Search
  • Follow NativePlanet
Share
» »ಕ್ಷೀರವು ನೀಲಿ ಬಣ್ಣವಾಗಿ ಪರಿರ್ವತನೆಯಾಗುವ ಮಹಿಮಾನ್ವಿತವಾದ ರಾಹು ದೇವಾಲಯ

ಕ್ಷೀರವು ನೀಲಿ ಬಣ್ಣವಾಗಿ ಪರಿರ್ವತನೆಯಾಗುವ ಮಹಿಮಾನ್ವಿತವಾದ ರಾಹು ದೇವಾಲಯ

ಮಾನವ ಜಾತಕದಲ್ಲಿ ಹಲವಾರು ದೋಷಗಳನ್ನು ಕಾಣಬಹುದು. ಅದು ರಾಹು ದೋಷವೇ ಆಗಿರಬಹುದು ಅಥವಾ ಕೇತು ದೋಷವೇ ಆಗಿರಬಹುದು. ಮುಖ್ಯವಾಗಿ ಸರ್ಪಗಳ ದೋಷವೆಂಬುದು ಪ್ರತಿಯೊಬ್ಬರ ಜಾತಕದಲ್ಲಿಯೂ ಇದ್ದೇ ಇರುತ್ತದೆ. ಇದರಿಂದ ವಿವಾಹ ತಡವಾಗುವುದು, ಸಂತಾನ ಭಾಗ್ಯ ಲ

ಮಾನವ ಜಾತಕದಲ್ಲಿ ಹಲವಾರು ದೋಷಗಳನ್ನು ಕಾಣಬಹುದು. ಅದು ರಾಹು ದೋಷವೇ ಆಗಿರಬಹುದು ಅಥವಾ ಕೇತು ದೋಷವೇ ಆಗಿರಬಹುದು. ಮುಖ್ಯವಾಗಿ ಸರ್ಪಗಳ ದೋಷವೆಂಬುದು ಪ್ರತಿಯೊಬ್ಬರ ಜಾತಕದಲ್ಲಿಯೂ ಇದ್ದೇ ಇರುತ್ತದೆ. ಇದರಿಂದ ವಿವಾಹ ತಡವಾಗುವುದು, ಸಂತಾನ ಭಾಗ್ಯ ಲಭಿಸದೇ ಇರುವುದು, ಉದ್ಯೋಗದ ತೊಂದರೆ, ಅಶಾಂತಿ ಇನ್ನು ಹಲವಾರು ಜೀವನದಲ್ಲಿ ಅಡೆ-ತಡೆಗಳು ಉಂಟು ಮಾಡುತ್ತಿರುತ್ತವೆ. ಇದನ್ನು ದೂರ ಮಾಡಿಕೊಳ್ಳಬೇಕು ಎಂದರೆ ಜಾತಕದಲ್ಲಿನ ಕೆಲವು ದೋಷಗಳನ್ನು ಪರಿಹಾರ ಮಾಡಿಕೊಳ್ಳುವುದೇ ಇದಕ್ಕೆ ಸೂಕ್ತವಾದ ಪರಿಹಾರವಾಗಿರುತ್ತದೆ.

