Search
  • Follow NativePlanet
Share
» »ಪಿಕ್‌ನಿಕ್‌ ಹೋಗುವಾಗ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ ಮಾಡೋರಿಗೆ ಇಲ್ಲಿದೆ ಟಿಪ್ಸ್

ಪಿಕ್‌ನಿಕ್‌ ಹೋಗುವಾಗ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ ಮಾಡೋರಿಗೆ ಇಲ್ಲಿದೆ ಟಿಪ್ಸ್

ಎಲ್ಲಿಗಾದರೂ ಪ್ರಯಾಣ ಮಾಡುವಾಗ ಅಥವಾ ಪಿಕ್‌ನಿಕ್‌ಗೆ ಹೋಗುವಾಗ ಕ್ಯಾಮರಾವನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಬಹುತೇಕರಲ್ಲಿದೆ. ಅಲ್ಲಿನ ಸುಂದರ ತಾಣಗಳನ್ನು ಕ್ಯಾಮರಾ ಕಣ್ಣಿನ ಮೂಲಕ ಸೆರೆ ಹಿಡಿದು ತಮ್ಮ ನೆನಪಿನ ಅಂಗಳದಲ್ಲಿ ಶೇಖರಿಸಿಟ್ಟಿರುತ್ತಾರೆ. ಈಗಲಂತೂ ಡಿಜಿಟಲ್ ಯುಗವಾಗಿದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್‌ಗಳಿವೆ, ಕ್ಯಾಮಾರ ಮೊಬೈಲ್‌ಗಳಿವೆ. ಹೀಗಿರುವಾಗ ಕ್ಯಾಮರಾ ಯಾರಿಗೆ ಬೇಕು ಹೇಳಿ.

ಮೊಬೈಲ್ ಫೋಟೋಗ್ರಫಿ

ಮೊಬೈಲ್ ಫೋಟೋಗ್ರಫಿ

ಇತ್ತೀಚೆಗಂತೂ ಮೊಬೈಲ್‌ನಿಂದ ಫೋಟೋ ಕ್ಲಿಕ್ ಮಾಡುವ ಟ್ರೆಂಡ್ ಜಾಸ್ತಿಯಾಗಿದೆ. ಯಾರೇ ಆದರೂ ಹೊಸ ಪ್ರದೇಶಕ್ಕೆ ಹೋದಾಗ ತಮ್ಮ ಮೊಬೈಲ್ ಮೂಲಕ ಫೋಟೋ ಕ್ಲಿಕ್ ಮಾಡುತ್ತಾರೆ. ಹಾಗಾಗಿ ಇಲ್ಲಿ ನಾವು ನೀಡಿರುವ ಕೆಲವು ಟಿಪ್ಸ್‌ನ್ನು ಗಮನದಲ್ಲಿಟ್ಟುಕೊಂಡರೆ ನಿಮ್ಮ ಫೋಟೋಗ್ರಫಿ ಇನ್ನಷ್ಟು ಉತ್ತಮವಾಗಿ ಮೂಡಿ ಬರಬಹುದು.

ಹನುಮಾನ್ ಸಂಜೀವಿನಿ ಮೂಲಿಕೆ ತಂದಿದ್ದು ಇದೇ ಪರ್ವತದಿಂದಹನುಮಾನ್ ಸಂಜೀವಿನಿ ಮೂಲಿಕೆ ತಂದಿದ್ದು ಇದೇ ಪರ್ವತದಿಂದ

