Search
  • Follow NativePlanet
Share
» »ಭೂ ಪ್ರಪಂಚವೆಲ್ಲವೂ ನೀರಿನಲ್ಲಿ ಮುಳುಗಿ ಹೋಗುತ್ತದೆ: 300 ವರ್ಷಗಳ ಹಳೆಯ ಏಕಪಾದ ಮೂರ್ತಿ

ಭೂ ಪ್ರಪಂಚವೆಲ್ಲವೂ ನೀರಿನಲ್ಲಿ ಮುಳುಗಿ ಹೋಗುತ್ತದೆ: 300 ವರ್ಷಗಳ ಹಳೆಯ ಏಕಪಾದ ಮೂರ್ತಿ

ಈ ತಿರು ಉಥೈರಕೋಸ ಮಂಗೈ ದೇವಾಲಯವು ತಮಿಳುನಾಡಿನ ಪುರಾಥನವಾದ ದೇವಾಲಯಗಳಲ್ಲಿ ಒಂದು. ಈ ದೇವಾಲಯದಲ್ಲಿ ಶಿವನು ಪ್ರಧಾನವಾದ ದೇವತೆಯಾಗಿ ನೆಲೆಸಿದ್ದಾನೆ. ಪಾರ್ವತಿದೇವಿ ವೇದಗಳ ರಹಸ್ಯಗಳನ್ನು ತಿಳಿದ ಪ್ರದೇಶವಿದು. ನಾವು ನಂಬಿರುವ ಪ್ರಪಂಚದ ಪ್ರಾರಂಭದ

ಈ ತಿರು ಉಥೈರಕೋಸ ಮಂಗೈ ದೇವಾಲಯವು ತಮಿಳುನಾಡಿನ ಪುರಾಥನವಾದ ದೇವಾಲಯಗಳಲ್ಲಿ ಒಂದು. ಈ ದೇವಾಲಯದಲ್ಲಿ ಶಿವನು ಪ್ರಧಾನವಾದ ದೇವತೆಯಾಗಿ ನೆಲೆಸಿದ್ದಾನೆ. ಪಾರ್ವತಿದೇವಿ ವೇದಗಳ ರಹಸ್ಯಗಳನ್ನು ತಿಳಿದ ಪ್ರದೇಶವಿದು. ನಾವು ನಂಬಿರುವ ಪ್ರಪಂಚದ ಪ್ರಾರಂಭದ ಕುರಿತು ಹಲವಾರು ವಿಷಯಗಳು ಇವೆ. ಪ್ರಪಂಚದಲ್ಲಿನ ಭವಿಷ್ಯದ ಕುರಿತು ಕೂಡ ಈ ಸ್ಥಳ ತಿಳಿಸುತ್ತದೆ. ಹಾಗಾದರೆ ಈ ಸ್ಥಳದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಲೇಖನದ ಮೂಲಕ ಪಡೆಯೋಣ.

ಇಲ್ಲಿನ ಮಹಾಶಿವನ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿ ಇದೆ. ಅದೆನೆಂದರೆ ಇಲ್ಲಿನ ಸ್ವಾಮಿಯು ಕೋಪಗೊಂಡರೆ ಇಡೀ ವಿಶ್ವವೇ ಪ್ರಳಯವಾಗುತ್ತದೆ ಎಂದು ನಂಬಲಾಗಿದೆ.

300 ವರ್ಷಗಳ ಪುರಾತನವಾದ ದೇವಾಲಯ

300 ವರ್ಷಗಳ ಪುರಾತನವಾದ ದೇವಾಲಯ

ಈ ದೇವಾಲಯವು 300 ವರ್ಷಗಳ ಪುರಾತನವಾದ ದೇವಾಲಯವಾಗಿದೆ. ಇದು ತಿರು ಉಥೈರಕೋಸ ಮಂಗೈ ಎಂಬ ದೇವಾಲಯಕ್ಕೆ ಸಂಬಂಧಿಸಿದೆ. ಈ ದೇವಾಲಯವು ತಮಿಳುನಾಡಿನ ಅತ್ಯಂತ ಪುರಾತನವಾದ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ಇದು ರಾಮನಾಥ ಜಿಲ್ಲೆಯಲ್ಲಿದೆ.

