Search
  • Follow NativePlanet
Share
» »ಸಾವಿನ ರಸ್ತೆ ಹಾಗೂ ಜನರನ್ನು ಹಿಂಬಾಲಿಸುವ ತಲೆ ತುಂಡಾದ ದೆವ್ವ

ಸಾವಿನ ರಸ್ತೆ ಹಾಗೂ ಜನರನ್ನು ಹಿಂಬಾಲಿಸುವ ತಲೆ ತುಂಡಾದ ದೆವ್ವ

ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಸುಮಾರು 587 ಕಿ.ಮೀ ದೂರದಲ್ಲಿನ ಸುಂದರವಾದ ಪರ್ವತ ಶ್ರೇಣಿಗಳಲ್ಲಿ ಕುರ್ಸಿಯಾಂಗ ಕೂಡಾ ಒಂದು. ಇದು ಸಮುದ್ರ ಮಟ್ಟದಿಂದ ಸುಮಾರು 1500 ಮೀ. ಎತ್ತರದಲ್ಲಿದೆ. ಈ ಸುಂದರವಾದ ಬೆಟ್ಟ ಪ್ರದೇಶವನ್ನು ನಿರ್ಮಿಸಿರುವ ಖ್ಯಾತಿ ಬ್ರಿಟಿಷರಿಗೆ ಸಲ್ಲುತ್ತದೆ. ಇಲ್ಲಿರುವ ಅನೇಕ ಬೆಟ್ಟಗಳಲ್ಲಿ ಒಂದು ಡಾವ್ ಹಿಲ್ಸ್. ಇದು ಪ್ರಾಕೃತಿಕ ಸೌಂದರ್ಯದ ವಿಷ್ಯದಲ್ಲಿ ಬಹಳ ಸುಂದರವಾಗಿದೆ ಎನ್ನಲಾಗುತ್ತದೆ. ತನ್ನ ಪ್ರಕೃತಿ ಸೌಂದರ್ಯವನ್ನು ಹೊರತುಪಡಿಸಿ ಇದು ತನ್ನ ಭಯಾನಕ ಅನುಭವವನ್ನು ನೀಡುವುದರಲ್ಲೂ ಫೇಮಸ್ ಆಗಿದೆ. ಇಲ್ಲಿ ಇಂತಹದೊಂದು ರೀತಿಯ ಭಯಾನಕ ಅನುಭವ, ನೆಗೆಟಿವ್ ಎನರ್ಜಿ ಇದೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ.

ಪ್ರೇತಬಾಧಿತ ಹಿಲ್ ಸ್ಟೇಶನ್

ಪ್ರೇತಬಾಧಿತ ಹಿಲ್ ಸ್ಟೇಶನ್

ಡಾರ್ಜಲಿಂಗ್‍ನಿಂದ ಸುಮಾರು 30 ಕಿ.ಮೀ ದೂರದ ಕುರ್ಸಿಯಾಂಗ್‍ನಲ್ಲಿರುವ ದೇಶದ ಅತ್ಯಂತ ದೊಡ್ಡ ಪ್ರೇತಭಾದಿತ ಹಿಲ್‍ಸ್ಟೇಶನ್ ಡಾವ್ ಹಿಲ್. ಈ ಸ್ಥಳವು ತನ್ನ ಅಸಾಧಾರಣ ಅನುಭವದಿಂದಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕುಖ್ಯಾತಿ ಹೊಂದಿದೆ. ಈ ಬೆಟ್ಟದಲ್ಲಿ ಅನೇಕ ಭಯಾನಕ ಕಥೆಗಳು ಸಂಬಂಧಿಸಿವೆ. ಬೆಟ್ಟಗಳ ಸುಂದರತೆಯ ಜೊತೆಗೆ ಸಾವಿನ ರಸ್ತೆ, ತಲೆ ತುಂಡಾದ ಭೂತ, ಪ್ರೇತಬಾಧಿತ ಶಾಲೆ, ಭೂತ-ಪ್ರೇತಗಳ ಕಥೆಗಳ ಮನೆ ಎಂದೇ ಹೇಳಲಾಗುತ್ತದೆ.

ಇದನ್ನೂ ಓದಿ :ದೆಹಲಿಯಿಂದ ಟೋಕಿಯೋಗೆ ಬರೀ 30 ನಿಮಿಷದಲ್ಲಿ ತಲುಪ್ತೀರಾಇದನ್ನೂ ಓದಿ :ದೆಹಲಿಯಿಂದ ಟೋಕಿಯೋಗೆ ಬರೀ 30 ನಿಮಿಷದಲ್ಲಿ ತಲುಪ್ತೀರಾ

ಸಾವಿನ ರಸ್ತೆ

ಸಾವಿನ ರಸ್ತೆ

ಇಲ್ಲೊಂದು ಬೆಟ್ಟದ ರಸ್ತೆ ಇದೆ ಅದನ್ನು ಸಾವಿನ ರಸ್ತೆ ಎನ್ನಲಾಗುತ್ತದೆ. ಈ ರಸ್ತೆಯು ಡಾವ್ ಹಿಲ್ಸ್ ಹಾಗು ಫಾರೆಸ್ಟ್ ಆಫೀಸ್‍ನ ನಡುವೆ ಬರುತ್ತದೆ. ಇಲ್ಲಿ ಪ್ರತಿದಿನ ಹಳ್ಳಿಯ ಕಟ್ಟಿಗೆ ಕಡಿಯುವವರು ಕಟ್ಟಿಗೆ ಕಡಿಯಲು ಬಂದು ಕಾಡಿನ ರಸ್ತೆಯ ಮೂಲಕ ಹೋಗುತ್ತಿದ್ದರು. ಇಲ್ಲಿ ತಲೆ ತುಂಡಾಗಿರುವ ಹುಡುಗ ಓಡಾಡುತ್ತಿರುತ್ತಾನೆ ಎನ್ನುತ್ತಾರೆ ಇಲ್ಲಿನ ಸ್ಥಳಿಯರು.

ತಲೆ ತುಂಡಾಗಿರುವ ದೆವ್ವ

ತಲೆ ತುಂಡಾಗಿರುವ ದೆವ್ವ

ಅನೇಕ ಭಯಾನಕ ಘಟನೆಗಳು ಈ ತಲೆ ತುಂಡಾಗಿರುವ ದೆವ್ವದ ಬಗ್ಗೆ ಅನೇಕ ಭಯಾನಕ ಘಟನೆಗಳು ಸೇರಿಕೊಂಡಿವೆ. ಈ ದೆವ್ವ ಯಾರನ್ನಾದರೂ ಹಿಂಬಾಲಿಸುತ್ತನೇ ಇರುತ್ತದೆ. ಇಲ್ಲಿ ಪ್ರೇತಾತ್ಮ ತನ್ನ ಕೆಂಪು ಕಣ್ಣಿನಿಂದ ಗುರಾಯಿಸುತ್ತಿರುತ್ತದೆ ಎನ್ನುತ್ತಾರೆ ಸ್ಥಳೀಯರು. ಅಷ್ಟೇ ಅಲ್ಲದೆ ಇಲ್ಲಿ ಇನ್ನೊಂದು ಮಹಿಳೆಯ ಆತ್ಮ ಕೂಡಾ ಓಡಾಡುತ್ತಿರುತ್ತದೆ ಎನ್ನಲಾಗುತ್ತದೆ.

ಕೆಟ್ಟ ಗಾಳಿ

ಕೆಟ್ಟ ಗಾಳಿ

ಡಾವ್ ಹಿಲ್ಸ್‌ನ ಕಾಡು ನಿಜಕ್ಕೂ ಭಯಾನಕ ವಾತಾವರಣವನ್ನು ಸೃಷ್ಟಿಸುತ್ತದೆ. ಇಲ್ಲಿನ ಗಾಳಿಯೇ ಕೆಟ್ಟದು ಎನ್ನುತ್ತಾರೆ, ಈ ಕಾಡಿಗೆ ಹೋಗಲು ಪ್ರಯತ್ನಿಸುವವರು ತಮ್ಮ ಮಾನಸಿಕ ಸಂತುಲನವನ್ನೇ ಕಳೆದುಕೊಳ್ಳುತ್ತಾರೆ. ಮಾನಸಿಕ ಸಂತುಲನ ಕಳೆದುಕೊಂಡ ವ್ಯಕ್ತಿಗಳು ತಮ್ಮನ್ನು ತಾವೇ ಸಾಯಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಅಲ್ಲಿಗೆ ಬಂದ ಪ್ರವಾಸಿಗರನ್ನು ಕಾಡಿನೊಳಗೆ ಹೋಗದಂತೆ ಸ್ಥಳೀಯರು ಹೇಳುತ್ತಾರೆ.

ಡಾವ್ ಹಿಲ್ಸ್‌ನ ಭೂತದ ಶಾಲೆ

ಡಾವ್ ಹಿಲ್ಸ್‌ನ ಭೂತದ ಶಾಲೆ

ಡಾವ್ ಹಿಲ್ಸ್‌ನಲ್ಲಿರುವ 100ವರ್ಷ ಹಳೆಯ ವಿಕ್ಟೋರಿಯಾ ಬಾಯ್ಸ್ ಹೈ ಸ್ಕೂಲ್ ಪ್ರೇತಭಾದಿತ ಸ್ಥಳಗಳಲ್ಲಿ ಸೇರಿಕೊಂಡಿದೆ. ಈ ಸ್ಥಳದ ಸುತ್ತಮುತ್ತಲು ಅನೇಕ ಅಸಾಧಾರಣ ಸಾವುಗಳು ಸಂಭವಿಸಿವೆ. ಆ ಕೆಟ್ಟ ಶಕ್ತಿಗಳ ಪ್ರಭಾವ ಈ ಶಾಲೆಯ ಮೇಲಿದೆ ಎನ್ನಲಾಗುತ್ತದೆ. ಈ ಶಾಲೆಯ ಒಳಗಿನಿಂದ ಕಿರುಚಾಡುವ ಸದ್ದು ಕೇಳಿ ಬರುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಕುರ್ಸಿಯಾಂಗ್ ತಲುಪುವುದು ಹೇಗೆ?

ಕುರ್ಸಿಯಾಂಗ್ ತಲುಪುವುದು ಹೇಗೆ?

ಕುರ್ಸಿಯಾಂಗ್ ಕೋಲ್ಕತ್ತಾದಿಂದ 587 ಕಿ.ಮಿ ದೂರದಲ್ಲಿದೆ. ಡಾರ್ಜಿಲಿಂಗ್‌ನಿಂದ 30 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದ ಏರ್‌ಫೋರ್ಟ್ ಅಂದ್ರೆ ಬಾಗಡೋಗರ ಏರ್‌ಪೋರ್ಟ್, ಕೊಲ್ಕತ್ತಾ ಏರ್‌ಪೋರ್ಟ್ ಮಾರ್ಗವಾಗಿಯೂ ಇಲ್ಲಿಗೆ ಬರಬಹುದು. ರೈಲಿನಲ್ಲಿ ಬರೋದಾದರೆ ಕುರ್ಸಿಯಾಂಗ್ ರೈಲ್ವೆ ಸ್ಟೇಶನ್‌ನ ಮೂಲಕ ಹೋಗಬಹುದು.

Read more about: india travel haunted kolkata
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X