» »ಯೋನಿ ಪೂಜೆ ನಡೆಯುವ ಪ್ರಸಿದ್ಧವಾದ ದೇವಾಲಯವಿದು

ಯೋನಿ ಪೂಜೆ ನಡೆಯುವ ಪ್ರಸಿದ್ಧವಾದ ದೇವಾಲಯವಿದು

Written By:

ಭಾರತದಲ್ಲಿ ಅತ್ಯಂತ ವಿಶಿಷ್ಟ ದೇವಾಲಯಗಳಲ್ಲಿ ಈ ದೇವಾಲಯವು ಒಂದು. ಆಶ್ಚರ್ಯವೆನೆಂದರೆ ಇಲ್ಲಿನ ಭಕ್ತರು ಯೋನಿ ಆಕಾರದಲ್ಲಿರುವ ಪ್ರತಿಮೆಯನ್ನು ದೇವತೆಯ ಪ್ರತಿರೂಪವಾಗಿ ಭಾವಿಸಿ ಪೂಜೆಯನ್ನು ಮಾಡಲಾಗುತ್ತದೆ. ಈ ಸೃಷ್ಠಿ ಸಕಲ ಶಕ್ತಿಯಿಂದಲೇ ನಡೆಯುತ್ತಿದೆ. ಆ ಶಕ್ತಿ ಯಾವುದು ಎಂಬ ವಾದ ಅನವಸರ. ಎಷ್ಟೋ ಕೋಟಿ ಮೈಲಿ ದೂರದಲ್ಲಿರುವ ನಕ್ಷತ್ರಗಳು ಭೂಮಿಯ ಮೇಲೆ ಬೀಳದೇ ಇರುವುದಕ್ಕೆ ಕಾರಣ ಇಂದಿನ ಶಾಸ್ತ್ರ ಪ್ರಯೋಗಗಳು ಕಾರಣವಲ್ಲ! ಆ ಆದಿ ಶಕ್ತಿಯೇ ಎಂಬುದು ಎಲ್ಲರಿಗೂ ಗೊತ್ತು.

ಶಿವ ಎಂದರೆ ಶಿವಾನಿ ಎಂದು ಅರ್ಥ. ಅದ್ದರಿಂದಲೇ ಜಗದ್ಗುರು ಆದಿ ಶಂಕರಾಚಾರ್ಯರು "ಶಿವಶ್ಶಕ್ತ್ಯಾಯುಕ್ತೆ"......... ಎಂದು ಸೌಂದರ್ಯ ಲಹರಿಯನ್ನು ಪ್ರಾರಂಭಿಸುತ್ತಿದ್ದರು. ಕಾಳಿದಾಸ ಮಹಾ ಕವಿ ಕೂಡ ಶಿವ ಪಾರ್ವತಿಯ ಆದಿ ದಂಪತಿಗಳನ್ನು ಅರ್ಧಾಂಗಿಯೆಂದು ಬಣ್ಣಿಸಿದ್ದಾರೆ. ಆಂತಹ ಆ ಶಕ್ತಿ ಸ್ವರೂಪಿಣಿ ನೆಲೆಸಿರುವ ಅತ್ಯಂತ ಶಕ್ತಿವಂತ ಕ್ಷೇತ್ರ ಕಾಮಾಕ್ಯದೇವಿ ಮಂದಿರ. ಸುಪ್ರಸಿದ್ಧವಾದ ಶಕ್ತಿ ಪೀಠದಲ್ಲಿ ಅತ್ಯಂತ ಶಕ್ತಿ ಹೊಂದಿರುವ ಕ್ಷೇತ್ರದಲ್ಲಿ ಕಾಮಾಕ್ಯ ದೇವಿ ಕ್ಷೇತ್ರ ಕೂಡ ಒಂದು.

