Search
  • Follow NativePlanet
Share
» »ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್

ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್

ನಿಮ್ಮ ಕುಟುಂಬದೊಂದಿಗೆ ಅದ್ಬುತ ಸಮಯ ಕಳೆಯಲು ಒಂದೊಳ್ಳೆ ಸ್ಥಳ ಹುಡುಕುತ್ತ ಇದ್ರೆ ಅದು ಬೆಂಗಳೂರು ಮಾತ್ರ. ಇಲ್ಲಿ ನೀವು ನಿಮ್ಮ ಮಕ್ಕಳು ಮತ್ತು ಕುಟುಂಬದ ಜೊತೆ ಆತ್ಮೀಯ ಸಮಯವನ್ನು ಕಳೆಯಬಹುದು. ಹಾಗಾದ್ರೆ ನಿಮ್ಮ ಕುಟುಂಬದ ಜೊತೆ ಉತ್ತಮ ಸಮಯ ಕಳೆಯಲು ಇಲ್ಲಿರುವ ಸ್ಥಳಗಳು ಯಾವುವು ಅಂತ ಗೊತ್ತಾಗ್ತಿಲ್ಲವ ಹಾಗಾದ್ರೆ ಈ ಲೇಖನ ಓದಿ.

1. ವೈಟ್‌ಫೀಲ್ಡ್‌ನಲ್ಲಿರುವ ಈ ಕೆಫೆಗಳಿಗೆ ಭೇಟಿ ನೀಡಿ

ವೈಟ್‌ಫೀಲ್ಡ್ ಬೆಂಗಳೂರಿನ ಒಂದು ಸಾಫ್ಟ್ವೇರ್ ಏರಿಯಾ ಆಗಿದ್ದು, ಇಂದಿರಾನಗರ ಮತ್ತು ಕೋರಮಂಗಲದ ನಂತರ ಇರುವ ವೈಟ್‌ಫೀಲ್ಡ್ ಬೆಂಗಳೂರಿನ ಒಂದು ಉತ್ತಮ ಪ್ರದೇಶವಾಗಿದೆ. ನೀವು ಇಲ್ಲಿ ಶಾಪಿಂಗ್ ಮಾಡಲು ಫೀನಿಕ್ಸ್ ಮಾರ್ಕೆಟ್ ಸಿಟಿಯನ್ನು ಹೊಂದಿರುವುದರ ಜೊತೆಗೆ ನೀವು ಕೆಲವು ಕೆಫೆಗಳಿಗೆ ಬೆಹಟಿ ನೀಡಬಹುದು.

ಇಟ್ತಚಿನ ವರ್ಷಗಳಲ್ಲಿ ವೈಟ್‌ಫೀಲ್ಡ್ ತುಂಬಾ ಅಭಿವೃದ್ಧಿಗೊಂಡಿದೆ . ಈ ಹಿಂದೆ ಸಾಫ್ಟ್ವೇರ್ ಟೆಕ್ಕಿಗಳಿಗೆ ಮಾತ್ರ ನೆಲೆಯಾಗಿದ್ದ ಏರಿಯಾ ಈಗ ಕುಟುಂಬಗಳು ಮತ್ತು ಯುವಕರಿಗೆ ವಾಸಸ್ಥಾನವಾಗಿದೆ. ವೈಟ್‌ಫೀಲ್ಡ್ ಬೆಂಗಳೂರಿನ ಮಧ್ಯಭಾಗದಿಂದ ತುಂಬಾ ದೂರದಲ್ಲಿದೆ ಎಂದು ಅನೇಕ ಜನರು ಅಲ್ಲಿಗೆ ಹೋಗೋಕೆ ಇಷ್ಟಪಡುವುದಿಲ್ಲ. ಆದರೆ ಇಟ್ತಚಿಗೆ ವಿಷಯಗಳು ಬದಲಾಗುತ್ತಿವೆ.

ಇಲ್ಲಿನ ಟ್ರಾಫಿಕ್ ದಟ್ಟಣೆಯಿಂದ ಸ್ವಲ್ಪ ರಿಲ್ಯಾಕ್ಸ್ ಆಗಲು ಈ ಕೆಫೆಗಳಿಗೆ ನೀವು ಭೇಟಿ ನೀಡಬಹುದು. ಶ್ವಾನ ಕೆಫೆಗಳಿಂದ ಹಿಡಿದು ಆಸಕ್ತಿದಾಯಕ ಕಲಾ ಕೆಫೆಗಳವರೆಗೆ ಇಲ್ಲಿ ಅನ್ವೇಷಿಸಲು ಸಾಕಷ್ಟು ಕೆಫೆ ಗಳು ಇವೆ. ಕುಟುಂಬದೊಂದಿಗೆ ಇಲ್ಲಿ ಸುತ್ತಾಡಲು ಇದು ಸೂಕ್ತ ಸ್ಥಳವಾಗಿದೆ. ವಿಶೇಷವಾಗಿ ಈ ಮಕ್ಕಳ ಸ್ನೇಹಿ ಸ್ಥಳವನ್ನು ಸಂಪೂರ್ಣವಾಗಿ ಮಕ್ಕಳು ಆನಂದಿಸಬಹುದು.

