Search
  • Follow NativePlanet
Share
» »ಪ್ರಪಂಚದಲ್ಲಿಯೇ ಅತ್ಯಂತ ಅಪಾಯಕಾರಿ ಮೆಟ್ಟಿಲು ಮಾರ್ಗ ಎಲ್ಲಿದೆ ಗೊತ್ತ?

ಪ್ರಪಂಚದಲ್ಲಿಯೇ ಅತ್ಯಂತ ಅಪಾಯಕಾರಿ ಮೆಟ್ಟಿಲು ಮಾರ್ಗ ಎಲ್ಲಿದೆ ಗೊತ್ತ?

ನಿಮ್ಮಲ್ಲಿ ಧೈರ್ಯ ಸಾಹಸಗಳು ಹೆಚ್ಚಾಗಿವೆಯೇ?

ಸಾಮಾನ್ಯವಾಗಿ ಯುವಕರಿಗೆ ಸಾಹಸ ಮಡುವುದೆಂದರೆ ಇಷ್ಟ. ಆದರೆ ಸಾಹಸ ಮಾಡುವ ಮುಂಚೆ ಒಂದು ಕ್ಷಣ ಯೋಚನೆ ಮಾಡಿದರೆ ಕೆಲವೊಮ್ಮೆ ಮೈ ನಡುಕ ಉಂಟಾಗುತ್ತದೆ.

ನಿಮ್ಮಲ್ಲಿ ಯಾವುದೇ ಭಯ ಇಲ್ಲದೇ ಸಾಹಸ ಮಾಡಲೇಬೇಕು ಎಂದು ನಿಮ್ಮ ಮನದಾಸೆಯಾಗಿದ್ದರೆ ಈ ಸ್ಥಳಕ್ಕೆ ಒಮ್ಮೆ ಭೇಟಿ ಕೊಡಿ.

ಬೆಟ್ಟದ ಅಂಚಿನಲ್ಲಿ ನಿರ್ಮಾಣ ಮಾಡಿರುವ ಈ ಕಟ್ಟಿಗೆಯ ಮೆಟ್ಟಿಲನ್ನು ಒಮ್ಮೆ ನೋಡಿದರೆ ಸಾಕು ಭಯ ಆವರಿಸುತ್ತದೆ.

ನಿಜವಾಗಿ ನಿಮಗೆ ಧೈರ್ಯ ಸಾಹಸ ಹೆಚ್ಚಾಗಿದ್ದಾರೆ ಲೇಖನದಲ್ಲಿ ಹೇಳಲಾಗುವ ಪ್ರದೇಶಕ್ಕೆ ಒಮ್ಮೆ ಭೇಟಿ ಕೊಡಿ.

ಬೆಟ್ಟದ ಅಂಚಿನಲ್ಲಿರುವ ಮೆಟ್ಟಿಲುಗಳ ನಡುವೆ ತೆರಳಬೇಕಾದರೆ ಧೈರ್ಯ ಬೇಕೆ ಬೇಕು.

ನೀವು ಸಹ ಪ್ರಯತ್ನ ಮಾಡಿ......

ಎಲ್ಲಿದೆ?

ಎಲ್ಲಿದೆ?

ಈ ಸಾಹಸಮಯವಾದ ತಾಣ ಇರುವುದು ಬೇರೆಲ್ಲೂ ಅಲ್ಲ ನಮ್ಮ ಭಾರತ ದೇಶದಲ್ಲಿಯೇ.

ಉತ್ತರಾಖಂಡ

ಉತ್ತರಾಖಂಡ

ಈ ಭಯಾನಕವಾದ ಮೆಟ್ಟಿಲು ಮಾರ್ಗ ಉತ್ತರಾಖಂಡದಲ್ಲಿನ ಉತ್ತರಕಾಶಿ ಜಿಲ್ಲೆಯ ಭಾರತ ಹಾಗು ಚೀನಾ ಸರಿಹದ್ದಿನಲ್ಲಿದೆ. ಇದು ಜಾಮ ಗಂಗಾ ವ್ಯಾಲಿಯಲ್ಲಿ ಈ ಮೆಟ್ಟಿಲು ಬೆಟ್ಟವನ್ನು ಕಾಣಬಹುದಾಗಿದೆ.

ಸುಮಾರು 5 ದಶಕಗಳು

ಸುಮಾರು 5 ದಶಕಗಳು

ಸುಮಾರು 5 ದಶಕಗಳ ನಂತರ ಈ ಪ್ರದೇಶಕ್ಕೆ ಸರ್ಕಾರ ಈ ಮೆಟ್ಟಿಲುಗಳ ವ್ಯವಸ್ಥೆಯನ್ನು ಮಾಡುತ್ತಲಿದೆ.

ಗತ್ಲಾಂಗಿ

ಗತ್ಲಾಂಗಿ

ಗತ್ಲಾಂಗಿ ಎಂಬ ಪ್ರದೇಶದಲ್ಲಿ ಒಂದು ಬೃಹತ್ ಬೆಟ್ಟವಿದೆ. ಆ ಬೆಟ್ಟದ ಮೇಲೆ ಸುಮಾರು 300 ಮೀಟರ್‍ವರೆವಿಗೂ ಈ ಮೆಟ್ಟಿಲು ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ಮೆಟ್ಟಿಲು ಮಾರ್ಗ

ಮೆಟ್ಟಿಲು ಮಾರ್ಗ

ಪೆಷಾವರಕ್ಕೆ ಸೇರಿದ ಪಾಟ್ನದಲ್ಲಿ 17 ನೇ ಶತಮಾನದಲ್ಲಿ ಈ ಮೆಟ್ಟಿಲುಗಳ ಮಾರ್ಗವನ್ನು ನಿರ್ಮಾಣ ಮಾಡಿದರು.