ಈ ಪ್ರಸಿದ್ಧವಾದ ದೇವಾಲಯವು ಅಸ್ಸಾಂನಲ್ಲಿನ ಬ್ರಹ್ಮಪುತ್ರ ನದಿ ತೀರದ, ಗುವಾಹಟಿ ಸಮೀಪದಲ್ಲಿ ಈ ಕ್ಷೇತ್ರವಿದೆ. ಈ ದೇವಾಲಯಕ್ಕೆ ಭೇಟಿ ನೀಡುವಾಗ ಸುಂದರವಾದ ಪ್ರಕೃತಿಯನ್ನು ಕೂಡ ಆನಂದಿಸಬಹುದಾಗಿದೆ. ಇಲ್ಲಿಂದ 8 ಕಿ,ಮೀ ದೂರದಲ್ಲಿ ನೀಲಾಚಲ ಎಂಬ ಪರ್ವತ ಇನ್ನಷ್ಟು ಆನಂದವನ್ನು ನೀಡುತ್ತದೆ. ಈ ಪರ್ವತದ ಮೇಲೆ ಪ್ರಖ್ಯಾತ ಶಕ್ತಿ ಪೀಠವಿದೆ. ಇಲ್ಲಿ ನೆಲೆಸಿರುವ ಶಕ್ತಿ ದೇವತೆಯನ್ನು ಕಾಮಾಕ್ಯ ಅಥವಾ ಕಾಮರೂಪಿಣಿ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಕಾಮ ಎಂದರೆ ಶಾರೀರದಲ್ಲಿ ಉಂಟಾಗುವ ಚಿತ್ತ ಚಂಚಲ ಎಂದು ಭಾವಿಸಲಾಗುತ್ತದೆ. ಇಲ್ಲಿನ ಕಾಮಾರೂಪಿಣಿ ಹಲವು ರೂಪಗಳಿಂದ ಭಕ್ತರಿಗೆ ದರ್ಶನವನ್ನು ನೀಡಿ ಅವರವರ ಕೋರಿಕೆಗಳನ್ನು ನೆರೆವೇರಿಸುವ ಆದಿ ಶಕ್ತಿಯಾಗಿದ್ದಾಳೆ.

ಪ್ರಸ್ತುತ ಲೇಖನದಲ್ಲಿ ಆದಿ ಶಕ್ತಿ ಕಾಮಾರೂಪಿಣಿಯಾಗಿದ್ದು ಏಕೆ ಎಂಬ ಪುರಾಣವನ್ನು ತಿಳಿಯೋಣ.

ಶಕ್ತಿದಾಯಿನಿ

ಶಕ್ತಿದಾಯಿನಿ

ಕಾಮಾಕ್ಯ ದೇವಿಯನ್ನು ತ್ರಿಪುರ ಶಕ್ತಿದಾಯಿನಿ ಎಂದು ಪೂಜಿಸುತ್ತಾರೆ. ಏಕೆಂದರೆ 3 ಪ್ರಧಾನ ರೂಪದಲ್ಲಿ ಈ ದೇವಿಯು ದರ್ಶನವನ್ನು ನೀಡುತ್ತಾಳೆ. ದುಷ್ಟರನ್ನು ಅಂತ್ಯ ಮಾಡಲು ತ್ರಿಪುರ ಭೈರವಿ ದೇವಿಯ ರೂಪದಲ್ಲಿ ಕಾಣಿಸುತ್ತಾಳೆ. ಈ ಉಗ್ರವಾದ ರೂಪವನ್ನು ಸಾಕ್ಷಾತ್ ಶಿವನು ಕೂಡ ನೋಡಲಾರನು. ಆನಂದವಾಗಿರುವ ಸಮಯದಲ್ಲಿ ಸಿಂಹವಾಹಿನಿಯಾಗಿ ದರ್ಶನ ನೀಡುತ್ತಾಳೆ. ಪರಮೇಶ್ವರನ ಮೇಲೆ ಅನುರಾಗ ಇದ್ದಾಗ ತ್ರಿಪುರ ಸುಂದರಿಯಾಗಿ ಪರಿರ್ವತನೆಗೊಳ್ಳುತ್ತಾಳೆ. ಹೀಗೆ ಹಲವಾರು ರೂಪದಲ್ಲಿ ದರ್ಶನವನ್ನು ಈ ತಾಯಿ ನೀಡುತ್ತಾಳೆ. ದೇವಾಲಯಕ್ಕೆ ಬಂದ ಭಕ್ತರು ಮೊದಲು ಸ್ವಾಗತ ದ್ವಾರ ಕಾಣಿಸುತ್ತದೆ.


