Search
  • Follow NativePlanet
Share
» »ಕಲ್ಪನಾ ಲೋಕದ ಸ್ವರ್ಗದಂತಿರುವ - ಕರ್ನಾಟಕದ ಅನ್ವೇಷಣೆಗೆ ಒಳಪಡದೇ ಇರುವಂತಹ ಬೆಟ್ಟಗಳು

ಕಲ್ಪನಾ ಲೋಕದ ಸ್ವರ್ಗದಂತಿರುವ - ಕರ್ನಾಟಕದ ಅನ್ವೇಷಣೆಗೆ ಒಳಪಡದೇ ಇರುವಂತಹ ಬೆಟ್ಟಗಳು

ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ಕೊಟ್ಟು ಬೇಸತ್ತಿದ್ದಲ್ಲಿ, ಈ ಗಿರಿಧಾಮಗಳಷ್ಟೇ ರಮಣೀಯವಾದ ಹಾಗೂ ಜನದಟ್ಟಣೆ ಕಡಿಮೆಯಿರುವ ಕೆಲವು ಗಿರಿಧಾಮಗಳಿಗೆ ಭೇಟಿ ಕೊಡಿ. ದಕ್ಷಿಣಭಾರತದ ರಾಜ್ಯಗಳಲ್ಲಿ ಕರ್ನಾಟಕವು ಶ್ರೀಮಂತ ರಾಜ್ಯವೆಂಬ ವಿಷಯ ಹೊಸತೇನು ಅಲ್ಲ ಇದು ಇನ್ನೂ ಅನ್ವೇಷಣೆಗೆ ಒಳಗಾಗದೇ ಇರುವಂತಹ ಹಲವಾರು ಕಣಿವೆಗಳು ಗಿರಿಗಳು ಮತ್ತು ಅರಣ್ಯಗಳನ್ನು ಹೊಂದಿದೆ. ಆದುದರಿಂದ ಇವುಗಳು ನಿಮಗೆ ಬೇಕಾದ ಆನಂದವನ್ನು ಒದಗಿಸುವಾಗ ಯಾವಾಗಲೂ ಅನ್ವೇಶಿತ ಪ್ರದೇಶಗಳಿಗೇ ಏಕೆ ಕೊಡುವಿರಿ? ಈ ಕೆಳಗಿನ ಪಟ್ಟಿಯಲ್ಲಿ ಕರ್ನಾಟಕದ ಕೆಲವು ಕಡಿಮೆ ಅನ್ವೇಷಣೆಗೊಳಗಾದ ಪ್ರಶಾಂತವಾದ ಪರಿಸರ ಮತ್ತು ಮೋಡಿಮಾಡುವಂತಹ ಪ್ರಕೃತಿಯನ್ನು ಒಳಗೊಂಡ ಗಿರಿಧಾಮಗಳಿದ್ದು, ಇವು ರಾತ್ರಿ ಮಲಗುವಾಗ ಹೇಳುವ ಕಥೆಯಲ್ಲಿ ಬರುವ ಸ್ವರ್ಗದಂತೆ ಕಾಣುತ್ತದೆ.

ಈ ಸ್ಥಳಗಳು ನಿಮಗೆ ಖಂಡಿತವಾಗಿಯೂ ಎಂದೂ ಮರೆಯದಂತಹ ಅನುಭವವನ್ನು ಕೊಡುತ್ತದೆ. ಇಲ್ಲಿ ಜಲಪಾತಗಳಿಂದ ನದಿಗಳವರೆಗೆ , ಸರೋವರಗಳಿಂದ ಕಾಡುಗಳು ಮತ್ತು ಬಯಲುಪ್ರದೇಶಗಳಿಂದ ಮಂಜಿನಿಂದ ಕೂಡಿದ ಪರ್ವತಗಳ ವರೆಗೆ ನೂರಾರು ತಾಣಗಳನ್ನು ಇಲ್ಲಿ ಕಾಣಬಹುದಾಗಿದೆ. ಆದುದರಿಂದ ಇವುಗಳ ಲಕ್ಷಣಗಳು, ಸ್ಥಳಗಳು ಮತ್ತು ನೈಸರ್ಗಿಕ ವೈಭವಗಳ ಬಗ್ಗೆ ತಿಳಿದುಕೊಳ್ಳೋಣ.

