರಾಜವಂಶಿಕರು ದೇವಾಲಯವನ್ನು ನಿರ್ವಹಿಸಿ, ಪುನರ್ ನಿರ್ಮಾಣ ಮಾಡಿದ್ದಾರೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

1933 ರಲ್ಲಿ ಮದ್ರಾಸ್ ಸರ್ಕಾರ ನೇಮಿಸಿದ ಕಮಿಷನರ್ ಅಧೀನದಲ್ಲಿ ತಿರುಮಲ ತಿರುಪತಿ ದೇವಾಲಯದ ಕಮಿಟಿ ಏರ್ಪಟ್ಟು ಪಾರಿಪಾಲನೆಯ ವ್ಯವಹಾರಗಳನ್ನು ನೋಡಿಕೊಳ್ಳುವ ಸಲುವಾಗಿ ಮದ್ರಾಸ್ ಶಾಸನಸಭೆಯು ಒಂದು ಕಾನೂನನ್ನು ಜಾರಿಗೊಳಿಸಿತು. ಇದರಿಂದಾಗಿ ತಿರುಮಲ ತಿರುಪತಿ ದೇವಾಲಯದ ವ್ಯವಹಾರಗಳು ನಿರ್ವಹಣೆಗಾಗಿ ತಿರುಮಲ ತಿರುಪತಿ ದೇವಾಲಯವು ಏರ್ಪಾಟಾಯಿತು.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬಗ್ಗೆ ಎಷ್ಟೇ ಹೇಳಿದರು ಇನ್ನು ಅನೇಕ ರಹಸ್ಯಗಳನ್ನು ಆ ಸ್ವಾಮಿಯು ತನ್ನಲ್ಲಿ ಅಡಗಿಸಿಕೊಂಡಿದ್ದಾನೆ. ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಪ್ರತಿದಿನ 1 ಲಕ್ಷದಿಂದ 2 ಲಕ್ಷದವರೆವಿಗೂ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಪ್ರತ್ಯೇಕವಾದ ದಿನಗಳಲ್ಲಿ ಸುಮಾರು 5 ಲಕ್ಷಮಂದಿ ಭಕ್ತರು ಸ್ವಾಮಿಯ ದರ್ಶನ ಕೋರಿ ಭೇಟಿ ನೀಡಲು ತಿರುಮಲ ತಿರುಪತಿಗೆ ಭೇಟಿ ನೀಡುತ್ತಾರೆ. ಆ 7 ಬೆಟ್ಟಗಳ ಒಡೆಯನ ಹೆಸರು ಕಿವಿಗೆ ಬಿದ್ದರೆ ಸಾಕು ಭಕ್ತರಿಗೆ ಭಕ್ತಿ-ಭಾವವು ಹೆಚ್ಚಾಗದೇ ಇರದು.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ವೆಂಕಟೇಶ್ವರ ಸ್ವಾಮಿಯ ಮೂಲ ವಿಗ್ರಹವು ಸಾಧರಣಾವಾಗಿ ನೋಡಿದರೆ ಗರ್ಭಗುಡಿ ಮಧ್ಯೆದಲ್ಲಿ ಇದೆ ಎಂದು ಭಾಸವಾಗುತ್ತದೆ. ಆದರೆ ಗರ್ಭಗುಡಿಯ ಬಲಭಾಗದಲ್ಲಿ ಸ್ವಾಮಿ ಇರುತ್ತಾರಂತೆ. ಈ ವಿಷಯವು ಹೊರಗಡೆಯಿಂದ ತೀಷ್ಣವಾಗಿ ನೋಡಿದರೆ ತಿಳಿಯುತ್ತದೆಯಂತೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ವೆಂಕಟರಮಣನ ದರ್ಶನವನ್ನು ಮೊದಲ ಬಾರಿಗೆ ದರ್ಶನ ಮಾಡಿಕೊಳ್ಳುವುದು ಒಬ್ಬ ಸನ್ನಿಧಿಗೊಲ್ಲ. ಇವರು ಯಾದವ ವಂಶಕ್ಕೆ ಸೇರಿದವರಾಗಿದ್ದು, ಸ್ವಾಮಿಯ ದೇವಾಲಯವನ್ನು ಪ್ರತಿ ದಿನ ಮುಂಜಾನೆಯೇ ತೆರೆದು ದೀಪವನ್ನು ಬೆಳೆಗಿಸುತ್ತಾರಂತೆ. ಇವರನ್ನು ಸನ್ನಿಧಿ ಗೊಲ್ಲ ಎಂದು ಕರೆಯುತ್ತಾರೆ. ಈ ಸಂಪ್ರದಾಯವು ಎಷ್ಟೋ ಸಾವಿರ ವರ್ಷಗಳ ಹಿಂದಿನಿಂದಲೂ ಕೂಡ ಅನುಸರಿಸಿಕೊಂಡು ಬರುತ್ತಿದೆಯಂತೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ಕಲಿಯುಗ ಪ್ರತ್ಯಕ್ಷದೈವವಾಗಿ ಹೆಸರುವಾಸಿಯಾಗಿರುವ ಆ ಶ್ರೀನಿವಾಸ ಅದ್ಭುತಗಳಿಗೆ ಸಾಕ್ಷಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರವೇ. ತಿರುಮಲನ ಮೂಲ ವಿಗ್ರಹವನ್ನು ಶ್ರೀ ಮಹಾವಿಷ್ಣುವಿನ ಪ್ರತಿರೂಪವಾಗಿ ಭಾವಿಸುತ್ತಾರೆ. ಸಾಮಾನ್ಯವಾಗಿ ಸ್ವಾಮಿಯ ಮೂಲ ವಿರಾಟನನ್ನು ಪರಿಶೀಲನೆ ಮಾಡಿದರೆ ಸ್ವಾಮಿಯ ಕಣ್ಣುಗಳನ್ನು ಮೂರುನಾಮಗಳು ಸಂಪೂರ್ಣವಾಗಿ ಮುಚ್ಚಿ ಹಾಕಿರುತ್ತದೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ಹಾಗಾಗಿಯೇ ಸ್ವಾಮಿ ಯಾವಾಗಲೂ ಕಣ್ಣು ಮುಚ್ಚಿಕೊಂಡೇ ಇರುವ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ. ಆದರೆ ಕೆಲವು ದಿನಗಳ ಹಿಂದೆ ತಿರುಮಲ ದಿವ್ಯಕ್ಷೇತ್ರದಲ್ಲಿ ಅದ್ಭುತ ನಡೆಯಿತಂತೆ. ಎಂದಿನಂತೆ ಭಕ್ತರು ಕ್ಯೂನಲ್ಲಿಯೇ ಸ್ವಾಮಿಯನ್ನು ದರ್ಶನಕ್ಕಾಗಿ ತೆರಳುತ್ತಿದ್ದರು. ಇದ್ದಕ್ಕಿದ್ದ ಹಾಗೆ ಆಕಾಶದಿಂದ ಮಳೆಯು ಪ್ರಾರಂಭವಾಯಿತಂತೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ಎಷ್ಟು ಮಳೆ ಸುರಿಯಿತು ಎಂದರೆ ಅಧಿಕಾರಿಗಳು ಕೂಡ ಲೆಕ್ಕಹಾಕಲಾಗದಷ್ಟು ಮಳೆ ಸುರಿಯಿತಂತೆ. ಕೆಲವು ವರ್ಷಗಳಿಂದ ತಿರುಮಲ ಬೆಟ್ಟದಲ್ಲಿ ನೀರಿನ ಅಭಾವ ಉಂಟಾಗಿತ್ತಂತೆ. ಭಕ್ತರು ಕೂಡ ತೀವ್ರವಾಗಿ ಕಷ್ಟವನ್ನು ಅನುಭಸುತ್ತಿದರಂತೆ. ಆ ನೀರಿನ ಕಷ್ಟ ನಿವಾರಣೆಯಾಗುವ ಹಾಗೆ ಮಳೆ ಸುರಿದ್ದಿದ್ದರಿಂದ ತಿರುಮಲದ ಸುತ್ತ-ಮುತ್ತ ಡ್ಯಾಂಗಳೆಲ್ಲಾ ತುಂಬಿ ಹೋಯಿತಂತೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ಇನ್ನು ಕೆಲವು ಸಮಯ ಮಳೆ ಹಾಗೆ ಬಿದ್ದಿದ್ದರೆ ಆ ಡ್ಯಾಂ ತುಂಬಿ ತುಳುಕುವಷ್ಟು ಮಳೆಯಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಆ ಡ್ಯಾಂ ತುಂಬುವಷ್ಟೇ ಖಚಿತವಾಗಿ ಅಷ್ಟೇ ಮಳೆ ಬಿದ್ದಿರುವುದು ಆಶ್ಚರ್ಯವೇ ಸರಿ ಎಂದು ಬೆಟ್ಟದ ಮೇಲೆ ನೆಲೆಸಿರುವ ವ್ಯಕ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ಅದಕ್ಕಿಂತ ಆಶ್ಚರ್ಯಕರವಾದ ವಿಷಯವೆನೆಂದರೆ ತಿರುಮಲಬೆಟ್ಟದ ಮೇಲೆ ಮಳೆ ಸುರಿಯುತ್ತಿರುವ ಸಮಯದಲ್ಲಿ ಗರ್ಭಗುಡಿಯಲ್ಲಿರುವ ಭಕ್ತರು ತಮ್ಮ ಕಣ್ಣುಗಳಿಂದ ತಾವೇ ನಂಬಲಾಗದೇ ಹೋದರಂತೆ. ಯಾವಾಗಲೂ ಕಣ್ಣು ಮುಚ್ಚಿಕೊಂಡೇ ಇರುವ ಸ್ವಾಮಿಯ ಕಣ್ಣು ಒಂದೇ ಬಾರಿಗೆ ತೆರೆದಿದ್ದು ಎಲ್ಲಾ ಭಕ್ತರಿಗೆ ಆಶ್ಚರ್ಯಕ್ಕೆ ಗುರಿಯಾಯಿತಂತೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ನಿಧಾನವಾಗಿ ತೆರೆದುಕೊಂಡ ಕಣ್ಣು ಭಗವಂತನ ಲೀಲೆಯೇ ಎಂದು ತಿಳಿದುಕೊಂಡ ಭಕ್ತರು ಗೋವಿಂದನಾಮ ಸ್ಮರಣೆಯಿಂದ ಶ್ರೀವೆಂಕಟೇಶ್ವರನನ್ನು ಆರಾಧಿಸುತ್ತಿದ್ದಾರಂತೆ. ಕೆಲವು ಸಮಯಗಳ ಬಳಿಕ ಶ್ರೀ ವೆಂಕಟೇಶ್ವರ ಸ್ವಾಮಿಯ ಕಣ್ಣು ಮುಚ್ಚಿಕೊಂಡನಂತೆ. ಅದೇ ಸಮಯದಲ್ಲಿ ಹೊರಗೆ ಮಳೆ ಕೂಡ ನಿಂತುಹೋಯಿತಂತೆ. ದೇವರ ಮಹಿಮೆಗೆ ಇದಕ್ಕಿಂತ ನಿದರ್ಶನ ಬೇಕಾ ಎಂದು ಭಕ್ತರು ಹೇಳುತ್ತಿರುವುದು ಮತ್ತೊಂದು ವಿಶೇಷವೇ ಆಗಿದೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ಆಕರ್ಷಣೆಗಳು
ತಿರುಪತಿ, ವರಹಾಸ್ವಾಮಿ, ವೆಂಕಟೇಶ್ವರ ಸ್ವಾಮಿ, ಪದ್ಮಾವತಿ ದೇವಿ ದೇವಾಲಯ, ಗೋವಿಂದರಾಜ ಸ್ವಾಮಿ ದೇವಾಲಯ, ಶ್ರೀನಿವಾಸ ಮಂಗಾಪುರದಂತಹ ಪ್ರಸಿದ್ಧವಾದ ದೇವಾಲಯಗಳ ಜೊತೆ ಜೊತೆಗೆ ವಿವಿಧ ಪಶು, ವೃಕ್ಷಗಳಿಗೆ ಅವಾಸ ಸ್ಥಾನವಾದ ಶ್ರೀ ವೆಂಕಟೇಶ್ವರ ಪಾರ್ಕ್ ಕೂಡ ಇಲ್ಲಿ ಕಾಣಬಹುದು. ಶಿಲಾತೋರಣ ಎನ್ನುವ ಇಲ್ಲಿನ ಕಲ್ಲಿನ ಉದ್ಯಾನವನ ವನ್ನು ಕೂಡ ನೋಡಬಹುದು.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ಕಾಂಚಿಪುರಂ
ಕಾಂಚಿಪುರಂ ರೇಷ್ಮೇ ಸೀರೆಗಳು ಪ್ರಪಂಚ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಆಧುನಿಕ ಕಾಲದಲ್ಲಿ ಮಹಿಳೆಯರಿಗೆ ಇಷ್ಟವಾಗುವ ಬಂಗಾರದ ಜರಿ, ರೇಷ್ಮೇ ಜರಿಯಿಂದ ಗತ ವೈಭವವನ್ನು ಪ್ರದರ್ಶಿಸುತ್ತದೆ. ಇದು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಗುರುತಿಸಲಾದ ವಸ್ತ್ರಗಳು. ಇದು ತಮಿಳರಿಗೆ ಒಂದು ಸಂಪ್ರದಾಯ ಮತ್ತು