PC:YOUTUBE

ಕಾಮಾಕ್ಯದೇವಿ

ಕಾಮಾಕ್ಯದೇವಿ

ಸ್ವಾಗತ ದ್ವಾರವೂ ಕೂಡ ಅತ್ಯಂತ ಸುಂದರವಾದ ಶಿಲ್ಪಗಳಿಂದ ಅಲಂಕೃತಗೊಂಡಿದೆ. ಸ್ವಾಗತ ದ್ವಾರದಿಂದ ಮುಂದೆ ಬಂದರೆ ಅಲ್ಲಿ ಸ್ತೂಪಾಕರದಲ್ಲಿರುವ ಗೋಪುರದ ಆಕಾರದಲ್ಲಿ ದರ್ಶನವಾಗುತ್ತವೆ. ಈ ದೇವಾಲಯದ ಒಳಭಾಗದಲ್ಲಿ ಎಂದೂ ಕಾಣಲಾಗದ ಸೌಂದರ್ಯಯುತವಾದ ಶಿಲ್ಪಗಳನ್ನು ಕಾಣಬಹುದಾಗಿದೆ. ಈ ದೇವಾಲಯದ ಗೋಪುರವು ದಕ್ಷಿಣ ಭಾರತದ ಶೈಲಿಯಲ್ಲಿ ಅಲ್ಲದೇ ಉತ್ತರ ಭಾರತದ ಶೈಲಿಯಲ್ಲಿ ಇರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಅಲ್ಲಿನ ಗೋಪುರಗಳಲ್ಲಿ ಬೃಹತ್ ಗೋಪುರದಲ್ಲಿಯೇ ಕಾಮಾಕ್ಯ ದೇವಿ ನೆಲೆಸಿರುವುದು.

PC:YOUTUBE

ತ್ರಿಶೂಲಗಳು

ತ್ರಿಶೂಲಗಳು

ಈ ಪ್ರಧಾನ ಗೋಪುರದಲ್ಲಿರುವ ಶಿಖರದಲ್ಲಿ ಬಂಗಾರದ ಕಲಶ ಸ್ಥಾಪಿಸಿದ್ದಾರೆ. ಉಳಿದ ಗೋಪುರಗಳ ಮೇಲೆ ತ್ರಿಶೂಲಗಳನ್ನು ಸ್ಥಾಪಿಸಲಾಗಿದೆ. ಇಲ್ಲಿನ ವಿಚಿತ್ರ ಏನೆಂದರೆ ಇಲ್ಲಿನ ದೇವತೆಯು ವಿಗ್ರಹ ರೂಪದಲ್ಲಿ ದರ್ಶನ ರೂಪದಲ್ಲಿ ದರ್ಶನವನ್ನು ನೀಡುವುದಿಲ್ಲ. ಇದಕ್ಕೆ ಪುರಾಣ ಕಥೆ ಇದೆ. ಪತಿಯಾದ ಪರಮೇಶ್ವರನನ್ನು ಕರೆಯದೆ ತನ್ನ ತಂದೆ ದಕ್ಷಪ್ರಜಾಪತಿ ಯಾಗವನ್ನು ಮಾಡುತ್ತಾನೆ. ಆಗ ಪಾರ್ವತಿ ದೇವಿಯನ್ನು ಅವಮಾನ ಮಾಡುತ್ತಾನೆ.

PC:Laurent

ಅಗ್ನಿ ಪ್ರವೇಶ

ಅಗ್ನಿ ಪ್ರವೇಶ

ತನ್ನ ತಂದೆಯ ಅವಮಾನವನ್ನು ಸಹಿಸಲಾರದ ಪಾರ್ವತಿ ದೇವಿಯು ಅಗ್ನಿ ಪ್ರವೇಶ ಮಾಡುತ್ತಾಳೆ. ಈ ವಿಷಯವನ್ನು ತಿಳಿದ ಪರಮಶಿವನು ಅತ್ಯಂತ ಕೋಪಗೊಂಡು ವೀರಭದ್ರನನ್ನು ಸೃಷ್ಟಿಸಿ ಯಜ್ಞವನ್ನು ಭಗ್ನ ಮಾಡಲು ಕಳಿಹಿಸುತ್ತಾನೆ. ತನ್ನ ಅರ್ಧಾಂಗಿ ತನ್ನನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ತಿಳಿದು ಸಾಧರಣ ಮಾನವನಾಗಿ ಲೋಕವನ್ನು ಗಮನದಲ್ಲಿಟ್ಟುಕೊಳ್ಳದೇ ವೈರಾಗಿಯಾಗಿ ಮಾರ್ಪಾಟಾಗುತ್ತಾನೆ.

