Search
  • Follow NativePlanet
Share
» »ಮನುಷ್ಯರಿಗಿಂತ ಹೆಚ್ಚು ಹಣವನ್ನು ಹೊಂದಿರುವ ದೇವಾಲಯಗಳಿವು

ಮನುಷ್ಯರಿಗಿಂತ ಹೆಚ್ಚು ಹಣವನ್ನು ಹೊಂದಿರುವ ದೇವಾಲಯಗಳಿವು

ಹಿಂದೂ ಧರ್ಮಕ್ಕೆ ಆರಾಧ್ಯ ಪ್ರದೇಶಗಳೆಂದರೆ ದೇವಾಲಯಗಳು. ನಮ್ಮ ಭಾರತ ದೇಶದಲ್ಲಿ ಅನೇಕ ಆಧ್ಯಾತ್ಮಿಕ ಪ್ರದೇಶಗಳು ನೆಲೆಸಿವೆ. ಮರಗಳ ಕೆಳಗೆ, ಗ್ರಾಮದ ಹೊರಗೆ, ಬೀದಿಗಳಲ್ಲಿ ಇನ್ನು ಹಲವಾರು ಖಾಲಿ ಸ್ಥಳಗಳಲ್ಲಿಯೂ ಕೂಡ ದೇವಾಲಯಗಳನ್ನು ನಾವು ಕಾಣಬಹುದು. ದೇವಾಲಯಕ್ಕೆ ತೆರಳಿದರೆ ತಮಗೆ ಇರುವ ಕಷ್ಟಗಳು ದೂರವಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಆ ದೇವಾಲಯಗಳು ದೊಡ್ಡದೇ ಆಗಿರಲಿ, ಚಿಕ್ಕದೇ ಆಗಿರಲಿ ದೇವತೆಗಳು ಮಾತ್ರ ಒಂದೇ ಅಲ್ಲವೇ?. ಭಾರತ ದೇಶದಲ್ಲಿ ಕೆಲವು ಪ್ರಸಿದ್ಧಿ ಹೊಂದಿರುವ ದೇವಾಲಯಗಳು ಕೂಡ ಇವೆ.

ಇವು ಧರ್ಮಕ್ಕೆ ಸಂಬಂಧಿಸಿದ ದೇವಾಲಯಗಳೇ ಅಲ್ಲ. ವಿಶ್ವ ವಿಖ್ಯಾತಿ ಪಡೆದ ದೇವಾಲಯ. ನಮ್ಮ ದೇಶದ ಶ್ರೀಮಂತ ದೇವಾಲಯಕ್ಕೆ ದೊಡ್ಡ ದೊಡ್ಡ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಹಾಗಾದರೆ ಆ ಶ್ರೀಮಂತ ದೇವಾಲಯಗಳು ಯಾವುವು? ಆ ದೇವಾಲಯದ ವಾರ್ಷಿಕ ಆದಾಯ ಎಷ್ಟು? ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ.

