Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಹವಾಮಾನ

ಗುವಾಹಾಟಿ ಹವಾಮಾನ

ಅಕ್ಟೋಬರ್ ನಿಂದ ಏಪ್ರಿಲ್ ತಿಂಗಳವರೆಗಿನ ಅವಧಿಯು ಗುವಾಹಟಿಗೆ ಭೇಟಿ ನೀಡಲು ಅತಿ ಸೂಕ್ತ ಕಾಲವಾಗಿದೆ.  ಅಕ್ಟೋಬರ್ ತಿಂಗಳಿನಲ್ಲಿ ಮಳೆಯು ಕಡಿಮೆಯಾಗುವುದರೊoದಿಗೆ, ಚಳಿಗಾಲದ ಡಿಸೆಂಬರ್, ಜನವರಿ, ಮತ್ತು ಫೆಬ್ರವರಿ ಮಾಸಗಳು ಅಪ್ಯಾಯಮಾನವಾಗಿದ್ದು, ಪ್ರಕೃತಿ ವೀಕ್ಷಣೆಗೆ ಪ್ರಶಸ್ತವಾಗಿವೆ.  ಈ ತಿಂಗಳುಗಳ ಅವಧಿಯಲ್ಲಿ ಪ್ರವಾಸಿಗರು ಬೋಹಾಗ್ ಬಿಹು (Bohag  bihu) ಮತ್ತು ಮಾಘ ಬಿಹು (Magh bihu) ನಂತಹ ಹಬ್ಬಗಳನ್ನು ಆಸ್ವಾದಿಸಬಹುದು.

ಬೇಸಿಗೆಗಾಲ

ಗುವಾಹಾಟಿಯಲ್ಲಿ ಬೇಸಗೆಯು ಏಪ್ರಿಲ್ ನಲ್ಲಿ ಆರಂಭವಾಗಿ, ಜೂನ್ -ಜುಲೈ ವರೆಗೂ ಮುಂದುವರೆಯುತ್ತದೆ.  ಬೇಸಿಗೆಯಲ್ಲಿ ಸರಾಸರಿ ಉಷ್ಣತೆಯು 22 ಡಿಗ್ರಿ ಸೆಲ್ಷಿಯಸ್ ನಿಂದ 38 ಡಿಗ್ರಿ ಸೆಲ್ಷಿಯಸ್ ನವರೆಗೆ ವ್ಯತ್ಯಯಗೊಳ್ಳುತ್ತದೆ.  ಗುವಾಹಾಟಿಯಲ್ಲಿ ಬೇಸಿಗೆಯು ಬಿಸಿ ಮತ್ತು ಆರ್ದ್ರವಾಗಿರುತ್ತದೆ.  ಬೇಸಿಗೆಯಲ್ಲಿ ಹವಾಮಾನವು ಅಸಹನೀಯವಾಗುವುದರ ಸಂಭವವಿರುವುದರಿಂದ, ಪ್ರವಾಸಿಗರು ಅನುಕೂಲಕರ ಹತ್ತಿ ಬಟ್ಟೆಗಳನ್ನು ಕೊಂಡೊಯ್ಯುವುದು ಯೋಗ್ಯವಾಗಿದೆ.

ಮಳೆಗಾಲ

ಆರಂಭದ ಮಳೆಗಾಲದ ಮಾಸಗಳು, ಬೇಸಿಗೆಯ ಅಂತ್ಯದ ತಿoಗಳುಗಳೊಂದಿಗೆ ಜೊತೆಗೂಡುತ್ತವೆ.  ಜೂನ್ ತಿಂಗಳಿನ ಆರಂಭದಲ್ಲಿ ಮಳೆಗಾಲವು ಆರಂಭಗೊಂಡು ಇದು ಆಗಸ್ಟ್ ತಿಂಗಳಿನವರೆಗೆ ಮುಂದುವರೆಯುತ್ತದೆ.  ಈ ಅವಧಿಯು ಅನುಕೂಲಕರವಾಗಿದ್ದು, ಮಳೆಯು ನಗರದಾದ್ಯಂತ ಏಕರೂಪದಲ್ಲಿ ಬೀಳುತ್ತದೆ.  ವಾರ್ಷಿಕ ಮಳೆಯ ಪ್ರಮಾಣವು ಸುಮಾರು 180 ಸೆ. ಮೀ. ನಷ್ಟಾಗಿರುತ್ತದೆ.

ಚಳಿಗಾಲ

ನವೆಂಬರ್ ನಲ್ಲಿ ಆರಂಭಗೊಳ್ಳುವ ಚಳಿಗಾಲವು ಫೆಬ್ರವರಿಯವರೆಗೆ ಮುಂದುವರೆಯುತ್ತದೆ. ಸರಾಸರಿ ಉಷ್ಣತೆಯು ಸುಮಾರು 10 ಡಿಗ್ರಿ ಸೆಲ್ಷಿಯಸ್ ನಿಂದ 25 ಡಿಗ್ರಿ ಸೆಲ್ಷಿಯಸ್ ನವರೆಗೆ ವ್ಯತ್ಯಯಗೊಳ್ಳುತ್ತದೆ.  ವಿಶೇಷವಾಗಿ ರಾತ್ರಿಯ ವೇಳೆ ಚಳಿಯು ಹೆಚ್ಚಾಗಿದ್ದು, ಗುವಾಹಾಟಿಯನ್ನು ಸಂದರ್ಶಿಸುವಾಗ, ಪ್ರವಾಸಿಗರು ಸಾಕಷ್ಟು  ಉಲ್ಲನ್ (wollen) ಬಟ್ಟೆಗಳನ್ನು ಕೊಂಡೊಯ್ಯುವುದು ಒಳ್ಳೆಯದು.  ಚಳಿಗಾಲಾವಧಿಯು ಹೆಚ್ಚು ಕಡಿಮೆ ಉಲ್ಲಾಸದಾಯಕವಾಗಿರುತ್ತದೆ.