Search
  • Follow NativePlanet
Share
» »ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಕಲಿಯುಗ ಪ್ರತ್ಯಕ್ಷ ದೈವ, ಏಳು ಬೆಟ್ಟಗಳ ಒಡೆಯ, ತಿರುಮಲದ ಶ್ರೀ ವೆಂಕಟೇಶ್ವರ ಎನ್ನುತ್ತಾ ಭಕ್ತರು ಆ ವೆಂಕಟೇಶ್ವರ ಸ್ವಾಮಿಯನ್ನು ಕರೆಯುತ್ತಾರೆ. ಆ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಕೋರಿ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಭೇ

ಕಲಿಯುಗ ಪ್ರತ್ಯಕ್ಷ ದೈವ, ಏಳು ಬೆಟ್ಟಗಳ ಒಡೆಯ, ತಿರುಮಲದ ಶ್ರೀ ವೆಂಕಟೇಶ್ವರ ಎನ್ನುತ್ತಾ ಭಕ್ತರು ಆ ವೆಂಕಟೇಶ್ವರ ಸ್ವಾಮಿಯನ್ನು ಕರೆಯುತ್ತಾರೆ. ಆ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಕೋರಿ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಭೇಟಿ ನೀಡುತ್ತಿರುತ್ತಾರೆ. ಶ್ರೀನಿವಾಸನ ಅದ್ಭುತವಾದ ಆ ರೂಪವನ್ನು ನೋಡಲು 2 ಕಣ್ಣು ಸಾಲದು. ಆ ಶ್ರೀ ಮಹಾವಿಷ್ಣುವಿನ ಅವತಾರವಾದ ಶ್ರೀನಿವಾಸನು ಕಲಿಯುಗದ ಪ್ರತ್ಯಕ್ಷ ದೈವವಾಗಿ ತಿರುಮಲದಲ್ಲಿ ನೆಲೆಸಿದ್ದಾನೆ.

ತಿರುಮಲದಲ್ಲಿ ನೆಲೆಸಿರುವ ಆ ಸ್ವಾಮಿಯು ಭಕ್ತರ ಕೋರಿಕೆಗಳನ್ನು ನೆರವೇರಿಸುತ್ತಿದ್ದಾನೆ. ದಿನನಿತ್ಯ ಸ್ವಾಮಿಯ ದರ್ಶನ ಕೋರಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ಸ್ವಾಮಿಯು ತಿರುಮಲ ಬೆಟ್ಟದಲ್ಲಿ ನೆಲೆಸಿ ಕೆಲವು ಸಾವಿರ ವರ್ಷಗಳೇ ಆದವು ಎಂದು ನಮ್ಮ ಪುರಾಣಗಳ ಪ್ರಕಾರ ತಿಳಿಯಬಹುದು. ತಿರುಮಲದಲ್ಲಿ ಮುಖ್ಯವಾಗಿ ವೈಕುಂಠ ಗುಹೆ ಇದೆ ಎಂದು ಅಲ್ಲಿನ ಕೆಲವು ಪಂಡಿತರು ಹೇಳುತ್ತಿದ್ದಾರೆ. ಹಾಗಾದರೆ ಆ ವೈಕುಂಠ ಗುಹೆ ಎಲ್ಲಿದೆ? ಅದರ ಮಹತ್ವವೇನು ಎಂಬುದರ ಬಗ್ಗೆ ಸಂಕ್ಷೀಪ್ತವಾಗಿ ತಿಳಿಯೋಣ ಬನ್ನಿ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಪುರಾಣಗಳು ಹೇಳುವ ಪ್ರಕಾರ ಶ್ರೀ ವೆಂಕಟೇಶ್ವರ ಸ್ವಾಮಿಯು ತಿರುಮಲದಲ್ಲಿ ನೆಲೆಸಿ ಸಾವಿರಾರು ವರ್ಷಗಳೇ ಕಳೆದವು. ಅನೇಕ ಮಂದಿ ತಿರುಮಲಕ್ಕೆ ಶ್ರೀನಿವಾಸನು ಕಲಿಯುಗದಲ್ಲಿ ಬಂದು ನೆಲೆಸಿದನು ಎಂದು ಹೇಳುತ್ತಾರೆ. ಆದರೆ ವಿಷ್ಣು ಪುರಾಣದ ಪ್ರಕಾರ, ಸ್ವಾಮಿಯು ಈ ತಿರುಮಲ ಬೆಟ್ಟದ ಮೇಲೆ ಎಷ್ಟೋ ಯುಗಗಳಿಗಿಂತ ಹಿಂದೆಯೇ ಬಂದು ಹೋಗುತ್ತಿದ್ದಾರೆ ಎಂದು ಪೀಠಾಧಿಪತಿಗಳು ಹೇಳುತ್ತಿದ್ದಾರೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ವೆಂಕಟೇಶ್ವರ ಸ್ವಾಮಿಯು ಕಲಿಯುಗಕ್ಕಿಂತ ಮುಂಚೆಯೇ ಏಕೆ ಬಂದ್ದಿದ್ದರು? ಎಂಬ ವಿಷಯಕ್ಕೆ ಉತ್ತರ ಇಲ್ಲಿದೆ. ತಿರುಮಲ ಬೆಟ್ಟ ಅಪಾರವಾದ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆಸಿರುವ ತಿರುಮಲ ಬೆಟ್ಟದಲ್ಲಿ ಆ ಸ್ವಾಮಿಯ ದೇವಾಲಯದ ಜೊತೆ ಜೊತೆಗೆ ಎಷ್ಟೊ ದೇವಾಲಯಗಳು, ಬೆಟ್ಟಗಳು, ಗುಹೆಗಳು ಇರುವ ಹಾಗೆ ತಿರುಮಲದ ಸ್ಥಳ ಪುರಾಣವು ಹೇಳುತ್ತದೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಆದರೆ ಅವುಗಳಲ್ಲಿ ಕೆಲವನ್ನು ಮಾತ್ರವೇ ನಾವು ನೋಡುತ್ತಿದ್ದೇವೆ. ಇನ್ನು ಅನೇಕ ಪ್ರದೇಶಗಳು, ನರ ಮಾನವರು ಹೋಗಲಾರದ ಬೆಟ್ಟಗಳು, ದೈವ ಕ್ಷೇತ್ರಗಳು ಆ ಬೆಟ್ಟದಲ್ಲಿ ಇವೆ ಎಂದು ಸಾಕ್ಷತ್ ಅಲ್ಲಿನ ಮಠಾಧಿಪತಿಗಳು ಹಾಗು ಪೀಠಧಿಪತಿಗಳು ಹೇಳುತ್ತಿದ್ದಾರೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಅಂತಹ ಪ್ರದೇಶಗಳಲ್ಲಿ ಒಂದು ವೈಕುಂಠ ಗುಹೆ. ಈ ಗುಹೆಯ ಕುರಿತು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಅಸಲಿಗೆ ಈ ವೈಕುಂಠ ಗುಹೆ ಏನು? ಆ ಗುಹೆಗೆ ಆ ಹೆಸರು ಏಕೆ ಬಂದಿತು? ಎಂಬ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕಾದರೆ ನಾವು ಒಮ್ಮೆ ಪುರಾಣವನ್ನು ಕೆದಕಲೇಬೇಕು.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ವೈಕುಂಠದಲ್ಲಿ ಆದಿಶೇಷನ ಮೇಲೆ ಮಲಗಿರುವ ಶ್ರೀ ಲಕ್ಷ್ಮೀ ಸಮೇತ ವಿಷ್ಣು ಮೂರ್ತಿ, ಈ ಸೃಷ್ಟಿ ಪ್ರಾರಂಭವಾದ ಮೊದಲ ಬಾರಿಗೆ ಒಮ್ಮೆ ಭೂಲೋಕ ವಿಹಾರಕ್ಕೆ ಬಂದರಂತೆ. ಹಾಗೇ ಆಕಾಶದಲ್ಲಿ ತನ್ನ ಗರುಡ ವಾಹನದ ಮೇಲೆ ವಿಹಾರ ಮಾಡುತ್ತಿರುವ ಸಂದರ್ಭದಲ್ಲಿ ಸ್ವಲ್ಪ ದಣಿವಾಗಿ, ವಿಶ್ರಾಂತಿಗಾಗಿ ಭೂಮಿಯ ಮೇಲೆ ಇಳಿದರಂತೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಹಾಗೆ ಆ ವಿಷ್ಣು ಸ್ವಾಮಿಯು ಕಾಲಿಟ್ಟ ಪ್ರದೇಶವು ಪ್ರಕೃತಿಯ ಸೊಬಗಿನಿಂದ ಕಂಗೊಳಿಸುತ್ತಿದ್ದ ವಾತಾವರಣವನ್ನು ಕಂಡು ಆಹ್ಲಾದಕರವಾಗಿದೆ ಎಂದು ಎನಿಸಿತಂತೆ. ಅಲ್ಲಿಯೇ ಸಮೀಪದಲ್ಲಿದ್ದ ಗುಹೆಯ ಒಳಗೆ ತೆರಳಿ ವಿಶ್ರಾಂತಿ ಪಡೆದನಂತೆ. ಅಂದಿನಿಂದ ಆ ಸ್ವಾಮಿಯು ವಿಶ್ರಾಂತಿಗಾಗಿ ಈ ತಿರುಮಲ ಬೆಟ್ಟದಲ್ಲಿರುವ ಆ ಗುಹೆಗೆ ಭೇಟಿ ನೀಡುತ್ತಿರುತ್ತಾನೆ ಎಂದು ಪಂಡಿತರು ಹೇಳುತ್ತಾರೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಅದು ಶ್ರೀ ಮಹಾವಿಷ್ಣು ವಿಶ್ರಾಂತಿ ಕೋರಿ ಬರುವ ಗುಹೆಯಾದ್ದರಿಂದ ಅದನ್ನು ವೈಕುಂಠ ಗುಹೆ ಎಂದು ಕರೆಯುತ್ತಾರೆ. ಈ ಗುಹೆಯು ಸಾಮಾನ್ಯ ಮಾನವರ ಕಣ್ಣಿಗೆ ಕಾಣಿಸುವುದಿಲ್ಲವಂತೆ. ಆ ಗುಹೆಯ ಸಮೀಪಕ್ಕೆ ಯಾರು ಹೋಗದಂತೆ ಮಹಾ ವಿಷ್ಣುವಿನ ರಕ್ಷಕ ಗಣವು (ಭಟರು) ಕಾವಲು ಕಾಯುತ್ತಾರಂತೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಆ ಪವಿತ್ರವಾದ ಸ್ಥಳಕ್ಕೆ ಪಾಪ ಮಾಡಿದವರು ಹೋಗುವ ಪ್ರಯತ್ನ ಮಾಡಿದರೆ ಮರಣ ತಪ್ಪಿದಲ್ಲ ಎನ್ನುತ್ತಾರೆ ಪೀಠಾಧಿಪತಿಗಳು. ಶ್ರೀ ಮಹಾವಿಷ್ಣುವಿಗೆ ಆ ತಿರುಮಲ ಬೆಟ್ಟದ ಸಂಬಂಧದಿಂದಲೇ ಕಲಿಯುಗದಲ್ಲಿ ವೆಂಕಟೇಶ್ವರ ಸ್ವಾಮಿಯಾಗಿ ನೆಲೆಸಿದನು ಎಂದು ಹೇಳುತ್ತಾರೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಈ ವೈಕುಂಠ ಗುಹೆಯ ಕುರಿತು ರಾಮಾಯಣದಲ್ಲಿಯು ಕೂಡ ಉಲ್ಲೇಖವಿದೆ. ಅದರ ಪ್ರಕಾರ ಶ್ರೀ ರಾಮಚಂದ್ರ ಮೂರ್ತಿ ಸೀತಾ ದೇವಿಯನ್ನು ಹುಡುಕುತ್ತಾ ಈ ತಿರುಮಲ ಬೆಟ್ಟಕ್ಕೆ ಸೇರಿಕೊಂಡನಂತೆ. ಅಲ್ಲಿಯೇ ಒಂದು ಆಶ್ರಮದಲ್ಲಿ ತಪಸ್ಸು ಮಾಡುತ್ತಿದ್ದ ಅಂಜನ ದೇವಿಗೆ ಶ್ರೀರಾಮನು ಬರುವುದರ ಬಗ್ಗೆ ತಿಳಿಯಂತೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಶ್ರೀ ರಾಮನ ಹತ್ತಿರಕ್ಕೆ ಹೋಗಿ ತನ್ನ ಆಶ್ರಮದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಕೇಳಿಕೊಂಡಳಂತೆ. ಅಂಜನ ದೇವಿಯ ಜೊತೆ ಜೊತೆಗೆ ಋಷಿ ಮುನಿಗಳು ಕೂಡ ಕೇಳಿಕೊಂಡ ಕಾರಣ ಶ್ರೀ ರಾಮನು ಅವರ ಮಾತನ್ನು ಬೇಡ ಎನ್ನಲಾರದೇ ಆ ಆಶ್ರಮದಲ್ಲಿ ವಿಶ್ರಾಂತಿ ತೆಗೆದುಕೊಂಡನಂತೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಆಗ ಕೆಲವು ಮಂದಿ ವಾನರರು ಬೆಟ್ಟವೆಲ್ಲಾ ಸುಮ್ಮನೆ ತಿರುಗುತ್ತಾ ಇರುವ ಸಮಯದಲ್ಲಿ ಅಲ್ಲಿನ ಒಂದು ಗುಹೆಯಲ್ಲಿ ಬೆಳಕನ್ನು ಬರುತ್ತಿದ್ದದ್ದನು ಗಮನಿಸಿ ಆ ಗುಹೆಯ ಒಳಗೆ ಹೋದರಂತೆ. ಆಗ ಶ್ರೀ ಮಹಾವಿಷ್ಣುವು ಆದಿ ಶೇಷನ ಮೇಲೆ ಮಲಗಿರುವುದನ್ನು ಕಂಡರಂತೆ. ಇಷ್ಟರಲ್ಲೇ ದಾಳಿ ಮಾಡಲು ಬಂದ ಕೆಲವರನ್ನು ಕಂಡು ವಾನರರು ಹೊರಗೆ ಓಡಿಹೋದರಂತೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಈ ವಿಷಯವನ್ನು ಉಳಿದ ವಾನರರಿಗೆ ಹೇಳಿದರಿಂದ ಮತ್ತೇ ವಾರನರೆಲ್ಲಾ ಆ ಪ್ರದೇಶಕ್ಕೆ ತೆರಳಿದರಂತೆ. ಅಲ್ಲಿ ಆ ಗುಹೆ ಇರಲಿಲ್ಲವಂತೆ. ಈ ವೃತ್ತಾಂತವೆಲ್ಲಾವನ್ನು ಆ ವಾನರು ಶ್ರೀ ರಾಮನಿಗೆ ಹೇಳಿದ್ದರಿಂದ ಆತನು ಯಾರು ಅಲ್ಲವೆಂದೂ ಸಾಕ್ಷತ್ ಶ್ರೀ ಮಹಾ ವಿಷ್ಣುವೆಂದೂ, ಆತನಿಗೆ ವಿಶ್ರಾಂತಿ ಬೇಕು ಎಂದಾಗ ಆ ಸ್ಥಳಕ್ಕೆ ಭೇಟಿ ನೀಡುತ್ತಾನೆ ಎಂದು ವಾನರರಿಗೆ ರಾಮ ಹೇಳಿದನಂತೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಈ ತಿರುಮಲ ಬೆಟ್ಟಕ್ಕೆ ಇಷ್ಟು ಮಹತ್ವ ಇರುವುದರಿಂದಲೇ ಸಮಸ್ತ ಭಕ್ತ ಜನರು ಆ ಬೆಟ್ಟವನ್ನು ಎಷ್ಟೋ ಭಕ್ತಿಯಿಂದ ಆರಾಧಿಸುತ್ತಾರೆ. ತಿರುಮಲ ಶಿಖರಗಳು, ಎಷ್ಟೋ ಮಹಿಮೆಗಳು, ಸಾಮಾನ್ಯ ಮಾನವರಿಗೆ ಎಟುಕದ ಎಷ್ಟೋ ರಹಸ್ಯಗಳನ್ನು ಹೊಂದಿದೆ ಎಂದು ನಮ್ಮ ಪುರಾಣಗಳು ಸ್ಪಷ್ಟವಾಗಿ ಹೇಳುತ್ತಿದೆ.

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...

ಹೇಗೆ ಸಾಗಬೇಕು?

ಬೆಂಗಳೂರಿನಿಂದ ತಿರುಮಲಕ್ಕೆ ಸುಮಾರು 267 ಕಿ.ಮೀ ದೂರದಲ್ಲಿದ್ದು, ಹಲವಾರು ಖಾಸಗಿ, ಸರ್ಕಾರಿ ಬಸ್ಸುಗಳ ವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ಸಾಕಷ್ಟು ರೈಲುಗಳು ತಿರುಪತಿಗೆ ಇವೆ. ಹಾಗಾಗಿ ಸುಲಭವಾಗಿ ತಿರುಮಲಕ್ಕೆ ತಲುಪಬಹುದಾಗಿದೆ.

ತಿರುಮಲದಲ್ಲಿದೆ ಬಂಗಾರದ ಬಾವಿ !ತಿರುಮಲದಲ್ಲಿದೆ ಬಂಗಾರದ ಬಾವಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X