ಅನಂತಪದ್ಮನಾಭ ಸ್ವಾಮಿ ದೇವಾಲಯ

ಅನಂತಪದ್ಮನಾಭ ಸ್ವಾಮಿ ದೇವಾಲಯ

ಪದ್ಮನಾಭ ಸ್ವಾಮಿ ದೇವಾಲಯವು ಕೇರಳದ ತಿರುವನಂತಪುರಂನಲ್ಲಿದೆ. ಇಲ್ಲಿ ಆನೇಕ ವರ್ಷಗಳಿಂದ ಸೇವೆ ಮಾಡಿದ 20 ಬಿಲಿಯನ್ ನಿಧಿಯು ಬೆಳಕಿಗೆ ಬಂದಿತು. ಭಕ್ತರು ಶ್ರೀ ಮಹಾ ವಿಷ್ಣುವಿಗೆ ಸಮರ್ಪಿಸುವ ಹಣ, ಬೆಲೆ ಬಾಳುವ ಆಭರಣಗಳು, ಲೆಕ್ಕವಿಲ್ಲದಷ್ಟು ಇರುವುದರಿಂದ ಈ ದೇವಾಲಯವು ಅತ್ಯಂತ ಧನಿಕ ದೇವಾಲಯ ಎಂದು ಗುರುತಿಸಲಾಗಿದೆ. ಇಲ್ಲಿ ಪ್ರಧಾನವಾಗಿ 6 ಕೊಠಡಿಗಳು ಇವೆ. ಅದರಲ್ಲಿ 4 ಕೊಠಡಿಯಲ್ಲಿ ಬೆಳೆ ಬಾಳುವ ವಸ್ತಗಳು ಇವೆ. ಇನ್ನು ಎ ಮತ್ತು ಬಿ ಕೊಠಡಿಯಲ್ಲಿ ಭಕ್ತರಿಂದ ಪಡೆದ ಅಭರಣಗಳು ಶೇಖರಿಸಲಾಗುತ್ತದೆ. 2011 ರಿಂದ 8 ಜನರ ಕಮಿಟಿ ಸಭ್ಯರ ಮೂಲಕ ಬೆಲೆ ಬಾಳುವ ಬಂಗಾರ ನಾಣ್ಯಗಳು, ವಜ್ಯಗಳು ಟನ್ನುಗಳಷ್ಟಿವೆ ಎಂದು ಹೇಳಲಾಗುತ್ತದೆ. ಈ ನಿಧಿ ಎಲ್ಲಾ ಟ್ರವೆನ್‍ಕೋಡ್ ರಾಜ ಕುಟುಂಬಕ್ಕೆ ಸೇರಿದ್ದು.

PC: Offcial Site

ತಿರುಪತಿ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ತಿರುಪತಿ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಸಾಧರಣವಾಗಿ ತಿರುಪತಿ ದೇವಾಲಯದ ವಾರ್ಷಿಕ ಆದಾಯವು 90,00 ಕೋಟಿಗಳಿಗಿಂತ ಹೆಚ್ಚು ಎಂದೇ ಹೇಳಬಹುದು. ಈ ದೇವಾಲಯವನ್ನು 2 ನೇ ಶ್ರೀಮಂತ ದೇವಾಲಯ ಎಂದು ಗುರುತಿಕೊಂಡಿದೆ. ಈ ಪುಣ್ಯಕ್ಷೇತ್ರವು ಆಂಧ್ರ ಪ್ರದೇಶದಲ್ಲಿನ ಚಿತ್ತೂರು ಜಿಲ್ಲೆಯಲ್ಲಿದೆ. ಪ್ರತಿ ದಿನ 60.000 ಕ್ಕಿಂತ ಹೆಚ್ಚು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗೆಯೇ 900 ಕೋಟಿಗಿಂತ ಹೆಚ್ಚು ಬೆಲೆ ಬಾಳುವ ಸಂಪತ್ತು ಇಲ್ಲಿದೆ. ಈ ದೇವಾಲಯವನ್ನು ನಮ್ಮ ಭಾರತದಲ್ಲಿ ಅತ್ಯಂತ ಧನಿಕ ದೇವಾಲಯಗಳಲ್ಲಿ ಒಂದಾಗಿದೆ.

ಶಿರಿಡಿ ಸಾಯಿ ಬಾಬಾ ದೇವಾಲಯ

ಶಿರಿಡಿ ಸಾಯಿ ಬಾಬಾ ದೇವಾಲಯ

ಮಹಾರಾಷ್ಟ್ರದಲ್ಲಿನ ಅಹಮದ್ ನಗರ ಜಿಲ್ಲೆಯಲ್ಲಿರುವ ಕೊಪೆರ್ ಗಾಂವ್ ತಾಲೂಕಿನ ಚಿಕ್ಕದಾದ ಗ್ರಾಮದಲ್ಲಿ ಶಿರಿಡಿ ದೇವಾಲಯವಿದೆ. ಶಿರಿಡಿ ಸಾಯಿ ಬಾಬಾ ದೇವಾಲಯದ ವಾರ್ಷಿಕ ಆದಾಯವು 540 ಕೋಟಿ. ಒಂದು ಬೇವಿನ ಮರದ ಕೆಳಗೆ 13 ವರ್ಷಗಳ ಹುಡುಗನಾಗಿ ಮೊಟ್ಟ ಮೊದಲು ಕಾಣಿಸಿಕೊಂಡು, ತಮ್ಮ ಜೀವನವನ್ನು ಅಲ್ಲಿಯೇ ಶ್ರೀ ಸಾಯಿ ಬಾಬಾ ಆಗಿ ಕಳೆದಿದ್ದರಿಂದ ಆ ಗ್ರಾಮವು ಪವಿತ್ರವಾದ ಕ್ಷೇತ್ರವಾಯಿತು.

