» »ನಾವು ಹೋಗಬೇಕು ನವಬ್ರಹ್ಮ ದೇಗುಲಕ್ಕೆ...

ನಾವು ಹೋಗಬೇಕು ನವಬ್ರಹ್ಮ ದೇಗುಲಕ್ಕೆ...

By: Divya

ಪೌರಾಣಿಕ ಪರಂಪರೆಯ ತಾಣಗಳು ಶ್ರೀಮಂತ ಇತಿಹಾಸಗಳನ್ನು ನೆನಪಿಸುತ್ತವೆ. ಸೂಕ್ಷ್ಮ ಕಲಾಕೃತಿಯ ದೇಗುಲಗಳನ್ನು ನೋಡುತ್ತಿದ್ದರೆ ರಾಜರ ಕಾಲದ ಕಲಾ ಶ್ರೀಮಂತಿಕೆ ಹೇಗಿತ್ತು ಎನ್ನುವುದು ತೆರೆದುಕೊಳ್ಳುತ್ತವೆ. ಕೆಲವು ಪ್ರದೇಶಗಳು ಐತಿಹಾಸಿಕ ತಾಣ ಹಾಗೂ ದೇವಾಲಯಗಳಿಗೆ ಪ್ರಸಿದ್ಧಿ ಪಡೆದಿರುತ್ತವೆ. ಅಂತಹ ಪ್ರಮುಖ ಸ್ಥಳಗಳಲ್ಲಿ ಆಲಂಪುರವು ಒಂದು. ಇಲ್ಲಿರುವ ನವಬ್ರಹ್ಮ ದೇಗುಲವು ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.

Nava Brahma temples of Alampur

PC: wikimedia.org

ನಲ್ಲಮಲ ಗಿರಿಗಳ ತಪ್ಪಲಲ್ಲಿ ಇರುವ ಆಲಂಪುರವನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ. ಇದು ಕೇವಲ ನವಬ್ರಹ್ಮೇಶ್ವರ ದೇಗುಲಕ್ಕೆ ಮಾತ್ರ ಪ್ರಸಿದ್ಧಿ ಪಡೆದಿಲ್ಲ. ತುಂಗಭದ್ರಾ ಮತ್ತು ಕೃಷ್ಣ ನದಿಯ ಸಂಗಮ ತಾಣಕ್ಕೂ ಹೆಸರಾಗಿದೆ. ಪುರಾಣ ಇತಿಹಾಸದ ಪ್ರಕಾರ "ಬ್ರಹ್ಮನು ಶಿವನನ್ನು ಕುರಿತು ತಪಸ್ಸು ಗೈದನು. ಬ್ರಹ್ಮನ ತಪಸ್ಸನ್ನು ಮೆಚ್ಚಿದ ಶಿವನು ಪ್ರಪಂಚದ ಸೃಷ್ಟಿ ಮಾಡಲು ಶಕ್ತಿಯನ್ನು ನೀಡಿ, ಆಶೀರ್ವದಿಸಿದನು. ಅಂದಿನಿಂದಲೇ ಶಿವನನ್ನು ಬ್ರಹ್ಮೇಶ್ವರ ಎಂದು ಕರೆಯಲಾಯಿತು' ಎನ್ನಲಾಗುತ್ತದೆ.

Nava Brahma temples of Alampur

PC: wikimedia.org

ದೇವಾಲಯಗಳ ತೊಟ್ಟಿಲು ಎಂದು ಕರೆಯಲ್ಪಡುವ ಈ ತಾಣ 7ನೇ ಶತಮಾನದ ಇತಿಹಾಸವನ್ನು ತೆರೆದಿಡುತ್ತದೆ. ಹಿತಕರ ವಾತಾವರಣ ಹೊಂದಿರುವ ಈ ಪ್ರದೇಶದಲ್ಲಿ ಒಟ್ಟು 9 ದೇವಾಲಯಗಳಿವೆ. ಪ್ರತಿಯೊಂದು ಶಿವನಿಗೆ ಮೀಸಲಾಗಿರುವುದು ವಿಶೇಷ. ಇಲ್ಲಿ ಸತಿದೇವಿ ಎನ್ನುವ ದೇವಾಲಯವು ಇತ್ತು. ಆದರೆ ಕೆಲವು ಆಕ್ರಮಣದ ಸಂದರ್ಭದಲ್ಲಿ ಈ ದೇಗುಲವನ್ನು ನಾಶಮಾಡಲಾಯಿತು ಎನ್ನಲಾಗುತ್ತದೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯಗಳು ಇಂದಿಗೂ ಸುಂದರವಾಗಿ ಕಂಗೊಳಿಸುತ್ತಿವೆ. ಜೊತೆಗೆ ಭಾರತದ ಐತಿಹಾಸಿಕ ಇತಿಹಾಸದ ಶ್ರೀಮಂತಿಕೆಗೆ ಕನ್ನಡಿ ಹಿಡಿಯುತ್ತವೆ.