2. ಸಾವನದುರ್ಗದಲ್ಲಿ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು

ಈ ಪ್ರದೇಶವು ಬೆಂಗಳೂರಿನಿಂದ ದೂರದಲ್ಲಿದ್ದು, ನಿಮ್ಮ ಕುಟುಂಬದಜೊತೆ ಕೆಲವು ಮೋಜಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇದು ಅತ್ಯುತ್ತಮ ಸ್ಥಳವಾಗಿದೆ. ಇದು ಬೆಂಗಳೂರಿನಿಂದ ಪಶ್ಚಿಮಕ್ಕೆ 60 ಕಿ.ಮೀ ದೂರದಲ್ಲಿದ್ದು. ಮಾಗಡಿ ರಸ್ತೆಯ ಮೂಲಕ ಇಲ್ಲಿಗೆ ನೀವು ಹೋಗಬಹುದು. ನೀವು ಇಲ್ಲಿಗೆ ಸ್ವತಃ ಡ್ರೈವ್ ಮಾಡಿಕೊಂಡು ಹೋದ್ರೆ

ತುಂಬಾ ರಮಣೀಯವಾಗಿರುತ್ತದೆ ಮತ್ತು ಮಕ್ಕಳು ಇದನ್ನು ಪ್ರೀತಿಸುತ್ತಾರೆ. ಈ ಸ್ಥಳವು ಚಾರಣಕ್ಕೆ ಪ್ರಸಿದ್ಧವಾಗಿದ್ದು ನಿಮ್ಮ ಮಕ್ಕಳೊಂದಿಗೆ ವಾರಾಂತ್ಯವನ್ನು ಕಳೆಯಲು ಅದ್ಬುತ ತಾಣವಾಗಿದೆ.

Bangalore

ಇಲ್ಲಿ ನೀವು ಚಾರಣ ಮಾಡುತ್ತ ಮತ್ತು ಚಾರಣವನ್ನು ಮಿನಿ ಪಿಕ್ನಿಕ್ ಆಗಿ ಪರಿವರ್ತಿಸುವುದು ಸಾಕಷ್ಟು ಲಾಭದಾಯಕವಾಗಿದೆ. ಚಾರಣವು ಯುವಕರಲ್ಲಿ ಜನಪ್ರಿಯವಾಗಿದ್ದರೂ, ಕುಟುಂಬಗಳು ಸಹ ಈ ಬೆಟ್ಟದಲ್ಲಿ ಒಂದು ಸಾರಿ ಟ್ರೈ ಮಾಡಬಹುದು. ಚಾರಣ ಮಾಡಲು ನಿಮಗೆ ಇಷ್ಟ ಇಲ್ಲಾಂದ್ರೆ ನೀವು ಕ್ಯಾಂಪಿಂಗ್ ಮಾಡಬಹುದು. ಇಲ್ಲಿ ಹಲವಾರು ಕ್ಯಾಂಪಿಂಗ್ ಸೈಟ್‌ಗಳಿದ್ದು, ವಾರಾಂತ್ಯದಲ್ಲಿ ಮಕ್ಕಳನ್ನು ಕಾಡಿಗೆ ಕರೆದೊಯ್ಯುವುದಕ್ಕಿಂತ ಉತ್ತಮವಾದದ್ದು ಯಾವುದಿದೆ ಹೇಳಿ? ಇದಲ್ಲದೆ, ಮಕ್ಕಳು ಕಯಾಕಿಂಗ್ ಮತ್ತು ಈಜು ಮುಂತಾದ ಅನೇಕ ಚಟುವಟಿಕೆಗಳನ್ನು ಆನಂದಿಸಬಹುದು.