Brunda Nagaraj

ಶಿರಿಡಿ ಸಾಯಿ ಬಾಬಾ ದೇವಾಲಯ

ಶಿರಿಡಿ ಸಾಯಿ ಬಾಬಾ ದೇವಾಲಯ

ಶ್ರೀ ಸಾಯಿ ಬಾಬಾ ಸ್ವಗ್ರಾಮ ಯಾವುದು? ತಂದೆ-ತಾಯಿಗಳು ಯಾರು? ಧರ್ಮ ಯಾವುದು? ಎಂಬುದು ಸಾಯಿ ಬಾಬಾ ಎಂದಿಗೂ ಯಾರಿಗೂ ಹೇಳಲಿಲ್ಲ. ಮಳೆಗಾಲ, ಬೇಸಿಗೆಕಾಲ, ಚಳಿಗಾಲ, ರಾತ್ರಿ, ಬೆಳಗ್ಗೆ ಎನ್ನದೇ ಒಂಟಿಯಾಗಿ ಆ ಮರದಕೆಳಗೆ ಕುಳಿತುಕೊಂಡು ತಪಸ್ಸು ಮಾಡುತ್ತಿದ್ದರು. ಆತನ ಮಹಿಮೆಗಳು ಲೆಕ್ಕವಿಲ್ಲದಷ್ಟು. ಎಂತಹ ಕಷ್ಟಗಳಿದ್ದರೂ ಕೂಡ ಮಾರ್ಗವನ್ನು ತೋರಿಸುವ ಗುರು ಶಿರಿಡಿ ಸಾಯಿ ಬಾಬಾ. ಹಾಗಾಗಿಯೇ ಇಂದಿಗೂ ಕೆಲವು ಸಾವಿರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

Brunda Nagaraj

ವೈಷ್ಣವ ದೇವಿ ದೇವಾಲಯ, ಜಮ್ಮು

ವೈಷ್ಣವ ದೇವಿ ದೇವಾಲಯ, ಜಮ್ಮು

ಈ ಮಹಿಮಾನ್ವಿತವಾದ ದೇವಾಲಯದ ವಾರ್ಷಿಕ ಆದಾಯವು 500 ಕೋಟಿಗಿಂತ ಹೆಚ್ಚು ಎಂದೇ ಹೇಳಬಹುದು. ಮೂರು ದೇವಿಗಳ ಮೂರ್ತಿಯಾಗಿ ನೆಲೆಸಿರುವ ಈ ತಾಯಿಯನ್ನು ದರ್ಶಿಸಲು ಬರುವ ಭಕ್ತರಿಗೆ ಧರ್ಮ ಹಾಗು ಕಾಮ ಮೋಕ್ಷಗಳನ್ನು ಪ್ರಸಾಧಿಸಿ ಜಗತ್ ಜನನಿಯಾಗಿ ಜಮ್ಮುವಿನಲ್ಲಿ ನೆಲೆಸಿದ್ದಾಳೆ ವೈಷ್ಣವ ದೇವಿ. ಈ ದೇವಿಯ ದರ್ಶನಕ್ಕೆ ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಭಕ್ತರು ಭೇಟಿ ನೀಡುತ್ತಾರೆ.