ಉತ್ತರ ಮತ್ತು ಪಶ್ಚಿಮ ಭಾರತದ ಶೈಲಿಯಲ್ಲಿ ನಿರ್ಮಾಣ ಗೊಂಡ ಈ ದೇವಾಲಯಗಳು ದ್ರಾವೀಡರ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತವೆ. ಈ ದೇವಾಲಯಗಳ ಸೂಕ್ಷ್ಮ ಕಲಾಕೃತಿಗಳ ಕೆತ್ತಿದ ಕಲಾವಿದರನ್ನು ಶ್ಲಾಘಿಸಲೇಬೇಕು. ಈ ಪವಿತ್ರ ಕ್ಷೇತ್ರಗಳು ಜನಪ್ರಿಯವಾಗಲು ಇದು ಒಂದು ಮುಖ್ಯ ಕಾರಣ ಎನ್ನಲಾಗುತ್ತದೆ.

Nava Brahma temples of Alampur

PC: wikimedia.org

ಇಲ್ಲಿರುವ ತಾರಕ ಬ್ರಹ್ಮ, ಸ್ವರ್ಗ ಬ್ರಹ್ಮ, ಪದ್ಮ ಬ್ರಹ್ಮ, ವಿಶ್ವ ಬ್ರಹ್ಮ, ಗರುಡ ಬ್ರಹ್ಮ, ಕುಮಾರ ಬ್ರಹ್ಮ, ಅರ್ಕ ಬ್ರಹ್ಮ ಹಾಗೂ ವೀರ ಬ್ರಹ್ಮ ದೇವಾಲಯಗಳು ಶಿವನಿಗೆ ಮೀಸಲಾಗಿವೆ. ಇಷ್ಟೇ ಅಲ್ಲದೆ 9 ನೇ ಶತಮಾನದ ಸೂರ್ಯನಾರಾಯಣ ದೇಗುಲ, ನರಸಿಂಹ ದೇಗುಲ ಇರುವುದನ್ನು ನೋಡಬಹುದು. ಇವು ವಿಜಯನಗರ ಅರಸರ ಕೊಡುಗೆ. ಆದರೂ ಶಿವನ ದೇಗುಲದ ಸಂಕೀರ್ಣದಲ್ಲೇ ಇವೆ. ಬೇರೆ ಬೇರೆ ಅರಸರ ಕಾಲದಲ್ಲಿ ನಿರ್ಮಿಸಿದ್ದಾದರೂ ದೇಗುಲಗಳು ಶ್ಲಾಘನೀಯವಾಗಿವೆ.

ಮಾರ್ಗದ ವಿವರ
ಬೆಂಗಳೂರಿನಿಂದ 380.2 ಕಿ.ಮೀ. ಹಾಗೂ ಹೈದರಾಬಾದ್‍ನಿಂದ 220 ಕಿ.ಮೀ ವ್ಯಾಪ್ತಿಯಲ್ಲಿದೆ. ಇಲ್ಲಿಗೆ ಕರ್ನೂಲ್ ರಸ್ತೆ ಮಾರ್ಗದಲ್ಲಿ ಬಂದರೆ ಕರ್ನೂಲ್‍ಗೆ 15 ಕಿ.ಮಿ. ಇರುವಾಗಲೇ ಎಡ ವಿಚಲನ (ಎಡ ರಸ್ತೆ ಮಾರ್ಗ)ತೆಗೆದುಕೊಳ್ಳಬೇಕು. ಜೋಗುಲಂಬಾ ದೇವಾಲಯದ ಕಮಾನು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಅಲ್ಲಿಂದ ಆಲಂಪುರಕ್ಕೆ ಸುಮಾರು 12 ಕಿ.ಮೀ. ಅಷ್ಟೆ.

Read more about: telangana
Please Wait while comments are loading...