Search
  • Follow NativePlanet
Share
» »ಹೊಟ್ಟೆ ತುಂಬುವಷ್ಟು ತಿಂದ್ರೂ ಯಾರೂ ಬಿಲ್ ಕೇಳೊಲ್ಲ... ಮೂರೊತ್ತೂ ಊಟ ಫ್ರೀ !

ಹೊಟ್ಟೆ ತುಂಬುವಷ್ಟು ತಿಂದ್ರೂ ಯಾರೂ ಬಿಲ್ ಕೇಳೊಲ್ಲ... ಮೂರೊತ್ತೂ ಊಟ ಫ್ರೀ !

ಪ್ರತಿದಿನ ಮನೆಯ ಅಡುಗೆ ತಿಂದು ಬೇಜಾರ್ ಆಗುತ್ತೆ ಅಲ್ವಾ? ಅಪರೂಪಕ್ಕೊಮ್ಮೆ ರೆಸ್ಟೋರೆಂಟ್‌ಗೆ ಹೋಗಿ ತಿನ್ನುವ ಅಂತಾ ಅನಿಸೋದು ಸಹಜ. ಆದ್ರೆ ರೆಸ್ಟೋರೆಂಟ್‌ಗೆ ಹೋದ್ರೂ ಅಲ್ಲಿ ಏನು ತೆಗೋಬೇಕು ಅಂತಾ ಗೊತ್ತಾಗೊಲ್ಲ. ಯಾಕಂದ್ರೆ ಅದರ ಬೆಲೆ ಕೂಡಾ ಅಷ್ಟೇ ಜಾಸ್ತಿ ಇರುತ್ತೆ. ಹಾಗಾಗಿ ರೆಸ್ಟೋರೆಂಟ್‌ಗೆ ಹೋಗಿ ಆಹಾರದ ಸವಿಯನ್ನು ಸವಿಯೋದಕ್ಕಿಂತಲೂ ನಮ್ಮ ಜೇಬು ಖಾಲಿಯಾಗುತ್ತಿದೆಯಾ ಅನ್ನೋದನ್ನು ಲೆಕ್ಕ ಹಾಕೋದೇ ಜಾಸ್ತಿ. ಹಾಗಾಗಿ ನಿಮಗೆ ಇಷ್ಟವಿಲ್ಲದಿದ್ದರೂ ಕಡಿಮೆ ಬೆಲೆಯ ಆಹಾರವನ್ನೇ ಆಯ್ಕೆ ಮಾಡಿಕೊಳ್ಳುತ್ತೀರಿ.

ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!

ಎಲ್ಲಿದೆ ಈ ರೆಸ್ಟೋರೆಂಟ್?

ಎಲ್ಲಿದೆ ಈ ರೆಸ್ಟೋರೆಂಟ್?

PC: youtube

ಭಾರತದಲ್ಲಿ ಒಂದು ವಿಶೇಷ ರೆಸ್ಟೋರೆಂಟ್ ಓಪನ್ ಆಗಿದೆ. ಇಲ್ಲಿ ಬಿಲ್‌ನ ಟೆನ್ಷನ್ ಇಲ್ಲದೆಯೇ ಎಷ್ಟು ಬೇಕೋ ಅಷ್ಟು ತಿನ್ನಬಹುದು. ಈ ವಿಶೇಷ ರೆಸ್ಟೋರೆಂಟ್ ಇರುವುದು ಕೇರಳದಲ್ಲಿ , ಕೇರಳದ ಅಲಪ್ಪಿಯಲ್ಲಿ ಜನಕೀಯ ಭಕ್ಷನಾಲಯ ಎನ್ನುವ ರೆಸ್ಟೋರೆಂಟ್ ಓಪನ್ ಆಗಿದೆ. ಇಲ್ಲಿ ನೀವು ಬಿಲ್‌ನ ಚಿಂತೆ ಬಿಟ್ಟು ಹೊಟ್ಟೆ ತುಂಬುವವರೆಗೂ ತಿನ್ನಬಹುದು. ಇಲ್ಲಿ ಉಚಿತವಾಗಿ ತಿನ್ನಬಹುದು.

ಬಿಲ್ ಕೊಡುವಂತೆ ಯಾರೂ ಒತ್ತಾಯಿಸೋದಿಲ್ಲ

ಬಿಲ್ ಕೊಡುವಂತೆ ಯಾರೂ ಒತ್ತಾಯಿಸೋದಿಲ್ಲ

PC: Jiss Tom palelil

ನೀವು ಹೊಟ್ಟೆ ತುಂಬುವಷ್ಟು ತಿನ್ನಬಹುದು. ದುಡ್ಡು ನಿಮಗೆ ಇಷ್ಟಬಂದಷ್ಟು ಕೊಡಬಹುದು. ದುಡ್ಡು ಕೊಡದೇನೆ ಇರಬಹುದು. ಯಾರೂ ನಿಮ್ಮನ್ನು ಬಿಲ್ ಕೊಡುವಂತೆ ಒತ್ತಾಯಿಸೋದಿಲ್ಲ. ಬಿಲ್ ಕೇಳಲು ಇಲ್ಲಿ ಯಾವುದೇ ಕ್ಯಾಶಿಯರ್ ಇಲ್ಲ.

ರೆಸ್ಟೋರೆಂಟ್ ಉದ್ದೇಶ ಏನು?

ರೆಸ್ಟೋರೆಂಟ್ ಉದ್ದೇಶ ಏನು?