ಜೋಗಿಮಟ್

ಜೋಗಿಮಟ್

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಜೋಗಿಮಟ್ಟಿಯು ಒಂದು ಸುಂದರವಾದ ಗಿರಿಧಾಮವಾಗಿದ್ದು ತನ್ನ ಸೌಂದರ್ಯತೆ ಮತ್ತು ಮಾಲಿನ್ಯರಹಿತ ಪ್ರಕೃತಿಯಿಂದಾಗಿ ಇದು ಸ್ಥಳೀಯರಲ್ಲಿ ಹೆಸರುವಾಸಿಯಾಗಿದೆ. ಈ ಪ್ರದೇಶವು ಬಯಲುಪ್ರದೇಶ, ಗಿರಿಗಳು, ಕಣಿವೆಗಳು ಮತ್ತು ಶ್ರೀಮಂತ ವನ್ಯಜೀವಿಗಳನ್ನು ಮತ್ತು ಸುಂದರವಾದ ಪ್ರಕೃತಿ ಸೌಂದರ್ಯತೆಯನ್ನು ಹೊಂದಿದ್ದು, ಈ ಅರಣ್ಯ ಪ್ರದೇಶವು ಜನನಿಬಿಡತೆಯ ಪ್ರವಾಸಿ ಸ್ಥಳದಿಂದ ಬೇಸತ್ತ ಪ್ರವಾಸಿಗರಿಗೆ ಸೂಕ್ತವಾದ ಸ್ಥಳವಾಗಿದೆ.

3800 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಜೋಗಿಮಟ್ಟಿ ರಾಜ್ಯದ ಅತಿ ಎತ್ತರದ ಮತ್ತು ತಂಪಾದ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಆದ್ದರಿಂದ ಇದು ಆಫ್‌ಬೀಟ್ ಚಾರಣಿಗರು ಮತ್ತು ಶಿಬಿರಾರ್ಥಿಗಳಿಗೆ ಒಂದು ರಮಣೀಯ ತಾಣವಾಗಿದೆ. ಬೆಟ್ಟದ ಮೇಲೆ ಬಂಗಲೆಗಳು ಮತ್ತು ದೇವಾಲಯಗಳ ರೂಪದಲ್ಲಿರುವ ಹಲವಾರು ಪ್ರಾಚೀನ ಸ್ಮಾರಕಗಳನ್ನು ಸಹ ಕಾಣಬಹುದು.

ಕೆಮ್ಮಣ್ಣುಗುಂಡಿ

ಕೆಮ್ಮಣ್ಣುಗುಂಡಿ

ಒಂದು ಕಾಲದಲ್ಲಿ ರಾಜರಿಗೆ ಬೇಸಿಗೆಯ ವಿರಾಮವಾಗಿದ್ದ ಕೆಮ್ಮಣ್ಣು ಗುಂಡಿ ಈಗ ಅಸಾಂಪ್ರದಾಯಿಕ ಪ್ರಯಾಣಿಕರಿಗೆ ವಾರಾಂತ್ಯದ ತಾಣವಾಗಿದೆ. ಕರ್ನಾಟಕದಲ್ಲಿ ನೀವು ಹುಲ್ಲುಗಾವಲುಗಳು ಮತ್ತು ಕಣಿವೆಗಳನ್ನು ಆನಂದಿಸಬಹುದಾದ ಯಾವುದದರೂ ಸ್ಥಳವಿದ್ದರೆ, ಅದು ಖಂಡಿತವಾಗಿಯೂ ಕೆಮ್ಮಣ್ಣು ಗುಂಡಿಯಾಗಿದೆ. ಈ ಸುಂದರವಾದ ಗಿರಿಧಾಮವು ಚಿಕ್ಕಮಗಳೂರು ನಗರದಿಂದ ಸುಮಾರು 60 ಕಿಮೀ ದೂರದಲ್ಲಿದೆ ಮತ್ತು ಈ ಸ್ವರ್ಗ ಸದೃಶವಾದ ಜಾಗವು ಕೆತ್ತಿದ ಸೌಂದರ್ಯದಂತೆ ತೋರುತ್ತದೆ. ವ್ಯೂಪಾಯಿಂಟ್‌ಗಳಿಂದ ಹಿಡಿದು ಜಲಪಾತಗಳು ಮತ್ತು ಶೋಲಾ ಹುಲ್ಲುಗಾವಲುಗಳಿಂದ ಗುಲಾಬಿ ಉದ್ಯಾನಗಳವರೆಗೆ, ಅದರ ಗಡಿಯೊಳಗೆ ಆನಂದಿಸಲು ಬಹಳಷ್ಟು ಇದೆ. ಕೆಮ್ಮಣ್ಣುಗುಂಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನ್ವೇಷಿಸಲು ಪ್ರಮುಖ ಸ್ಥಳಗಳೆಂದರೆ ಕಲ್ಲತ್ತಿ ಜಲಪಾತ, Z ಪಾಯಿಂಟ್ ಮತ್ತು ಹೆಬ್ಬೆ ಜಲಪಾತಗಳು.