 ಬ್ಯಾಟರಿ, ಮೆಮೋರಿ ಪರೀಕ್ಷಿಸಿ

ಬ್ಯಾಟರಿ, ಮೆಮೋರಿ ಪರೀಕ್ಷಿಸಿ

ಪ್ರಯಾಣ ಬೆಳೆಸುವ ಮೊದಲು ನಿಮ್ಮ ಮೊಬೈಲ್‌ನ ಬ್ಯಾಟರಿ ಹಾಗೂ ಅದರ ಸ್ಟೋರೇಜ್‌ನ್ನು ಪರೀಕ್ಷಿಸಿ. ಈ ಬಗ್ಗೆ ಗಮನ ಕೊಟ್ಟಿಲ್ಲವೆಂದಾದಲ್ಲಿ ಸ್ವಲ್ಲ ಹೊತ್ತು ಫೋಟೋ ತೆಗೆದ ನಂತರ ಮೊಬೈಲ್ ಸ್ವಿಚ್‌ ಆಫ್ ಆಗಬಹುದು. ಅಥವಾ ಮೆಮೊರಿ ಫುಲ್ ಆಗಬಹುದು. ಹಾಗಾಗಿ ಈ ಬಗ್ಗೆ ಗಮನವಿಟ್ಟುಕೊಳ್ಳಬೇಕು.

ನಿಷೇಧಿತ ತಾಣಗಳಲ್ಲಿ ಫೋಟೋಗ್ರಫಿ

ನಿಷೇಧಿತ ತಾಣಗಳಲ್ಲಿ ಫೋಟೋಗ್ರಫಿ

ಬಹಳಷ್ಟು ತಾಣಗಳಲ್ಲಿ ಫೋಟೋ ತೆಗೆಯುವುದನ್ನು ನಿಷೇಧಿಸಿರುತ್ತಾರೆ. ಹಾಗಿರುವಾಗ ನೀವು ಗೊತ್ತಿಲ್ಲದೆ ಫೋಟೋ ಕ್ಲಿಕ್ ಮಾಡಿ ಸಂಕಷ್ಟಕ್ಕೆ ಸಿಲುಕುವುದಕ್ಕಿಂತ ಅಂತಹ ಸ್ಥಳದಲ್ಲಿ ಫೋಟೊ ತೆಗೆಯಲು ಮೊದಲೇ ಅನುಮತಿಯನ್ನು ಪಡೆಯಿರಿ.

ಕ್ಲಿಕ್ಕಿಸಲು ತಯಾರಾಗಿರಿ

ಕ್ಲಿಕ್ಕಿಸಲು ತಯಾರಾಗಿರಿ

ಇನ್ನು ಬಹಳಷ್ಟು ಜನರಿಗೆ ಫೋಟೋ ಹುಚ್ಚಿರುತ್ತದೆ. ಕಂಡಕಂಡಲ್ಲೆಲ್ಲಾ ಫೋಟೋ ತೆಗೆಯುತ್ತಿರುತ್ತಾರೆ. ಪ್ರಯಾಣದ ಸಂದರ್ಭ ಎಲ್ಲಿ ಯಾವ ಸುಂದರವಾದ ಸ್ಥಳ ಕಾಣಸಿಗುತ್ತದೆ ಎನ್ನಲಾಗುವುದಿಲ್ಲ. ಹೀಗಿರುವಾಗ ಯಾವುದೇ ಕ್ಷಣಕ್ಕೂ ತಯಾರಾಗಿರಬೇಕು. ನೀವು ತಯಾರಾಗಿಲ್ಲದಿದ್ದಲ್ಲಿ ಆ ಅದ್ಭುತ ತಾಣದ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗೋದಿಲ್ಲ.