ನಮ್ಮ ದಕ್ಷಿಣ ಭಾರತದಲ್ಲಿ ಹಲವಾರು ಸರ್ಪಗಳಿಗೆ ಸಂಬಂಧಿಸಿದಂತೆ ತೀರ್ಥಕ್ಷೇತ್ರಗಳು ಇವೆ. ಈ ಎಲ್ಲಾ ದೇವಾಲಯಗಳು ನಮ್ಮ ನಮ್ಮ ಸರ್ಪದೋಷಗಳನ್ನು ದೂರವಾಗಿಸುತ್ತವೆ. ಹಾಗೆಯೇ ಈ ದೇವಾಲಯದಲ್ಲಿ ಎಲ್ಲಾ ದೇವಾಲಯಗಳಿಗಿಂತ ವಿಭಿನ್ನವಾಗಿ ರಾಹು ಸ್ವಾಮಿಯು ತನ್ನ ಸರ್ಪ ರೂಪದಲ್ಲಿ ಅಲ್ಲದೇ ಮಾನವ ರೂಪದಲ್ಲಿ ದರ್ಶನ ನೀಡುವುದು ಇಲ್ಲಿನ ವಿಶೇಷವಾಗಿದೆ. ಇಲ್ಲಿನ ಸ್ವಾಮಿಯು ಅತ್ಯಂತ ಶಕ್ತಿವಂತನಾಗಿದ್ದು ಹಲವಾರು ದೋಷಗಳನ್ನು ಪರಿಹಾರ ಮಾಡುವ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಪ್ರಸ್ತುತ ಲೇಖನದಲ್ಲಿ ಅತ್ಯಂತ ಮಹಿಮಾನ್ವಿತವಾದ ರಾಹು ದೇವಾಲಯ ಎಲ್ಲಿದೆ? ರಾಹು ದೋಷವನ್ನು ಬಗೆಹರಿಸಿಕೊಳ್ಳಲು ಏನು ಮಾಡಬೇಕು? ಎಂಬ ಹಲವಾರು ಮಾಹಿತಿಯನ್ನು ಲೇಖನದ ಮೂಲಕ ತಿಳಿದುಕೊಳ್ಳೋಣ.

ಎಲ್ಲಿದೆ?

ಎಲ್ಲಿದೆ?

ಈ ಮಾಹಿಮಾನ್ವಿತವಾದ ರಾಹು ದೇವಾಲಯವು ಭಾರತದ ತಮಿಳುನಾಡು ರಾಜ್ಯದಲ್ಲಿನ ತಂಜಾವೂರು ಜಿಲ್ಲೆಯ ಒಂದು ಪಂಚಾಯತ್ ಪಟ್ಟಣದಲ್ಲಿದೆ. ಆ ದೇವಾಲಯದ ಹೆಸರು ತಿರುನಾಗೇಶ್ವರ ಅಥವಾ ತಿರುಲಿಂಗೇಶ್ವರ ದೇವಾಲಯವಾಗಿದ್ದು, ಕುಂಭಕೋಣಂನಿಂದ ಕೇವಲ 8 ಕಿ.ಮೀ ದೂರದಲ್ಲಿದೆ.

ಮಾನವ ರೂಪವಾಗಿ ದರ್ಶನ ಭಾಗ್ಯ

ಮಾನವ ರೂಪವಾಗಿ ದರ್ಶನ ಭಾಗ್ಯ

ಈ ತಿರುನಾಗೇಶ್ವರ ದೇವಾಲಯದಲ್ಲಿ ಪ್ರಧಾನವಾದ ದೇವರು ಎಂದರೆ ಅದು ಮಹಾಶಿವ. ಇಲ್ಲಿ ಶಿವನು ಪಾರ್ವತಿ ದೇವಿಯೊಂದಿಗೆ ದರ್ಶನವನ್ನು ನೀಡುತ್ತಾನೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯದಲ್ಲಿ ಮಾನವ ರೂಪವಾಗಿ ರಾಹು ಸ್ವಾಮಿಯು ದರ್ಶನವನ್ನು ನೀಡುವುದು.

ಜಾತಕದ ದೋಷಗಳು

ಜಾತಕದ ದೋಷಗಳು

ಜಾತಕದಲ್ಲಿ ರಾಹು ಗ್ರಹದ ದುಷ್ ಪ್ರಭಾವಗಳು ಹೆಚ್ಚಾಗಿದ್ದರೆ ಅವರ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುವಂತೆ ಮಾಡುತ್ತದೆ. ಹೀಗಾಗಿ ನಾಗನಾಥೇಶ್ವೆರ ಅಥವಾ ತಿರುನಾಗೇಶ್ವರ ದೇವಾಲಯಕ್ಕೆ ತೆರಳಿ ಪೂಜಿಸಿದರೆ ತಮ್ಮ ಎಲ್ಲಾ ದೋಷಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.