PC:Balajijagadesh

ವಿಭಿನ್ನವಾದ ಲಕ್ಷಣಗಳನ್ನು ಹೊಂದಿರುವ ಶಿವಲಿಂಗ

ವಿಭಿನ್ನವಾದ ಲಕ್ಷಣಗಳನ್ನು ಹೊಂದಿರುವ ಶಿವಲಿಂಗ

ಇಲ್ಲಿ ಶಿವಲಿಂಗವು ವಿಶೇಷವಾದ ಲಕ್ಷಣಗಳನ್ನು ಹೊಂದಿದೆ. ಈ ದೇವಾಲಯದಲ್ಲಿ ಶಿವನೇ ಪ್ರಧಾನವಾದ ದೇವತಾ ಮೂರ್ತಿಯಾಗಿದ್ದಾನೆ. ಶಿವನು ನಿಂತಿರುವ ಭಂಗಿ ಎಲ್ಲರನ್ನು ಚಕಿತಗೊಳಿಸುತ್ತದೆ.


PC: Bijay chaurasia

ಒಂಟಿಕಾಲಿನಲ್ಲಿ ನಿಂದ ಮೂರ್ತಿ

ಒಂಟಿಕಾಲಿನಲ್ಲಿ ನಿಂದ ಮೂರ್ತಿ

ಪ್ರಪಂಚದಲ್ಲಿಯೇ 64 ವಿಭಿನ್ನವಾದ ಶಿವಾಲಯಗಳು ಇವೆ. ಇಲ್ಲಿ ಸ್ವಾಮಿಯ ಭಂಗಿಯು ಅತ್ಯಂತ ಪ್ರತ್ಯೇಕವಾದುದು. ಇಲ್ಲಿನ ಶಿವನು ಏಕ ಪಾದ ಮೂರ್ತಿಯಾಗಿದ್ದಾನೆ. ಅಂದರೆ ಒಂದೇ ಕಾಲಿನಲ್ಲಿ ನಿಂತಿದ್ದಾನೆ. ಹಾಗಾಗಿಯೇ ಏಕ ಪಾದ ಮೂರ್ತಿ ಎಂದು ಕರೆಯುತ್ತಾರೆ.

ಪ್ರಪಂಚದ ಅಂತ್ಯ

ಪ್ರಪಂಚದ ಅಂತ್ಯ

ಹೀಗೆ ಶಿವನು ಏಕ ಪಾದದ ಮೇಲೆ ನಿಂತಿರುವುದು ಕೋಪದಿಂದ ಎಂದು ಹೇಳುತ್ತಾರೆ. ಹಾಗೆಯೇ ಸಮಯ ಬಂದಾಗ ಆ ಕೋಪವೇ ಪ್ರಳಯವಾಗಿ ಮಾರ್ಪಾಟಾಗಿ ಪ್ರಪಂಚ ಅಂತ್ಯವಾಗುತ್ತದೆ ಎಂದು ನಂಬುತ್ತಾರೆ.

ಶಿವನ ಕೋಪ

ಶಿವನ ಕೋಪ

ಇದರಿಂದ ಗತಕಾಲದಲ್ಲಿ ಭೂಕಂಪಗಳು, ಬಿರುಗಾಳಿ, ಸುನಾಮಿಗಳೆಲ್ಲವೂ ಶಿವನ ಕೋಪದಿಂದಲೇ ಸಂಭವಿಸಿದವು ಎಂದು ನಂಬುತ್ತಾರೆ.


