Search
  • Follow NativePlanet
Share
» »ಬೆಂಗಳೂರಿನ ತೊಟ್ಟಿಕಲ್ಲು ಫಾಲ್ಸ್‌ ನೋಡಿದ್ದೀರಾ?

ಬೆಂಗಳೂರಿನ ತೊಟ್ಟಿಕಲ್ಲು ಫಾಲ್ಸ್‌ ನೋಡಿದ್ದೀರಾ?

ಬೆಂಗಳೂರಿನಲ್ಲಿ ವಾಸಿಸುವವರಿಗೆ ಇಲ್ಲಿ ಸುತ್ತಾಡಲೂ ಯಾವ ಒಳ್ಳೆ ತಾಣಗಳು ಇಲ್ಲ ಅನ್ನೋದು ಸಹಜ. ಬೆಂಗಳೂರಿಗರು ವಾರಾಂತ್ಯದಲ್ಲಿ ಎಲ್ಲಿಗಾದರೂ ಹೋಗಬೇಕೆಂದರೆ ಸಾಮಾನ್ಯವಾಗಿ ಮೈಸೂರು, ಮಡಿಕೇರೆ ಆಯ್ಕೆ ಮಾಡುತ್ತಾರೆ. ಮಡಿಕೇರಿಯಲ್ಲಿ ಜಲಪಾತಗಳನ್ನು ಕಣ್ತುಂಬಿಕೊಳ್ಳ ಬಯಸುತ್ತಾರೆ. ಜಲಪಾತವನ್ನು ನೋಡೋಕೆ ಮಡಿಕೇರಿಗೆ ಹೋಗಬೇಕಾ? ನಮ್ಮ ಪಕ್ಕದಲ್ಲೇ ಇರುವಾಗ ಅಷ್ಟೊಂದು ದೂರ ಹೋಗ ಅಲ್ವಾ? ಹೆಚ್ಚಿನವರಿಗೆ ಬೆಂಗಳೂರಿನಲ್ಲಿ ಒಂದು ಸುಂದರವಾದ ಜಲಪಾತವಿದೆ ಅನ್ನೋದೇ ಗೊತ್ತಿಲ್ಲ.

ಇಲ್ಲಿ ತೃತೀಯ ಲಿಂಗಿಗಳಿಗೆ ಮದುವೆ ಮಾಡಿಸ್ತಾರೆ, ಆದ್ರೆ ಯಾರ ಜೊತೆ ಗೊತ್ತಾ?ಇಲ್ಲಿ ತೃತೀಯ ಲಿಂಗಿಗಳಿಗೆ ಮದುವೆ ಮಾಡಿಸ್ತಾರೆ, ಆದ್ರೆ ಯಾರ ಜೊತೆ ಗೊತ್ತಾ?

ತೊಟ್ಟಿಕಲ್ಲು ಜಲಪಾತ

ತೊಟ್ಟಿಕಲ್ಲು ಜಲಪಾತ

PC:Manjukirans

ಹೌದು, ನಾವಿಂದು ನಿಮಗೆ ಬೆಂಗಳೂರಿನಲ್ಲಿರುವ ಸುಂದರ ಜಲಪಾತಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಅದುವೇ ತೊಟ್ಟಿಕಲ್ಲು ಜಲಪಾತ. ಈ ಜಲಪಾತದ ಬಗ್ಗೆ ಕೇಳಿರುವವರು ಬಹಳ ಕಡಿಮೆ. ನಿಮಗೂ ತೊಟ್ಟಿಕಲ್ಲು ಜಲಪಾತದ ಬಗ್ಗೆ ಗೊತ್ತಿಲ್ಲವೆಂದಾದಲ್ಲಿ ಇಲ್ಲಿದೆ ಫುಲ್ ಡಿಟೇಲ್ಸ್. ನಿಮ್ಮ ಮುಂದಿನ ವಾರಾಂತ್ಯವನ್ನು ತೊಟ್ಟಿಕಲ್ಲು ಜಲಪಾತಕ್ಕೆ ಫೀಕ್ಸ್ ಮಾಡಿ.