ಸರ್ಪದೋಷ ಹಾಗು ಮೂರ್ಛೆ ರೋಗ

ಸರ್ಪದೋಷ ಹಾಗು ಮೂರ್ಛೆ ರೋಗ

ಮುಖ್ಯವಾಗಿ ಸರ್ಪದೋಷಗಳಿಂದ ನೊಂದವರು, ಮೂರ್ಛೆಗಳಂತಹ ವ್ಯಾಧಿಯಿಂದ ಬಳಲುತ್ತಿರುವವರು ಈ ದೇವಾಲಯಕ್ಕೆ ಭೇಟಿ ನೀಡಿ ಒಂದು ದಿನ ರಾತ್ರಿ ನಿದ್ರಿಸಿ, ಮರುದಿನ ಬೆಳಗ್ಗೆ ಸ್ವಾಮಿಯನ್ನು ಅಭಿಷೇಕ ಮಾಡಿದರೆ ಅವರಿಗೆ ಸರ್ಪಬಾಧೆಗಳಿಂದ ಶಾಶ್ವತ ವಿಮುಕ್ತಿ ದೊರೆಯುತ್ತದೆ ಎಂತೆ.

ದೇವಾಲಯದ ಪ್ರಧಾನವಾದ ಅಂಶ

ದೇವಾಲಯದ ಪ್ರಧಾನವಾದ ಅಂಶ

ಈ ದೇವಾಲಯದ ಪ್ರಧಾನವಾದ ಅಂಶ ಯಾವುದು ಎಂದರೆ ರಾಹುವಿಗೆ ಮಾಡುವ ಕ್ಷೀರಾಭಿಷೇಕ. ರಾಹುವಿಗೆ ಸಂಬಂಧಿಸಿದ ಈ ದೇವಾಲಯವು ತಮಿಳು ನಾಡಿನ 9 ನವಗ್ರಹಾಲಯಗಳಲ್ಲಿ ಇದು ಕೂಡ ಒಂದು. ಇಲ್ಲಿ ರಾಹು ದೇವನು ತನ್ನ ಇಬ್ಬರು ಪತ್ನಿಯರಾದ ನಾಗಕನ್ನಿ ಮತ್ತು ನಾಗವಲ್ಲಿರ ಜೊತೆ ನೆಲೆಸಿದ್ದಾನೆ.

ಶಾಪ ವಿಮುಕ್ತಿ

ಶಾಪ ವಿಮುಕ್ತಿ

ರಾಹುವು ಶಾಪದಿಂದ ವಿಮುಕ್ತಿ ಪಡೆಯಲು ಈ ದೇವಾಲಯದಲ್ಲಿರುವ ಶಿವಲಿಂಗವನ್ನು ಪೂಜಿಸಿದನಂತೆ. ಇತರ ದೇವಾಲಯಗಳಲ್ಲಿ ರಾಹುವು ಸರ್ಪ ಮುಖವನ್ನು ಹೊಂದಿದ್ದರೆ ಈ ಪ್ರತ್ಯೇಕವಾದ ದೇವಾಲಯದಲ್ಲಿ ಮಾತ್ರ ಮಾನವ ಮುಖವನ್ನು ಹೊಂದಿರುವುದು ಇಲ್ಲಿನ ವಿಶೇಷತೆಯಾಗಿದೆ.

ಕ್ಷೀರಾಭಿಷೇಕ

ಕ್ಷೀರಾಭಿಷೇಕ

ಈ ಮೊದಲೇ ಹೇಳಿದಂತೆ ಈ ದೇವಾಲಯದಲ್ಲಿ ರಾಹುವಿಗೆ ಮಾಡುವ ಕ್ಷೀರಾಭಿಷೇಕವು ಅತ್ಯಂತ ವಿಶೇಷವಾದುದು. ರಾಹು ಸ್ವಾಮಿಗೆ ಕ್ಷೀರಾಭಿಷೇಕ ಮಾಡುವ ಸಮಯದಲ್ಲಿ ಹಾಲು ನೀಲಿ ಬಣ್ಣಕ್ಕೆ ತಿರುಗುವುದು ಪ್ರತಿಯೊಬ್ಬ ಭಕ್ತರಿಗೆ ಆಶ್ಚರ್ಯಗೊಳ್ಳುವಂತೆ ಮಾಡದೇ ಇರದು. ರಾಹುಕಾಲದಲ್ಲಿ ರಾಹುದೇವನಿಗೆ ಕ್ಷೀರಾಭಿಷೇಕ ಮಾಡುವ ಸಮಯದಲ್ಲಿ ಈ ವಿಸ್ಮಯ ನಡೆಯುತ್ತದೆ.