3. ಟ್ರ್ಯಾಂಪೊಲೈನ್ ಪಾರ್ಕ್ ನಲ್ಲಿ ಕುಪ್ಪಳಿಸುತ್ತಿರಬಹುದು

ಬೆಂಗಳೂರು ಪ್ರತಿಯೊಬ್ಬ ವ್ಯಕ್ತಿಗೆ ಏಕೆ ಇಷ್ಟ ವಾಗುತ್ತದೆಂದರೆ ಇಲ್ಲಿರುವ ಅನೇಕ ಆಸಕ್ತಿದಾಯಕ ಸಂಗತಿಗಳು. ಈಗ ದೆಹಲಿ ಮತ್ತು ಬಾಂಬೆಯಂತಹ ದೊಡ್ಡ ನಗರಗಳಲ್ಲಿ ಮಕ್ಕಳ ಮನರಂಜನೆಯ ಸೆಟಪ್‌ಗಳನ್ನು ಹೊಂದಿದ್ದರು ಟ್ರ್ಯಾಂಪೊಲೈನ್ ಪಾರ್ಕ್ ಇಲ್ಲ. ಆದರೆ ಬೆಂಗಳೂರು ತನ್ನದೇ ಆದ ಟ್ರ್ಯಾಂಪೊಲೈನ್ ಪಾರ್ಕನ್ನು ಹೊಂದಿದೆ.

ಮಹಡಿಗಳನ್ನು ಟ್ರ್ಯಾಂಪೊಲೈನ್‌ನಿಂದ ತಯಾರಿಸಲಾಗುತ್ತದೆ ಆದ್ದರಿಂದ ನೀವು ಒಂದು ಟ್ರ್ಯಾಂಪೊಲೈನ್‌ನಿಂದ ಇನ್ನೊಂದಕ್ಕೆ ಕುಪ್ಪಳಿಸಬಹುದು. ಈ ಉದ್ಯಾನವನವು ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದು, ಇಲ್ಲಿ ಮಕ್ಕಳು ಮಾತ್ರವಲ್ಲ ವಯಸ್ಕರು ಕೂಡ ಇದನ್ನು ಟ್ರೈ ಮಾಡಲು ಇಷ್ಟ ಪಡುತ್ತಾರೆ. ಕುಪ್ಪಳಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ, ಒಂದು ಸರಿ ಟ್ರೈ ಮಾಡಬಹುದು ಮತ್ತು ಎಂಜಾಯ್ ಮಾಡಬಹುದು.

4. ಕಬ್ಬನ್ ಪಾರ್ಕ್‌ನಲ್ಲಿ ಪಿಕ್ನಿಕ್ ಮಾಡಿ

ಕಬ್ಬನ್ ಪಾರ್ಕ್ ಬಹಳಷ್ಟು ಸಂಗತಿಗಳನ್ನು ಹೊಂದಿದ್ದು ಕುಟುಂಬ ಪಿಕ್ನಿಕ್ಗಳಿಗೆ ಹೆಸರುವಾಸಿಯಾಗಿದೆ. ಈ ಮೆಗಾ ಪಾರ್ಕ್‌ನ ವಿಶೇಷತೆ ಎಂದರೆ ಅದು ಕಾವಲು ಪ್ರದೇಶದಲ್ಲಿ ಪ್ರಕೃತಿಯನ್ನು ಅನ್ವೇಷಿಸುವುದು . ಸುಂದರವಾದ ಬಿದಿರಿನ ವರ್ಣರಂಜಿತ ಮರಗಳು, ಸುಂದರವಾದ ಹೂವುಗಳು ಮತ್ತು ಅನ್ವೇಷಿಸಲು ಇನ್ನಷ್ಟು ಸಂಗತಿಗಳಿವೆ...

ನೀವು ಪಿಕ್ನಿಕ್ ಚಾಪೆ ಅಥವಾ ಯೋಗ ಚಾಪೆ ತೆಗೆದುಕೊಂಡು ಹೋಗಿ, ಏಕೆಂದರೆ ಇಲ್ಲಿ ಕೆಲವು ಪ್ರದೇಶಗಳು ತುಂಬಾ ತೇವವಾಗಿರುತ್ತದೆ, ಆದ್ದರಿಂದ ಮುಂಚಿತವಾಗಿ ತೆಗೆದುಕೊಂಡು ಹೋಗುವುದು ಒಳ್ಳೆಯದು. ಇದಲ್ಲದೆ, ಪಿಕ್ನಿಕ್ನಲ್ಲಿ ನೀವು ಉಪಹಾರವನ್ನು ಸಹ ಸವಿಯಬಹುದು. ಇಲ್ಲಿ ಐಸ್ ಕ್ರೀಮ್, ಚಾಟ್ಸ್ ಮತ್ತು ಇತರ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತದೆ.