ಇಂಡಿಯಾ-ಚೈನ ಯುದ್ಧ

ಇಂಡಿಯಾ-ಚೈನ ಯುದ್ಧ

ಇಂಡಿಯಾ-ಚೈನ ಯುದ್ಧಕ್ಕೆ ಮುಂಚಿತವಾಗಿ ಹೂವು, ಚರ್ಮ, ಉಪ್ಪು ಇನ್ನೂ ಹಲವಾರು ವಸ್ತುಗಳನ್ನು ಉತ್ತರಕಾಶಿಗೆ ರಫ್ತು ಮಾಡಲು ವ್ಯಾಪರಿಗಳು ಈ ಮಾರ್ಗವಾಗಿಯೇ ತೆರಳುತ್ತಿದ್ದರಂತೆ.

ಸೈನ್ಯ

ಸೈನ್ಯ

ಸೈನ್ಯವು ಕೂಡ ಕೆಲವು ದಿನಗಳ ಕಾಲ ಇದೇ ಮಾರ್ಗವನ್ನು ಉಪಯೋಗಿಸುತ್ತಿದ್ದರಂತೆ.

1975

1975

1975 ರಿಂದ ಆ ಮಾರ್ಗವನ್ನು ಮುಚ್ಚಿಬಿಟ್ಟರಂತೆ. ಹೀಗಾಗಿ ಮೆಟ್ಟಿಲು ಮಾರ್ಗ ಕಾಲಕ್ರಮೇಣ ಧ್ವಂಸವಾಯಿತಂತೆ.

26 ಲಕ್ಷ

26 ಲಕ್ಷ

ಇದನ್ನು ಪುನರ್ ನಿರ್ಮಾಣ ಮಾಡಲು ಸರ್ಕಾರವು 26 ಲಕ್ಷಗಳನ್ನು ವ್ಯಯ ಮಾಡಿತು.

ಪೂರ್ವರೂಪ

ಪೂರ್ವರೂಪ

ಇದರಿಂದಾಗಿ ಜಿಲ್ಲಾ ಪ್ರವಾಸಿ ಶಾಖಾಧಿಕಾರಿ ಈ ಪ್ರದೇಶವನ್ನು ಸಂದರ್ಶಿಸಿ ಮತ್ತೆ ಮೆಟ್ಟಿಲು ಮಾರ್ಗಕ್ಕೆ ಪೂರ್ವ ರೂಪವನ್ನು ನೀಡಬೇಕು ಎಂದು ನಿರ್ಣಯಿಸಿದರಂತೆ.

ಪ್ರವಾಸಿಗರು

ಪ್ರವಾಸಿಗರು

ಪ್ರವಾಸಿಗರಿಗಾಗಿ ಈ ಮಾರ್ಗವನ್ನು ನಿರ್ಮಾಣ ಮಾಡಬೇಕು ಎಂದು ತೀರ್ಮಾನಿಸಿದರಂತೆ.

ಮೆಟ್ಟಿಲು ಮಾರ್ಗ

ಮೆಟ್ಟಿಲು ಮಾರ್ಗ

ಆದರೆ ಇಂಡೋ-ಟಿಬೆಟಿಯನ್ ಸರಿಹದ್ದು ಪೊಲೀಸರು ಈ ಮಾರ್ಗವನ್ನು ಹಾಗೆಯೇ ಇದ್ದರೆ ಒಳ್ಳೆಯದು ಎಂದು ಹೇಳಿದ್ದರಂತೆ. ಏಕೆಂದರೆ ಇದು ಚೈನ ಸರಿಹದ್ದಿಗೆ ಅತ್ಯಂತ ಸಮೀಪವಾಗಿದೆ.

ಅತ್ಯಂತ ಅಪಾಯಕಾರಿ ಮೆಟ್ಟಿಲು ಮಾರ್ಗ

ಅತ್ಯಂತ ಅಪಾಯಕಾರಿ ಮೆಟ್ಟಿಲು ಮಾರ್ಗ

ಇದು ಅತ್ಯಂತ ಅಪಾಯಕಾರಿ ಮೆಟ್ಟಿಲು ಮಾರ್ಗ ಎಂದು ಕೆಲವರು ವಾದಿಸುತ್ತಾರೆ. ಅಲ್ಲಿಗೆ ಹೋಗುವುದು ಎಂದರೆ ಜೀವದ ಮೇಲೆ ಆಸೆ ಬಿಟ್ಟು ಬಿಡಬೇಕು ಅಷ್ಟೇ...

ಭಧ್ರತಾ ಉಪಯೋಗಗಳು

ಭಧ್ರತಾ ಉಪಯೋಗಗಳು

ಇನ್ನೂ ಈ ಮೆಟ್ಟಿಲು ಮಾರ್ಗವನ್ನು ನಿರ್ಮಾಣ ಮಾಡುತ್ತಲೇ ಇದ್ದಾರೆ. ಕೆಲವೇ ದಿನಗಳಲ್ಲಿ ಈ ಕಾರ್ಯ ಪೂರ್ತಿಗೊಳ್ಳುತ್ತದೆ ಎಂತೆ. ಧೈರ್ಯವಿದ್ದರೆ ಒಮ್ಮೆ ಭೇಟಿ ಕೊಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X