PC: Raju hardoi

ವೈಷ್ಣವ ದೇವಿ ದೇವಾಲಯ, ಜಮ್ಮು

ವೈಷ್ಣವ ದೇವಿ ದೇವಾಲಯ, ಜಮ್ಮು

ವೈಷ್ಣವ ದೇವಿಯನ್ನು ದರ್ಶಿಸಿದ ಯಾರೇ ಭಕ್ತಯರಿಗೂ ನ್ಯಾಯವಾದ ಕೋರಿಕೆಗಳನ್ನು ತೀರಿಸದೇ, ಬರೇ ಕೈನಲ್ಲಿ ಭಕ್ತರನ್ನು ಆಕೆ ಕಳುಹಿಸುವುದಿಲ್ಲ ಎಂದು ಭಕ್ತರ ದೃಢವಾದ ನಂಬಿಕೆಯಾಗಿದೆ. ಪ್ರತಿ ವರ್ಷ ಈ ಮಹಿಮಾನ್ವತವಾದ ದೇವಾಲಯಕ್ಕೆ 10 ಮಿಲಿಯನ್ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಒಂದು ವರ್ಷದ ಆದಾಯವು 500 ಕೋಟಿ ಎಂದು ಲೆಕ್ಕಾಚಾರ ಹಾಕಲಾಗಿದೆ. 1.2 ಟನ್ನಗಳಷ್ಟು ಚಿನ್ನವನ್ನು ದೇವಾಲಯದಲ್ಲಿದೆ ಎಂಬುದು ಮತ್ತೊಂದು ವಿಶೇಷ.

PC: Designernj

ಸಿದ್ಧಿ ವಿನಾಯಕ ದೇವಾಲಯ, ಮುಂಬೈ

ಸಿದ್ಧಿ ವಿನಾಯಕ ದೇವಾಲಯ, ಮುಂಬೈ

ಮುಂಬೈ ಎಂದ ತಕ್ಷಣ ಮೊದಲಿಗೆ ನೆನಪಾಗುವುದೇ ಸಿದ್ದಿ ವಿನಾಯಕ ದೇವಾಲಯ. ಇಲ್ಲಿನ ಮತ್ತೊಂದು ಪ್ರಮುಖವಾದ ದೇವಾಲಯವು ಕೂಡ ಇದೆ. ಅದೇ ಮುಂಬೈನ ಪಿತ್ವಾಲ ಗ್ರಾಮದಲ್ಲಿನ ವಿನಾಯಕನ ದೇವಾಲಯ. ಮುಂಬೈಗೆ ಭೇಟಿ ನೀಡುವ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಸ್ಥಳಗಳಲ್ಲಿ ಈ ದೇವಾಲಯವು ಕೂಡ ಒಂದು. ನಮ್ಮ ದಕ್ಷಿಣ ಭಾರತದಲ್ಲಿರುವ ಹಾಗೆ ದೊಡ್ಡ ದೊಡ್ಡ ದೇವಾಲಯಗಳೇನೂ ಅಲ್ಲ, ಬದಲಾಗಿ ಚಿಕ್ಕದಾದ ದೇವಾಲಯವೇ ಈ ಸಿದ್ಧಿ ವಿನಾಯಕನ ದೇವಾಲಯವಾಗಿದೆ. ಸಾವಿರಾರೂ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದೇವಾಲಯಕ್ಕೆ ವರ್ಷಕ್ಕೆ 25000 ದಿಂದ ಲಕ್ಷದವರೆಗೆ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಗೋಲ್ಡನ್ ಟೆಂಪಲ್, ಅಮೃತ್‍ಸರ್

