» »ಪಕ್ಷಿಗಳು ಪ್ರತಿ ವರ್ಷವು ಆತ್ಮ ಹತ್ಯೆ ಮಾಡಿಕೊಳ್ಳತ್ತವೆ ಅದು ಎಲ್ಲಿ ಗೊತ್ತ?

ಪಕ್ಷಿಗಳು ಪ್ರತಿ ವರ್ಷವು ಆತ್ಮ ಹತ್ಯೆ ಮಾಡಿಕೊಳ್ಳತ್ತವೆ ಅದು ಎಲ್ಲಿ ಗೊತ್ತ?

Written By:

ಸಾಧಾರಾಣವಾಗಿ ಮಾನವರಿಗೆ ಕಷ್ಟಗಳು ಒದಗಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಲವಾರು ಕಷ್ಟಗಳು ಬಂದು ಯಾವುದೇ ರೀತಿಯ ಉಪಾಯಗಳು, ಮಾರ್ಗಗಳು ದೊರೆಯದಿದ್ದಾಗ ಸಾವಿಗೆ ಶರಣಾಗುತ್ತಾರೆ. ಮಾನವರೆ ಅಲ್ಲದೇ ಪಕ್ಷಿಗಳು ಕೂಡ ಆತ್ಮ ಹತ್ಯೆ ಮಾಡಿಕೊಳ್ಳುತ್ತದೆ ಎಂದರೆ ನಂಬುತ್ತೀರಾ? ಹೌದು ಭಾರತ ದೇಶದ ಅಸ್ಸಾಂ ರಾಜ್ಯದಲ್ಲಿ ಪಕ್ಷಿಗಳು ಆತ್ಮ ಹತ್ಯೆ ಮಾಡಿಕೊಳ್ಳುತ್ತಿವೆ.

ಜತೀಂಗಾ ಈಶಾನ್ಯ ಭಾರತದ ರಾಜ್ಯವಾದ ಅಸ್ಸಾಂನಲ್ಲಿರುವ ಒಂದು ಸಣ್ಣ ಹಳ್ಳಿ. ಈ ಹಳ್ಳಿಯು ಪ್ರಶಾಂತವಾದ ಪರ್ವತಗಳಿಂದ ಸುತ್ತುವರೆದಿದೆ. ಆದರೆ ಇದಕ್ಕಾಗಿ ಇದು ಪ್ರಸಿದ್ಧವಾಗಿಲ್ಲ. ವಾಸ್ತವವಾಗಿ, ಜತಿಂಗಾ ಸಂಪೂರ್ಣವಾಗಿ ಭಿನ್ನವಾದ ಕಾರಣಕ್ಕಾಗಿ ಹೆಸರುವಾಸಿಯಾಗಿದೆ ಅದೇ ಬರ್ಡ್ ಮಿಸ್ಟರಿ. ವಿಜ್ಞಾನಕ್ಕೆ ಸವಾಲು ಎಸೆದಿರುವ ಈ ಘಟನೆಗೆ ಇನ್ನೂ ಸರಿಯಾದ ಉತ್ತರ ದೊರೆತಿಲ್ಲ.

ಪ್ರಸ್ತುತ ಲೇಖನದಲ್ಲಿ ಈ ಪಕ್ಷಿಗಳು ಆತ್ಮ ಹತ್ಯೆ ಮಾಡಿಕೊಳ್ಳುವ ಕಾರಣದ ಕುರಿತು ತಿಳಿಯೋಣ.

ಎಲ್ಲಿ ನಡೆಯುತ್ತದೆ?

ಎಲ್ಲಿ ನಡೆಯುತ್ತದೆ?

ಪಕ್ಷಿಗಳ ಆತ್ಮ ಹತ್ಯೆಯು ಭಾರತ ದೇಶದ ಅಸ್ಸಾಂ ರಾಜ್ಯದ ಜತೀಂಗಾ ಎಂಬ ಹಳ್ಳಿಯಲ್ಲಿ ನಡೆಯುತ್ತದೆ. ಈ ಬರ್ಡ್ ಮಿಸ್ಟರಿಯು ಪ್ರತಿ ವರ್ಷ ಸೆಪ್ಟೆಂಬರ್ ಮತ್ತು ನಂವೆಂಬರ್ ನಡುವೆ ಸಂಭವಿಯುವ ವಿಸ್ಯಮಾನವಾಗಿದೆ.


