ದಿಸ್ಪುರ್ ಅಸ್ಸಾಮಿನ ರಾಜಧಾನಿ ಮತ್ತು ಅತಿ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಗೌಹಾತಿಯಿಂದ 10 ಕಿ ಮೀ ಅಂತರದಲ್ಲಿದೆ.ದಿಸ್ಪುರಕ್ಕಿಂತ ಮೊದಲು ಶಿಲೊಂಗ್ ಅಸ್ಸಾಮಿನ ರಾಜಧಾನಿಯಾಗಿತ್ತು.1973 ರಲ್ಲಿ ಮೇಘಾಲಯ ಅಸ್ಸಾಮಿನಿಂದ ಬೇರ್ಪಟ್ಟಾಗ ಶಿಲೊಂಗ್ ಮೇಘಾಲಯದ ರಾಜಧಾನಿಯಾಯಿತು.ಆಗ ಅಸ್ಸಾಂ ಸರ್ಕಾರ ದಿಸ್ಪುರವನ್ನು ರಾಜಧಾನಿಯನ್ನಾಗಿ ಆಯ್ಕೆ ಮಾಡಿತು.
ದಿಸ್ಪುರದ ಮತ್ತು ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳು
ಪ್ರಮುಖ ಸರ್ಕಾರಿ ಕಟ್ಟಡಗಳಾದ ಅಸ್ಸಾಮಿನ ಸಚಿವಾಲಯ ಮತ್ತು ಅಸ್ಸಾಂ ಅಸೆಂಬ್ಲಿ ಹೌಸ್ ಗಳು ದಿಸ್ಪುರದಲ್ಲಿದೆ.ಪ್ರವಾಸಿ ಮುಖ್ಯ ಸ್ಥಳಗಳಾದ ಶಿಲ್ಪಾಗ್ರಮ್ ಮತ್ತು ವಶಿಷ್ಟ ಆಶ್ರಮ ಇಲ್ಲಿವೆ.ದಿಸ್ಪುರ ಇಲ್ಲಿನ ಚಹಾ ಹರಾಜು ಮಾರುಕಟ್ಟೆಗೆ ಹೆಚ್ಚು ಹೆಸರುವಾಸಿಯಾಗಿದೆ.ಇದು ರಾಜಧಾನಿಯಾದರೂ ಕೂಡ ಇನ್ನೂ ಗೌಹಾತಿಯ ನೆರಳಿನಲ್ಲಿ ಬೆಳೆಯುತ್ತಿರುವ ನಗರ ಎನ್ನಬಹುದು.
ದಿಸ್ಪುರದ ಮೂಲ ನಿವಾಸಿಗಳು ಆರ್ಯನರು,ಟಿಬೆಟಿಯನ್ ಮತ್ತು ಬರ್ಮನ್ ಜನಾಂಗದವರು.ಇವರು ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಬಲವಾದ ನಂಬಿಕೆ ಹೊಂದಿದ್ದಾರೆ.ಬಿಹು ಹಬ್ಬವನ್ನು ಭವ್ಯವಾಗಿ ಆಚರಿಸಲಾಗುತ್ತದೆ.ಅಸ್ಸಾಮಿ ಇಲ್ಲಿನ ಅಧಿಕೃತ ಭಾಷೆ ಆದರೂ ಕೂಡ ಹಿಂದಿ ಮತ್ತು ಇಂಗ್ಲಿಷ್ ಅನ್ನು ಇಲ್ಲಿ ಕೇಳಬಹುದು.
ದಿಸ್ಪುರದ ಹವಾಮಾನ
ದಿಸ್ಪುರದ ಹವಾಮಾನ ಗೌಹಾತಿ ಹವಾಮಾನದಂತೆಯೇ ಇರುತ್ತದೆ.ದಿಸ್ಪುರವನ್ನು ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲ ಮುಗಿದು ಆಗಷ್ಟೇ ಚಳಿಗಾಲ ಪ್ರಾರಂಭವಾಗುವ ನವೆಂಬರ್ ನಿಂದ ಮಾರ್ಚ್ ಸೂಕ್ತ ಕಾಲ.
ದಿಸ್ಪುರವನ್ನು ತಲುಪುವುದು ಹೇಗೆ?
ದಿಸ್ಪುರವನ್ನು ಅಸ್ಸಮಿನ ರೈಲು,ರಸ್ತೆ,ವಿಮಾನ ಮಾರ್ಗದ ಮೂಲಕ ತಲುಪಬಹುದು.


Click it and Unblock the Notifications