Search
  • Follow NativePlanet
Share
» »ಇಲ್ಲಿ ನೀಡೋ ಪ್ರಸಾದಕ್ಕೆನೇ ಫೇಮಸ್ ಈ ದೇವಸ್ಥಾನಗಳು!

ಇಲ್ಲಿ ನೀಡೋ ಪ್ರಸಾದಕ್ಕೆನೇ ಫೇಮಸ್ ಈ ದೇವಸ್ಥಾನಗಳು!

ದೇಶದಲ್ಲಿನ ಹಲವು ದೇವಸ್ಥಾನಗಳಲ್ಲಿ ರುಚಿಕರ ಪ್ರಸಾದವನ್ನು ನೀಡಲಾಗುತ್ತದೆ. ಪೂಜೆ ಮುಗಿದ ಬಳಿಕ ಪ್ರಸಾದ ವಿತರಿಸಲಾಗುತ್ತದೆ. ಈ ಪ್ರಸಾದದಲ್ಲೂ ವಿಭಿನ್ನತೆ ಇದೆ. ಒಂದೊಂದು ದೇವಸ್ಥಾನದಲ್ಲಿ ಒಂದೊಂದು ರೀತಿಯ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಹಾಗಾಗಿ ಆ ಕ್ಷೇತ್ರಗಳು ಪ್ರಸಾದದಿಂದಾಗಿ ಫೇಮಸ್ ಆಗಿವೆ. ಅಂತಹ ದೇವಸ್ಥಾನಕ್ಕೆ ಹೋದರೆ ಪ್ರಸಾದವಿಲ್ಲದೆ ಖಾಲಿ ಕೈಯಲ್ಲಿ ಬರುವಂತಿಲ್ಲ. ಹಾಗಾದರೆ ಅಂತಹ ದೇವಸ್ಥಾನಗಳು ಯಾವುವು ಎನ್ನೋದನ್ನು ನೋಡೋಣ...

ಇಲ್ಲಿ ಪಿಂಡದಾನ ಮಾಡಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ!

ತಿರುಪತಿ ಬಾಲಾಜಿ

ತಿರುಪತಿ ಬಾಲಾಜಿ

ಪವಿತ್ರ ಸರೋವರ: ಮೋಕ್ಷ ಬೇಕಾದ್ರೆ ಇಲ್ಲಿ ಒಮ್ಮೆ ಸ್ನಾನ ಮಾಡಿ

ಪಳನಿಯ ದಂಡಾಯುಧಪಾಣಿ ಸ್ವಾಮಿ ದೇವಾಲಯ

ಪಳನಿಯ ದಂಡಾಯುಧಪಾಣಿ ಸ್ವಾಮಿ ದೇವಾಲಯ

PC: wikipedia

ತಮಿಳುನಾಡಿನ ಪಳನಿ ಬೆಟ್ಟಗಳಲ್ಲಿರುವ ಸ್ವಾಮಿ ಮುರುಗನ್ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವೂ ಇನ್ನೊಂದು ವಿಶಿಷ್ಟವಾಗಿದೆ. ಈ ದೇವಾಲಯದಲ್ಲಿ ನೀಡಲಾಗುವ ಪ್ರಸಾದವನ್ನು ಐದು ಬಗೆಯ ಹಣ್ಣುಗಳು, ಬೆಲ್ಲ, ಕಲ್ಲುಸಕ್ಕರೆ ಬಳಸಿ ತಯಾರಿಸಲಾಗಿರುತ್ತದೆ. ಈ ಐದೂ ಹಣ್ಣುಗಳ ತಿರುಳನ್ನು ಬೆರೆಸಿದ ಬಳಿಕ ಲಭ್ಯವಾಗುವ ರಸ ಅತಿ ಸ್ನಿಗ್ಧವಾಗಿದ್ದು ಪಂಚಾಮೃತವೆಂದು ಕರೆಯಲಾಗುತ್ತದೆ. ಈ ಪಂಚಾಮೃತವನ್ನು ತಯಾರಿಸಲೆಂದೇ ಈಗ ಸ್ವಯಂಚಾಲಿತ ಯಾಂತ್ರೀಕೃತ ಘಟಕವೊಂದನ್ನು ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿಸಲಾಗಿದೆ.

