• Follow NativePlanet
Share
» »ಸತ್ತವರ ಜೊತೆ ಟೀ ಕುಡಿಬೇಕಾ...ತಿಂಡಿ ತಿನ್ನಬೇಕಾ...ಹಾಗಾದ್ರೆ ಈ ರೆಸ್ಟೋರೆಂಟ್‌ಗೆ ಹೋಗಿ

ಸತ್ತವರ ಜೊತೆ ಟೀ ಕುಡಿಬೇಕಾ...ತಿಂಡಿ ತಿನ್ನಬೇಕಾ...ಹಾಗಾದ್ರೆ ಈ ರೆಸ್ಟೋರೆಂಟ್‌ಗೆ ಹೋಗಿ

Written By: Rajatha

ಧೈರ್ಯವಿದ್ದರೆ ಒಬ್ಬನೇ ಸ್ಮಶಾನಕ್ಕೆ ಹೋಗಿ ತೋರಿಸು ಎಂದು ನಾವು ಸಾಮಾನ್ಯವಾಗಿ ಸ್ನೇಹಿತರಲ್ಲಿ ಹೇಳುತ್ತಾ ಇರುತ್ತೇವೆ. ಸ್ಮಶಾನದ ಹೆಸರು ಕೇಳುತ್ತಲೇ ಮನಸ್ಸಿನಲ್ಲಿ ಕಂಪನ ಶುರುವಾಗುತ್ತದೆ. ಅಂತಹದರಲ್ಲಿ ಅಹಮದಾಬಾದ್‌ನಲ್ಲಿರುವ ಸ್ಮಶಾನದಲ್ಲಿ ಜನರು ರಾತ್ರಿ ಕೂಡಾ ಚಹಾ ಕುಡಿಯುತ್ತಾರಂತೆ.

ಇಲ್ಲಿನ ಮನೆಗಳಿಗೆ, ಬ್ಯಾಂಕ್‌ಗಳಿಗೆ ಬಾಗಿಲುಗಳೇ ಇಲ್ಲ...ಸದಾ ಕಾಯುತ್ತಿದ್ದಾನೆ ಶನಿದೇವ

ಮಧ್ಯರಾತ್ರಿಯೂ ಚಹಾ ಕುಡಿತಾರೆ ಜನ

ಮಧ್ಯರಾತ್ರಿಯೂ ಚಹಾ ಕುಡಿತಾರೆ ಜನ

ಈ ಸ್ಮಶಾನದಲ್ಲಿ ಜನರು ಯಾವಾಗ ಬೇಕಾದರೂ ಯಾವುದೇ ಭಯವಿಲ್ಲದೆ ಚಹಾ ಕುಡಿಯಬಹುದು. ಹಾಗಾದ್ರೆ ಆ ಸ್ಥಳ ಯಾವುದು ಅಂತ ಆಲೋಚಿಸುತ್ತಿದ್ದೀರಾ? ನಾವಿಂದು ಹೇಳುತ್ತಿರುವುದು ಅಹಮದಾಬಾದ್‌ನಲ್ಲಿಯ ಲಾಲ್ ಧರ್‌ವಾಜಾದಲ್ಲಿರುವ ನ್ಯೂ ಲಕ್ಕಿ ರೆಸ್ಟೋರೆಂಟ್‌ನ ಬಗ್ಗೆ. ಈ ರೆಸ್ಟೋರೆಂಟ್ ಒಳಗೆ ಗ್ರಾಹಕರು ರಾತ್ರಿ ೧೨-೧ ಗಂಟೆಗೂ ಸಮಾಧಿಗಳ ನಡುವೆ ಕುಳಿತು ಚಹಾ ಹಾಗೂ ಸ್ನ್ಯಾಕ್ಸ್‌ನ್ನು ಸವಿಯುತ್ತಾರೆ.

ಎಂಎಂ ಹುಸೇನ್ ಕೂಡಾ ಇಲ್ಲಿ ಚಹಾ ಸವಿದಿದ್ದಾರೆ

ಎಂಎಂ ಹುಸೇನ್ ಕೂಡಾ ಇಲ್ಲಿ ಚಹಾ ಸವಿದಿದ್ದಾರೆ

ಈ ರೆಸ್ಟೋರೆಂಟ್ ತನ್ನ ಚಹಾ ಹಾಗೂ ಅಲ್ಲಿಯ ಡಿಶ್‌ಗಳಿಗಿಂತಲೂ ರೆಸ್ಟೋರೆಂಟ್ ನಡುವೆ ಇರುವ ಸಮಾಧಿಯಿಂದಾಗಿ ಫೇಮಸ್ ಆಗಿದೆ. ಪ್ರಸಿದ್ಧ ಚಿತ್ರಕಾರ ಎಂಎಂ ಹುಸೇನ್ ಕೂಡಾ ಈ ರೆಸ್ಟೋರೆಂಟ್‌ಗೆ ಬಂದು ಹಲವು ಬಾರಿ ಚಹಾ ಸವಿದಿದ್ದಾರೆ.

ಸಣ್ಣ ಟೀ ಸ್ಟಾಲ್‌ನಿಂದ ರೆಸ್ಟೋರೆಂಟ್ ಆಯಿತು.