ಮೊಬೈಲ್‌ನ ಕ್ಯಾಮರಾದ ಸಾಮಥ್ರ್ಯ ಅರಿಯಿರಿ

ಮೊಬೈಲ್‌ನ ಕ್ಯಾಮರಾದ ಸಾಮಥ್ರ್ಯ ಅರಿಯಿರಿ

ಫೋಟೋ ಕ್ವಾಲಿಟಿಯ ಮೇಲೆ ಪ್ರತಿಯೊಂದು ಮೊಬೈಲ್‌ನ ಕ್ಲಾರಿಟಿ ಬೇರೆ ಬೇರೆಯಾಗಿರುತ್ತದೆ. ಕೆಲವೊಂದು ಮೊಬೈಲ್‌ನ ಕ್ಯಾಮರಾ ಚೆನ್ನಾಗಿದ್ದರೆ ಕೆಲವೊಂದು ಚೆನ್ನಾಗಿರುವುದಿಲ್ಲ. ಹೀಗಿರುವಾಗ ಫೋಟೋ ಕ್ವಾಲಿಟಿ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮ ಮೊಬೈಲ್‌ನ ಕ್ಯಾಮರಾದ ಕ್ಷಮತೆಯನ್ನು ಅರಿತು ಅದಕ್ಕನುಗುಣವಾಗಿ ಫೋಟೋ ಕ್ಲಿಕ್ ಮಾಡಿದ್ರೆ ಫೋಟೋ ತುಂಬಾ ಚೆನ್ನಾಗಿ ಬರುತ್ತದೆ.

ಮಳೆಯಲೀ ಜೊತೆಯಲಿ ರೊಮ್ಯಾನ್ಸ್‌ ಮಾಡೋಕೆ ಬೆಸ್ಟ್ ತಾಣಗಳಿವುಮಳೆಯಲೀ ಜೊತೆಯಲಿ ರೊಮ್ಯಾನ್ಸ್‌ ಮಾಡೋಕೆ ಬೆಸ್ಟ್ ತಾಣಗಳಿವು

ವಾಲ್ಯುಂ ಬಟನ್ ಒತ್ತಿ ಕ್ಲಿಕ್ ಮಾಡಿ

ವಾಲ್ಯುಂ ಬಟನ್ ಒತ್ತಿ ಕ್ಲಿಕ್ ಮಾಡಿ

ಸಾಮಾನ್ಯವಾಗಿ ಬಹುತೇಕರು ಫೋಟೋ ಕ್ಲಿಕ್ ಮಾಡುವಾಗ ಮೊಬೈಲ್‌ ಸ್ಕ್ರೀನ್‌ ಮೇಲೆ ಕಾಣುವ ಬಟನ್‌ನ್ನು ಒತ್ತುತ್ತಾರೆ. ಆದರೆ ಮೊಬೈಲ್‌ನಲ್ಲಿ ಫೋಟೋ ತೆಗೆಯುವಾಗ ನೀವು ವಾಲ್ಯುಂ ಬಟನ್‌ನ್ನು ಒತ್ತಿ ಫೋಟೋ ಕ್ಲಿಕ್ ಮಾಡಬೇಕು . ಆಗ ಮಾತ್ರ ನೀವು ತೆಗೆಯುವ ಸೆಲ್ಫಿ ಕೂಡಾ ಚೆನ್ನಾಗಿ ಬರುತ್ತದೆ.

ಕಂಡದ್ದನ್ನೆಲ್ಲಾ ಕ್ಲಿಕ್ ಮಾಡಬೇಡಿ

ಕಂಡದ್ದನ್ನೆಲ್ಲಾ ಕ್ಲಿಕ್ ಮಾಡಬೇಡಿ

ಫೋಟೋ ತೆಗೆಯುವಾಗ ಸಿಕ್ಕಿದ್ದೆಲ್ಲವನ್ನೂ ಕ್ಲಿಕ್ ಮಾಡುತ್ತಾ ಮೊಬೈಲ್‌ನ ಮೆಮೊರಿ ಫುಲ್ ಮಾಡೋದಕ್ಕಿಂತ ಕೇವಲ ಮುಖ್ಯವಾದದ್ದನ್ನಷ್ಟೇ ಕ್ಲಿಕ್ ಮಾಡಿದರೆ ಒಳ್ಳೆಯದು. ನಿಮಗೆ ಬೇಕಾದವರ ಫೋಟೋ, ಪ್ರದೇಶ ಸೈನ್‌, ಬೋರ್ಡ್‌ನ ಫೋಟೋ, ಅಪರಿಚಿತರ ಫೋಟೋ, ಪಕ್ಷಿಗಳು, ಪ್ರಕೃತಿ ಸೌಂದರ್ಯ ಹೀಗೆ ನಿಮಗೆ ಬೇಕೆನಿಸಿದ ಫೋಟೋಗಳನ್ನು ಮಾತ್ರ ಕ್ಲಿಕ್ ಮಾಇಡ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X