Search
  • Follow NativePlanet
Share
» »ರಸ್ತೆಯ ಮೂಲಕ ಬೈಲಕುಪ್ಪೆಯಿಂದ ನಾಗರಹೊಳೆಗೆ ಮೂರುದಿನದ ಪ್ರವಾಸ

ರಸ್ತೆಯ ಮೂಲಕ ಬೈಲಕುಪ್ಪೆಯಿಂದ ನಾಗರಹೊಳೆಗೆ ಮೂರುದಿನದ ಪ್ರವಾಸ

ಕರ್ನಾಟಕದೊಳಗಿನ ಸಾಮಾನ್ಯವಾಗಿ ಕೆಲವು ರಸ್ತೆಗಳಲ್ಲಿ ಪ್ರವಾಸ ಮಾಡುವುದು ನಿಮ್ಮ ಜೀವಮಾನವಿಡೀ ಸುಂದರ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ ಇಂತಹ ನೆನಪುಗಳನ್ನು ನಿಮ್ಮಲ್ಲಿ ತುಂಬಿಕೊಳ್ಳಿ ಹಾಗೂ ಜೀವನದ ಪ್ರತೀ ಕ್ಷಣವನ್ನು ಆನಂದಿಸಿ ಮತ್ತು ಪ್ರಯಾಣದ ಉದ್ದಕ್ಕೂ ರಮಣೀಯ ಸೌಂದರ್ಯಗಳನ್ನು ಆನಂದಿಸಿ.

ಇಲ್ಲಿ ಮೂರು ದಿನಗಳಲ್ಲಿ ಬೈಲಕುಪ್ಪೆಯಿಂದ ನಾಗರಹೊಳೆಗೆ ಪ್ರವಾಸ ಮಾಡುವ ಸಲಹೆಗಳನ್ನು ಪಡೆಯಿರಿ.

ಬೈಲಕುಪ್ಪೆ

ಬೈಲಕುಪ್ಪೆ

ಬೈಲಕುಪ್ಪೆಯು ಮೈಸೂರು ನಗರದಿಂದ ಸರಿ ಸುಮಾರಾಗಿ 80 ಕಿ.ಮೀ ಅಂತರದಲ್ಲಿದೆ ಮತ್ತು ಬೆಂಗಳೂರಿನಿಂದ ಸುಮಾರು 230 ಕಿ.ಮೀ ಅಂತರದಲ್ಲಿದೆ. ಈ ಸ್ಥಳವು ಒಂದು ಗುಪ್ತರತ್ನವೆನಿಸಿದೆ. ಬೈಲಕುಪ್ಪೆಯಲ್ಲಿ ಸಮಯ ಕಳೆಯುವುದೆಂದರೆ ಸ್ವರ್ಗಕ್ಕಿಂತ ಮಿಗಿಲು ಎಂದರೆ ತಪ್ಪಾಗಲಾರದು. ಈ ಸ್ಥಳವು ಕರ್ನಾಟಕದ ಒಂದು ಮೂಲೆಯಲ್ಲಿದ್ದು ನಿಮ್ಮನ್ನು ನೀವು ಸಂತೋಷಪಡಿಸಿಕೊಳ್ಳಬೇಕೆಂದಾದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.

ಇಲ್ಲಿಯ ಸುಂದರ ಹಾಗೂ ಶಾಂತಿಯುತ ಪರಿಸರದ ಸೆಳೆತ ಮತ್ತು ತಾಪಮಾನವು ನಿಮ್ಮನ್ನು ಈ ಸ್ಥಳಕ್ಕೆ ಪದೇ ಪದೆ ಭೇಟಿ ಕೊಡುವಂತೆ ಮಾಡುತ್ತದೆ.