PC:YOUTUBE

ಪಕ್ಷಿಗಳು

ಪಕ್ಷಿಗಳು

ಮಾನ್ಸೂನ್ ತಿಂಗಳುಗಳಲ್ಲಿ ಹಲವಾರು ವಲಸಿಗರು ಮತ್ತು ಸ್ಥಳೀಯ ಪಕ್ಷಿಗಳು ಗ್ರಾಮದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಹೀಗೆ ಯಾಕೆ ಸಾಯುತ್ತವೆ ಎಂಬುವುದು ಇಂದಿಗೂ ನಿಗೂಢವಾಗಿಯೇ ಇದೆ.


PC:YOUTUBE

ಸಮಯ

ಸಮಯ

ಈ ಪಕ್ಷಿಗಳು ಸೂರ್ಯಸ್ತದ ನಂತರ ಸುಮಾರು 7 ಗಂಟೆ ಹಾಗೂ 10 ಗಂಟೆಯ ನಡುವೆ ನೂರಾರು ಪಕ್ಷಿಗಳು ಆಕಾಶದಿಂದ ಇಳಿಯುತ್ತವೆ. ಕಟ್ಟಡಗಳು ಮತ್ತು ಮರಗಳಿಗೆ ಅಪ್ಪಳಿಸುವ ಮೂಲಕ ಅವುಗಳು ಸಾವಿಗೆ ತುತ್ತಾಗುತ್ತವೆ.


PC:YOUTUBE

ಸ್ಥಳೀಯರು

ಸ್ಥಳೀಯರು

ಜತಿಂಗಾ ಪ್ರದೇಶದ ಸ್ಥಳೀಯರು ಹಲವು ವರ್ಷಗಳಿಂದ, ಆಕಾಶದಲ್ಲಿ ವಾಸಿಸುವ ದುಷ್ಟ ಶಕ್ತಿಗಳು ಪಕ್ಷಿಗಳನ್ನು ತರುವಲ್ಲಿ ಕಾರಣ ಎಂದು ನಂಬಿದ್ದರು. ಆದರೆ ಹಲವಾರು ವೈಜ್ಞಾನಿಕ ಅಧ್ಯಯನ ಹಾಗೂ ಪ್ರಯೋಗಗಳ ಪ್ರಕಾರ ಹಕ್ಕಿಗಳು ಸಾಮಾನ್ಯವಾಗಿ ಮಾನ್ಸೂನ್ ಮಂಜಿನಿಂದ ದೂರ ಇರುವುದೇ ಆಗಿದೆ ಎಂದು ವರದಿ ನೀಡಿದರು.


PC:YOUTUBE

ಆ ಪಕ್ಷಿಗಳು ಯಾವುವು?

ಆ ಪಕ್ಷಿಗಳು ಯಾವುವು?

ಪಕ್ಷಿಗಳು ಉತ್ತರದಿಂದ ಮಾತ್ರ ಬರುತ್ತವೆಯಂತೆ. ಆ ಸ್ಥಳವು 1.5 ಕಿ,ಮೀ ಉದ್ದ ಮತ್ತು 200 ಮೀಟರ್ ಅಗಲವಿದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಬಲಿಯಾದ ಪಕ್ಷಿಗಳು ಬಹಳ ದೂರ ವಲಸೆ ಹೋಗದೇ ಇರುವ ಪಕ್ಷಿಗಳಾಗಿವೆ.


PC:YOUTUBE

ಎಷ್ಟು ಜಾತಿ?

ಎಷ್ಟು ಜಾತಿ?

