Search
  • Follow NativePlanet
Share
» »ಈ ಊರಿನಲ್ಲಿ ದೆವ್ವ ಇದೆ....... ಅವು ನಿಮ್ಮಗೆ ಸ್ಪಷ್ಟವಾಗಿ ಕಾಣಿಸುತ್ತವೆ!

ಈ ಊರಿನಲ್ಲಿ ದೆವ್ವ ಇದೆ....... ಅವು ನಿಮ್ಮಗೆ ಸ್ಪಷ್ಟವಾಗಿ ಕಾಣಿಸುತ್ತವೆ!

. ಈ ಊರಿನಲ್ಲಿ ಪ್ರೇತಾತ್ಮಗಳಿವೆ. ಆ ಪ್ರೇತಾತ್ಮಗಳಿಗೆ ನಿಮ್ಮನ್ನು ಕಂಡರೆ ಅಷ್ಟೆ. ಸೂರ್ಯಾಸ್ತ ಸಮಯದ ನಂತರ ಅಲ್ಲಿಗೆ ಭೇಟಿಯ ಬಗ್ಗೆ ಭಾರತದ ಪುರಾವಸ್ತು ಸಂಸ್ಥೆಯೇ ಎಚ್ಚರಿಕೆಯ ಫಲಕಗಳನ್ನು ಹಾಕಿದ್ದಾರೆ ಎಂದರೆ ಊಹಿಸಿ ಆ ಪ್ರದೇಶ ಎನ್ನೂ ಎಷ್ಟು ಅಪ

ದೆವ್ವ, ದೇವರು ಎಂಬ ಪರಿಕಲ್ಪನೆ ಇದೆಯೇ ಎಂಬುದಕ್ಕೆ ಉತ್ತರ ಅವರವರ ನಂಬಿಕೆಗೆ ಬಿಟ್ಟಿದ್ದು. ಕೆಲವರು ದೇವರು ಇದ್ದಾರೆ ಅವರೇ ಬ್ರಹ್ಮಾಂಡವನ್ನು ಆಳುವವರು ಅವರೇ ಆದರೆ ದೆವ್ವ ಎನ್ನುವುದು ಇಲ್ಲ ಎಂದು ವಾದಿಸುತ್ತಾರೆ. ಒಳ್ಳೆಯದು ಇದೆ ಎಂದರೆ ಕೆಟ್ಟದ್ದು ಇರಲೇಬೇಕು ಅಲ್ಲವೇ ಹಾಗೆಯೇ ದೇವರು ಇದೆ ಎಂದರೆ ದೆವ್ವ ಕೂಡ ಇರಲೇಬೇಕು ಅಲ್ಲವೇ ಎಂದು ವಾದಿಸುತ್ತಾರೆ.

ನಮ್ಮ ಭಾರತ ದೇಶದಲ್ಲಿ ಹಲವಾರು ಪ್ರದೇಶಗಳಲ್ಲಿ ದುಷ್ಟ ಶಕ್ತಿಗಳ ವಾಸಸ್ಥಾನಗಳಿವೆ. ಅವುಗಳಲ್ಲಿ ಇದೂ ಕೂಡ ಒಂದು. ಈ ಊರಿನಲ್ಲಿ ಪ್ರೇತಾತ್ಮಗಳಿವೆ. ಆ ಪ್ರೇತಾತ್ಮಗಳಿಗೆ ನಿಮ್ಮನ್ನು ಕಂಡರೆ ಅಷ್ಟೆ. ಸೂರ್ಯಾಸ್ತ ಸಮಯದ ನಂತರ ಅಲ್ಲಿಗೆ ಭೇಟಿಯ ಬಗ್ಗೆ ಭಾರತದ ಪುರಾವಸ್ತು ಸಂಸ್ಥೆಯೇ ಎಚ್ಚರಿಕೆಯ ಫಲಕಗಳನ್ನು ಹಾಕಿದ್ದಾರೆ ಎಂದರೆ ಊಹಿಸಿ ಆ ಪ್ರದೇಶ ಎನ್ನೂ ಎಷ್ಟು ಅಪಾಯಕರವಾದುದು ಎಂಬುದನ್ನು.....

ಇಲ್ಲಿನ ವಿಚಿತ್ರ ಏನೆಂದರೆ ನಿತ್ಯವೂ ಪ್ರವಾಸಿಗಳಿಂದ ತುಂಬಿರುವ ಚಾರಿತ್ರಾತ್ಮಕ ಪ್ರದೇಶ. ಈ ಲೇಖನದ ಮೂಲಕ ಆ ಭಯಾನಕ ಪ್ರದೇಶದ ಬಗ್ಗೆ ತಿಳಿಯೋಣ.

ಯಾವ ಪ್ರದೇಶ

ಯಾವ ಪ್ರದೇಶ

ಈ ಭಯಾನಕ ಪ್ರದೇಶದ ಹೆಸರು ಭಾಸ್ಘುಡ್.

