Search
  • Follow NativePlanet
Share
» »ದೂರದ ಸ್ಥಳಗಳಿಗೆ ಪ್ರಯಾಣ ಮಾಡುವುದಕ್ಕೆ ಉಪಯೋಗವಾಗುವ ಸಲಹೆಗಳು

ದೂರದ ಸ್ಥಳಗಳಿಗೆ ಪ್ರಯಾಣ ಮಾಡುವುದಕ್ಕೆ ಉಪಯೋಗವಾಗುವ ಸಲಹೆಗಳು

By Manjula Balaraj Tantry

ಪ್ರಯಾಣವೆಂದರೆ ಒಂದು ಅನುಭವಗಳನ್ನು ಒಟ್ಟುಗೂಡಿಸುವ ಮತ್ತು ಅವುಗಳಿಂದ ಕಲಿಯುವ ಒಂದು ಪ್ರಕ್ರಿಯೆ ಆಗಿದೆ. ನಮ್ಮ ಮನಸ್ಸಿನ ಸಂತೋಷಕ್ಕಾಗಿ ಮತ್ತು ಯಾವುದನ್ನಾದರೂ ಅನ್ವೇಷಿಸುವುದಕ್ಕಾಗಿ ಮನಸ್ಸನ್ನು ಶಾಂತ ಪಡಿಸುವುದಕ್ಕಾಗಿ ಅಥವಾ ನಮ್ಮೊಳಗಿನ ಶೂನ್ಯ ಸ್ಥಳಗಳನ್ನು ತುಂಬಿಸುವುಕ್ಕಾಗಿ ನಾವೆಲ್ಲರೂ ಪ್ರಯಾಣ ಮಾಡುತ್ತೇವೆ.

ಮತ್ತು ಎಲ್ಲಾ ಸಮಯದಲ್ಲೂ ಕೆಲವು ಅಂಶಗಳಿಂದ ಮತ್ತು ಕೆಲವು ಅನುಭವಗಳಿಂದ ನಾವು ಸಾಕಷ್ಟು ಕಲಿತಿರುವೆವು ಕೂಡ. ತಮ್ಮ ಮಿತಿಗಳನ್ನು ಮತ್ತು ಬಂಧನಗಳನ್ನು ಮೀರಿ ಪ್ರಯಾಣಿಸುವ ಹಲವು ಜನರಿದ್ದಾರೆ ಇಂತಹ ಜನರು ಸಾಕಷ್ಟು ಅನುಭವಗಳನ್ನು ಹೊಂದಿರುವವರಾಗಿರುತ್ತಾರೆ.

ನೀವೂ ಕೂಡ ಅಂತಹವರಲ್ಲೊಬ್ಬರಾಗಿದ್ದು ನಿಮ್ಮ ದಾರಿ ಗಡಿ ಮೀರಿದ್ದಾಗಿದ್ದಲ್ಲಿ,ನಂತರ ಪಟ್ಟಣದ ಹೊರಗೆ ಪ್ರಯಾಣ ಮಾಡುವಾಗ ಅಥವಾ ದೂರದ ಅಥವ ಕೆಲವು ಕಡಿಮೆ-ತಿಳಿದಿರುವ ಸ್ಥಳಗಳಿಗೆ ಪ್ರಯಾಣ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ.

ದೂರದ ಸ್ಥಳಗಳಿಗೆ ಪ್ರಯಾಣ ಮಾಡುವಾಗ ತಿಳಿದಿರಬೇಕಾದ ಕೆಲವು ವಿಷಯಗಳ ಬಗ್ಗೆ ಇಲ್ಲಿ ಕೆಲವು ಸಲಹೆಗಳಿವೆ ಓದಿ ತಿಳಿಯಿರಿ.

1) ಸ್ವ-ಮೌಲ್ಯಮಾಪನ

1) ಸ್ವ-ಮೌಲ್ಯಮಾಪನ

ನೀವು ಕೆಲವು ದೂರದ ಸ್ಥಳದಲ್ಲಿರುವುದರಿಂದ, ನಗರ ಅಥವಾ ಪಟ್ಟಣಕ್ಕೆ ಪ್ರಯಾಣಿಸುವಂತೆ ಸುಲಭವಲ್ಲದೆ ಇರಬಹುದು ಆದುದರಿಂದ ಪ್ರಯಾಣಕ್ಕೆ ಮೊದಲು ನಿಮ್ಮ ದೇಹ ಮತ್ತು ಮನಸ್ಸು ಒಂದಕ್ಕೊಂದು ಪರಸ್ಪರ ಸ್ಪಂದಿಸುತ್ತಿದೆಯೇ ಅಂದರೆ ಹೊರಡಲು ಅನುಮತಿ ನೀಡುವುದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರವಾಸಕ್ಕೆ ನಿಮ್ಮ ದೇಹ ಮತ್ತು ಮನಸ್ಸು ತಯಾರಾಗಿರಬೇಕು ಇದು ಬಹು ಮುಖ್ಯವಾದ ಅಂಶವಾಗಿದೆ.