ಬೈಲಕುಪ್ಪೆಯಲ್ಲಿರುವ ಮಠವು ನಿಮ್ಮನ್ನು ಪರಿಪೂರ್ಣವಾಗಿ ಕಲೆ ಮತ್ತು ವಿನ್ಯಾಸದ ವಿಭಿನ್ನ ಜಗತ್ತಿಗೆ ಕರೆದೊಯ್ಯುತ್ತದೆ. ಇದು ಸಣ್ಣ ಸ್ಥಳವಾಗಿದ್ದರೂ ಸಹ ಇಲ್ಲಿ ಹೋಟೇಲುಗಳು, ಶಾಲೆಗಳು, ಅಭಿವೃದ್ದಿ ಹೊಂದುತ್ತಿರುವ ಮಾರುಕಟ್ಟೆಗಳು ಮತ್ತು ಟಿಬೇಟಿಯನ್ ನಾಗರೀಕತೆಯ ಹಲವಾರು ಗುರುತುಗಳನ್ನು ಹೊಂದಿದೆ.

ಇಲ್ಲಿಗೆ ಭೇಟಿ ನೀಡಿದ ಒಂದು ಕ್ಷಣ, ನೀವು ಟಿಬೆಟ್‌ಗೆ ಬಂದಿಳಿದಿದ್ದೀರಿ ಎಂದು ನೀವು ಭಾವಿಸುತ್ತೀರಿ. ಗೋಲ್ಡನ್ ಟೆಂಪಲ್ ಅಲ್ಲಿರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ದೇವಾಲಯದಲ್ಲಿ ಐದು ಸಾವಿರದಷ್ಟು ಸನ್ಯಾಸಿಗಳು ಇದ್ದಾರೆ. ದೇವಾಲಯದ ಒಳಗೆ ಬುದ್ಧ, ಪದ್ಮಸಂಭವ ಮತ್ತು ಅಮಿತಾಯಸ್ ಅವರ ಮೂರು ಚಿನ್ನದ ಪ್ರತಿಮೆಗಳು ಇವೆ, ಇದು ನಿಮ್ಮ ಮನಸ್ಸನ್ನು ಸೂರೆಗೊಳಿಸುತ್ತದೆ.

ನಿಸರ್ಗಧಾಮ ಮತ್ತು ದುಬಾರೆ ಎಲಿಫೆಂಟ್ ಕ್ಯಾಂಪ್ (ಆನೆ ಶಿಬಿರ)

ನಿಸರ್ಗಧಾಮ ಮತ್ತು ದುಬಾರೆ ಎಲಿಫೆಂಟ್ ಕ್ಯಾಂಪ್ (ಆನೆ ಶಿಬಿರ)

ಹತ್ತಿರದ ಒಂದು ದಿನದ ಪ್ರವಾಸದಲ್ಲಿ ಪಾಲ್ಗೊಳ್ಳಲು ಬಯಸುವವರಿಗೆ, ನಿಸರ್ಗಧಾಮ ಅರಣ್ಯವು ಅತ್ಯುತ್ತಮ ಆಯ್ಕೆಯಾಗಿದೆ. ಬೈಲಕುಪ್ಪೆಯಿಂದ 30 ನಿಮಿಷಗಳಲ್ಲಿ ನೀವು ಸ್ಥಳಕ್ಕೆ ತಲುಪಬಹುದು. ನಿಸರ್ಗಧಾಮ ಅತ್ಯಂತ ಆಕರ್ಷಕ ಪ್ರವೇಶವನ್ನು ಹೊಂದಿದೆ ಹಾಗೂ ಕಾವೇರಿ ನದಿಗೆ ಅಡ್ಡಲಾಗಿರುವ ತೂಗು ಸೇತುವೆಯನ್ನು ದಾಟುವುದು ಒಂದು ಆಕರ್ಷಕವಾದ ವಿಷಯವಾಗಿದೆ. ನದಿಯಲ್ಲಿ ಸಮಯ ಕಳೆಯುವುದು, ಉದ್ಯಾನವನಗಳಲ್ಲಿ ಪ್ರಾಣಿಗಳನ್ನು ವೀಕ್ಷಿಸುವುದು, ದೋಣಿ ವಿಹಾರ ಅಥವಾ ಸ್ಥಳವನ್ನು ಸುತ್ತುವರೆದಿರುವ ರಮಣೀಯ ಸೌಂದರ್ಯದಲ್ಲಿ ಪಾಲ್ಗೊಳ್ಳುವುದು ಇತ್ಯಾದಿ ಚಟುವಟಿಕೆಗಳನ್ನು ಇಲ್ಲಿಗೆ ಭೇಟಿ ಕೊಡುವ ಸಮಯದಲ್ಲಿ ಮಾಡಬಹುದಾಗಿದೆ.