ಕಾಮಾಕ್ಯ ದೇವಿ ದೇವಾಲಯ

ಕಾಮಾಕ್ಯ ದೇವಿ ದೇವಾಲಯ

PC: wikipedia

ಅಸ್ಸಾಂನ ಗುಹಾಟಿಯಲ್ಲಿರುವ ಕಾಮಾಕ್ಯ ದೇವಿ ಮಂದಿರದಲ್ಲಿ ವರ್ಷಕ್ಕೆ ಒಮ್ಮೆ ದೇವಿಯು ಮುಟ್ಟಾಗುತ್ತಾಳೆ. ಆ ಸಂದರ್ಭ ಮೂರು ದಿನಗಳು ದೇವಸ್ಥಾನವನ್ನು ಮುಚ್ಚಲಾಗುತ್ತದೆ. ನಾಲ್ಕನೆಯ ದಿನ ತೆರೆಯಲಾಗುತ್ತದೆ. ಅಂದು ದೇವಿಯ ಪ್ರಸಾದ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿ ಪ್ರಸಾದದ ರೂಪದಲ್ಲಿ ದೇವಿಯ ಋತುಸ್ರಾವವಾದ ಬಟ್ಟೆಯ ತುಂಡನ್ನು ನೀಡಲಾಗುತ್ತದೆ.

ಮಹಾದೇವ ದೇವಾಲಯ ತ್ರಿಶೂರ್

ಮಹಾದೇವ ದೇವಾಲಯ ತ್ರಿಶೂರ್

PC: wikipedia

ಕೇರಳದ ತ್ರಿಶೂರ್‌ನ ಮಳುವಾಂಛೇರಿಯಲ್ಲಿರುವ ಮಹಾದೇವ ದೇವಾಲಯ ವಿತರಿಸುವ ಪ್ರಸಾದ ಎಲ್ಲಕ್ಕಿಂತ ಭಿನ್ನವಾಗಿದೆ. ಸಾಮಾನ್ಯವಾಗಿ ಪ್ರಸಾದ ಎಂದರೆ ಕೇವಲ ತಿನ್ನುವ ತಿನಿಸನ್ನೇ ನಿರೀಕ್ಷಿಸಿ ಹೋದ ಭಕ್ತರಿಗೆ ಈ ದೇವಾಲಯದ ಪ್ರಸಾದ ಸ್ವಲ್ಪ ಅಚ್ಚರಿಯನ್ನು ನೀಡುತ್ತದೆ.

ಕರಣಿ ಮಾತಾ ಮಂದಿರ್

ಕರಣಿ ಮಾತಾ ಮಂದಿರ್

PC: wikipedia

ಬಿಕಾನೇರ್‌ನಲ್ಲಿರುವ ಕರಣಿ ಮಾತಾ ಮಂದಿರದಲ್ಲಿ ಭಕ್ತರ ಹೊರತಾಗಿ ಇಲಿಗಳಿಗೂ ಆಹಾರವನ್ನು ವಿತರಿಸಲಾಗುತ್ತದೆ. ಈ ದೇವಾಲಯದಲ್ಲಿ ಸಹಸ್ರಾರು ಇಲಿಗಳು ನಿರ್ಬಿಢೆಯಿಂದ ಓಡಾಡುತ್ತಾ ದೇವಾಲಯದ ಆಡಳಿತ ವರ್ಗ ಪ್ರತಿದಿನ ಪ್ರಥಮ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಪ್ರಸಾದ ಇಲಿ ತಿಂದು ಬಿಟ್ಟಿದ್ದಾಗಿದ್ದು ಇಲಿಯ ಎಂಜಲು ಶುಭವನ್ನು ತರುತ್ತದೆ ಎಂದು ಭಕ್ತರು ನಂಬುತ್ತಾರೆ.