ಮಾಹಿಮಾನ್ವಿತ

ಮಾಹಿಮಾನ್ವಿತ

ಹಾಗಾಗಿ ಆನೇಕ ಮಂದಿ ತಮ್ಮ ತಮ್ಮ ಸರ್ಪದೋಷಗಳನ್ನು, ಜೀವನದಲ್ಲಿರುವ ಅಡ್ಡಿ-ಆಂತಕಗಳನ್ನು, ಕಷ್ಟಗಳನ್ನು ತೊಲಗಿಸಿಕೊಳ್ಳಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮುಖ್ಯವಾಗಿ ಮೂರ್ಛೆ ರೋಗದಿಂದ ಬಳಲುತ್ತಿರುವವರು ಕೂಡ ರಾಹು ಸ್ವಾಮಿಗೆ ಕ್ಷೀರಾಭಿಷೇಕವನ್ನು ಮಾಡಿದರೆ ಅವರಿಗೆ ಆ ವ್ಯಾಧಿಯಿಂದ ವಿಮುಕ್ತಿಯಾಗುತ್ತದೆ ಎಂದು ನಂಬಲಾಗುತ್ತದೆ.

ನವಗ್ರಹ ದೇವಾಲಯಗಳು

ನವಗ್ರಹ ದೇವಾಲಯಗಳು

ತಿರುನಾಗೇಶ್ವರದಲ್ಲಿ ರಾಹು ದೇವನೇ ಅಲ್ಲದೇ ದೇವಾಲಯದ ಸುತ್ತ-ಮುತ್ತ 8 ನವಗ್ರಹ ಸ್ಥಳಗಳು ಕೂಡ ಇವೆ. ತಿರುನಲ್ಲಾರ್‍ನಲ್ಲಿ ಶನಿ ಗ್ರಹ, ಖಂಜನೂರಿನಲ್ಲಿ ಶುಕ್ರ ಗ್ರಹ, ಸೂರ್ಯನಾರ್ ಕೋಯೆಲ್‍ನಲ್ಲಿ ಸೂರ್ಯಗ್ರಹಂ, ತಿರುವೆಂಕಟ್ ಎಂಬ ಪ್ರದೇಶದಲ್ಲಿ ಬುಧ ಗ್ರಹ, ತಿಂಗಳೂರುನಲ್ಲಿ ಚಂದ್ರ ಗ್ರಹ, ಕಿಜರೋಮ್ ಪಲ್ಲರ್ ಕೇತು ಗ್ರಹ, ಆಲಂಗುಡಿಯಲ್ಲಿ ಗುರು ಗ್ರಹವು, ವೈದೀಶ್ವರ ದೇವಾಲಯದಲ್ಲಿ ಅಂಗಾರಕ ಈ ಎಲ್ಲಾ ನವಗ್ರಹ ದೇವಾಲಯಗಳು ತಿರುನಾಗೇಶ್ವರ ದೇವಾಲಯಕ್ಕೆ ಸಮೀಪದಲ್ಲಿಯೇ ಇದೆ.