ಆತ್ಮ ಹತ್ಯೆ ಮಾಡಿಕೊಳ್ಳುವ ಪಕ್ಷಿಗಳು ಸುಮಾರು 44 ಜಾತಿಯ ಭಿನ್ನವಾದ ಪಕ್ಷಿಗಳು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ಹತ್ತಿರದ ಕಣಿವೆಗಳು ಮತ್ತು ಬೆಟ್ಟದ ಇಳಿಜಾರುಗಳಿಂದ ಬರುತ್ತವೆ ಎಂದು ಹೇಳಲಾಗಿದೆ. ಇವುಗಳಲ್ಲಿ ಕಿಂಗ್ಫಿಷಗಳು, ಬ್ಲಾಕ್ ಬಿಟರ್ನಗಳು, ಟೈಗರ್ ಬಿಟರ್ನ್‍ಗಳು ಮತ್ತು ಪಾಂಡ್ ಹೆರಾನ್ಗಳು ಇನ್ನೂ ಹಲವಾರು ಪಕ್ಷಿಗಳು.

PC:YOUTUBE

ಸಂಶೋಧನೆಗಳು

ಸಂಶೋಧನೆಗಳು

ಕೆಲವು ವಿಜ್ಞಾನಿಗಳು ಹಾಗೂ ಪಕ್ಷಿ ವೀಕ್ಷಕರಿಂದ ಆಸಕ್ತಿದಾಯಕವಾದ ಸಂಶೋಧನೆಗಳನ್ನು ಮಾಡಲಾಗಿತ್ತು. ಅವರ ಪ್ರಕಾರ ಮಾನ್ಸೂನ್ ಕಾಲದಲ್ಲಿ ಪ್ರವಾಹದಿಂದಾಗಿ ಹೆಚ್ಚಿನ ಆತ್ಮಹತ್ಯಾ ಪಕ್ಷಿಗಳು ತಮ್ಮ ನೈಸರ್ಗಿಕ ಅವಾಸಸ್ಥಾನಗಳನ್ನು ಕಳೆದುಕೊಳ್ಳುತ್ತವೆ ಎಂದು ತೋರುತ್ತದೆ ಎಂದು ಅಭಿಪ್ರಾಯ ಪಟ್ಟರು.


PC:YOUTUBE

ಸಲೀಂ ಆಲಿ

ಸಲೀಂ ಆಲಿ

ಭಾರತದ ಅತ್ಯಂತ ಪ್ರಸಿದ್ಧ ಪಕ್ಷಿವಿಜ್ಞಾನಿ, ದಿವಗಂತ ಸಲೀಂ ಅಲಿ ಕೂಡ ಭೀತಿಗೆ ಒಳಗಾದರು. " ಈ ವಿದ್ಯಾಮಾನದ ಬಗ್ಗೆ ನನಗೆ ಗೊಂದಲ ಉಂಟಾಗುವ ವಿಷಯವೆಂದರೆ, ದಿನನಿತ್ಯದ ನಿವಾಸಿ ಪಕ್ಷಿಗಳ ಹಲವು ಜಾತಿಗಳು ವ್ಯಾಖ್ಯಾನದಂತೆ, ಅವರು ನಿದ್ದೆ ಮಾಡಬೇಕಾದಾಗ ಈ ಕ್ರಮ ಜರುಗಿರಬಹುದು ಎಂದು ತಿಳಿಸಿದರು. ಈ ಘಟನೆಯು ವೈಜ್ಞಾನಿಕ ಅಧ್ಯಯನಕ್ಕೆ ಯೋಗ್ಯವಾದುದು ಎಂದು ತಿಳಿಸಿದರು.

PC:YOUTUBE

ಸ್ಥಳೀಯರು

ಸ್ಥಳೀಯರು

ಜಟಿಂಗಾ ಜಗತ್ತಿನಲ್ಲಿಯೇ ಪ್ರಸಿದ್ಧವಾಗಿದ ತಾಣವಾಗಿ ಮಾರ್ಪಾಟಾಗಿದೆ. ಅಲ್ಲಿ ಆತ್ಮ ಹತ್ಯೆ ಮಾಡಿಕೊಳ್ಳುವ ಪಕ್ಷಿಗಳು ಅತ್ಯಂತ ರುಚಿಕರವಾಗಿರುತ್ತವೆಯಂತೆ. ಸ್ಥಳೀಯರು ಈ ವಿಲಕ್ಷಣ ಭಕ್ಷ್ಯವನ್ನು ಆನಂದಿಸುತ್ತಾರೆ.