PC:YOUTUBE

ಪಾರ್ವತಿ ದೇವಿ

ಪಾರ್ವತಿ ದೇವಿ

ಪಾರ್ವತಿಯ ಮೃತ ದೇಹವನ್ನು ಪರಮಶಿವನು ತನ್ನ ಭುಜದ ಮೇಲೆ ಹುತ್ತಿಕೊಂಡು ತಿರುಗಾಡುತ್ತಿರುತ್ತಾನೆ. ಆಗ ಶ್ರೀ ಮಹಾ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಪಾರ್ವತಿ ದೇವಿಯನ್ನು ಚೂರು ಚೂರಾಗಿ ಕತ್ತರಿಸುತ್ತಾನೆ. ಪಾರ್ವತಿಯ ದೇವಿಯ ಆ ಹಲವಾರು ಶರೀರದ 108 ಚೂರುಗಳೇ ಶಕ್ತಿ ಪೀಠವಾಗುತ್ತದೆ.


PC:YOUTUBE

ಯೋನಿ ಭಾಗ

ಯೋನಿ ಭಾಗ

ಪಾರ್ವತಿ ದೇವಿಯ ಯೋನಿ ಭಾಗವು ಗುವಾಹಟಿಯ ನೀಲಚಲ ಪರ್ವತದ ಮೇಲೆ ಬೀಳುತ್ತದೆ. ಮಾನವ ಸೃಷ್ಠಿಗೆ ಮೂಲ ಕಾರಣ ಸ್ಥನ ಯೋನಿಯಾದ್ದರಿಂದ ಈ ಪ್ರದೇಶವನ್ನು ಎಲ್ಲಾ ಶಕ್ತಿ ಪೀಠಗಳಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದೇ ಅಲ್ಲದೇ ಎಲ್ಲಾ ಶಕ್ತಿ ಪೀಠಗಳಿಗೆ ಆಧಾರ ಸ್ಥಾನ ಎಂದು ಭಾವಿಸುತ್ತಾರೆ. ಇಲ್ಲಿ ಪಾರ್ವತಿ ದೇವಿಯ ಯೋನಿ ಭಾಗ ಬಿದ್ದರಿಂದ ಈ ಪರ್ವತವು ನೀಲಿಯಾಗಿ ಮಾರ್ಪಾಟಾಗಿದೆ.

PC:YOUTUBE

ಯೋನಿ ಪೂಜಾ

ಯೋನಿ ಪೂಜಾ

ಇಲ್ಲಿನ ಕಲ್ಲಿನಾಕಾರದ ಯೋನಿಯೇ ಕಾಮಾಕ್ಯ ದೇವಿಯ ನಿವಾಸ ಎಂದು ಹೇಳಲಾಗುತ್ತದೆ. ಒಮ್ಮೆ ಈ ಪರ್ವತಕ್ಕೆ ಬಂದು ಈ ತಾಯಿಯನ್ನು ದರ್ಶನ ಮಾಡಿದರೆ ಅಮರತ್ವ ಪಡೆಯುತ್ತಾರೆ ಎಂಬುದು ಪುರಾಣಗಳಲ್ಲಿ ಇದೆ.

PC:YOUTUBE

ಮನ್ಮಥ

ಮನ್ಮಥ

ಪರಮಶಿವನು ಮನ್ಮಥನನ್ನು ಭಸ್ಮ ಮಾಡಿದ ನಂತರ ರತಿ ದೇವಿ ಪ್ರಾರ್ಥನೆಯನ್ನು ಆಲಿಸಿ ರತಿದೇವಿಗೆ ಮಾತ್ರ ಮನ್ಮಥ ಕಾಣುವಂತೆ ಪರಮಶಿವನು ಮಾಡುತ್ತಾನೆ. ಈ ಕ್ಷೇತ್ರವು ಅಧಿಷ್ಟಾನ ದೇವತೆ ನೀಲ ಪಾರ್ವತಿ ಎಂದೂ ಸಹ ಕರೆಯುತ್ತಾರೆ.

PC:YOUTUBE

ನರಕಾಸುರ

ನರಕಾಸುರ

ರಾಕ್ಷಸನಾದ ನರಕಾಸುರನು ಕೂಡ ಆ ನಾರಾಯಣನ ಜೊತೆ ಭಕ್ತಿ ಭಾವದಿಂದ ಇರುತ್ತಿದ್ದನು. ಅದ್ದರಿಂದ ಮಹಾ ವಿಷ್ಣುವು ನರಕಾಸುರನಿಗೆ ರಾಜನಾಗಿ ಮಾಡುತ್ತಾನೆ. ಕಾಮಾಕ್ಯ ದೇವಿಯನ್ನು ಪೂಜಿಸಿದರೆ ಮಾತ್ರ ರಾಜನಾಗಿ ಇರಬಹುದು ಎಂದು ವಿಷ್ಣುವು ನರಕಾಸುರನಿಗೆ ಹೇಳುತ್ತಾನೆ.