ನೀವು ನಿಮ್ಮ ಸ್ಥಳದಿಂದ ಹೊರಡಲು ದೈಹಿಕವಾಗಿ ಅಸಮರ್ಥರೆನಿಸಿದಲ್ಲಿ ಖಂಡಿತವಾಗಿಯೂ ಹೊರಡಲು ಒಪ್ಪಿಕೊಳ್ಳಬೇಡಿ. ಆರೋಗ್ಯವು ಎಲ್ಲಕ್ಕಿಂತ ಮೊದಲ ಆದ್ಯತೆಯಾಗಿದ್ದು ಯಾವುದೇ ಅಪಾಯಗಳನ್ನು ಕೈಗೊಳ್ಳದಿರಿ ಅದರಲ್ಲೂ ವಿಶೇಷವಾಗಿ ನೀವು ಹೊಸಬರಾಗಿದ್ದಲ್ಲಿ ಪ್ರಯಾಣ ಕೈಗೊಳ್ಳ ಬೇಡಿ. ನಿಮ್ಮ ಪ್ರಯಾಣದ ಸಮಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬರುವುದರಿಂದ ದೈಹಿಕ ಅಸಮರ್ಥತೆ ನಿಮ್ಮ ಆತ್ಮಬಲವನ್ನು ಕುಗ್ಗಿಸಬಹುದು.

PC- Murray Foubister

2) ಸ್ಥಳಗಳ ಬಗ್ಗೆ ಸರಿಯಾದ ಸಂಶೋಧನೆ ಮಾಡಿಕೊಳ್ಳಬೇಕು

2) ಸ್ಥಳಗಳ ಬಗ್ಗೆ ಸರಿಯಾದ ಸಂಶೋಧನೆ ಮಾಡಿಕೊಳ್ಳಬೇಕು

ನೀವು ಹೋಗುವ ಸ್ಥಳಗಳ ಎಲ್ಲಾ ವಿಷಯಗಳ ಬಗ್ಗೆ ಅಂದರೆ ಸುತ್ತಮುತ್ತಲಿನ ಪ್ರದೇಶಗಳು ಅಲ್ಲಿಯ ಹವಾಮಾನ ಹಾಗೂ ಸ್ಥಳೀಯ ಸಂಪ್ರದಾಯ ಹಾಗೂ ಪದ್ದತಿಗಳವರೆಗೆ ತಿಳಿದುಕೊಳ್ಳಿ. ವಾಸ್ತವಿಕ ದೋಷಗಳ ಆಧಾರದ ಮೇಲೆ ವಿಷಯಗಳನ್ನು ಊಹನೆಗೆ ತೆಗೆದುಕೊಳ್ಳಬೇಡಿ.

ಸ್ಥಳದ ಬಗ್ಗೆ ಬರೆದ ವಿವಿಧ ಲೇಖನಗಳು ಮತ್ತು ಬ್ಲಾಗ್ ಗಳಲ್ಲಿ ಆ ಸ್ಥಳಗಳ ಬಗ್ಗೆ ಓದಿ ತಿಳಿದುಕೊಳ್ಳಿ ಮತ್ತು ನೀವು ಕೆಲವು ಏಕಾಂತ ಮತ್ತು ಕಡಿಮೆ ಪ್ರಸಿದ್ದಿಗೆ ಒಳಗಾದ ತಾಣಗಳನ್ನು ಭೇಟಿ ಮಾಡಲು ಯೋಜಿಸುತ್ತಿದ್ದರೆ, ನೀವು ಆ ತಾಣದ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದು ಪ್ರಯಾಣಕ್ಕೆ ತಯಾರಾಗಿದ್ದೀರಿ ಎಂದು ಮೊದಲು ಖಚಿತಪಡಿಸಿಕೊಳ್ಳಿ.

