• Follow NativePlanet
Share
Menu
» »ಚೆನ್ನೈನಲ್ಲಿರುವ ಅತ್ಯಂತ ಭಯಾನಕವಾದ ಪ್ರದೇಶವಿದು....

ಚೆನ್ನೈನಲ್ಲಿರುವ ಅತ್ಯಂತ ಭಯಾನಕವಾದ ಪ್ರದೇಶವಿದು....

Written By:

ಚೆನ್ನೈನನ್ನು ಒಂದು ಕಾಲದಲ್ಲಿ ಮದ್ರಾಸ್ ಎಂದು ಕರೆಯುತ್ತಿದ್ದರು. ಇದು ತಮಿಳುನಾಡಿನ ಒಂದು ರಾಜಧಾನಿ. ಚೆನ್ನೈ ಒಂದು ಪ್ರಧಾನವಾದ ಮಹಾನಗರ ಹಾಗೆಯೇ ಪ್ರಪಂಚ ಪ್ರಖ್ಯಾತಿಗಳಿಸಿರುವ ನಗರ. ಇದು ದಕ್ಷಿಣ ಭಾರತದ ಅತ್ಯಂತ ಮುಖ್ಯವಾದ ನಗರಗಳಲ್ಲಿ ಒಂದಾಗಿದೆ. ಹಾಗೆಯೇ ಇದು ವಾಣಿಜ್ಯ, ಸಂಸ್ಕøತಿ ಹಾಗು ಆರ್ಥಿಕ ರಂಗಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.

