Search
  • Follow NativePlanet
Share
» »ಕಲಿಯುಗದಲ್ಲಿ ವಿಷ್ಣುವಿನ ಉಪದೇಶ ಪಡೆದ ಸ್ಥಳ!

ಕಲಿಯುಗದಲ್ಲಿ ವಿಷ್ಣುವಿನ ಉಪದೇಶ ಪಡೆದ ಸ್ಥಳ!

By Vijay

ಏನು?ಲಿಯುಗದಲ್ಲಿ ಉಪದೇಶ ನೀಡುತ್ತದೆಯೆ ಈ ಸ್ಥಳ ಎಂದು ಚಕಿತರಾಗಬೇಡಿ. ಈ ಸ್ಥಳ ಹಾಗೂ ದೇವಾಲಯಕ್ಕೆ ಸಂಬಂಧಿಸಿದಂತೆ ಮೇಲಿನ ಶಿರ್ಷಿಕೆಯನ್ನು ಪುಷ್ಟಿಕರಿಸುವ ಕಥೆಯೊಂದು ಇದಕ್ಕೆ ಪೂರಕವಾಗಿದೆ. ಪ್ರಸ್ತುತ ಲೇಖನದ ಮೂಲಕ ಆ ಸ್ಥಳ ಯಾವುದು ಹಾಗೂ ಈ ದೇವಾಲಯ ಯಾವುದು ಎಂಬುದರ ಕುರಿತು ತಿಳಿಯಿರಿ.

ಬೆಳಿಗ್ಗೆ ಕೇರಳ ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ದೇವಿ!

ಇದು ಕೇರಳದಲ್ಲಿರುವ ದೇವಾಲಯವಾಗಿದ್ದು ವಿಷ್ಣು ದೇವರಿಗೆ ಮುಡಿಪಾದ ದೇವಸ್ಥಾನವಾಗಿದೆ. ಇನ್ನೊಂದು ನಂಬಿಕೆಯ ಕಥೆಯೊಂದು ಈ ದೇವಾಲಯದೊಂದಿಗೆ ನಂಟು ಹೊಂದಿದ್ದು ಅದರ ಪ್ರಕಾರವಾಗಿ ಇದು ರಾಮನ ಸಹೋದರನಾದ ಲಕ್ಷ್ಂಅಣನಿಗೂ ಸಹ ಮುಡಿಪಾದ ದೇವಾಲಯವಾಗಿದೆಯಂತೆ!

ಹರೀತಾ ಮಹರ್ಷಿ

ಹರೀತಾ ಮಹರ್ಷಿ

ಹಿಂದೆ ಹರೀತಾ ಮಹರ್ಷಿಯೆಂಬುವವರು ಈ ಸ್ಥಳದಲ್ಲಿ ವಾಸವಿದ್ದರು. ಕಲಿಯುಗ ಆಗಷ್ಟೆ ಪ್ರಾರಂಭವಾಗಿದ್ದ ಸಮಯವದು. ಎಲ್ಲೆಲ್ಲೂ ಸಾಕಷ್ಟು ದುಷ್ಟ ಕೃತ್ಯಗಳು, ಮೋಸ ವಂಚನೆಗಳು, ಜೀವನ ನಡೆಸಲು ಜನರು ಒದ್ದಾಡುತ್ತಿರುವುದನ್ನು ಕಂಡು ಋಷಿಗಳಿಗೆ ಬಹಳವೆ ಬೇಸರ ಹಾಗೂ ದುಖವಾಗಿತ್ತು.

ಚಿತ್ರಕೃಪೆ: Santoshknambiar

ವಿಷ್ಣುವಿನ ಕುರಿತು

ವಿಷ್ಣುವಿನ ಕುರಿತು

ಪ್ರತಿಯೊಬ್ಬರೂ ಈ ಕಲಿಯುಗದಲ್ಲಿ ಯಾವ ರೀತಿ ಜೀವನವನ್ನು ಉತ್ತಮವಾಗಿ ನಡೆಸಬೇಕೆಂಬುದರ ಕುರಿತು ಯೋಚಿಸತೊಡಗಿದರು ಹಾಗೂ ಅದರಂತೆ ಈ ವಿಚಾರವನ್ನು ವಿಷ್ಣುವಿನೊಂದಿಗೆಯೆ ಚರ್ಚಿಸಲು ಬಯಸಿ ವಿಷ್ಣುವಿನ ಕುರಿತು ಕಠಿಣ ತಪಸ್ಸು ಮಾಡಿದರು.