ನಾನಾ ಪ್ರದೇಶಗಳು ತಮ್ಮದೇ ಆದ ಕಾನೂನು ಮತ್ತು ಕಾಯ್ದೆಗಳನ್ನು ಒಳಗೊಂಡಿರುತ್ತದೆ. ನೀವು ಬುಡಕಟ್ಟು ಪ್ರದೇಶಗಳಿಗೆ ನಿಮ್ಮ ಪ್ರಯಾಣವನ್ನು ಆಯೋಜಿಸುತ್ತಿದ್ದರೆ ಅಲ್ಲಿಯ ಜನರ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಖಂಡಿತವಾಗಿಯೂ ಮೊದಲು ತಿಳಿದುಕೊಳ್ಳಿ. ಸಮಯದ ಅಭಾವವಿದ್ದಲ್ಲಿ ಪ್ರಯಾಣಕ್ಕೆ ಆಯೋಜಿಸುವುದನ್ನು ಆದಷ್ಟು ತಪ್ಪಿಸಿ.


PC- Hashim bajwa

3) ಸುರಕ್ಷತೆ ಕ್ರಮಗಳು

3) ಸುರಕ್ಷತೆ ಕ್ರಮಗಳು

ತಡೆಗಟ್ಟುವಿಕೆ ಖಾಯಿಲೆಗಿಂತ ಉತ್ತಮವಾಗಿರುತ್ತದೆ ಮತ್ತು ಚೆಲ್ಲಿದ ಹಾಲಿನ ಮೇಲೆ ಅದರ ಬಗ್ಗೆ ಯೋಚಿಸಿ ಫಲವಿಲ್ಲ ಎನ್ನುವ ಗಾದೆಯಿದೆ ಹಾಗೆಯೇ ನೀವು ನಿಮ್ಮ ತಾಣಕ್ಕೆ ತಲುಪುವ ಮೊದಲು ಸಾರಿಗೆಯಿಂದ ಹಿಡಿದು ವಸತಿ ಸೌಲಭ್ಯಗಳವರೆಗೆ ಎಲ್ಲವೂ ಮೊದಲೇ ನಿರ್ಧಾರವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ನೀವು ಹೋಗುವ ತಾಣಕ್ಕೆ ಹೋಗುವ ಮೊದಲು ಸಾಧ್ಯವಾದಲ್ಲಿ ಸ್ಥಳೀಯರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಪಡಬಹುದು. ಇದರಿಂದ ನೀವು ಅವರ ಜೊತೆ ಬೆರೆಯುವಲ್ಲಿ ಸಹಾಯ ಮಾಡುತ್ತದೆ.ಅಲ್ಲದೆ ಇದರಿಂದ ಈ ಸ್ಥಳಗಳಲ್ಲಿ ಅನ್ವೇಷಣೆ ಮಾಡಲು ಸಹಕಾರಿಯಾಗುತ್ತದೆ.


PC- Alex Ang

4) ಪ್ಯಾಕ್ ಮಾಡಬೇಕಾದ ವಸ್ತುಗಳು

4) ಪ್ಯಾಕ್ ಮಾಡಬೇಕಾದ ವಸ್ತುಗಳು

ಇದು ಬಹು ಮುಖ್ಯವಾದ ಮತ್ತು ಖಂಡಿತವಾಗಿಯೂ ಮರೆಯದೇ ಇರುವಂತಹ ಸಲಹೆಯಾಗಿದೆ. ಯಾವುದೇ ಕಷ್ಟಕರ ಸ್ಥಳಕ್ಕೆ ಪ್ರಯಾಣಿಸುವಾಗ, ನಿಮ್ಮ ಲಗೇಜಿನ ಭಾರ ಕಡಿಮೆ ಮಾಡಿಕೊಳ್ಳಿ ಇದು ನಿಮ್ಮ ಪ್ರಯಾಣವನ್ನು ಹೆಚ್ಚು ಅನುಕೂಲಕರ ಮಾಡಲು ಮತ್ತು ದಣಿವನ್ನು ಮಾಡುವುದನ್ನು ಸಾಕಷ್ಟು ಕಡಿಮೆಮಾಡುತ್ತದೆ ಎಂಬುದನ್ನು ತಿಳಿಯಿರಿ.