PC: wiki

ಶಿವ ಪೂಜೆ ಪರಿಷ್ಕಾರ

ಶಿವ ಪೂಜೆ ಪರಿಷ್ಕಾರ

ಶಿವ ಭಗವಾನನ್ನು ಆರಾಧಿಸುವುದರಿಂದ ಕೋಪದಿಂದ ಇರುವ ಪರಮಶಿವನು ಶಾಂತಗೊಳ್ಳುತ್ತಾನೆ. ಹಾಗೆಯೇ ಪ್ರಜೆಗಳು ಕೂಡ ನೆಮ್ಮದಿಯಿಂದ, ಶಾಂತಿಯಿಂದ ಜೀವನ ಸಾಧಿಸುತ್ತಾರೆ ಎಂದು ನಂಬಲಾಗಿದೆ.


PC: Shivam22383

ಏಕಪಾದ ಮೂರ್ತಿ

ಏಕಪಾದ ಮೂರ್ತಿ

ದಕ್ಷಿಣ ಭಾರತದೇಶದಲ್ಲಿ ಹಲವಾರು ಶಿವ ದೇವಾಲಯಗಳು ಇವೆಯಾದರು ಇಲ್ಲಿ ಮಾತ್ರ ವಿಭಿನ್ನವಾದ ಶಿವನ ರೂಪವನ್ನು ಕಾಣಬಹುದಾಗಿದೆ.

PC: Balajijagadesh


ದಕ್ಷಿಣ ಭಾರತದ ದೇವಾಲಯಗಳು

ದಕ್ಷಿಣ ಭಾರತದ ದೇವಾಲಯಗಳು

ದಕ್ಷಿಣ ಭಾರತ ದೇಶದಲ್ಲಿ ತಿರುಕ್ಕೊಗೈರಣಂ, ಮಧುರೈ ಮೀನಾಕ್ಷಿ ದೇವಾಲಯ ಮತ್ತು ಪುದುಮಂಟಪಗಳು ದೇವಾಲಯಗಳು ಆನೆಗಳ ರಿಂಗುಗಳನ್ನು ಆಕಾರದಲ್ಲಿ ಕಾಣಬಹುದು.


PC: Balajijagadesh

ಶಿವನ ಕೋಪಕ್ಕೆ ಸಂಕೇತಗಳು

ಶಿವನ ಕೋಪಕ್ಕೆ ಸಂಕೇತಗಳು

ಕೊನೆಗೆ ಮಧುರೈ ಮೀನಾಕ್ಷಿ ದೇವಾಲಯವು ಶಿವನ ಆಗ್ರಹಕ್ಕೆ ಗುರಿಯಾಗಿ ನೀರಿನಲ್ಲಿ ಮುಳುಗಿ ಹೋಗುತ್ತದೆ ಎಂಬ ನಂಬಿಕೆ ಇದೆ. ಈ ದೇವಾಲಯದ ಪ್ರಮುಖವಾದ ಆಕರ್ಷಣೆ ಎಂದರೆ ಅದು 51/2 ಅಡಿ ಎತ್ತರದ ಪಚ್ಚೆಗಳಿಂದ ಮಾಡಿದ ನಟರಾಜನ ವಿಗ್ರಹವಾಗಿದೆ. ಈ ವಿಗ್ರಹವನ್ನು "ಮಾರ್ಗತಾ" ಮೂರ್ತಿ ಎಂದು ಸಹ ಕರೆಯುತ್ತಾರೆ.

ಗ್ರಂಥದಲ್ಲಿ ಬರೆದ ರಹಸ್ಯಗಳೇ ನಿಜವಾದವು

ಗ್ರಂಥದಲ್ಲಿ ಬರೆದ ರಹಸ್ಯಗಳೇ ನಿಜವಾದವು

ಈ ದೇವಾಲಯದ ಬಗ್ಗೆ ಆನೇಕ ಪುರಾಣಗಳು ಇದೆ. ಇಲ್ಲಿ ಶಿವನು ಪಾರ್ವತಿಗೆ ವೇದಗಳನ್ನು ರಹಸ್ಯವಾಗಿ ನೀಡಿದನು. ಇಲ್ಲಿ ಮುಖ್ಯ ದೇವತೆ ಮಂಗಳನಾಥರ್(ಶಿವ) ಮತ್ತು ಅತನ ಪತ್ನಿಯಾದ ಮಂಗಳೇಶ್ವರಿ ನೆಲೆಸಿದ್ದಾರೆ. ನಂದಿ ಸ್ವಾಮಿಯು ದೇವಾಲಯದ ಪ್ರಾಂಗಣದಲ್ಲಿ ಇದ್ದಾನೆ.


PC:Balajijagadesh

ಮರದಿಂದ ಮಾಡಿದ ವಿಗ್ರಹ

ಮರದಿಂದ ಮಾಡಿದ ವಿಗ್ರಹ

5 ಅಡಿಗಿಂತ ಎತ್ತರದಲ್ಲಿನ ನಟರಾಜ ವಿಗ್ರಹವು ಗಂಧದ ಮರದಿಂದ ಮಾಡಿದ ವಿಗ್ರಹವಾಗಿದೆ. ಪ್ರಜೆಗಳು ಇದನ್ನು ಅರುಧ ದಶಾನಂ ಎಂದು ಸಹ ಕರೆಯುತ್ತಾರೆ. ಪ್ರಜೆಗಳು ಈ ವಿಗ್ರಹವನ್ನು ದರ್ಶನ ಮಾಡಿಕೊಳ್ಳಲು ತಂಡೋಪ ತಂಡವಾಗಿ ಭೇಟಿ ನೀಡುತ್ತಾರೆ. ಇಲ್ಲಿ ಕಳಾಬೈರವ ಮತ್ತು ಶನೇಶ್ವರ ಸ್ವಾಮಿಗಳ ದೇವಾಲಯಗಳು ಕೂಡ ಇವೆ.

PC:Wiki

ಹೇಗೆ ಸೇರಿಕೊಳ್ಳಬೇಕು?

ಹೇಗೆ ಸೇರಿಕೊಳ್ಳಬೇಕು?

ಈ ದೇವಾಲಯವು ತಮಿಳುನಾಡು ರಾಜ್ಯದ ರಾಮನಾಥಪುರಂ ಜಿಲ್ಲೆಯಲ್ಲಿದೆ. ಈ ದೇವಾಲಯದ ಹೆಸರು ತಿರು ಉಥೈರಕೋಸ ಮಂಗೈ ದೇವಾಲಯವಾಗಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮಧುರೈ. ತಿರು ಉಥೈರಕೋಸ ಮಂಗೈ ರಾಮನಾಥಪುರಂ ಜಿಲ್ಲೆಯಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. ಬಸ್ಸುಗಳ ಮೂಲಕ ತೆರಳಬೇಕಾದರೆ ರಾಮನಾಥಪುರಂನ ಹೊಸ ಬಸ್ ನಿಲ್ದಾಣದಿಂದ ಬಸ್ಸುಗಳನ್ನು ಪಡೆಯಬಹುದು.

PC: Nsmohan

ಸಮೀಪದ ಇತರ ಪ್ರವಾಸಿ ತಾಣಗಳು

ಸಮೀಪದ ಇತರ ಪ್ರವಾಸಿ ತಾಣಗಳು

ಪ್ರಧಾನ ಪ್ರವಾಸಿ ಆಕರ್ಷಣೆ ಎಂದರೆ ಅದು ರಾಮೇಶ್ವರ, ಧನುಷ್ಕೋಡಿ, ಪಂಬನ್ ಬ್ರಿಡ್ಜ್, ದೇವಿ ಪಟ್ಟಣ, ಇನ್ನು ಹಲವಾರು.

<strong>ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ</strong>ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X