 ಅಳಘರ್ ದೇವಾಲಯ ಮದುರೈ

ಅಳಘರ್ ದೇವಾಲಯ ಮದುರೈ

PC: wikipedia

ತಮಿಳುನಾಡಿನ ಮದುರೈ ಯಲ್ಲಿರುವ ಅಳಘರ್ ಅಲಗಾರ್ ದೇವಾಲಯಕ್ಕೆ ಭಕ್ತರು ಕಾಣಿಕೆಯಾಗಿ ನೀಡುವ ಅಕ್ಕಿಯಿಂದಲೇ ಪ್ರಸಾದ ತಯಾರಿಸಲಾಗುತ್ತದೆ. ಅಂದರೆ ವಿವಿಧ ಭಕ್ತ ನೀಡುವ ಭಿನ್ನವಾದ ಅಕ್ಕಿಯನ್ನೆಲ್ಲಾ ಬೆರೆಸಿ ನೆನೆಸಿ ಕಡೆದು ದೋಸೆ ಹಿಟ್ಟು ತಯಾರಿಸಿ ಬಿಸಿಬಿಸಿ ದೋಸೆ ತಯಾರಿಸಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.

ವೈಷ್ಣೋದೇವಿ ಮಂದಿರ

ವೈಷ್ಣೋದೇವಿ ಮಂದಿರ

PC:Ambrish mishra

ಈ ದೇವಾಲಯದಲ್ಲಿ ನೀಡುವ ಪ್ರಸಾದ ಮಂಡಕ್ಕಿ, ಸಕ್ಕರೆ ಉಂಡೆ, ಒಣ ಸೇಬು ಮತ್ತು ಕೊಬ್ಬರಿಯ ಚಿಕ್ಕ ಚಿಕ್ಕ ಚೂರುಗಳನ್ನು ಒಳಗೊಂಡಿದ್ದು ಪರಿಸರ ಸ್ನೇಹಿ ಸೆಣಬಿನ ಚಿಕ್ಕ ಚೀಲದಲ್ಲಿ ವಿತರಿಸಲಾಗುತ್ತದೆ.

ಪುರಿಯ ಜಗನ್ನಾಥ ದೇವಾಲಯ

ಪುರಿಯ ಜಗನ್ನಾಥ ದೇವಾಲಯ

PC:Vinayaksusruthan

ಒರಿಸ್ಸಾದ ಜಗನ್ನಾಥ ದೇವಾಲಯ ಭಾರತದ ಅತಿ ಹೆಚ್ಚು ಜನರು ಭೇಟಿ ನೀಡುವ ದೇವಾಲಯವಾಗಿದ್ದು ಈ ದೇವಾಲಯದಲ್ಲಿ ವಿತರಿಸಲಾಗುವ ಮಹಾಪ್ರಸಾದವೂ ವಿಶಿಷ್ಟವಾಗಿದೆ. ಈ ಪ್ರಸಾದದಲ್ಲಿ ಐವತ್ತಾರು ಬಗೆಯ ಬೆಂದ ಮತ್ತು ಬೇಯದೇ ಇರುವ ಆಹಾರವಸ್ತುಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತದೆ .

ಕಾಲ ಬೈರವ ದೇವಾಲಯ

ಕಾಲ ಬೈರವ ದೇವಾಲಯ

ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಕಾಲಬೈರವ ದೇವಸ್ಥಾನ ವಿಶೇಷವೆಂದರೆ ಇಲ್ಲಿ ಭಕ್ತರು ದೇವರಿಗೆ ವಿಸ್ಕೀಯನ್ನು ಅರ್ಪಿಸುತ್ತಾರೆ . ಭಕ್ತರಿಗೂ ಪ್ರಸಾದ ರೂಪದಲ್ಲಿ ವಿಸ್ಕೀಯನ್ನೇ ನೀಡಲಾಗುತ್ತದೆ. ಹಾಗಾಗಿ ಈ ದೇವಾಯಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ ವಿಸ್ಕಿಯೇ ಪ್ರಸಾದ.

Read more about: india temples travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more