ಈ ರೆಸ್ಟೋರೆಂಟ್‌ನ್ನು ತೆರೆಯುವುದರ ಹಿಂದೆ ದೊಡ್ಡ ಕ್ರಾಂತಿಕಾರಿ ಉದ್ದೇಶವೇ ಇದೆ. ಇದೊಂದು ಜನತಾ ಭೋಜನಾಲಯವಾಗಿದೆ. ಇಲ್ಲಿ ಯಾರೂ ಬೇಕಾದರೂ ಬಂದು ಮೂರು ಹೊತ್ತು ಊಟ ಮಾಡಬಹುದು.

ಕೌಂಟರ್ ಬಳಿ ಬಾಕ್ಸ್

ಕೌಂಟರ್ ಬಳಿ ಬಾಕ್ಸ್

ಗ್ರಾಹಕರು ತಮ್ಮ ಮನಸ್ಸೋಇಚ್ಛೆಯಂತೆ ತಮಗೆ ಎಷ್ಟು ನೀಡಬೇಕೆನಿಸುತ್ತದೋ ಅಷ್ಟು ದುಡ್ಡು ನೀಡಬಹುದು. ಅದಕ್ಕಾಗಿ ರೆಸ್ಟೋರೆಂಟ್‌ನ ಕೌಂಟರ್ ಬಳಿ ಒಂದು ಬಾಕ್ಸ್ ಇಡಲಾಗಿದೆ. ಅದರಲ್ಲಿ ನಿಮಗೆ ಇಷ್ಟ ಬಂದಷ್ಟು ದುಡ್ಡು ಹಾಕಬಹುದು.

2000 ಜನರಿಗೆ ಊಟದ ವ್ಯವಸ್ಥೆ

2000 ಜನರಿಗೆ ಊಟದ ವ್ಯವಸ್ಥೆ

ದಿನದಿದಿಂದ ದಿನಕ್ಕೆ ಇಲ್ಲಿ ಭೋಜನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಮಾಹಿತಿ ಪ್ರಕಾರ ಇಲ್ಲಿ ಸುಮಾರು 2000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. 11.25ಲಕ್ಷ ಖರ್ಚಾಗಿದೆ. 6 ಲಕ್ಷ ರೂ ಖರ್ಚು ಮಾಡಿ ವೇಸ್ಟ್ ಮ್ಯಾನೆಜ್ಮೆಂಟ್ ಪ್ಲಾಂಟ್ ಹಾಗೂ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ ಅಳವಡಿಸಲಾಗಿದೆ. ಈ ಪ್ಲಾಂಟ್ಸ್ ನಿರ್ಮಿಸಲು ಕೇರಳ ಸರ್ಕಾರ ಐಆರ್‌ಸಿಟಿಸಿಯ ಸಹಾಯ ಪಡೆದಿದೆ.

ಸಕಾರಾತ್ಮಕ ನಡೆ

ಸಕಾರಾತ್ಮಕ ನಡೆ

PC: wikipedia

ಕೇರಳ ಸರ್ಕಾರದಿಂದ ಇದೊಂದು ಸಕಾರಾತ್ಮಕ ನಡೆ ಎನ್ನಲಾಗಿದೆ. ಇಲ್ಲಿ ಮೂರು ಹೊತ್ತಿನ ಆಹಾರವನ್ನು ಯಾವುದೇ ಖರ್ಚು ಇಲ್ಲದೆ ತಿನ್ನಬಹುದಾಗಿದೆ. ಗ್ರಾಹಕನಿಗೆ ಬಿಲ್ ನೀಡುವ ಮನಸ್ಸಿದ್ದರೆ ತನಗೆ ಇಷ್ಟಬಂದಷ್ಟು ಡಬ್ಬಿಗೆ ಹಾಕಬಹುದು. ಸಾಮಾಜಿಕ ಸೇವೆಯ ರೂಪದಲ್ಲಿ ಇದೊಂದು ಮಹತ್ತರ ನಡೆಯಾಗಿದೆ.

ಜೈವಿಕ ಕೃಷಿ

ಜೈವಿಕ ಕೃಷಿ

ರೆಸ್ಟೋರೆಂಟ್ ಬಳಿ 2.5 ಎಕರೆಯ ಜಮೀನಿದೆ. ಅದರಲ್ಲಿ ಆರ್ಗಾನಿಕ್ ಫರ್ಮ್ ಬೆಳೆಸಲಾಗಿದೆ. ಇಲ್ಲಿ ಬೆಳೆವ ತರಕಾರಿಗಳನ್ನು ರೆಸ್ಟೋರೆಂಟ್‌ನಲ್ಲಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಫರ್ಮ್‌ನಿಂದ ತರಕಾರಿಯನ್ನೂ ಖರೀದಿಸಬಹುದು.

ಹೋಗುವುದು ಹೇಗೆ?

ಹೋಗುವುದು ಹೇಗೆ?

ನೀವು ಕೇರಳ ತಿರುಗಾಡಲು ಹೋಗುವುದಾದರೆ ಈ ರೆಸ್ಟೋರೆಂಟ್‌ನ ಊಟ ಸವಿಯುವುದನ್ನು ಮರೆಯದಿರಿ. ಇದು ಕೇರಳದ ಅಲಪ್ಪಿ ಜಿಲ್ಲೆಯಲ್ಲಿದೆ. ಚೆರ್‌ತಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೆಸ್ಟೋರೆಂಟ್ ಇದೆ. ಕೊಚ್ಚೀನ್ ಇಲ್ಲಿಯ ಸಮೀಪದ ಏರ್‌ಪೋರ್ಟ್. ರೈಲು ಮಾರ್ಗಕ್ಕಾಗಿ ಅಲಪ್ಪಿ ರೈಲ್ವೆ ಸ್ಟೇಶನ್‌ಗೆ ಹೋಗಬೇಕು.

Read more about: kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more