ನೀವು ಇಲ್ಲಿಗೆ ತಲುಪಿದಲ್ಲಿ, ಇಲ್ಲಿಯ ದುಬಾರೆ ಆನೆಗಳ ಶಿಬಿರಕ್ಕೆ ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ. ಈ ಸ್ಥಳವು ನಿಸರ್ಗಧಾಮ ಕಾಡಿನಿಂದ 12ಕಿ.ಮೀ ದೂರದಲ್ಲಿದೆ (25 ನಿಮಿಷಗಳ ಪ್ರಯಾಣ). ಪ್ರವಾಸಿಗರು ಆನೆಗಳನ್ನು ಒಳಗೊಂಡ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಆನಂದಿಸುತ್ತಾರೆ. ಆದರೆ, ಆನೆ ವೀಕ್ಷಣೆಗಳ ಹೊರತಾಗಿಯೂ ಇಲ್ಲಿ ವೀಕ್ಷಿಸಬಹುದಾದ ಹಲವಾರು ಸ್ಥಳವಿದೆ. ಪ್ರವಾಸಿಗರು ಟ್ರೆಕ್ಕಿಂಗ್, ಮೀನುಗಾರಿಕೆ ಮತ್ತು ರಾಫ್ಟಿಂಗ್‌ನಲ್ಲಿ ಪಾಲ್ಗೊಳ್ಳಬಹುದು. ಶಿಬಿರಗಳು ಅನೇಕ ಕಾಟೇಜ್ ಗಳನ್ನು ಹೊಂದಿದ್ದು, ಪ್ರವಾಸಿಗರು ಆರಾಮದಾಯಕ ವಾಸ್ತವ್ಯವನ್ನು ಅನುಭವಿಸಬಹುದಾಗಿದೆ.

ಮಂಡಲ್ ಪಟ್ಟಿ

ಮಂಡಲ್ ಪಟ್ಟಿ

ಮಂಡಲ್ ಪಟ್ಟಿಯು ಸುಂದರವಾದ ಪ್ರಕೃತಿ ಸೌಂದರ್ಯ ಹಾಗೂ ಸೂರ್ಯೋದಯ ಮತ್ತು ಸೂರ್ಯಾಸ್ತದಲ್ಲಿ ಪಾಲ್ಗೊಳ್ಳಲು ಸೂಕ್ತವಾದ ಸಮಯವಾಗಿದೆ. ಇದು ಮಡಿಕೇರಿಯ ಎರಡನೇ ದೊಡ್ಡ ಶ್ರೇಣಿಯಾಗಿದೆ. ಸ್ಥಳಕ್ಕೆ ಹೋಗುವ ರಸ್ತೆಯನ್ನು ಜೀಪ್ ಅಥವಾ ಯೋಗ್ಯವಾದ ಎಸ್ ಯುವಿ ಮೂಲಕ ಉತ್ತಮವಾಗಿ ತಲುಪಬಹುದಾಗಿದೆ. ನೀವು ಸ್ವಂತ ವಾಹನದಲ್ಲಿ ಹೋಗಲು ಸಾಕಷ್ಟು ನುರಿತವರಾಗಿಲ್ಲದಿದ್ದಲ್ಲಿ, ಸ್ಥಳೀಯ ಜೀಪ್ ಅನ್ನು ಬಾಡಿಗೆಗೆ ಪಡೆಯುವುದು ಸೂಕ್ತವಾಗಿದೆ ಏಕೆಂದರೆ ಇದು ಮೇಲಕ್ಕೆ ಹತ್ತಲು ಸುಲಭವಾಗುವ ಸವಾರಿಯಾಗಿದೆ.