ಗೋಲ್ಡನ್ ಟೆಂಪಲ್, ಅಮೃತ್‍ಸರ್

ಭಾರತದಲ್ಲಿರುವ ಈ ಗೋಲ್ಡನ್ ಟೆಂಪಲ್, ಹರಮಿಂದರ್ ಸಾಹೀಬ್ ಎಂದು ಕೂಡ ಕರೆಯುತ್ತಾರೆ. ಇದು ಪ್ರಪಂಚದಲ್ಲಿನ ಅದ್ಭುತವಾದ ಹಾಗು ಪವಿತ್ರವಾದ ದೇವಾಲಯಗಳಲ್ಲಿ ಒಂದು. ಪ್ರಕಾಶಿಸುವ ಈ ಗೋಲ್ಡನ್ ಟೆಂಪಲ್ ಸುತ್ತ ಬಿಳಿ ಭವನಗಳು ಮತ್ತು ಪವಿತ್ರವಾದ ನದಿ ಕೂಡ ಇಲ್ಲಿದೆ. ಆದರೆ ಈ ದೇವಾಲಯದ ಸಂಪತ್ತನ್ನು ರಹಸ್ಯವಾಗಿ ಇಟ್ಟಿದ್ದಾರೆ. ಈ ದೇವಾಲಯಕ್ಕೆ ಲಕ್ಷಾದಿ ಮಂದಿ ಭಕ್ತರು ಭೇಟಿ ನೀಡುತ್ತಾರೆ.


Prashant Ram

ಮೀನಾಕ್ಷಿ ಮಂದಿರ, ಮಧುರೈ

ಮೀನಾಕ್ಷಿ ಮಂದಿರ, ಮಧುರೈ

ಈ ಅದ್ಭುತವಾದ ದೇವಾಲಯವು ತಮಿಳುನಾಡಿನಲ್ಲಿದ್ದು, ಇದರ ವಾರ್ಷಿಕ ಆದಾಯವು 60 ಕೋಟಿ. ದೇಶ ವ್ಯಾಪಕವಾಗಿ ಪವಿತ್ರ ಹಾಗು ಪುರಾತನವಾದ ದೇವಾಲಯಗಳಲ್ಲಿ ಮಧುರೈ ಮೀನಾಕ್ಷಿಯ ದೇವಾಲಯ ಕೂಡ ಒಂದು. ಆನೇಕ ವರ್ಷಗಳ ಚರಿತ್ರೆ ಇರುವ ಈ ದೇವಾಲಯಕ್ಕೆ ಪಾಂಢ್ಯ ರಾಜರ ಕಾಲದಿಂದಲೂ ತಾಯಿ ಮೀನಾಕ್ಷಿ ಪೂಜೆಗಳನ್ನು ಸ್ವೀಕರಿಸುತ್ತಿದ್ದಾಳೆ. ಈ ದೇವಾಲಯಕ್ಕೆ 4 ಮುಖ ದ್ವಾರಗಳಿವೆ. ಧರ್ಮ, ಕಾಮ, ಮೋಕ್ಷ ದ್ವಾರಗಳಾಗಿ ಇವುಗಳನ್ನು ಕರೆಯುತ್ತಾರೆ ಎಂದು ಪುರಾಣ ಗ್ರಂಥಗಳಲ್ಲಿ ಹೇಳಲಾಗಿದೆ. ಎತ್ತರವಾದ ಗೋಪುರವನ್ನು ಹೊಂದಿರುವ ಈ ದೇವಾಲಯವು ನಗರದಲ್ಲಿನ ಪ್ರಧಾನವಾದ ಆಕರ್ಷಣೆಯಾಗಿದೆ.

Wiki Commons

ಮೀನಾಕ್ಷಿ ಮಂದಿರ, ಮಧುರೈ

ಮೀನಾಕ್ಷಿ ಮಂದಿರ, ಮಧುರೈ

ಹಿಂದೂಗಳು ಪವಿತ್ರವಾಗಿ ಪೂಜೆ ಮಾಡುವ ಈ ದೇವಾಲಯಕ್ಕೆ ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಮೀನಾಕ್ಷಿ ಅಮ್ಮಳನ್ನು ದರ್ಶನ ಮಾಡಲು ಬರುತ್ತಾರೆ. ಪಾರ್ವತಿ ದೇವಿ ನೆಲೆಸಿರುವ ದೇವಾಲಯಕ್ಕೆ ಮಾತ್ರ ಪುರುಷರಿಗೆ ಪ್ರವೇಶವಿಲ್ಲ. ರಾಜ ಕುಲಶೇಖರ ಪಾಂಢ್ಯರ ಕಾಲದಲ್ಲಿ ನಿರ್ಮಾಣ ಮಾಡಲಾದ ಈ ದೇವಾಲಯವು ಅದ್ಭುತವಾಗಿದೆ. ಶ್ರೀಮಂತ ದೇವಾಲಯಗಳಲ್ಲಿ ಈ ದೇವಾಲಯವು ಒಂದಾಗಿದೆ. ವರ್ಷಕ್ಕೆ ಸುಮಾರು 10 ಲಕ್ಷ ಮಂದಿ ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