ಎಲ್ಲಿದೆ?

ಎಲ್ಲಿದೆ?

ಈ ಭಯಾನಕ ಪ್ರದೇಶವು ದೆಹಲಿಯಿಂದ ಸುಮಾರು 300 ಕಿ,ಮೀ ದೂರದ ರಾಜಸ್ಥಾನದಲ್ಲಿದೆ.

ಆ ಪ್ರದೇಶದಲ್ಲಿ ದೆವ್ವವಿದೆ

ಆ ಪ್ರದೇಶದಲ್ಲಿ ದೆವ್ವವಿದೆ

ಈ ಪ್ರದೇಶ ಸುತ್ತಮುತ್ತ ಇರುವ ಆರಾವಳಿ ಪರ್ವತದಿಂದ ಅವೃತ್ತಗೊಂಡಿದೆ. ಈ ಭಯಾನಕ ಪ್ರದೇಶದಲ್ಲಿ ಜನರು ನಿವಾಸವಿಲ್ಲ.

ದೆವ್ವದ ನಗರ

ದೆವ್ವದ ನಗರ

ಈ ಪ್ರದೇಶವನ್ನು ದೆವ್ವದ ನಗರ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಸೂರ್ಯಾಸ್ತ ಸಮಯದ ನಂತರ ಈ ಪ್ರದೇಶದ ಒಳ ಪ್ರವೇಶ ನಿಷಿಧ್ದ. ಏಕೆಂದರೆ ಆ ಸಮಯದಲ್ಲಿ ದೆವ್ವಗಳ ಹಾವಳಿ ಹೆಚ್ಚಾಗುತ್ತದೆ ಎಂತೆ.

ಆ ಪ್ರದೇಶದಲ್ಲಿ ದೆವ್ವವಿದೆ

ಆ ಪ್ರದೇಶದಲ್ಲಿ ದೆವ್ವವಿದೆ

ಈ ಪ್ರದೇಶದ ಸಮೀಪದಲ್ಲಿ ನಿವಾಸಿಸುವ ಕೆಲವರು ರಾತ್ರಿಯ ಸಮಯದಲ್ಲಿ ದೆವ್ವಗಳ ಚಿರಾಟ, ನಗುವುದು, ಆಳುವುದು ಇನ್ನೂ ಹಲವಾರು ವಿಧ ವಿಧವಾದ ಭಯಂಕರ ಶಬ್ಧಗಳು ಕೇಳಿಸುತ್ತವೆ ಎಂದು ಹೇಳುತ್ತಾರೆ.

ಪ್ರವಾಸಿಗಾರರು

ಪ್ರವಾಸಿಗಾರರು

ಈ ಪ್ರದೇಶದ ಬಗ್ಗೆ ತಿಳಿದ ಅದೆಷ್ಟೊ ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ದೆವ್ವದ ನಗರಕ್ಕೆ ಹಲವಾರು ಪ್ರಚಾರ ದೊರೆತ್ತಿದ್ದರಿಂದಲೇ ದೆವ್ವವನ್ನು ಕಾಣಲು ಬರುತ್ತಾರೆ. ದಿನದಿಂದ ದಿನಕ್ಕೆ ಪ್ರವಾಸಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಪುರಾತನ ಪ್ಯಾಲೆಸ್, ಮಂದಿರಗಳು

ಪುರಾತನ ಪ್ಯಾಲೆಸ್, ಮಂದಿರಗಳು

ದೆವ್ವಗಳ ಮಾತು ಪಕ್ಕಕ್ಕೆ ಇಟ್ಟರೆ ಇಲ್ಲಿ ಪುರಾತನವಾದ ಪ್ಯಾಲೆಸ್, ದೇವಾಲಯಗಳು ನಿಮಗೆ ವಿಶೇಷವಾದ ಆಕರ್ಷಣೆಯಾಗಲಿದೆ.

ಈ ಕೋಟೆಯ ಉತ್ತಮ ಭೇಟಿಯ ಸಮಯ

ಈ ಕೋಟೆಯ ಉತ್ತಮ ಭೇಟಿಯ ಸಮಯ

ಮುಂಜಾನೆಯಿಂದ ಸೂರ್ಯಾಸ್ತ ಸಮಯದವರೆವಿಗೂ ಈ ಪ್ರದೇಶದ ಪ್ರವೇಶಕ್ಕೆ ಅನುಮತಿಯನ್ನು ನೀಡುತ್ತಾರೆ.