ಮಕ್ಕಳೊಂದಿಗೆ ಎಂಜಾಯ್ ಮಾಡಲು ನೀವು ಚೆಂಡು ಅಥವಾ ಕೆಲವು ರೀತಿಯ ಬೋರ್ಡ್ ಆಟವನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ನೀವು ಛಾಯಾಗ್ರಾಹಕರಾಗಿದ್ದರೆ ಅಥವಾ ಫೋಟೋಗ್ರಫಿಯನ್ನು ಹವ್ಯಾಸವಾಗಿ ಮಾಡಿಕೊಂಡಿದ್ದರೆ, ನಿಮ್ಮ ವಾರಾಂತ್ಯವನ್ನು ಕುಟುಂಬದೊಂದಿಗೆ ಕಳೆಯಲು ಇದು ಸೂಕ್ತ ಸ್ಥಳವಾಗಿದೆ. ಉದ್ಯಾನವನಕ್ಕೆ ಬಹಳಷ್ಟು ಕುಟುಂಬಗಳು ಬರುವುದರಿಂದ ನೀವು ಆದಷ್ಟು ಬೇಗನೆ ಹೋಗಲು ನಾವು ಶಿಫಾರಸು ಮಾಡುತ್ತೇವೆ, ಇಲ್ಲದಿದ್ದರೆ ಇದು ಜನಸಂದಣಿಯಿಂದ ಕಿಕ್ಕಿರಿದು ತುಂಬಿಕೊಂಡಿರುತ್ತದೆ.

Bangalore

5. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿ

ಇದು ಇತರ ಉದ್ಯಾನಗಳಂತೆ ಸಾಮಾನ್ಯವಾದುದಲ್ಲ, ಇಲ್ಲಿ ನೀವು ನಿಜವಾಗಿಯೂ ಪ್ರಾಣಿಗಳನ್ನು ಅತ್ಯಂತ ಹತ್ತಿರದಿಂದ ಮತ್ತು ಸಂತೋಷದಿಂದ ನೋಡಬಹುದು. ಉದ್ಯಾನವು ವಿಶಾಲವಾಗಿದ್ದು ನೀವು ದೀರ್ಘ ಸರತಿಯಲ್ಲಿ ನಿಲ್ಲಬೇಕಾಗಬಹುದು.

ನೀವು ಒಂದು ಕಬ್ಬಿಣದ ಸರಳುಗಳಿಂದ ಸುತ್ತುವರಿದ ವ್ಯಾನ್ ಅಥವಾ ಮಿನಿ ಬಸ್‌ನಲ್ಲಿ ಕುಳಿತುಕೊಳ್ಳುತ್ತೀರಿ, ಅದು ನಿಮ್ಮನ್ನು ಉದ್ಯಾನದ ಒಳಗೆ ಕರೆದೊಯ್ಯುತ್ತದೆ. ಮೊದಲಿಗೆ, ನೀವು ಸಸ್ಯಹಾರಿ ಪ್ರಾಣಿಗಳನ್ನು ಕಾಣುತ್ತೀರಿ ಮತ್ತು ನಂತರ ವ್ಯಾನ್ ನಿಮ್ಮನ್ನು ಮಾಂಸಾಹಾರಿ ಪ್ರಾಣಿಗಳ ತಾಣಗಳಿಗೆ ಕರೆದೊಯ್ಯುತ್ತದೆ. ನಿಮ್ಮ ಬಸ್‌ನ ಪಕ್ಕದಲ್ಲಿಯೇ ಕರಡಿಗಳು, ಬಿಳಿ ಹುಲಿಗಳು ಮತ್ತು ಸಿಂಹಗಳನ್ನು ನೀವು ನೋಡಬಹುದು.

ನೀವು ಜೀಬ್ರಾಗಳು ಮತ್ತು ಇತರ ಪ್ರಾಣಿಗಳನ್ನು ಸಹ ನೋಡುತ್ತೀರಿ. ಇದು ಚಿಟ್ಟೆ ಉದ್ಯಾನವನವನ್ನು ಸಹ ಹೊಂದಿದ್ದು, ನೀವು ಇಲ್ಲಿಗೆ ಪ್ರವೇಶಿಸಬಹುದು ಮತ್ತು ಸುತ್ತಾಡಬಹುದು. ಆಹಾರವನ್ನು ಕೊಂಡೈಯುವ ಬಗ್ಗೆ ನೀವು ಚಿಂತಿಸಬೇಡಿ. ನೀವು ಉದ್ಯಾನವನಕ್ಕೆ ಪ್ರವೇಶಿಸುವ ಮುನ್ನ ಇಲ್ಲಿ ಬಹಳಷ್ಟು ಲಘು ಉಪಹಾರದ ಅಂಗಡಿಗಳನ್ನು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X