PC:YOUTUBE

ಮದುವೆ

ಮದುವೆ

ಆದರೆ ನರಕಾಸುರನು ಕಾಮಾಕ್ಯದೇವಿಯ ಮೇಲೆ ಮೋಹಗೊಂಡು ಮದುವೆ ಮಾಡಿಕೊಳ್ಳಲು ಬಲವಂತ ಮಾಡುತ್ತಾನೆ. ಆಗ ದೇವಿಯು ಬೆಳಗ್ಗೆ ಆಗುವುದರೊಳಗೆ ಸ್ವರ್ಗ ನಾಚುವ ಹಾಗೆ ಭವನವನ್ನು ನಿರ್ಮಿಸು ಆಗ ಮದುವೆಯಾಗುತ್ತೇನೆ ಎಂದು ಹೇಳುತ್ತಾಳೆ. ಆಗ ವಿಶ್ವಕರ್ಮನಿಗೆ ಕರೆಸಿ ಭವನವನ್ನು ಪೂರ್ತಿ ಮಾಡುವ ಮುಂಚೆಯೇ ಬೆಳಗ್ಗೆ ಆಗಿ ಹೋಗುತ್ತದೆ. ಇದರಿಂದಾಗಿ ಮದುವೆ ನಿಂತು ಹೋಗುತ್ತದೆ.


PC:YOUTUBE

ನರಕಾಸುರ ಮಾರ್ಗ

ನರಕಾಸುರ ಮಾರ್ಗ

ಹೀಗಾಗಿಯೇ ಕಾಮಾಕ್ಯ ಮಂದಿರವನ್ನು ನರಕಾಸುರ ಮಾರ್ಗ ಎಂದೂ ಸಹ ಕರೆಯುತ್ತಾರೆ. ಕಾಮಾಕ್ಯ ದೇವಿ ಮಂದಿರವನ್ನು ಕಾಮದೇವ ಮಂದಿರ ಎಂದು ಸಹ ಕರೆಯುತ್ತಾರೆ.


PC:YOUTUBE

ಭಕ್ತರು

ಭಕ್ತರು

ಇಂತಹ ಕಾಮಾರೂಪಿಣಿಯ ದರ್ಶನವನ್ನು ಕೋರಿ ಹಲವಾರು ಭಕ್ತರು ಈ ಮಂದಿರಕ್ಕೆ ಬರುತ್ತಾರೆ. ಪುರಾತನವಾದ ಈ ದೇವಾಲಯವು 12 ನೇ ಶತಮಾನದ ವರೆವಿಗೂ ಆಡಳಿತ ನಡೆಸಿದ ಕುಮಾರಪಾಧಿಪತಿ ತನ್ನ ಶಾಸನದಲ್ಲಿ ಈ ಮಂದಿರದ ಪ್ರಸ್ತಾವನೆ ಇದೆ.

PC:YOUTUBE

ಬೈರವ

ಬೈರವ

ಇಲ್ಲಿ ಪರಮೇಶ್ವರನು ಉಮಾನಂದ ಬೈರವನಾಗಿ ಇಲ್ಲಿ ನೆಲೆಸಿರುತ್ತಾನೆ. ನೀಲಾಚಲಕ್ಕೆ ಪೂರ್ವ ದಿಕ್ಕಿಗೆ ಬ್ರಹ್ಮಪುತ್ರ ನದಿ ಮಧ್ಯೆದಲ್ಲಿ ನೆಲೆಸಿದ್ದಾನೆ ಈ ಸ್ವಾಮಿ. ಇಲ್ಲಿ ಮಹಾ ಶಿವನು ಲಿಂಗ ಸ್ವರೂಪದಲ್ಲಿ ದರ್ಶನ ನೀಡುತ್ತಾನೆ.

PC:YOUTUBE

ಮೊದಲ ದರ್ಶನ

ಮೊದಲ ದರ್ಶನ

ಕಾಮಾಕ್ಯ ದೇವಿಯನ್ನು ದರ್ಶನ ಮಾಡುವ ಮೊದಲು ಲಿಂಗ ಸ್ವರೂಪಿಯಾಗಿರುವ ಲಿಂಗವನ್ನು ದರ್ಶನ ಮಾಡಿಕೊಳ್ಳಬೇಕು. ಕಾಮಾಕ್ಯ ದೇವಿಯನ್ನು ಮಾತ್ರ ದರ್ಶನ ಮಾಡಿ ಲಿಂಗವನ್ನು ದರ್ಶನ ಮಾಡದಿದ್ದರೆ ಯಾತ್ರೆ ಪೂರ್ತಿಯಾಗುವುದಿಲ್ಲ ಎಂದು ಭಕ್ತರು ಭಾವಿಸುತ್ತಾರೆ.