ಚಿತ್ರಕೃಪೆ: Santoshknambiar

ಉಪದೇಶ ನೀಡಿದ

ಉಪದೇಶ ನೀಡಿದ

ಅವರ ತಪಸ್ಸಿಗೆ ಮೆಚ್ಚಿದ ವಿಷ್ಣು ಅವರ ಮುಂದೆ ಪ್ರತ್ಯಕ್ಷನಾಗಿ ಅವರ ಮನದಲ್ಲಿದ್ದ ಗೊಂದಲವನ್ನರಿತು ಅವರಿಗೆ ಕಲಿಯುಗದಲ್ಲಿ ಸೂಕ್ತವಾದ ಕೆಲವು ಧರ್ಮೋಪದೇಶಗಳನ್ನು ನೀಡಿದನು. ಇದನ್ನು ತಿರು ಮುಳಿ ಎಂದು ಕರೆಯಲಾಗುತ್ತದೆ. ಮಲಯಾಳಂನಲ್ಲಿ ತಿರು ಎಂದರೆ ಪವಿತ್ರ ಎಂತಲೂ ಮುಳಿ ಎಂದರೆ ಧ್ವನಿ ಅಥವಾ ನುಡಿಗಳೆಂತಲೂ ಅರ್ಥೈಸಬಹುದಾಗಿದೆ.

ಚಿತ್ರಕೃಪೆ: Ssriram mt

ಧರ್ಮೋಪದೇಶ

ಧರ್ಮೋಪದೇಶ

ಹೀಗೆ ಈ ರೀತಿಯಾಗಿ ವಿಷ್ಣು ಕಲಿಯುಗದಲ್ಲಿ ಹೇಗೆ ಜೀವಿಸಬೇಕು, ಹೇಗೆ ಧರ್ಮಾಚರಣೆಯನ್ನು ಮಾಡಬೇಕೆಂಬುದರ ಕುರಿತು ಈ ಸ್ಥಳದಲ್ಲಿ ಉಪದೇಶ ನೀಡಿದನೆನ್ನಲಾಗಿದೆ.

ಚಿತ್ರಕೃಪೆ: Ssriram mt

ಆಯಿತು ತಿರುಮುಳಿಕ್ಕುಲಂ

ಆಯಿತು ತಿರುಮುಳಿಕ್ಕುಲಂ

ಹೀಗಾಗಿ ಈ ಸ್ಥಳವು ತಿರು ಮುಳಿ ಕಲಂ (ಕಲಂ ಎಂದರೆ ಸ್ಥಳ ಎಂದರ್ಥ) ತಿರುಮುಳಿಕಲಂ ಆಗಿ ಕಾಲ ಕಳೆದಂತೆ ಹೆಸರಲ್ಲಿ ಕೊಂಚ ಬದಲಾವಣೆಯಾಗಿ ಇಂದು ತಿರುಮುಳಿಕ್ಕುಲಂ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ.

ಚಿತ್ರಕೃಪೆ: Ssriram mt

ಲಕ್ಷ್ಮಣ ಪೆರುಮಾಳ್

ಲಕ್ಷ್ಮಣ ಪೆರುಮಾಳ್

ತಿರುಮುಳಿಕ್ಕುಲಂನಲ್ಲಿರುವ ಈ ದೇವಾಲಯವು ತಿರುಮುಳಿಕ್ಕುಲಂ ಲಕ್ಷ್ಮಣ ಪೆರುಮಾಳ್ ದೇವಾಲಯ ಎಂದು ಕರೆಯಲ್ಪಡುತ್ತದೆ. ಇಲ್ಲಿ ಲಕ್ಷ್ಮಣ ಹಾಗೂ ವಿಷ್ಣು ದೇವರನ್ನು ಆರಾಧಿಸಲಾಗುತ್ತದೆ. ಹಾಗಾಗಿ ಇದೊಂದು ವಿಶಿಷ್ಟ ರೀತಿಯ ದೇವಾಲಯವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Ssriram mt

ದ್ವಾಪರದ ಅಂತ್ಯ

ದ್ವಾಪರದ ಅಂತ್ಯ

ಇಲ್ಲಿ ಲಕ್ಷ್ಮಣನನ್ನು ಆರಾಧಿಸುವ ಕುರಿತು ಕಥೆಯೊಂದಿದ್ದು ಅದೂ ಸಹ ಸ್ವಾರಸ್ಯಕರವಾಗಿದೆ. ಅದರ ಪ್ರಕಾರವಾಗಿ, ಹಿಂದೆ ದ್ವಾಪರಯುಗದಲ್ಲಿ ಕೃಷ್ಣನು ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನನನ್ನು ಪೂಜಿಸುತ್ತಿದ್ದನು ಹಾಗೂ ಅವರ ವಿಗ್ರಹಗಳನ್ನು ಹೊಂದಿದ್ದನು.

