Search
  • Follow NativePlanet
Share
» »ಮುರುಡೇಶ್ವರವನ್ನು ಬಿಟ್ರೆ ರಾಜ್ಯದ ಅತೀ ಎತ್ತರದ ಶಿವನ ವಿಗ್ರಹ ಇರೋದು ಎಲ್ಲಿ ಗೊತ್ತ ?

ಮುರುಡೇಶ್ವರವನ್ನು ಬಿಟ್ರೆ ರಾಜ್ಯದ ಅತೀ ಎತ್ತರದ ಶಿವನ ವಿಗ್ರಹ ಇರೋದು ಎಲ್ಲಿ ಗೊತ್ತ ?

ನಮ್ಮ ರಾಜ್ಯದಲ್ಲಿ ಎಷ್ಟೆಲ್ಲಾ ಎತ್ತರದ ಮೂರ್ತಿಗಳಿವೆ. ಅವುಗಳಲ್ಲಿ ಶಿವನ ಮೂರ್ತಿ ಕೂಡಾ ಸೇರಿದೆ. ನಮ್ಮ ರಾಜ್ಯದಲ್ಲಿರುವ ಶಿವನ ಅತ್ಯಂತ ಎತ್ತರದ ವಿಗ್ರಹ ಎಲ್ಲಿದೆ ಎಂದರೆ ಸಾಮಾನ್ಯವಾಗಿ ಹೆಚ್ಚಿನವರು ನೀಡೋ ಉತ್ತರ ಮುರುಡೇಶ್ವರ. ಯಾಕೆಂದರೆ ಮುರುಡೇಶ್ವರ ಒಂದು ಉತ್ತಮ ಪ್ರವಾಸಿತಾಣವಾಗಿದ್ದು, ಅಲ್ಲಿ ದೊಡ್ಡದಾದ ಶಿವನ ವಿಗ್ರಹವನ್ನು ಕಾಣಬಹುದು.

ಶಿವನ ವಿಗ್ರಹ

ಶಿವನ ವಿಗ್ರಹ

PC:Vivek Shrivastava

123 ಫೀಟ್ ಎತ್ತರದ ಶಿವನ ವಿಗ್ರಹ ಇದಾಗಿದ್ದು ಇದನ್ನು ನಿರ್ಮಿಸಲು ಎರಡು ವರ್ಷಗಳ ಕಾಲ ಬೇಕಾಯಿತು. ಮುರುಡೇಶ್ವರದ ಬಗೆಗೆ ನಮಗೆಲ್ಲಾ ಗೊತ್ತೇ ಇದೆ. ಆದರೆ ಇಂದು ನಾವು ಹೇಳ ಹೊರಟಿರುವುದು ಕರ್ನಾಟದಲ್ಲೇ ಇರುವ ಇನ್ನೊಂದು ಎತ್ತರದ ಶಿವನ ವಿಗ್ರಹದ ಬಗ್ಗೆ. ಇದು ಬಿಜಾಪುರದ ಸಿಂಧಗಿ ರಸ್ತೆಯಲ್ಲಿದೆ.

ಬಿ.ಎಂ.ಟಿ.ಸಿ ಬಸ್‌ನಲ್ಲಿ ಓಡಾಡಿರೋರಿಗೆಲ್ಲಾ ಈ ಸ್ಥಳ ಗೊತ್ತಿರ್ಲೇ ಬೇಕುಬಿ.ಎಂ.ಟಿ.ಸಿ ಬಸ್‌ನಲ್ಲಿ ಓಡಾಡಿರೋರಿಗೆಲ್ಲಾ ಈ ಸ್ಥಳ ಗೊತ್ತಿರ್ಲೇ ಬೇಕು

ಭಾರತದಲ್ಲೇ ಎರಡನೇ ಅತ್ಯಂತ ಎತ್ತರದ ಶಿವನ ಮೂರ್ತಿ

ಭಾರತದಲ್ಲೇ ಎರಡನೇ ಅತ್ಯಂತ ಎತ್ತರದ ಶಿವನ ಮೂರ್ತಿ

PC:Sissssou2

ವಿಜಯಪುರದ ಸಿಂಧಗಿ ರಸ್ತೆಯಲ್ಲಿರುವ ಸುಮಾರು 85ಫೀಟ್ ಎತ್ತರ ಹಾಗೂ 1500ಟನ್ ತೂಗುವ ಈ ಶಿವನ ಮೂರ್ತಿಯು ಭಾರತದಲ್ಲೇ ಎರಡನೇ ಅತ್ಯಂತ ಎತ್ತರದ ಶಿವನ ಮೂರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಶಿವನ ಮೂರ್ತಿಯನ್ನು ನಿರ್ಮಿಸಲು 13 ತಿಂಗಳುಗಳ ಕಾಲ ಬೇಕಾಯಿತು.