ಮಂಡಾಲಪಟ್ಟಿಯಲ್ಲಿ ಗರಿಷ್ಟವೆಂದರೆ 2 ರಿಂದ 3 ತಾಸುಗಳವರೆಗೆ ಆನಂದವಾಗಿ ಸಮಯಕಳೆಯಬಹುದು. ಈ ಸ್ಥಳವು ಏರು ತಗ್ಗುಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ವಯಸ್ಸಾದವರಿಗೆ ಇದು ಹೆಚ್ಚು ಸೂಕ್ತವಾದುದಲ್ಲ.

ಅಬ್ಬೆ ಜಲಪಾತಗಳು

ಅಬ್ಬೆ ಜಲಪಾತಗಳು

ದಟ್ಟವಾದ ಹಚ್ಚ ಹಸುರಿನ ಕಾಡುಗಳು ಮತ್ತು ಬಂಡೆಗಳ ಮಧ್ಯದಿಂದ ಧುಮುಕುವ ನೀರು ಇದು ಅಬ್ಬೆ ಜಲಪಾತಗಳ ಅದ್ಬುತ ದೃಶ್ಯವನ್ನು ನೀಡುತ್ತದೆ. ಈ ಸ್ಥಳವು ಅತ್ಯಂತ ಸುಂದರವಾಗಿದ್ದು ಇಲ್ಲಿಯ ಪ್ರಕೃತಿ ಸೌಂದರ್ಯದ ಛಾಯಾಗ್ರಹಣ ಮಾಡಬಹುದಾಗಿದೆ. ಮಂಡಾಲಪಟ್ಟಿ ಮತ್ತು ಅಬ್ಬೇ ಜಲಪಾತಗಳಿಗೆ ಸುಮಾರು 9 ಕಿ.ಮೀ ಗಳ ಅಂತರವಿದ್ದು ಇದನ್ನು 20 ನಿಮಿಷಗಳ ಪ್ರಯಾಣ ಮಾಡಿದಲ್ಲಿ ತಲುಪಬಹುದಾಗಿದೆ.

ಮಡಿಕೇರಿ

ಮಡಿಕೇರಿ

ಮಡಿಕೇರಿಯು ಪ್ರಸಿದ್ದ ಗಿರಿಧಾಮವಾಗಿದ್ದು ಇದು ಚಹಾ ಮತ್ತು ಕಾಫಿ ಎಸ್ಟೇಟ್ ಗಳ ಮಧ್ಯೆ ಇದೆ. ಇದು ಅಬ್ಬೆ ಜಲಪಾತಕ್ಕೆ ಕೇವಲ 6 ಕಿ.ಮೀ ದೂರದಲ್ಲಿದ್ದು, ಮಡಿಕೇರಿ ತಲುಪಲು 20 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸದಾ ಆಹ್ಲಾದಕರ ಹವಾಮಾನದ ಜೊತೆಗೆ ಎಕರೆಗಟ್ಟಲೆ ಹಸಿರು ಸಸ್ಯಗಳು ಮತ್ತು ಸುಂದರ ದೃಶ್ಯಗಳನ್ನೊಳಗೊಂಡ ಮಡಿಕೇರಿಯು ಭಾರತಾದ್ಯಂತದ ಪ್ರವಾಸಿಗರಿಗೆ ಒಂದು ಪಿಕ್ನಿಕ್ ತಾಣವೆನಿಸಿದೆ.


ಓಂಕಾರೇಶ್ವರ ದೇವಾಲಯ, ಟಾಟಾ ಟೀ ಎಸ್ಟೇಟ್, ಗದ್ದಿಗೆ ರಾಜಾ'ಸ್ ಟೋಂಬ್, ಮತ್ತು ರಾಜಾಸ್ ಸೀಟ್ ಮಡಿಕೇರಿಯ ಇನ್ನಿತರ ಆಕರ್ಷಣೆಗಳಾಗಿವೆ. ಹಲವಾರು ಯುದ್ದಗಳನ್ನು ನೋಡಿದ ಮಡಿಕೇರಿ ಕೋಟೆಯು ಭೇಟಿಗೆ ಯೋಗ್ಯವಾಗಿದೆ.

ತಲಕಾವೇರಿ

ತಲಕಾವೇರಿ

ತಲಕಾವೇರಿಯು ಒಂದು ಜನಪ್ರಿಯ ಯಾತ್ರಾ ಸ್ಥಳವಾಗಿದೆ ಮತ್ತು ಪವಿತ್ರ ಕಾವೇರಿ ನದಿಯ ಜನ್ಮಸ್ಥಳವಾಗಿದೆ. ಭಾಗಮಂಡಲ ದೇವಸ್ಥಾನದಿಂದ 8 ಕಿ.ಮೀ ದೂರದಲ್ಲಿದೆ, ಇದು ಸಮುದ್ರ ಮಟ್ಟದಿಂದ 1276 ಮೀಟರ್ ಎತ್ತರದಲ್ಲಿದೆ. ಭಾಗಮಂಡಲ ದೇವಸ್ಥಾನದಿಂದ ಸಾರ್ವಜನಿಕ ಸಾರಿಗೆಯ ಮೂಲಕ ಇಲ್ಲಿಗೆ ಹೋಗುವುದು ಸುಲಭ.

ಬ್ರಹ್ಮಗಿರಿ ಶಿಖರ ಮತ್ತು ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಗಳು ಇಲ್ಲಿಗೆ ಭೇಟಿ ನೀಡಿದಾಗ ಅನ್ವೇಷಿಸಬಹುದಾದ ಕೆಲವು ಹತ್ತಿರದ ಸ್ಥಳಗಳು. ತಲಕಾವೇರಿ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ತಿಂಗಳುಗಳು ಸೆಪ್ಟೆಂಬರ್ ಆರಂಭದಿಂದ ಮೇ ತಿಂಗಳುಗಳು.

ಇರಪ್ಪು ಜಲಪಾತ

ಇರಪ್ಪು ಜಲಪಾತ

ಇರುಪ್ಪು ಜಲಪಾತಗಳು ಮಡಿಕೇರಿಯ ಜಲಪಾತಗಳನ್ನು ಅನ್ವೇಷಿಸುವಾಗ ಇರುಪ್ಪು ಜಲಪಾತಕ್ಕೆ ಭೇಟಿ ನೀಡುವುದು ಒಬ್ಬರ ಪ್ರಯಾಣದ ಅತ್ಯುತ್ತಮ ಭಾಗವಾಗಿದೆ. ವಿಶ್ರಾಂತಿ ಪಡೆಯಲು, ಸ್ನಾನ ಮಾಡಲು, ಮೋಜು ಮಾಡಲು, ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ಕೆಲವು ಅದ್ಭುತ ವೀಕ್ಷಣೆಗಳನ್ನು ಆನಂದಿಸಲು ಇದು ಉತ್ತಮ ಸ್ಥಳವಾಗಿದೆ. ಪೂರ್ಣ ಹರಿವಿನೊಂದಿಗೆ ಈ ಜಲಪಾತವು ಮೇಲಿನಿಂದ ಭೋರ್ಗರೆಯುತ್ತಾ ಕೆಳಗೆ ಅತ್ಯಂತ ಶಕ್ತಿಯೊಂದಿಗೆ ಪರ್ವತದ ಕೆಳಗೆ ಗುಡುಗುತ್ತದೆ. ಆದರೆ, ಈ ಅಪರೂಪದ ಜಲಪಾತಕ್ಕೆ ಹೋಗಲು 120 ಮೆಟ್ಟಿಲುಗಳನ್ನು ಏರಲು ಸಿದ್ಧರಾಗಿರಿ.

ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲ. ನೀವು ಮಳೆಗಾಲದ ಮೊದಲು ಅಥವಾ ನಂತರ ಭೇಟಿ ನೀಡಿದರೂ ಸಹ ಆನಂದಿಸಲು ಸಾಕಷ್ಟು ನೀರು ಇರುತ್ತದೆ.

ಈ ಸ್ಥಳದಲ್ಲಿ ಹಲವಾರು ರೆಸಾರ್ಟ್ ಗಳು ಮತ್ತು ಹೋಮ್ ಸ್ಟೇಗಳು ಜಲಪಾತದ ಹತ್ತಿರದಲ್ಲಿದೆ. ಆದ್ದರಿಂದ ತಿನ್ನಲು ಅಥವಾ ಉಳಿಯಲು ಸ್ಥಳಗಳ ಕೊರತೆಯಿಲ್ಲ. ಈ ಸ್ಥಳವನ್ನು ತಲುಪಲು ಒಬ್ಬರು 106 ಕಿಮೀ ಕ್ರಮಿಸಬೇಕಾಗಿರುವುದರಿಂದ ತಲಕಾವೇರಿಯಿಂದ ಇಲ್ಲಿಗೆ ತಲುಪಲು ಸುಮಾರು 3 ಗಂಟೆಗಳು ಬೇಕಾಗಬಹುದು. ಭೇಟಿಗೆ ಉತ್ತಮ ತಿಂಗಳುಗಳು ಆಗಸ್ಟ್ ನಿಂದ ಜನವರಿ.

ನಾಗರ ಹೊಳೆ

ನಾಗರ ಹೊಳೆ

ಇರುಪ್ಪು ಜಲಪಾತ, ಕುಟ್ಟ ಮತ್ತು ರಾಮೇಶ್ವರ ದೇವಾಲಯಗಳು ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಾಗಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವೂ ಭೇಟಿ ನೀಡಲು ಯೋಗ್ಯವಾಗಿದೆ. ವನ್ಯಜೀವಿಗಳಿಂದ ಸಮೃದ್ಧವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಹಸಿರು ಸೌಂದರ್ಯದಿಂದ ಕೂಡಿದೆ. ಕಾಡು ಆನೆಗಳಿಂದ ಹಿಡಿದು ಜಿಂಕೆ, ನರಿ, ಮೊಸಳೆ ಮತ್ತು ಚಿರತೆಗಳವರೆಗೆ, ಉದ್ಯಾನವನವು ವ್ಯಾಪಕವಾದ ವನ್ಯಜೀವಿ ದೃಶ್ಯವೀಕ್ಷಣೆಯನ್ನು ನೀಡುತ್ತದೆ.

ನಾಗರಹೊಳೆಗೆ ಭೇಟಿ ನೀಡಲು ಉತ್ತಮವಾದ ತಿಂಗಳುಗಳು ಫೆಬ್ರವರಿಯಿಂದ ಡಿಸೆಂಬರ್. ಇರುಪ್ಪು ಜಲಪಾತದಿಂದ ಇಲ್ಲಿಗೆ ತಲುಪಲು ಸುಮಾರು 20 ನಿಮಿಷಗಳು ಬೇಕಾಗಬಹುದು ಏಕೆಂದರೆ ಇವೆರಡರ ನಡುವಿನ ಸಾಮೀಪ್ಯವು ಕೇವಲ 9 ಕಿ.ಮೀ. ಆಗಿರುತ್ತದೆ.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X