ಪ್ಯಾಕ್ ಮಾಡಬೇಕಾದ ವಿಷಯಗಳಲ್ಲಿ ಟಾರ್ಚ್, ಬ್ಯಾಟರಿ, ಪ್ರಥಮ ಚಿಕಿತ್ಸಾ ಕಿಟ್, ಕ್ಯಾಮರಾ ಮತ್ತು ಕೆಲವು ವಸ್ತುಗಳು, ನೀರಿನ ಬಾಟಲಿಗಳು, ಪ್ಯಾಕೇಜ್ ಮಾಡಲಾದ ಆಹಾರ, ನಕ್ಷೆ ಮತ್ತು ಚರ್ಮದ ಕ್ರೀಮ್ ಗಳನ್ನು ಒಳಗೊಂಡಿರಬೇಕು

ನೀವು ಪ್ರಯಾಣಿಸುವ ಸ್ಥಳಕ್ಕೆ ಅನುಗುಣವಾಗಿ ಮತ್ತು ಅದಕ್ಕೆ ಅನುಕೂಲವಾಗುವಂತೆ ನಿಮ್ಮ ಬಟ್ಟೆ ಮತ್ತು ಇತರ ಬೇಕಾಗುವ ವಸ್ತುಗಳನ್ನು ಪ್ಯಾಕ್ ಮಾಡಿ ಮತ್ತು ಬೇಕಾಗುವ ವಸ್ತುಗಳು ಇವೆಯೇ ಎಂಬುದನ್ನು ಇನ್ನೊಮ್ಮೆ ಖಚಿತಪಡಿಸಿಕೊಳ್ಳಿ.


PC- Sonneifer

5) ಸ್ಥಳೀಯರೊಂದಿಗೆ ಬೆರೆಯಿರಿ

5) ಸ್ಥಳೀಯರೊಂದಿಗೆ ಬೆರೆಯಿರಿ

ಸಂವಹನ ಮತ್ತು ಕಲಿಕೆಯು ಪ್ರತಿ ಪ್ರವಾಸದ ಪ್ರಮುಖ ಭಾಗವಾಗಿದೆ. ನಾವೆಲ್ಲರೂ ಸೌಂದರ್ಯತೆಯನ್ನು ಅನ್ವೇಷಿಸಲು ಪ್ರಯಾಣ ಮಾಡುತ್ತೇವೆ ಅದೇವೇಳೆ ನಾವು ಪ್ರಯಾಣದ ಸಮಯದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಂಡಲ್ಲಿ ನಮಗೆ ನಾವು ಹೋಗುವ ಸ್ಥಳಗಳ ಬಗ್ಗೆ ತಿಳಿಯುವ ಹೊಸ ಬಾಗಿಲು ತೆರೆಯುತ್ತದೆ ಇದರಿಂದ ಹೊಸ ವಾತಾವರಣದಲ್ಲಿ ನಾವು ಆರಾಮದಾಯಕ ಅನುಭವವನ್ನು ಪಡೆಯುವಲ್ಲಿ ಸಹಾಯವಾಗುತ್ತದೆ.

ಸ್ಥಳೀಯರು ಈ ಸ್ಥಳಗಳ ಬಗ್ಗೆ ವಿವರಿಸುವ ಮತ್ತು ಜ್ಞಾನದ ಪ್ರಮುಖ ಮೂಲವಾಗಿರುತ್ತಾರೆ. ನೀವು ಅವರ ಜೊತೆ ನಡೆಯುವುದರಿಂದ ಅಂತಿಮವಾಗಿ ನಿಮಗೆ ನೀವು ಹೋಗುವ ಸ್ಥಳದ ಬಗ್ಗೆ ಅರ್ಥಮಾಡಿಕೊಳ್ಳಲು ಮತ್ತು ಪ್ರಸ್ತುತ ಆಗುಹೋಗುಗಳ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ. ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸುವುದರಿಂದ ಸ್ಥಳೀಯ ಸ್ವಭಾವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಸಾಧ್ಯವಾದರೆ ಅವುಗಳ ಬಗ್ಗೆ ಒಳಹೊಕ್ಕು ತಿಳಿಯಲು ಪ್ರಯತ್ನಿಸಿ.

ಈ ಕೆಲವು ಸಲಹೆಗಳು ನೀವು ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವಾಗ ನೆನಪಲ್ಲಿಟ್ಟುಕೊಳ್ಳಾಬೇಕಾದ ಕೆಲವು ವಿಷಯಗಳು. ಈ ಕೆಲವು ಮಾರ್ಗಗಳನ್ನು ಅನುಸರಿಸಿ ಮತ್ತು ನಿಮ್ಮ ಪ್ರಯಾಣವನ್ನು ಮತ್ತು ಇಲ್ಲಿಯ ಕತೆ ಮತ್ತು ದಂತ ಕಥೆಗಳನ್ನು ಸ್ಮರಣೆಯಲ್ಲಿಟ್ಟುಕೊಳ್ಳುವಂತೆ ಮಾಡಿಕೊಳ್ಳಿ. ಶುಭವಾಗಲಿ!

PC- Kumaresanpg

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more