Wiki Commons

ಶಬರಿಮಲೈ ದೇವಾಲಯ, ಕೇರಳ

ಶಬರಿಮಲೈ ದೇವಾಲಯ, ಕೇರಳ

ಈ ಅದ್ಭುತವಾದ ದೇವಾಲಯವು ಕೇರಳದಲ್ಲಿದ್ದು, ಇದರ ವಾರ್ಷಿಕ ಆದಾಯವು 105 ಕೋಟಿ. ಅಲ್ಲಿ ನೆಲೆಸಿರುವ ದೇವತಾ ಮೂರ್ತಿ ಅಯ್ಯಪ್ಪ. ಹಿಂದೂಗಳು ಇತನನ್ನು ಹರಿಹರ ಸುತನೆಂದು ಭಾವಿಸಿ ಪೂಜೆಯನ್ನು ಮಾಡುತ್ತಾರೆ. ಕೇರಳದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಈ ದೇವಾಲಯವಿದೆ. ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿದ್ದು, ದಟ್ಟವಾದ ಅರಣ್ಯದ ಮಧ್ಯೆಯಲ್ಲಿ 18 ಬೆಟ್ಟಗಳ ನಡುವೆ ಕೇಂದ್ರೀಕೃತಗೊಂಡಿದೆ. ಇಲ್ಲಿಗೆ ಯಾತ್ರೆಗಳು ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗಿ ಜನವರಿ ತಿಂಗಳಿನಲ್ಲಿ ಸಮಾಪ್ತಿಯಾಗುತ್ತದೆ. ಈ ಪುಣ್ಯ ಸ್ಥಳಕ್ಕೆ ದಕ್ಷಿಣಾಧಿ ಭಕ್ತರೇ ಅಲ್ಲದೇ ದೇಶದ ಮೂಲೆ-ಮೂಲೆಗಳಿಂದಲೂ ಭೇಟಿ ನೀಡುತ್ತಾರೆ.

ಜಗನ್ನಾಥ ದೇವಾಲಯ

ಜಗನ್ನಾಥ ದೇವಾಲಯ

ಈ ಜಗನ್ನಾಥ ದೇವಾಲಯದ ವಾರ್ಷಿಕ ಆದಾಯವು 208 ಕೆ.ಜಿ ಬಂಗಾರ ಮತ್ತು 25,7411 ಎಕರೆಗಳಷ್ಟು ಸ್ಥಳಗಳು. ಸ್ವಾಮಿ ಜಗನ್ನಾಥನನ್ನು ಅತ್ಯಂತ ಶ್ರೀಮಂತ ದೇವಾಲಯವಾಗಿ ಗುರುತಿಸಲು ಭಾರತೀಯ ಸರ್ಕಾರ 30.000 ಎಕರೆಗಳ ಭೂಮಿಯನ್ನು ದೇವಾಲಯಕ್ಕೆ ನೀಡಿದ್ದಾರೆ.