ಬಿ ಆರ್ ಬೆಟ್ಟಗಳು

ಬಿ ಆರ್ ಬೆಟ್ಟಗಳು

ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳ ಸಂಗಮದಲ್ಲಿ ಕಂಡು ಬರುವ ಆಕರ್ಷಣೀಯ ಸೌಂದರ್ಯವಾದ ಬಿ.ಆರ್ ಬೆಟ್ಟಗಳು ಶ್ರೀಮಂತ ಬೆಟ್ಟ ಶ್ರೇಣಿಯಾಗಿದ್ದು ಇದನ್ನು ವನ್ಯಜೀವಿ ಅಭಯಾರಣ್ಯವಾಗಿ ಪರಿವರ್ತಿಸಲಾಗಿದೆ. ಆದ್ದರಿಂದ, ಇದು ಕಾಲಕಾಲಕ್ಕೆ ಆಫ್‌ಬೀಟ್ ಛಾಯಾಗ್ರಾಹಕರು ಮತ್ತು ಚಾರಣಿಗರಲ್ಲಿ ಜನಪ್ರಿಯವಾಗಿದೆ.

ಇದು ಮೈಸೂರಿನಿಂದ 80 ಕಿ.ಮೀ ಅಂತರದಲ್ಲಿದ್ದು ಪ್ರಶಾಂತವಾದ ಪರಿಸರವನ್ನು ಅನುಭವಿಸಲು ಸೂಕ್ತವಾದ ಸ್ಥಳವಾಗಿದೆ. ಇದು ಹಲವಾರು ಪ್ರಬೇದದ ಸಸ್ಯಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿರುವುದು ಮಾತ್ರವಲ್ಲದೆ, ಇದು ಸರೋವರಗಳು ಮತ್ತು ಕೆಲವು ಐತಿಹಾಸಿಕ ಸ್ಥಳಗಳಿಗೂ ನೆಲೆಯಾಗಿದೆ. ಸರೋವರಗಳು, ಕಾಡುಗಳು, ವನ್ಯಜೀವಿಗಳು ಮತ್ತು ಬೆಟ್ಟಗಳ ಉಪಸ್ಥಿತಿಯಿಂದ ಆಶೀರ್ವದಿಸಲ್ಪಟ್ಟ ಇಂತಹ ವಿಭಿನ್ನವಾದ ತಾಣದ ನಡುವೆ ನಿಮ್ಮ ವಾರಾಂತ್ಯವನ್ನು ಕಳೆಯಲು ನೀವು ಇಷ್ಟಪಡುವುದಿಲ್ಲವೇ?

ಪುಷ್ಪಗಿರಿ

ಪುಷ್ಪಗಿರಿ

ಕುಮಾರ ಪರ್ವತ ಎಂದೂ ಕರೆಯಲ್ಪಡುವ ಪುಷ್ಪಗಿರಿಯು ದಕ್ಷಿಣ ಭಾರತದ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದುಸಮುದ್ರ ಮಟ್ಟಕ್ಕಿಂತ 5600 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ. ಆದ್ದರಿಂದ, ಇದು ಮಾಲಿನ್ಯರಹಿತ, ಜನಸಂದಣಿಯಿಲ್ಲದ ಮತ್ತು ಮಾಲಿನ್ಯರಹಿತ ವಾತಾವರಣವನ್ನು ಹೊಂದಿದೆ. ಪಶ್ಚಿಮ ಘಟ್ಟಗಳ ಸಮೃದ್ಧ ವಿಸ್ತಾರದಲ್ಲಿ ಹರಡಿಕೊಂಡಿರುವ ಪುಷ್ಪಗಿರಿಯು ನಿಸರ್ಗದ ಅಗೋಚರ ವೈಭವವನ್ನು ಸೆರೆಹಿಡಿಯಲು ಎದುರು ನೋಡುತ್ತಿರುವ ಪ್ರತಿಯೊಬ್ಬ ಪ್ರವಾಸಿ ಪ್ರವಾಸಿಗರು ಭೇಟಿ ನೀಡಲೇಬೇಕಾದ ತಾಣವಾಗಿದೆ.