ಸೂರ್ಯನಾರ್ ಕೋಯೆಲ್, ತಿರುಮಂಗಳ ಕುಡಿ

ಸೂರ್ಯನಾರ್ ಕೋಯೆಲ್, ತಿರುಮಂಗಳ ಕುಡಿ

ತಮಿಳುನಾಡಿನ ತಂಜಾವೂರ್ ಜಿಲ್ಲೆಯಲ್ಲಿ ಕುಂಭಕೋಣಂನಿಂದ 15 ಕಿ.ಮೀ ದೂರದಲ್ಲಿದೆ. ಇಲ್ಲಿ ಸೂರ್ಯದೇವನು ಉಷಾ-ಛಾಯರೊಂದಿಗೆ ಭಕ್ತರಿಗೆ ದರ್ಶನವನ್ನು ನೀಡುತ್ತಾನೆ. ಈ ದೇವಾಲಯವು ಅತ್ಯಂತ ಪ್ರಾಚೀನವಾದ ದೇವಾಲಯವಾಗಿದೆ. ದೇವಾಲಯದಲ್ಲಿನ ಸೂರ್ಯದೇವನಿಗೆ ತಾವರೆ ಪುಷ್ಪಗಳಿಂದ ಪೂಜೆಯನ್ನು ಮಾಡುವುದು ವಿಶೇಷ. ಪೂಜೆಯ ನಂತರ ದೇವಾಲಯದ ಸುತ್ತ 9 ಬಾರಿ ಪ್ರದಕ್ಷಿಣೆ ಮಾಡಿದರೆ ಆರ್ಯುರಾರೋಗ್ಯವನ್ನು ವರವಾಗಿ ಇಲ್ಲಿನ ಸೂರ್ಯದೇವ ನೀಡುತ್ತಾನೆ ಎಂದೂ ಇಲ್ಲಿನ ಭಕ್ತರ ನಂಬಿಕೆಯಾಗಿದೆ.

ಚಂದ್ರಗ್ರಹ ದೇವಾಲಯ

ಚಂದ್ರಗ್ರಹ ದೇವಾಲಯ

ತಿರುವೈಯಾರ್‍ನಿಂದ 5 ಕಿ.ಮೀ ದೂರದಲ್ಲಿ ಚಂದ್ರಗ್ರಹ ದೇವಾಲಯವಿದೆ. ಈ ಚಂದ್ರ ದೇವಾಲಯದಲ್ಲಿ ಚಂದ್ರ ದೇವನ ದರ್ಶನವು ಸುಖವನ್ನು. ದೀರ್ಘವಾದ ಆಯಸ್ಸನ್ನು ಪ್ರಸಾಧಿಸುತ್ತಾನೆ ಎಂದು ಭಕ್ತರ ನಂಬಿಕೆಯಾಗಿದೆ. ಇಷ್ಟೇ ಅಲ್ಲದೇ ಮನಶಾಂತಿಯನ್ನು ಕೂಡ ಚಂದ್ರ ದೇವನು ನೀಡುತ್ತಾನೆ.

ಕುಜಗ್ರಹ ದೇವಾಲಯ

ಕುಜಗ್ರಹ ದೇವಾಲಯ

ಕುಜಗ್ರಹ ದೇವಾಲಯವು ಕೂಡ ತಿರುವೈಯಾರ್‍ನಿಂದ 6 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ಇಲ್ಲಿ ಕುಜದೇವನು ಆನೇಕ ವ್ಯಾಧಿಗಳನ್ನು ಗುಣಪಡಿಸುತ್ತಾನೆ ಎಂಬುದು ಭಕ್ತರ ಪ್ರಬಲವಾದ ನಂಬಿಕೆಯಾಗಿದೆ. ಈ ಅಂಗಾರಕ ದೇವಾಲಯವನ್ನು ದರ್ಶನ ಮಾಡಿದರೆ ಶೀಘ್ರವಾಗಿ ವಿವಾಹವಾಗುತ್ತದೆ ಎಂದು ಭಕ್ತರು ಹೇಳುತ್ತಾರೆ.

ಬುಧಗ್ರಹ ದೇವಾಲಯ, ತಿರುವನೇಡು

ಬುಧಗ್ರಹ ದೇವಾಲಯ, ತಿರುವನೇಡು

ಕುಜಗ್ರಹ ದೇವಾಲಯದಿಂದ ಕೇವಲ 10 ಕಿ.ಮೀ ದೂರದಲ್ಲಿ ಬುಧಗ್ರಹ ದೇವಾಲಯವಿದೆ. ಈ ದೇವಾಲಯದ ಬಗ್ಗೆ ರಾಮಾಯಣದಲ್ಲಿ ಪ್ರಸ್ತಾವನೆ ಕೂಡ ಇದೆ.