ನಮ್ಮ ದೇಶದಲ್ಲಿ ಹಲವಾರು ಭಯಂಕರವಾದ ಪ್ರದೇಶಗಳು ಇವೆ. ಆ ಪ್ರದೇಶಗಳಲ್ಲಿ ಚೆನ್ನೈನಂತಹ ಸುಂದರವಾದ ಸ್ಥಳಗಳಲ್ಲಿ ಭಯಾನಕವಾದ ಪ್ರದೇಶಗಳು ಕೂಡ ಇದೆ ಎಂಬುದು ಮರೆಯಬಾರದು. ಅಸಲಿಗೆ ಆ ಭಯಂಕರವಾದ ಪ್ರದೇಶಗಳು ಯಾವುವು? ಅವುಗಳು ಎಲ್ಲಿವೆ? ಎಂಬ ಹಲವಾರು ಪ್ರೆಶ್ನೆಗಳಿಗೆ ಉತ್ತರ ಲೇಖನದ ಮೂಲಕ ತಿಳಿದುಕೊಳ್ಳಿ.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಚೆನ್ನೈನಲ್ಲಿರುವ ಈ ಡಿಮಾಂಡ್ ಕಾಲೂನಿಯ ಕುರಿತು ಯಾರಿಗಾದರೂ ಕೇಳಿದರೆ ಹೆದರದೇ ಇರುವುದಿಲ್ಲ. ಅದು ಅತ್ಯಂತ ಪುರಾತನವಾದ ಕಾಲೂನಿ. ಇದಕ್ಕಿಂದ ಮುಂಚೆ ಕೆಲಸ ಮಾಡಿದ ಸೆಕ್ಯೂರಿಟಿ ಗಾಡ್ರ್ಸ್ ಹಲವಾರು ಮಂದಿ ಮೃತರಾಗಿದ್ದಾರೆ. ಕಿಟಕಿಯಲ್ಲಿ ಕಾಣಿಸುವ ಅಗೋಚರವಾದ ಆತ್ಮವು ಕಣ್ಣಿಗೆ ಕಾಣಿಸಿ ಕ್ಷಣ ಮಾತ್ರದಲ್ಲಿ ಮಾಯವಾಗಿರುವ ಹಲವಾರು ಘಟನೆಗಳನ್ನು ಅಲ್ಲಿನ ಸ್ಥಳೀಯರು ಕಂಡು ಭಯಪಟ್ಟಿದ್ದಾರೆ. ಹೀಗೆ ಹಲವಾರು ಮಂದಿ ಹಲವಾರು ಕಥೆಗಳ ಮೂಲಕ ಆ ಕಾಲೂನಿಯ ಬಗ್ಗೆ ತಿಳಿಸುತ್ತಾರೆ.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಹೆಚ್ಚಾಗಿ ರಾತ್ರಿ ಸಮಯದಲ್ಲಿ ಅಗೋಚರವಾದ ಆತ್ಮದ ಸಂಚಾರವಿದೆ ಎಂದೂ, ವಿಭಿನ್ನವಾದ ಭಯಾನಕ ಶಬ್ಧಗಳು ಕೇಳಿಸುತ್ತವೆಯಂತೆ. ಇಂದಿಗೂ ಆ ಕಾಲೂನಿಯ ಸಮೀಪದಲ್ಲಿ ಹೋಗುವ ಪ್ರಯತ್ನ ಯಾರೂ ಕೂಡ ಮಾಡುವುದಿಲ್ಲವಂತೆ. ಹಾಗಾದರೆ ನೀವೇ ಊಹಿಸಿ ಆ ಕಾಲೂನಿ ಇನ್ನೆಷ್ಟು ಭಯಾನಕವಾಗಿರಬಹುದು ಎಂದು.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಈ ಕಾಲೂನಿಯ 2 ಭಾಗಗಳಲ್ಲಿಯೂ ಒಂದೊಂದು ಏರಿಯಾಗಳಿವೆ. ಆ ಏರಿಯಾದ ಜನರು ರಾತ್ರಿ ಹಾಗು ಸಾಯಂಕಾಲವಾಗುತ್ತಿದ್ದಂತೆ ಆ ಭಯಾನಕವಾದ ಕಾಲೂನಿಯ ಮುಂದೆ ಯಾರು ಸುಳಿದಾಡುವುದಿಲ್ಲ. ಏಕೆಂದರೆ ಆ ಸಮಯದಲ್ಲಿ ವಿಭಿನ್ನವಾದ ಶಬ್ಧಗಳಿಂದ ಅಂದರೆ ಅಳುವುದು, ಕೂಗುವುದು, ನಗುವುದು, ಗೆಜ್ಜೆಯ ಶಬ್ಧ ಕೇಳಿಸುತ್ತದೆ ಎಂತೆ. ಇದರಿಂದ ಹಲವಾರು ಜನರು ಭಯಬೀತರಾಗಿ ಆ ಕಾಲೂನಿಯ ಸಮೀಪದಲ್ಲಿ ಒಂದು ನರ ಪ್ರಾಣಿಯು ತಿರುಗಾಡುವುದಿಲ್ಲ.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಈ ಏರಿಯಾದ ಬಗ್ಗೆ ಹಾಗು ಆ ಮನೆಯ ಬಗ್ಗೆ ತಮಿಳುನಾಡಿನಲ್ಲಿ ಡಿಮಾಂಟ್ ಕಾಲೂನಿ ಎಂಬ ಒಂದು ದೆವ್ವದ ಸಿನಿಮಾ ಕೂಡ ತೆಗೆದರು. ಆ ಸಿನಿಮಾ ತೆಗೆದ ನಂತರ ಆ ಏರಿಯಾ ಹಾಗು ಮನೆ ಅತ್ಯಂತ ಪ್ರಸಿದ್ಧಿ ಹೊಂದಿತು.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಹಾಗಾಗಿಯೇ ಹಲವಾರು ಮಂದಿ ಪ್ರತಿ ದಿನ ಡಿಮಾಂಟ್ ಮನೆಯನ್ನು, ಆ ಭಯಾನಕವಾದ ಕಾಲೂನಿಯನ್ನು ಕೆಲವು ವರ್ಷಗಳ ಹಿಂದೆ ಚೆನ್ನೈ ಸರ್ಕಾರ ಆ ಕಾಲೂನಿಯನ್ನು ನಾಶ ಮಾಡಲು ಮುಂದಾದರು.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಆ ವಿಧವಾಗಿ ಸಿನಿಮಾದ ಮೂಲಕ ಪ್ರಸಿದ್ಧಿ ಹೊಂದಿದ ಆ ಡಿಮಾಂಟ್ ಕಾಲೂನಿಯಲ್ಲಿ ಏನು ನಡೆಯುತ್ತಿದೆ? ಅಲ್ಲಿನ ಜನರಿಗೆ ಕೇಳಿದರೆ ಆನೇಕ ಕಥೆಗಳನ್ನು ಹೇಳುತ್ತಾರೆ. ಇದು 19 ನೇ ಶತಮಾನದಲ್ಲಿ ಪೋರ್ಚುಗೀಸ್ ದೇಶಕ್ಕೆ ಸೇರಿದ ಡಿಮಾಂಟ್ ಎಂಬ ಒಬ್ಬ ಬಿಜಿನೆಸ್ ಮ್ಯಾನ್ ಈ ಚೆನ್ನೈಗೆ ವ್ಯಾಪಾರದ ಸಲುವಾಗಿ ಬಂದಿದ್ದನಂತೆ.