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಇದರ ಕಣಿವೆಯ ಮನಮೋಹಕ ದೃಶ್ಯವು ಖಂಡಿತವಾಗಿಯೂ ನಿಮ್ಮನ್ನು ಮಂತ್ರಮುಗ್ದಗೊಳಿಸುತ್ತದೆ. ಹಾಗೂ ನಿಮ್ಮ ಕ್ಯಾಮರಾದಲ್ಲಿ ಇದರ ದೃಶ್ಯವನ್ನು ಸೆರೆಹಿಡಿಯುವುದು ಖಂಡಿತವಾಗಿಯೂ ಯೋಗ್ಯವಾದುದು. ಅದರ ಅಗಾಧವಾದ ಎತ್ತರದಿಂದಾಗಿ, ಇದು ಚಾರಣಿಗರು ಮತ್ತು ಶಿಬಿರಾರ್ಥಿಗಳಿಗೆ ಸೂಕ್ತವಾದ ತಾಣವಾಗಿದೆ. ಇದು ಕೂರ್ಗ್‌ನಿಂದ ಸುಮಾರು 75 ಕಿ.ಮೀ ದೂರದಲ್ಲಿದೆ.

 ಸೋಮವಾರಪೇಟೆ

ಸೋಮವಾರಪೇಟೆ

ಕೊಡಗು ಜಿಲ್ಲೆಯಲ್ಲಿರುವ ಸೋಮವಾರಪೇಟೆ ಕಾಫಿ ಎಸ್ಟೇಟ್‌ಗಳು ಮತ್ತು ಮಸಾಲೆ ತೋಟಗಳಿಗೆ ಹೆಸರುವಾಸಿಯಾಗಿದೆ. ಇದು ಹಲವಾರು ಆಕರ್ಷಕ ನೋಟಗಳು, ಸುಂದರವಾದ ಜಲಪಾತಗಳು ಮತ್ತು ಎತ್ತರದ ಶಿಖರಗಳನ್ನು ಹೊಂದಿರುವ ಕಾರಣ ಅದರ ಗಡಿಯೊಳಗೆ ಈ ಸ್ಥಳದ ಸೌಂದರ್ಯತೆಗೆ ಸಾಕ್ಷಿಯಾಗಲು ಇನ್ನೂ ಹೆಚ್ಚಿನವುಗಳಿವೆ. ಕಲ್ಪನಾ ಲೋಕದ ಸ್ವರ್ಗದಂತೆ ಕಾಣುವ ಪ್ರಮುಖ ಸ್ಥಳಗಳೆಂದರೆ ಮಲ್ಲಳ್ಳಿ ಜಲಪಾತ, ಕೋಟೆಬೆಟ್ಟ, 5000 ಅಡಿಗಳಿಗಿಂತ ಹೆಚ್ಚು ಎತ್ತರವಿರುವ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿದೆ ಮತ್ತು ಮಕ್ಕಳಗುಡಿಯ ಆಕರ್ಷಕ ಭೂದೃಶ್ಯ ನಿಮ್ಮನ್ನು ಅದರತ್ತ ಕೈಬೀಸಿ ಕರೆಯುತ್ತದೆ.


ನಿಮ್ಮ ವಾರಾಂತ್ಯವನ್ನು ಮರೆಯಲಾಗದಂತೆ ಮಾಡಲು ಈ ನೈಸರ್ಗಿಕ ಸೌಂದರ್ಯಗಳು ಸಾಕು ಎಂದು ನೀವು ಭಾವಿಸುವುದಿಲ್ಲವೇ? ಹೌದು ಎಂದಾದರೆ, ಈಗ ಈ ಅದ್ಭುತ ಸ್ಥಳಗಳಿಗೆ ಜನಸಂದಣಿ ಹೆಚ್ಚಾಗುವ ಮೊದಲು ಪ್ರವಾಸವನ್ನು ಯೋಜಿಸಿ ಮತ್ತು ಅವುಗಳ ಭವ್ಯತೆಯನ್ನು ಪೂರ್ಣವಾಗಿ ಆನಂದಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X