somewhereintheworldtoday

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ನಮ್ಮ ಭಾರತ ದೇಶದಲ್ಲಿರುವ ಪ್ರಸಿದ್ಧವಾದ ದೇವಾಲಯಗಳಲ್ಲಿ ಇದು ಕೂಡ ಒಂದು. ಇದರ ವಾರ್ಷಿಕ ಆದಾಯವು 109 ಕೆ.ಜಿ ಬಂಗಾರ. ಇದೊಂದು ಪ್ರವಾಸಿ ಕ್ಷೇತ್ರ ಕೂಡ ಆಗಿದೆ. ಸೋಮನಾಥದಲ್ಲಿನ ಲಿಂಗವು ದ್ವಾದಶ ಜ್ಯೋತಿರ್‍ಲಿಂಗಗಳಲ್ಲಿ ಆದಿ ಜ್ಯೋತಿರ್‍ಲಿಂಗವಾಗಿದೆ. ಪ್ರಸ್ತುತ ಇರುವ ದೇವಾಲಯವು ಸರ್ದಾರ್ ವಲ್ಲಭಾಯ್ ಪಟೇಲ್ ನೇತೃತ್ವದಲ್ಲಿ ನಿರ್ಮಾಣವಾಯಿತು. ಇದನ್ನು ಪ್ರಭಾಸ್ ಪಟ್ಟಣ ಎಂದೂ ಕೂಡ ಕರೆಯುತ್ತಾರೆ. ಸೋಮನಾಥ ದೇವಾಲಯವು ಗುಜರಾತ್ ರಾಜ್ಯದಲ್ಲಿದೆ.

PC:Bkjit

ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ

ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ

ಭಕ್ತರ ಹೃದಯದಲ್ಲಿ ನಿಜವಾದ ಕೈಲಾಸವಾಗಿ ಗುರುತಿಸಿರುವ ಪೂಣ್ಯಕ್ಷೇತ್ರವಾಗಿದೆ ಈ ಕಾಶಿ ವಿಶ್ವನಾಥ ದೇವಾಲಯ. ಈ ದೇವಾಲಯದ ವಾರ್ಷಿಕ ಆದಾಯವು ಬಹಿರಂಗಗೊಳಿಸಿಲ್ಲ. ಗಂಗ ನದಿ ತೀರದಲ್ಲಿರುವ ಈ ಜ್ಯೋತಿರ್‍ಲಿಂಗ ಉತ್ತರ ಪ್ರದೇಶದ ವಾರಣಾಸಿ ಪಟ್ಟಣದಲ್ಲಿದೆ. ಇದೊಂದು ಪವಿತ್ರವಾದ ಶೈವ ಕ್ಷೇತ್ರವಾಗಿದೆ. ಇಲ್ಲಿಯೇ ಅನ್ನಪೂರ್ಣ ದೇವಿ, ವಿಶಾಲಕ್ಷಿ ದೇವಿ ದೇವಾಲಯಗಳಿವೆ. ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕಾದ ತೀರ್ಥಕ್ಷೇತ್ರವೇ ಈ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ.

PC: Kunal Mukherjee


ಮಹಾಲಕ್ಷ್ಮೀ ದೇವಾಲಯ, ಕೊಲ್ಲಾಪುರ್

ಮಹಾಲಕ್ಷ್ಮೀ ದೇವಾಲಯ, ಕೊಲ್ಲಾಪುರ್

ಮಹಾರಾಷ್ಟ್ರದಲ್ಲಿನ ಸಹ್ಯಾದ್ರಿ ಪರ್ವತದಲ್ಲಿ ಪಂಚಗಂಗಾನದಿ ತೀರದಲ್ಲಿ ನೆಲೆಸಿರುವ ಮಹಿಮಾನ್ವಿತವಾದ ದೇವಾಲಯವೇ ಮಹಾಲಕ್ಷ್ಮೀ ದೇವಾಲಯ. ದೇವಿ ಭಗವತದಲ್ಲಿ ಈ ಕೊಲ್ಲಾಪುರದ ದೇವಿಯ ಬಗ್ಗೆ ಉಲ್ಲೇಖಗಳಿವೆ. ಅಷ್ಟಾದಶ ಶಕ್ತಿ ಪೀಠಗಳಲ್ಲಿ ಪುಣ್ಯ-ಮೋಕ್ಷ ಪೀಠವಾಗಿ ಈ ದೇವಾಲಯವು ಹೆಸರುವಾಸಿಯಾಗಿದೆ. ಪ್ರಣಯ ಕಾಲದಲ್ಲಿಯೂ ಕೂಡ ಲಕ್ಷ್ಮೀ-ನಾರಾಯಣರು ನೆಲೆಸಿರುತ್ತಾರೆ ಎಂಬುದು ಭಕ್ತ ನಂಬಿಕೆ.

PC: Tanmaykelkar


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X