Search
  • Follow NativePlanet
Share
» »ಪವಿತ್ರ ಸರೋವರ: ಮೋಕ್ಷ ಬೇಕಾದ್ರೆ ಇಲ್ಲಿ ಒಮ್ಮೆ ಸ್ನಾನ ಮಾಡಿ

ಪವಿತ್ರ ಸರೋವರ: ಮೋಕ್ಷ ಬೇಕಾದ್ರೆ ಇಲ್ಲಿ ಒಮ್ಮೆ ಸ್ನಾನ ಮಾಡಿ

ದೇವಿ-ದೇವತೆಯರು, ಋಷಿ ಮುನಿಗಳಿಗೆ ಸಂಬಂಧಿಸಿದಂತಹ ಅನೇಕ ಗುರುತುಗಳು ಇಂದಿಗೂ ದೇಶದಲ್ಲಿಕಾಣಸಿಗುತ್ತವೆ. ಇಂದು ನಾವು ಕೆಲವು ಸರೋವರಗಳ ಬಗ್ಗೆ ತಿಳಿಸಲಿದ್ದೇವೆ ಅವುಗಳನ್ನು ಧಾರ್ಮಿಕ ರೂಪದಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಈ ಸರೋವರದಲ್ಲಿ ಸ್ಥಾನ ಮಾಡುವುದರಿಂದ ಮನುಷ್ಯರಿಗೆ ಮೋಕ್ಷ ಪ್ರಾಪ್ತಿಯಾಗುತ್ತದಂತೆ. ಅವುಗಳು ಯಾವುವುದೆಂದರೆ...

ಯೌವನದಲ್ಲಿರುವಾಗಲೇ ಈ ನಗರಗಳ ನೈಟ್‌ ಲೈಫ್‌ಅನುಭವ ಪಡೆಯಲೇ ಬೇಕುಯೌವನದಲ್ಲಿರುವಾಗಲೇ ಈ ನಗರಗಳ ನೈಟ್‌ ಲೈಫ್‌ಅನುಭವ ಪಡೆಯಲೇ ಬೇಕು

ಕೈಲಾಸ ಮಾನಸ ಸರೋವರ

ಕೈಲಾಸ ಮಾನಸ ಸರೋವರ

PC: Varun Bhoopalam
ಇದೇ ಸರೋವರದಲ್ಲಿ ದೇವಿ ಪಾರ್ವತಿ ಸ್ನಾನ ಮಾಡುತ್ತಿದ್ದರು ಎನ್ನಲಾಗುತ್ತದೆ. ಈ ಸರೋವರದ ಸಮೀಪದಲ್ಲೇ ಕೈಲಾಶ ಪರ್ವತವಿದೆ. ಇದನ್ನು ಶಿವನ ನಿವಾಸಸ್ಥಾನ ಎನ್ನಲಾಗುತ್ತದೆ. ಹಾಗಾಗಿ ಈ ಸರೋವರದ ಮಹತ್ವ ಇನ್ನೂ ಹೆಚ್ಚಾಗಿದೆ. ಈ ಸ್ಥಳವನ್ನು ಹಿಂದೂ ಧರ್ಮದ ಜೊತೆಗೆ ಬೌದ್ಧ ಧರ್ಮದಲ್ಲೂ ಪವಿತ್ರವಾದದ್ದು ಎನ್ನಲಾಗುತ್ತದೆ.

ಪಂಪಾ ಸರೋವರ

ಪಂಪಾ ಸರೋವರ

PC: Indiancorrector
ಮೈಸೂರಿನ ಬಳಿ ಇರುವ ಈ ಸರೋವರ ಐತಿಹಾಸಿಕ ಸ್ಥಳವಾಗಿದೆ. ಹಂಪಿಯ ಸಮೀಪದಲ್ಲಿರುವ ಆನೆಗುಂದಿಯನ್ನು ರಾಮಾಯಣ ಕಾಲದಲ್ಲಿ ಕಿಷ್ಕಿಂದ ಎನ್ನಲಾಗುತ್ತದೆ. ತುಂಗಭದ್ರಾ ನದಿಯನ್ನು ದಾಟಿ ಆನೆಗುಂದಿ ಮುಖ್ಯ ಮಾರ್ಗದಿಂದ ಸ್ವಲ್ಪ ಮುಂದೆ ಸಾಗಿದಾಗ ಪಂಪಾ ಸರೋವರ ಕಾಣಸಿಗುತ್ತದೆ.

ಬಿಂದ್ ಸರೋವರ

ಬಿಂದ್ ಸರೋವರ

ಅಹಮದಾಬಾದ್‌ನಿಂದ ಉತ್ತರಕ್ಕೆ 130 ಕಿ.ಮೀ ದೂರದಲ್ಲಿ ಬಿಂದ್ ಸರೋವರವಿದೆ. ಈ ಸರೋವರದ ತೀರದಲ್ಲಿ ಕುಳಿತು ಕರ್ದಮ್ ಋಷಿ ಸಾವಿರ ವರ್ಷ ತಪಸ್ಸು ಮಾಡಿದ್ದರಂತೆ. ಈ ವಿಷ್ಯದ ಬಗ್ಗೆ ಹಲವು ಗ್ರಂಥಗಳಲ್ಲಿ ವರ್ಣಿಸಲಾಗಿದೆ.

ನಾರಾಯಣ ಸರೋವರ

ನಾರಾಯಣ ಸರೋವರ

PC: Amit.tannk
ಗುಜರಾತ್‌ನ ಕಕ್ಷ ಜಿಲ್ಲೆಯಲ್ಲಿ ಇರುವ ಈ ನಾರಾಯಣ ಸರೋವವರವನ್ನು ವಿಷ್ಣುವಿನ ಸರೋವರ ಎನ್ನಲಾಗುತ್ತದೆ. ಈ ಸರೋವರದಲ್ಲಿ ವಿಷ್ಣು ದೇವರು ಸ್ನಾನ ಮಾಡುತ್ತಿದ್ದರಂತೆ. ಹಲವು ಪುರಾಣಗಳಲ್ಲಿ ಹಾಗೂ ಗ್ರಂಥಗಳಲ್ಲಿ ಈ ಸರೋವವರದ ಉಲ್ಲೇಖವಿದೆ.

Read more about: india river lake temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X