ಸಣ್ಣ ಟೀ ಸ್ಟಾಲ್‌ನಿಂದ ರೆಸ್ಟೋರೆಂಟ್ ಆಯಿತು.

1950ರಲ್ಲಿ ಈ ರೆಸ್ಟೋರೆಂಟ್‌ ಪ್ರಾರಂಭವಾಯಿತು. ಮುಸ್ಲಿಂರ ಸ್ಮಶಾನದ ಹೊರಗೆ ಒಂದು ಸಣ್ಣ ಟೀ ಸ್ಟಾಲ್ ರೂಪದಲ್ಲಿ ಇದನ್ನು ಹೆಚ್ ಮುಹಮ್ಮದ್ ಪ್ರಾರಂಭಿಸಿದರು. ಈ ಜಾಗ ಕ್ರಮೇಣ ಪ್ರಸಿದ್ಧಿ ಹೊಂದುತ್ತಾ ಇದ್ದಂತೆ ಅವರು ಟೀ ಸ್ಟಾಲ್‌ನ್ನು ಸ್ಮಶಾನದ ವರೆಗೂ ವಿಸ್ತರಿಸಿದರು. ಹಲವು ವರ್ಷಗಳವರೆಗೆ ಈ ರೆಸ್ಟೋರೆಂಟ್ ನಡೆಸಿದ ನಂತರ ಅವರು ಈ ರೆಸ್ಟೋರೆಂಟ್‌ನ್ನು ಕೃಷ್ಣ ಕುಟ್ಟಿ ನಾಯರ್ ಎನ್ನುವವರಿಗೆ ಮಾರಾಟಮಾಡಿದರು.

ರೆಸ್ಟೋರೆಂಟ್ ಒಳಗಿದೆ 26 ಸಮಾಧಿ

ರೆಸ್ಟೋರೆಂಟ್ ಒಳಗಿದೆ 26 ಸಮಾಧಿ

ಈ ರೆಸ್ಟೋರೆಂಟ್ ಒಳಗೆ 26 ಸಮಾಧಿಗಳಿವೆ. ಈ ಸಮಾಧಿಗಳ ರಕ್ಷಣೆಗಾಗಿ ಅದರ ಸುತ್ತಲೂ ಕಬ್ಬಿಣ ಸರಳುಗಳನ್ನು ಹಾಕಲಾಗಿದೆ. ಪ್ರತಿದಿನ ಈ ಸಮಾಧಿಗಳ ಶುಚಿತ್ವ ಮಾಡಲಾಗುತ್ತದೆ. ಒಳ್ಳೆಯ ಜರಿಯ ಬಟ್ಟೆಗಳ ಜೊತೆ ಹೂವಿನಿಂದ ಅಲಂಕರಿಸಲಾಗುತ್ತದೆ. ಎಂಎಂ ಹುಸೇನ್‌ರಿಗೆ ಈ ಸ್ಥಳ ಎಷ್ಟು ಇಷ್ಟವಾಗಿತ್ತೆಂದರೆ ಆ ರೆಸ್ಟೊರೇಂಟ್‌ಗೆ ಒಂದು ಪೈಂಟಿಂಗ್‌ನ್ನು ಗಿಫ್ಟ್ ಮಾಡಿದ್ದರು.

ಜನರಿಗೆ ಯಾವುದೇ ಭಯವಿಲ್ಲ

ಜನರಿಗೆ ಯಾವುದೇ ಭಯವಿಲ್ಲ

ಸಮಾಧಿಯ ಪಕ್ಕದಲ್ಲಿ ಕೂತು ಊಟ ಮಾಡುವುದಾಗಲಿ ಚಹಾ ಕುಡಿಯುವುದಕ್ಕಾಗಲಿ ಯಾರಿಗೂ ಯಾವುದೇ ಸಮಸ್ಯೆ ಇಲ್ಲ. ಪ್ರತಿದಿನ ಒಳ್ಳೆಯ ವ್ಯಾಪಾರ ಆಗುತ್ತದೆ. ಕೆಲವರು ಸಮಾಧಿ ಬಳಿ ತಿನ್ನುವುದನ್ನು ಒಳ್ಳೆಯ ದೃಷ್ಠಿಯಿಂದ ನೋಡುವುದಿಲ್ಲ. ಅವರ ಪ್ರಕಾರ ಇದು ಆ ಮೃತ ವ್ಯಕ್ತಿಗಳಿಗೆ ಒಂದು ರೀತಿಯ ತಿರಸ್ಕಾರ ಭಾವ ತೋರಿದಂತಾಗುತ್ತದೆ.

 ನ್ಯೂ ಲಕ್ಕೀ ರೆಸ್ಟೋರೆಂಟ್‌

ನ್ಯೂ ಲಕ್ಕೀ ರೆಸ್ಟೋರೆಂಟ್‌

ನಿಮಗೂ ಕೂಡಾ ಸಮಾಧಿಗಳ ನಡುವೆ ಕೂತು ಚಹಾದ ಮಜಾ ಪಡೆಯಬೇಕೆಂದಿದ್ದರೆ ಅಹಮದಾಬಾದ್‌ನ ನ್ಯೂ ಲಕ್ಕೀ ರೆಸ್ಟೋರೆಂಟ್‌ಗೆ ಹೋಗಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