PC:YOUTUBE

ಪ್ರವಾಸೋದ್ಯಮ

ಪ್ರವಾಸೋದ್ಯಮ

ಪ್ರವಾಸೋದ್ಯಮವನ್ನು ಉತ್ತೇಜಿಸಲು, ಅಲ್ಲಿನ ಅಧಿಕಾರಿಗಳು ಜಾತಿ ಉತ್ಸವ ಎಂದು ಕರೆಯಲ್ಪಡುವ ಪಕ್ಷಿ ಆತ್ಮ ಹತ್ಯೆ ಸ್ಥಳದ ಸುತ್ತಲೂ ಹಬ್ಬವನ್ನು ರಚಿಸುತ್ತಾರೆ. ಈ ಸುಂದರವಾದ ಉತ್ಸವು ಮೊದಲಿಗೆ 2010 ರಲ್ಲಿ ನಡೆಯಿತು.


PC:YOUTUBE

 ಸಂರಕ್ಷಣ ಗುಂಪು

ಸಂರಕ್ಷಣ ಗುಂಪು

ಭಾರತದ ಸಂರಕ್ಷಣ ಗುಂಪುಗಳು ಮತ್ತು ವನ್ಯಜೀವಿ ಅಧಿಕಾರಿಗಳು ಭಾರತದಾದ್ಯಂತ ಹಕ್ಕಿಗಳ ಆತ್ಮಹತ್ಯೆಯನ್ನು ತಡೆಗಟ್ಟುವಿಕೆಯನ್ನು ತಡೆಯಲು ಕ್ರಮ ಕೈಗೊಂಡಿದ್ದಾರೆ. ಅನಕ್ಷರಸ್ಥ ಗ್ರಾಮಸ್ಥರಿಗೆ ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

PC:YOUTUBE

ಕೆಲವು ತಪ್ಪುಗಳು

ಕೆಲವು ತಪ್ಪುಗಳು

ಸಾಮಾನ್ಯವಾಗಿ ಸ್ಥಳೀಯರಲ್ಲಿರುವ ಅಜ್ಞಾನದಿಂದಾಗಿ ಹೀಗೆ ಆಗುತ್ತಿದೆ. ಪಕ್ಷಿಗಳು ಭಯಭೀತಗೊಳಿಸುವಂತೆ ಆಕಾಶದಿಂದ ಹಾರುವ ಆತ್ಮಗಳು ಎಂದು ನಂಬುತ್ತಾ ಗ್ರಾಮಸ್ಥರು ಅವುಗಳನ್ನು ಬಿದಿರಿನ ಕೋಲಿನಿಂದ ಹೋಡೆಯುವುದು, ಸೆರೆ ಹಿಡಿಯುವುದೇ ಪಕ್ಷಿಗಳ ಸಾವಿಗೆ ಕಾರಣ ಎಂದು ಕೆಲವರ ವಾದವಾಗಿದೆ.

PC:YOUTUBE

ಸಮೀಪದ ಸ್ಥಳಗಳು

ಸಮೀಪದ ಸ್ಥಳಗಳು

ಜತಿಂಗಾದ ಸಮೀಪದ ಪ್ರವಾಸಿ ತಾಣಗಳೆಂದರೆ ಹಾಫ್‍ಲಾಂಗ್, ಇಂಫಾಲ್, ಭೀಷ್‍ನೂರ್, ಶಿಲ್ಲಾಂಗ್ ಇನ್ನೂ ಹಲವಾರು.


PC:YOUTUBE

ಭೇಟಿ ನೀಡಲು ಪ್ರಶಸ್ತವಾದ ಸಮಯ

ಭೇಟಿ ನೀಡಲು ಪ್ರಶಸ್ತವಾದ ಸಮಯ

ಈ ವಿಸ್ಮಯವು ಸೆಪ್ಟೆಂಬರ್ ತಿಂಗಳಿನಿಂದ ನಂವೆಂಬರ್ ತಿಂಗಳ ಸಮಯದಲ್ಲಿ ನಡೆಯುವುದರಿಂದ, ನೀವು ಒಮ್ಮೆ ಭೇಟಿ ಕೊಟ್ಟ ರಹಸ್ಯವನ್ನು ಭೇಧಿಸಿ.


PC:YOUTUBE