PC:YOUTUBE

ಪವಿತ್ರವಾದ ಸ್ನಾನ ಮತ್ತು ದೇವತ ಮೂರ್ತಿ

ಪವಿತ್ರವಾದ ಸ್ನಾನ ಮತ್ತು ದೇವತ ಮೂರ್ತಿ

ಈ ಪವಿತ್ರವಾದ ಕ್ಷೇತ್ರದ ನದಿಯಲ್ಲಿ ಸ್ನಾನ ಮಾಡಿದರೆ ಮೋಕ್ಷ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಇಲ್ಲಿ ಗಣೇಶ, ಸರಸ್ವತಿ ವಿಗ್ರಹವನ್ನು ಕಾಣಬಹುದಾಗಿದೆ. ಮಂದಿರದ ಒಳ ಹಾಗೂ ಹೋರ ಭಾಗದಲ್ಲಿ ಹಲವಾರು ದೇವತ ಮೂರ್ತಿ ಹಾಗೂ ರಾಜರ ಚಿತ್ರಗಳನ್ನು ಕಾಣಬಹುದಾಗಿದೆ.


PC:YOUTUBE

ಪುಷ್ಕರಣಿ

ಪುಷ್ಕರಣಿ

ಕಾಮಾಕ್ಯ ಶಕ್ತಿ ಪೀಠ ಮಂದಿರದ ಮುಂದೆ ಒಂದು ಸುಂದರವಾದ ಪುಷ್ಕರಣಿ ಇದೆ. ಇದನ್ನು ಇಂದ್ರಾದಿ ದೇವತ ಮೂರ್ತಿಗಳು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಈ ಪುಷ್ಕರಣಿಯನ್ನು ಪ್ರದರ್ಶನ ಮಾಡಿದರೆ ಭೂ ಪ್ರದಕ್ಷಿಣೆ ಮಾಡಿದಷ್ಟು ಫಲ ಎಂದು ಹೇಳಲಾಗುತ್ತದೆ.


PC:YOUTUBE

ಯೋನಿ ಪೂಜಾ ನಡೆಯುವ ಪ್ರಸಿದ್ಧವಾದ ದೇವಾಲಯ

ಯೋನಿ ಪೂಜಾ ನಡೆಯುವ ಪ್ರಸಿದ್ಧವಾದ ದೇವಾಲಯ

ಪಾರ್ವತಿ ಪರ್ವತ ಎಂದೇ ಖ್ಯಾತಿಯಾಗಿರುವ ಈ ಶಕ್ತಿ ಪೀಠ ಬಂದ ಭಕ್ತರು ಶಿಲಾರೂಪದಲ್ಲಿರುವ ಯೋನಿಯನ್ನು ಮುಟ್ಟಿ ಪೂಜಿಸುತ್ತಾರೆ. ಹಾಗೆಯೇ ಭಾರತ ದೇಶದಲ್ಲಿಯೇ ಏಕೈಕ ಯೋನಿ ಪೂಜೆ ಮಾಡುವ ಪ್ರಸಿದ್ಧವಾದ ಪುಣ್ಯ ಕ್ಷೇತ್ರ ಇದಾಗಿದೆ. ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ.

PC:Kunal Dalui

ತಲುಪುವ ಬಗೆ?

ತಲುಪುವ ಬಗೆ?

ಅಸ್ಸಾಂ ರಾಜ್ಯದ ರಾಜಧಾನಿ ಗುವಾಹಟಿ ರೈಲು, ವಿಮಾನ, ಯಾತ್ರಾಟ್ರಾವೆಲ್ಸ್ ನಿಂದ ಪ್ರಯಾಣವನ್ನು ಮಾಡಬಹುದಾಗಿದೆ. ರಸ್ತೆಯ ಮೂಲಕ ಹಾಗೂ ರೈಲಿನ ಮೂಲಕ ಪ್ರಯಾಣ ಮಾಡುವವರಿಗೆ ಉತ್ತಮವಾದ ಅನುಭೂತಿ ಉಂಟಾಗುತ್ತದೆ.

PC:YOUTUBE