ಸಾಂಸ್ಕøತಿಕ ಉಡುಪು ಆಗಿದೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ಈ ಪವಿತ್ರವಾದ ನಗರದಲ್ಲಿ ಕಾಮಾಕ್ಷಿ ದೇವಿಯ ದೇವಾಲಯ, ಏಕಂಬರೇಶ್ವರ ದೇವಾಲಯ, ದೇವರಾಜಸ್ವಾಮಿ ದೇವಾಲಯ ಮತ್ತು ಕೈಲಾಸನಾಥರ್ ದೇವಾಲಯದಂತಹ ಸುಪ್ರಸಿದ್ಧವಾಗಿದೆ. ಈ ಎಲ್ಲಾ ದೇವಾಲಯಕ್ಕೆ ವರ್ಷಾದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ವೆಲ್ಲೂರು
ಗೋಲ್ಡ್‍ನ್ ಟೆಂಪಲ್ ಎಂದೇ ಖ್ಯಾತಿಯಾಗಿರುವ ಮಹಾಲಕ್ಷ್ಮೀ ದೇವಾಲಯ ಅತ್ಯಂತ ಪ್ರಸಿದ್ಧವಾದುದು. ಇಲ್ಲಿನ ತಾಯಿಯನ್ನು ಕಣ್ಣಾರೆ ಕಂಡೇ ಆನಂದಿಸಬೇಕು. ವೆಲ್ಲೂರಿಗೆ ಭೇಟಿ ನೀಡಿದರೆ ತಪ್ಪದೇ ಈ ದೇವಾಲಯಕ್ಕೆ ಭೇಟಿ ನೀಡಲೇಬೇಕು. ಇಲ್ಲಿನ ಮತ್ತಷ್ಟು ಆಕರ್ಷಣೆಗಳೆಂದರೆ ಬಾಲಮತಿ, ವಿರಿಚಿಪುರಂ, ಮೆಟ್ಟುಕುಲಂ ಇನ್ನು ಹಲವಾರು. ಈ ಪ್ರದೇಶಗಳು ನಿಮಗೆ ಚಿರಸ್ಮರಣಿಯವಾಗಿ ಉಳಿದ ಬಿಡುವಂತೆ ಮಾಡುತ್ತದೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ಉತ್ತಮ ಸಮಯ
ತಿರುಪತಿಗೆ ತೆರಳಲು ಅತ್ಯಂತ ಉತ್ತಮವಾದ ಸಮಯವೆಂದರೆ ಅದು ಚಳಿಗಾಲದಲ್ಲಿ ತಿರುಪತಿಗೆ ಭೇಟಿ ನೀಡುವುದು ಅತ್ಯುತ್ತಮವಾದ ಸಮಯವಾಗಿದೆ. ನವೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೆ ಉತ್ತಮ. ಆದರೆ ಜೂನ್‍ನಿಂದ ಸೆಪ್ಟೆಂಬರ್ ತಿಂಗಳ ಮಧ್ಯೆಯಲ್ಲಿ ನಡೆಯುವ ಪ್ರಧಾನವಾದ ಹಬ್ಬ ಬ್ರಹ್ಮೋತ್ಸವ ಸಮಯದಲ್ಲಿ ಅನೇಕ ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ಸ್ವಾಮಿ..

ರೈಲು ಮಾರ್ಗದ ಮೂಲಕ

ತಿರುಪತಿ ಎಕ್ಸ್‍ಪ್ರೆಸ್ ನೇರವಾದ ಸಂಪರ್ಕ ವ್ಯವಸ್ಥೆ ಇದ್ದು, ಸುಮಾರು 250 ಕಿ,ಮೀ ದೂರ ಪ್ರಯಾಣಿಸಬೇಕಾಗುತ್ತದೆ.

ತಿರುಪತಿಯ ತಿರುಮಲ ವೆಂಕಟೇಶ್ವರನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳುತಿರುಪತಿಯ ತಿರುಮಲ ವೆಂಕಟೇಶ್ವರನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು

ತಿರುಮಲದಲ್ಲಿದೆ ಬಂಗಾರದ ಬಾವಿ !ತಿರುಮಲದಲ್ಲಿದೆ ಬಂಗಾರದ ಬಾವಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X