ಗುರುಗ್ರಹ ದೇವಾಲಯ, ಅಲಂಗುಡಿ

ಗುರುಗ್ರಹ ದೇವಾಲಯ, ಅಲಂಗುಡಿ

ಕುಂಭಕೋಣಂದಿಂದ 18 ಕಿ.ಮೀ ದೂರದಲ್ಲಿದೆ. ಈ ದೇವಾಲಯವನ್ನು "ಗುರುದಕ್ಷಿಣ ಮೂರ್ತಿ ದೇವಾಲಯ" ಎಂದೂ ಕೂಡ ಕರೆಯುತ್ತಾರೆ. ಇದು ತಮಿಳುನಾಡಿನಲ್ಲಿ ಅತ್ಯಂತ ಪ್ರಖ್ಯಾತತೆ ಪಡೆದ ಕ್ಷೇತ್ರವಾಗಿದೆ. ಗುರುಗ್ರಹ ದೋಷಗಳನ್ನು ಹೊಂದಿರುವವರು ಆಲಂಗುಡಿ ದಕ್ಷಿಣ ಮೂರ್ತಿ ದೇವಾಲಯದ ಸುತ್ತಲೂ 24 ಪ್ರದಕ್ಷಿಣೆಯನ್ನು ಹಾಕಿ, 24 ದೀಪಗಳನ್ನು ಭಕ್ತಿಯಿಂದ ಬೆಳಗಿಸಿದವರಿಗೆ ಗುರುಗ್ರಹ ದೋಷಗಳು ತೊಲಗಿ ಅಭಿವೃದ್ಧಿಯಾಗುತ್ತದೆ ಎಂತೆ.

ಶುಕ್ರ ಗ್ರಹ ದೇವಾಲಯ

ಶುಕ್ರ ಗ್ರಹ ದೇವಾಲಯ

ಕಾಮನ್‍ಚ್ ಕೂರ್‍ನಿಂದ 3 ಕಿ.ಮೀ ದೂರದಲ್ಲಿರುತ್ತದೆ. ಈ ದೇವಾಲಯಕ್ಕೆ ಪಾಲ ಶವನಂ, ಬ್ರಹ್ಮಪರಿ, ಅಗ್ನಿಸ್ಥಳ ಎಂಬ ಹೆಸರುಗಳು ಕೂಡ ಇವೆ. ತಮ್ಮ ಪತ್ನಿಯರ ಆರೋಗ್ಯಕ್ಕಾಗಿ ಭಕ್ತರು ಪೂಜೆಗಳನ್ನು ಈ ದೇವಾಲಯದಲ್ಲಿ ಮಾಡುತ್ತಾರೆ.

ಶನಿಗ್ರಹ ದೇವಾಲಯ. ತಿರುನೆಲ್ಲಾರ್

ಶನಿಗ್ರಹ ದೇವಾಲಯ. ತಿರುನೆಲ್ಲಾರ್

ಇದು ಕುಂಭಕೋಣಂನಿಂದ 53 ಕಿ.ಮೀ ದೂರದಲ್ಲಿದೆ. ಇಲ್ಲಿನ ನದಿ ತೀರ್ಥದಲ್ಲಿ ಸ್ನಾನ ಮಾಡಿದರೆ ಸರ್ವ ಪಾಪಗಳು ತೊಲಗಿಹೋಗುತ್ತದೆ ಎಂತೆ. ಈ ದೇವಾಲಯದಲ್ಲಿ ನೆಲೆಸಿರುವ ಸ್ವಾಮಿಯ ಹೆಸರು ದರ್ಬರಣ್ಯೇಶ್ವರ. ಈ ಸ್ವಾಮಿಗೆ ಗರಿಕೆ ಎಂದರೆ ಅತ್ಯಂತ ಪ್ರೀತಿಯವಂತೆ. ಹಾಗಾಗಿಯೇ ಈ ಗರಿಕೆಯನ್ನು ಅತ್ಯಂತ ಪವಿತ್ರವಾದುದು ಎಂದು ಭಾವಿಸುತ್ತಾರೆ. ಹೀಗಾಗಿ ಸ್ವಾಮಿಯನ್ನು ಗರಿಕೆಯ ಅಧಿಪತಿ ಎಂದು ಕೂಡ ಕರೆಯುತ್ತಾರೆ.