ಎಲ್ಲಿದೆ ಈ ಜಲಪಾತ

ಎಲ್ಲಿದೆ ಈ ಜಲಪಾತ

PC: Akash

ಬೆಂಗಳೂರು-ಕನಕಪುರ ರಸ್ತೆಯಿಂದ ಸ್ವಲ್ಪ ದೂರದಲ್ಲಿ ತೊಟ್ಟಿಕಲ್ಲು ಜಲಪಾತವಿದೆ. ಇದನ್ನು ಟಿ.ಕೆ ಫಾಲ್ಸ್ ಎಂದೂ ಕರೆಯುತ್ತಾರೆ. ಬನ್ನೇರುಘಟ್ಟದ ಕಾಡಿನ ಪ್ರದೇಶದಲ್ಲಿರುವುದರಿಂದ ಇದನ್ನು ಸ್ವರ್ಣಮುಖಿ ಜಲಪಾತ ಎಂದೂ ಕರೆಯುತ್ತಾರೆ.

ಟ್ರಾವೆಲ್ ಮಾಡೋವಾಗ ಪ್ರಯಾಣ ಸುಖಕರವಾಗ್ಬೇಕಾದ್ರೆ ಇದನ್ನು ಅನುಸರಿಸಿ ಟ್ರಾವೆಲ್ ಮಾಡೋವಾಗ ಪ್ರಯಾಣ ಸುಖಕರವಾಗ್ಬೇಕಾದ್ರೆ ಇದನ್ನು ಅನುಸರಿಸಿ

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Akash

ಬೇಸಿಗೆಯಲ್ಲಿ ಈ ಫಾಲ್ಸ್‌ನಲ್ಲಿ ಹೆಚ್ಚು ನೀರು ಇರುವುದಿಲ್ಲ. ಹಾಗಾಗಿ ಮಳೆಗಾಲದಲ್ಲಿ ಇಲ್ಲಿಗೆ ಹೋದರೆ ಸೂಕ್ತ. ಮಳೆಗಾಲದಲ್ಲಿ ಈ ಫಾಲ್ಸ್‌ ನೀರಿನಿಂದ ತುಂಬಿ ಧುಮ್ಮುಕ್ಕುತ್ತಿರುತ್ತದೆ. ಇಲ್ಲಿ ನೀವು ಚಾರಣವನ್ನೂ ಕೈಗೊಳ್ಳಬಹುದು. ಇಲ್ಲಿಗೆ ಹೋಗುವಾಗ ತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಸೂಕ್ತ.

ಮುನೇಶ್ವರ ಸ್ವಾಮಿ ದೇವಸ್ಥಾನ

ಮುನೇಶ್ವರ ಸ್ವಾಮಿ ದೇವಸ್ಥಾನ

PC:Manjukirans

ಕನಕಪುರ ಮಾರ್ಗದಲ್ಲಿ ಕಗ್ಗಲೀಪುರದಿಂದ ಎಡಕ್ಕೆ ಬನ್ನೇರುಘಟ್ಟಕ್ಕೆ ಹೋಗುವ ಹಾದಿಯಲ್ಲಿ ಹೋದಾಗ ಬಾಲ್ಯದಮರದೊಡ್ಡಿ ಎಂಬ ಪುಟ್ಟ ಗ್ರಾಮ ಸಿಗುತ್ತದೆ. ಅಲ್ಲಿಂದ ಕಲ್ಲುಮಣ್ಣಿನ ಹಾದಿಯಲ್ಲಿ 1 ಕಿ.ಮೀ ಸಾಗಿದರೆ ತೊಟ್ಟಿಕಲ್ಲು ಮುನೇಶ್ವರ ಸ್ವಾಮಿ ದೇವಸ್ಥಾನ ಸಿಗುತ್ತದೆ.

60ಅಡಿಯಿಂದ ಧುಮ್ಮಿಕ್ಕುವ ಜಲಪಾತ

60ಅಡಿಯಿಂದ ಧುಮ್ಮಿಕ್ಕುವ ಜಲಪಾತ

Pc: Akash

ಮುನೇಶ್ವರ ಸ್ವಾಮಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಬಂಡೆಗಳ ನಡುವೆ ತೊಟ್ಟಿಕಲ್ಲು ಜಲಪಾತ ಕಾಣಸಿಗುತ್ತದೆ. ಸುಮಾರು 50ರಿಂದ 60 ಅಡಿ ಎತ್ತರದಿಂದ ಬಂಡೆಯ ಒಂದು ತುದಿಯಲ್ಲಿ ಜಲಪಾತವು ಧುಮ್ಮಿಕ್ಕುತ್ತದೆ. ಬನ್ನೇರುಘಟ್ಟ ಸರ್ಕಲ್‌ನಿಂದ ಬಲಕ್ಕೆ ಕಗ್ಗಲೀಪುರ ರಸ್ತೆಯಲ್ಲಿ 8 ಕಿ.ಮಿ ಸಾಗಿದರೆ ಟಿ.ಜೆ ಜಲಪಾತ ಸಿಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X