ಸಮೀಪ ಗ್ರಾಮದ ಪ್ರಜೆಗಳು

ಸಮೀಪ ಗ್ರಾಮದ ಪ್ರಜೆಗಳು

ಅಲ್ಲಿನ ಸಮೀಪದ ಪ್ರಜೆಗಳು ಇಲ್ಲಿನ ಪ್ರದೇಶವು ಅತ್ಯಂತ ಭಯಾನಕವಾಗಿದ್ದು, ಹೆಚ್ಚಾಗಿ ದೆವ್ವಗಳ ಸಂಚಾರವಿರುವುದರಿಂದ ಸೂರ್ಯಾಸ್ತದ ನಂತರ ಈ ಪ್ರದೇಶವನ್ನು ಬಿಟ್ಟು ಹೊರಡಿ ಎಂದು ತಿಳಿಸುತ್ತಾರೆ.

ಒಂದು ಸಮಯದಲ್ಲಿ ಸ್ವರ್ಗದಂತೆ ಇದ್ದ ನಗರ

ಒಂದು ಸಮಯದಲ್ಲಿ ಸ್ವರ್ಗದಂತೆ ಇದ್ದ ನಗರ

ದೆವ್ವದ ನಗರ ಎಂದು ಹೆಸರು ಪಡೆದಿರುವ ಈ ನಗರ ಒಂದು ಕಾಲದಲ್ಲಿ ಸ್ವರ್ಗದಂತೆ ಬಾಳಿದ ನಗರವಾಗಿತ್ತು.

ಮಧು ಸಿಂಗ್

ಮಧು ಸಿಂಗ್

1631ರಲ್ಲಿ ಅಕ್ಬರ್ ಸಂಸ್ಥಾನದಲ್ಲಿ ಮಾನ್ ಸಿಂಗ್ ಕುಮಾರ ಮಧುಸಿಂಗ್ ಈ ನಗರವನ್ನು ನಿರ್ಮಿಸಿದನು.

ಸ್ಥಳೀಯರು

ಸ್ಥಳೀಯರು

ಸುಮಾರು 700 ವರ್ಷಗಳ ಹಿಂದೆ ಅತ್ಯಂತ ವೈಭವದಿಂದ ಸುಖ ಸಂತೋಷದಿಂದ ಬಾಳಿದ ರಾಜ್ಯವಿದು. ಒಬ್ಬ ತಾಂತ್ರಿಕನ ಶಾಪದಿಂದ ಸ್ಮಶಾನವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಪ್ರವಾಸಿಗರು

ಪ್ರವಾಸಿಗರು

ಬೆಳಗ್ಗೆಯ ಸಮಯದಲ್ಲಿ ಹಲವಾರು ಪ್ರವಾಸಿಗರಿಂದ ಕೂಡಿರುತ್ತದೆ. ಸಂಜೆಯಾಗುತ್ತಾ ಹೋದಂತೆ ಇಲ್ಲಿ ಒಂದು ಶ್ವಾನ ಕೂಡ ಇರುವುದಿಲ್ಲ. ಇಲ್ಲಿ ಹಲವಾರು ಸುಂದರವಾದ ಕಟ್ಟಡಗಳು ಇವೆ. ಅವುಗಳು ಕೂಡ ಪ್ರವಾಸಿ ಆರ್ಕಣೆಗಳಲ್ಲಿ ಒಂದಾಗಿದೆ.

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಇಲ್ಲಿ ಹನುಮಂತ, ಗೋಪಿನಾಥ, ನವೀನ ಮಂದಿರಗಳಿಗೆ ಭೇಟಿ ನೀಡಬಹುದು. ಮುಖ್ಯವಾಗಿ ಜಿ.ಕಿ ಬಾಗ್ ತಪ್ಪದೇ ನೋಡಬೇಕಾದ ಸುಂದರವಾದ ತಾಣ. ಮತ್ತೆ ಇನ್ನು ಏಕೆ ಆಲಸ್ಯ ತ್ವರಿತವಾಗಿ ದೆವ್ವಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೊರಡಿ......

ಉತ್ತಮ ಸಮಯ

ಉತ್ತಮ ಸಮಯ

ಈ ಕೋಟೆಯು ರಾಜಸ್ಥಾನದಲ್ಲಿರುವುದರಿಂದ ಅತ್ಯಂತ ಬೇಸಿಗೆಯ ತಾಣ. ಅಕ್ಟೋಬರ್‍ನಿಂದ ಫೆಬ್ರವರಿಯವರೆವಿಗೂ ಈ ಕೋಟೆಗೆ ಭೇಟಿ ನೀಡಲು ಉತ್ತಮವಾದ ಸಮಯವಾಗಿದೆ.

PC:Mani Binelli

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣ

ಈ ಭಯಾನಕ ಸ್ಥಳಕ್ಕೆ ತೆರಳಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ರಾಜಸ್ಥಾನದ ಜೈಪುರ್ ವಿಮಾನ ನಿಲ್ದಾಣ. ಇಲ್ಲಿಂದ ಸುಮಾರು 88.33 ಕಿ,ಮೀ ದೂರದಲ್ಲಿ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X