ದೇವಾಲಯದ ಪ್ರವೇಶ

ದೇವಾಲಯದ ಪ್ರವೇಶ

ಈ ಮಾಹಿಮಾನ್ವಿತವಾದ ದೇವಾಲಯವನ್ನು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವೆರೆಗೆ ಹಾಗು ಸಂಜೆ 4 ಗಂಟೆಯಿಂದ ರಾತ್ರಿ 8:30 ವರೆಗೆ ಭಕ್ತರಿಗೆ ಪ್ರವೇಶವನ್ನು ನೀಡಲಾಗುತ್ತದೆ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ತಿರುನಾಗಲಿಂಗೇಶ್ವರಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ತಿರುಚುನಾಪಲ್ಲಿ. ಇಲ್ಲಿಂದ ದೇವಾಲಯಕ್ಕೆ ಸುಮಾರು 109 ಕಿ.ಮೀ ದೂರದಲ್ಲಿದೆ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ಈ ದೇವಾಲಯಕ್ಕೆ ತೆರಳಲು ಸುಲಭವಾದ ಸಾರಿಗೆ ಸಂಪರ್ಕವಿದೆ. ತಮಿಳುನಾಡಿನ ಕುಂಭಕೋಣಂನಿಂದ ಕರಾಕೈಲ್‍ಗೆ ನೇರವಾದ ಬಸ್ಸುಗಳು ಇವೆ. ಇಲ್ಲಿಂದ ದೇವಾಲಯವೂ ಕೇವಲ 7 ಕಿ.ಮೀ ದೂರದಲ್ಲಿದೆ.

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ಮುಖ್ಯವಾಗಿ ಈ ದೇವಾಲಯಕ್ಕೆ ತೆರಳವವರು ಪ್ಯಾಸೆಂಜರ್ ಟ್ರೈನ್ ಅನ್ನು ಹತ್ತಬೇಕು. ತಂಬಾರಂನಿಂದ ಕುಂಭಕೋಣಂ ಮತ್ತು ಕುಂಭಕೋಣಂನಿಂದ ಮೈಲಾದುತುರೈ. ದಕ್ಷಿಣ ಭಾರತದ ಎಲ್ಲಾ ಮುಖ್ಯವಾದ ನಗರಗಳಿಂದ ಕುಂಭಕೋಣಂಗೆ ರೈಲ್ವೆ ಸಂಪರ್ಕ ಸಾಧಿಸುತ್ತವೆ.

<strong>ತಿರುನಲ್ಲಾರ್‍ನ ಶನೇಶ್ವರ ದೇವಾಲಯ: ಸೈನ್ಸ್‍ಗೆ ಸವಾಲ್!!</strong>ತಿರುನಲ್ಲಾರ್‍ನ ಶನೇಶ್ವರ ದೇವಾಲಯ: ಸೈನ್ಸ್‍ಗೆ ಸವಾಲ್!!

ಶಿವನಿಗೆ ಮೀನಿನ ಸಾರನ್ನು ನೈವೇದ್ಯವಾಗಿ ನೀಡುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?ಶಿವನಿಗೆ ಮೀನಿನ ಸಾರನ್ನು ನೈವೇದ್ಯವಾಗಿ ನೀಡುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

<strong></strong>ಮದುವೆಯಲ್ಲಿ ವಿಳಂಬವೇ ಹಾಗಾದರೆ ಈ ದೇವಾಲಯಕ್ಕೆ ತೆರಳಿಮದುವೆಯಲ್ಲಿ ವಿಳಂಬವೇ ಹಾಗಾದರೆ ಈ ದೇವಾಲಯಕ್ಕೆ ತೆರಳಿ

ಪ್ರೀತಿಸದವರನ್ನೇ ಸಿಗುವಂತೆ ಮಾಡುವ ದೇವಾಲಯವಿದು!ಪ್ರೀತಿಸದವರನ್ನೇ ಸಿಗುವಂತೆ ಮಾಡುವ ದೇವಾಲಯವಿದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X