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಅದರ ಕುರಿತು ತಿಳಿದುಕೊಳ್ಳಲು ಡಿಮಾಂಟ್ ಹಲವಾರು ಮಂದಿ ಮಂತ್ರಗಾರರನ್ನು ಕರೆದು ತನ್ನ ಪತ್ನಿಯ ಪರಿಸ್ಥತಿಯ ಬಗ್ಗೆ ತಿಳಿಸಿದರು. ಈ ಮನೆಯಲ್ಲಿ ಯಾವುದೋ ಒಂದು ದುಷ್ಟ ಶಕ್ತಿಯ ಸಂಚಾರವಿದೆ ಎಂದೂ ಹಾಗಾಗಿಯೇ ತಮ್ಮ ಪತ್ನಿಗೆ ಈ ಸ್ಥಿತಿ ಬಂದಿದೆ ಎಂದು ತಿಳಿಸಿದರು.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಆ ನಂತರ ಒಂದು ದಿನ ಯಾವುದೇ ಕಾರಣವಿಲ್ಲದೆಯೇ ತನ್ನ ಮಗ ಕೂಡ ಭಯಂಕರವಾದ ರೀತಿಯಲ್ಲಿ ಮೃತನಾದನಂತೆ. ಅದನ್ನು ಕಂಡ ಡಿಮಾಂಟ್ ಕಾಲೂನಿಯ ಅಕ್ಕ-ಪಕ್ಕದ ಜನ ಭಯಭೀತರಾದರು. ಹಾಗೆಯೇ ಆತನ ಹೆಂಡತಿ ಕೆಲವು ದಿನಗಳಲ್ಲಿಯೇ ಹುಚ್ಚಿಯಾಗಿ ಮಾರ್ಪಾಟಾದಳಂತೆ.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಈ 2 ವಿಷಯದಿಂದ ಬೇಸರವಾಗಿದ್ದ ಡಿಮಾಂಟ್‍ಗೆ ಮತ್ತೊಂದು ವಿಷಯ ಕೂಡ ಗೊತ್ತಾಯಿತು. ಅದೆನೆಂದರೆ ಡಿಮಾಂಟ್ ಬೇರೆ ಕಂಪೆನಿಯಲ್ಲಿ ಹೂಡಿದ್ದ ಹಣವು ಕೂಡ ಲಾಸಾಗಿ ಹೋಯಿತು.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಇದೆಲ್ಲಾ ಭರಿಸಲಾಗದ ಡಿಮಾಂಟ್ ತನ್ನ ಪತ್ನಿ ಹಾಗು ಮಗನನ್ನು ಕೂಡ ಕಳೆದುಕೊಂಡಿದ್ದರಿಂದ ಒಂದು ದಿನ ರಾತ್ರಿ ಸಮಯದಲ್ಲಿ ಆ ಮನೆಯಲ್ಲಿಯೇ ಬಲವಂತವಾಗಿ ಆತ್ಮಹತ್ಯೆ ಮಾಡಿಕೊಂಡನು.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಈ ವಿಧವಾಗಿ ಭಾರತಕ್ಕೆ ಬಿಜಿನೆಸ್ ಮಾಡಲು ಬಂದ ಪೋರ್ಚುಗೀಸ್ ದೇಶದವನು ತನ್ನ ಆಚಾನಕ್ಕಾಗಿ ತನ್ನ ಹೆಂಡತಿ ಹಾಗು ಮಗನನ್ನು ಕಳೆದುಕೊಂಡಿದ್ದೇ ಅಲ್ಲದೇ ತನ್ನ ವ್ಯಾಪಾರವನ್ನು ಕೂಡ ಕಳೆದುಕೊಂಡು ಕೊನೆಗೆ ಆತ್ಮಹತ್ಯೆಗೆ ಶರಣಾದನು. ಹಲವಾರು ಆಸೆಗಳನ್ನು ಹೊಂದಿದ್ದ ಆತ ಪ್ರಸ್ತುತ ಆ ಕಾಲೂನಿಯಲ್ಲಿ ಆತನೇ ದೆವ್ವವಾಗಿ ಸಂಚಾರ ಮಾಡುತ್ತಿದ್ದಾನೆ ಎಂದು ನಂಬಲಾಗುತ್ತಿದೆ.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಹಾಗೆಯೇ ಸೆಂಟ್ ಮ್ಯಾರಿಸ್‍ಗೆ ಸಮೀಪದಲ್ಲಿರುವ ಈ ಡಿಮಾಂಟ್ ಕಾಲೂನಿ, ಈ ಪೋರ್ಚುಗೀಸರು ಮೃತರಾದ ನಂತರ ರಾತ್ರಿಯ ಸಮಯದಲ್ಲಿ ವಿಭಿನ್ನವಾದ ಭಯಂಕರವಾದ ಶಬ್ಧಗಳು ಕೇಳಿಸುತ್ತವೆ ಎಂದು ಹೇಳುತ್ತಾರೆ. ಹಾಗಾಗಿಯೇ ಅಕ್ಕ ಪಕ್ಕದ ಜನರೆಲ್ಲಾ ಜಾಗ ಖಾಲಿ ಮಾಡಿದ್ದಾರೆ.

ಡಿಮಾಂಟ್ ಕಾಲೂನಿ

ಡಿಮಾಂಟ್ ಕಾಲೂನಿ

ಆ ನಂತರ ಆ ಮನೆಯ ಸುತ್ತಲೂ ಇದ್ದ ಮರವು ಹೆಮ್ಮರವಾಗಿ ಬೆಳೆದು, ಕಾಲೂನಿಯೆಲ್ಲಾ ಹರಡಿಕೊಂಡಿದೆ. ಇದರಿಂದಾಗಿ ಆ ಕಾಲೂನಿ ಮತ್ತಷ್ಟು ಭಯಂಕರವಾಗಿ ಕಾಣುತ್ತದೆ. ಇದು ಚೆನ್ನೈನ ಅತ್ಯಂತ ಭಯಂಕರವಾದ ಸ್ಥಳವಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