ಚಿತ್ರಕೃಪೆ: Ssriram mt

ಮುಳುಗಿದವು

ಮುಳುಗಿದವು

ದ್ವಾಪರ ಯುಗ ಅಂತ್ಯವಾಗುತ್ತಿದ್ದಂತೆ ಕೃಷ್ಣ ಸಾಮ್ರಾಜ್ಯ ಸಮುದ್ರದಲ್ಲಿ ಮುಳುಗಿ ಅವನು ಪೂಜಿಸುತ್ತಿದ್ದ ಆ ನಾಲ್ಕು ವಿಗ್ರಹಗಳು ಮುಳುಗಿದವು. ಹೀಗೆ ಮುಳುಗಿದ ವಿಗ್ರಹಗಳು ಸಮುದ್ರದಲ್ಲೆ ಕ್ರಮಿಸುತ್ತ ಈ ಭಾಗದ ಸಮುದ್ರ ಪ್ರಡೇಶದಲ್ಲಿ ಬಂದಾಗ, ಅಲ್ಲಿನ ಜಮೀಂದಾರನೊಬ್ಬನ ಕನಸಿನಲ್ಲಿ ದೈವ ದೃಶ್ಯವೊಂದು ಪ್ರತ್ಯಕ್ಷವಾಗಿ ವಿಗ್ರಹಗಳ ಕುರಿತು ತಿಳಿಸಿ ಪ್ರತಿಯೊಂದು ವಿಗ್ರಹಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕೆಂದು ಹೇಳಿ ಮಾಯವಾಯಿತು.

ಚಿತ್ರಕೃಪೆ: Ssriram mt

ಜಮೀಂದಾರನ ಪಾತ್ರ

ಜಮೀಂದಾರನ ಪಾತ್ರ

ಕನಸಿಗೆ ಪುಷ್ಟಿ ನೀಡುವಂತೆ ಮರು ದಿನ ಆ ಭಾಗದ ಮೀನುಗಾರರಿಗೆ ಬಲೆಯಲ್ಲಿ ಆ ನಾಲ್ಕು ವಿಗ್ರಹಗಳು ದೊರತವು ಹಾಗೂ ಅವರು ಅದನ್ನು ತಂದು ಜಮೀಂದಾರರಿಗೆ ನೀಡಿದರು.

ಚಿತ್ರಕೃಪೆ: Ssriram mt

ಎಲ್ಲೆಲ್ಲಿ?

ಎಲ್ಲೆಲ್ಲಿ?

ಜಮೀಂದಾರನು ಕನಸಿನಲ್ಲಿ ಕಂಡ ಹಾಗೆಯೆ ತ್ರಿಪ್ರಯಾರ್ ನಲ್ಲಿ ರಾಮನನ್ನು, ಇರಿಂಜಲಕುಡದಲ್ಲಿ ಭರತನನ್ನು, ಲೇಖನದಲ್ಲಿ ಹೇಳಲಾದ ತಿರುಮುಳಿಕ್ಕುಲಂನಲ್ಲಿ ಲಕ್ಷ್ಮಣನನ್ನು ಹಾಗೂ ಪಾಯಮ್ಮಲ್ ನಲ್ಲಿ ಶತ್ರುಘ್ನನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದನು.

ಚಿತ್ರಕೃಪೆ:

ನಾಲಂಬಲಂ

ನಾಲಂಬಲಂ

ಒಂದೆ ದಿನದಲ್ಲಿ ಈ ನಾಲ್ಕು ಕ್ಷೇತ್ರಗಳಿಗೆ ತೆರಳಿ ಯಾತ್ರೆ ಮಾಡಬಹುದಾಗಿದ್ದು ಇದರಿಂದ ಜೀವನದಲ್ಲಿನ ಎಲ್ಲ ಕಷ್ಟ ಕಾರ್ಪಣ್ಯಗಳು ಕಳೆದುಹೋಗುತ್ತವೆ ಎಂದು ನಂಬಲಾಗಿದೆ. ಇದನ್ನು ನಾಲಂಬಲಂ ಯಾತ್ರೆ ಎಂದು ಕರೆಯುತ್ತಾರೆ ಹಾಗೂ ಇದು ಬಲು ಹೆಸರುವಾಸಿಯಾದ ಯಾತ್ರೆ. ಈ ನಾಲ್ಕು ಕ್ಷೇತ್ರಗಳು ಕೇರಳದ ಎರ್ನಾಕುಲಂನ ಆಸು ಪಾಸಿನಲ್ಲಿವೆ.

ಚಿತ್ರಕೃಪೆ: Ssriram mt

ಎಷ್ಟು ದೂರ?

ಎಷ್ಟು ದೂರ?

ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ತಿರುಮುಳಿಕ್ಕುಲಂ ಪಟ್ಟಣವು ಎರ್ನಾಕುಲಂನಿಂದ 33 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Ssriram mt

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more