ವಿಶ್ವದಲ್ಲೇ ನಾಲ್ಕನೇ ಅತೀ ಎತ್ತರದ ಶಿವನ ವಿಗ್ರಹ

ವಿಶ್ವದಲ್ಲೇ ನಾಲ್ಕನೇ ಅತೀ ಎತ್ತರದ ಶಿವನ ವಿಗ್ರಹ

PC:Sanyam Bahga

ಸಿಮೆಂಟ್ ಹಾಗೂ ಸ್ಟೀಲ್‌ನಿಂದ ನಿರ್ಮಿಸಲಾದ ಈ ಶಿವನ ಮೂರ್ತಿಯು ಬಿಜಾಪುರದಿಂದ ಮೂರು ಕಿ.ಮೀ ದೂರದಲ್ಲಿದೆ. 2006ರ ಫೆ. 26ರಂದು ಮಹಾಶಿವರಾತ್ರಿಯಂದು ಇದನ್ನು ಲೋಕಾರ್ಪಣೆ ಮಾಡಲಾಯಿತು.ಇದು ವಿಶ್ವದಲ್ಲೇ ನಾಲ್ಕನೇ ಅತೀ ಎತ್ತರದ ಶಿವನ ವಿಗ್ರಹವಾಗಿದೆ.

ಐಆರ್‌ಸಿಟಿಸಿ ಆಫರ್; 12 ದಿನದ ಪ್ಯಾಕೇಜ್‌ನಲ್ಲಿ ಜ್ಯೋತಿರ್ಲಿಂಗದ ದರ್ಶನಐಆರ್‌ಸಿಟಿಸಿ ಆಫರ್; 12 ದಿನದ ಪ್ಯಾಕೇಜ್‌ನಲ್ಲಿ ಜ್ಯೋತಿರ್ಲಿಂಗದ ದರ್ಶನ

ಶಿವ ಚರಿತ್ರೆ

ಶಿವ ಚರಿತ್ರೆ

PC:Praxipat

ಶಿವನ ಸಣ್ಣ ವಿಗ್ರಹವನ್ನು ದೊಡ್ಡ ಪ್ರತಿಮೆಯ ಕೆಳಗೆ ಸ್ಥಾಪಿಸಲಾಗಿದೆ. ಅಲ್ಲದೆ, ಶಿವನಿಗೆ ಸಂಬಂಧಿಸಿದ ಪೌರಾಣಿಕ ಕಥೆಗಳನ್ನು ಭಕ್ತರು ಕಲಿಯಲು ಸಹಾಯ ಮಾಡುವ ಸಲುವಾಗಿ "ಶಿವ ಚರಿತ್ರೆಯನ್ನು" ಕನ್ನಡದಲ್ಲಿ ಒಳಗೋಡೆಗಳ ಮೇಲೆ ಕೆತ್ತಲಾಗಿದೆ.

ಯಾರು ಸ್ಥಾಪಿಸಿದ್ದು?

ಯಾರು ಸ್ಥಾಪಿಸಿದ್ದು?

ಟಿ.ಕೆ ಪಾಟೀಲ್ ಬನಕಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಶಿವನ ವಿಗ್ರಹವ ಸ್ಥಾಪಿಸಲಾಯಿತು. ಇದನ್ನು ಬೆಂಗಳೂರಿನ ಸಿವಿಲ್ ಎಂಜಿನಿಯರ್‌ಗಳು ವಿನ್ಯಾಸಗೊಳಿಸಿದ್ದು, ಶಿವಮೊಗ್ಗದ ಶಿಲ್ಪಿಗಳು ಇದನ್ನು ನಿರ್ಮಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X