Search
  • Follow NativePlanet
Share
» »ಸತಿಯ ಕಿವಿ ಬಿದ್ದು ಶಕ್ತಿಯಾದಳು ಭೀಮಕಾಳಿ

ಸತಿಯ ಕಿವಿ ಬಿದ್ದು ಶಕ್ತಿಯಾದಳು ಭೀಮಕಾಳಿ

By Vijay

ಶಕ್ತಿಪೀಠಗಳು ಯಾವ ರೀತಿಯಾಗಿ ಹುಟ್ಟಿಕೊಂಡವು? ಅವುಗಳ ನಿರ್ಮಾಣದ ಹಿಂದಿರುವ ಕಥೆಯ ಕುರಿತು ನಿಮಗೆಲ್ಲ ತಿಳಿದಿರಬಹುದು. ಅದರಂತೆ ಕೆಲವರು 51 ಪವಿತ್ರ ಶಕ್ತಿಪೀಠಗಳ ಕುರಿತು ಉಲ್ಲೇಖಿಸಿದ್ದಾರೆ. ಆ 51 ಶಕ್ತಿಪೀಠಗಳ ಪೈಕಿ ಒಂದಾಗಿದೆ ಭೀಮಕಾಳಿ ಶಕ್ತಿಪೀಠ.

ಶಂಕರರು ಪಟ್ಟಿ ಮಾಡಿದ ಆ 18 ಮಹಾ ಶಕ್ತಿಪೀಠಗಳು

ಹಿಮಾಚಲ ರಾಜ್ಯದಲ್ಲಿರುವ, ಅದ್ಭುತವಾದ ಪ್ರಕೃತಿ ಸೌಂದರ್ಯದಿಂದ ಕೂಡಿರುವ, ಒಮ್ಮೆ ಭೇಟಿ ನೀಡಿದರೆ ಸಾಕು ಮನಸ್ಸು ಪ್ರಸನ್ನಗೊಳ್ಳುವಂತೆ ಮಾಡುವ ಸರಾಹನ್ ಎಂಬ ಪುಟ್ಟ ಗ್ರಾಮದಲ್ಲಿ ಭೀಮಕಾಳಿ ದೇವಿಯ ಶಕ್ತಿಪೀಠವಿದೆ. ಅಲ್ಲದೆ ಈ ದೇವಾಲಯವು ಸಹ ವಿಶೇಷವಾಗಿ ಹಾಗೂ ಆಕರ್ಷಕವಾಗಿ ನಿರ್ಮಿತವಾಗಿದೆ. ಕಟ್ಟಿಗೆಯಲ್ಲಿ ಅರಳಿದ ಕಲೆಗೆ ಸಾಕ್ಷಿಯಾಗಿ ನಿಂತಿದೆ ಈ ದೇವಾಲಯ.

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಸಾಮಾನ್ಯವಾಗಿ ಹಿಮಾಚಲ ಪ್ರದೇಶದಲ್ಲಿರುವ ಗಿರಿ ಪ್ರದೇಶಗಳಲ್ಲಿ ಕಂಡುಬರುವ ದೇವಾಲಯಗಳು ಒಂದೆ ರೀತಿಯಲ್ಲಿ ಇರುತ್ತವೆ. ಆದರೆ ಈ ಒಂದು ನಿರ್ಮಾಣ ಪ್ರಕ್ರಿಯೆಗೆ ವಿರೋಧ ವ್ಯಕ್ತ ಪಡಿಸಿದವರಂತೆ ನಿರ್ಮಾಣ ಮಾಡಲಾಗಿದೆ ಈ ಭೀಮಕಾಳಿಯ ದೇವಾಲಯವನ್ನು.

ಚಿತ್ರಕೃಪೆ: John Hill

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಹಿಂದೆ ಈ ಪ್ರದೇಶವನ್ನು ಬುಶಹರ್ ಎಂದು ಕರೆಯಲಾಗುತ್ತಿತ್ತು ಹಾಗೂ ಅದನ್ನು ಪರಿಪಾಲಿಸುತ್ತಿದ್ದ ರಾಜ ವಂಶಸ್ಥರ ಕುಲ ದೇವಿಯಾಗಿಯೂ ನೆಲೆಸಿದ್ದಳು ಈ ಭೀಮಕಾಳಿ. ಇದೊಂದು ಶಕ್ತಿಪೀಠವಾಗಿದ್ದು ಶಿವನು ಸತಿಯ ಮೃತ ದೇಹ ಹಿಡಿದು ನರ್ತಿಸುತ್ತಿದ್ದಾಗ ವಿಷ್ಣುವಿನ ಸುದರ್ಶನ ಚಕ್ರ ಬಂದು ಆ ದೇಹವನ್ನು ತುಂಡರಿಸಿದಾಗ ಸತಿಯ ವಿವಿಧ ಭಾಗಗಳಲ್ಲಿ ಕಿವಿ ಈ ಸ್ಥಳದಲ್ಲಿ ಬಿದ್ದಿತ್ತೆನ್ನಲಾಗಿದೆ.

ಚಿತ್ರಕೃಪೆ: Sanyam Bahga

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ನೆಲೆಸಿರುವ ಈ ಸ್ಥಳವೂ ಸಹ ವಿಶೇಷತೆಯಿಂದ ಕೂಡಿದೆ. ಸ್ಥಳ ಪುರಾಣದಂತೆ ಹಿಂದೆ ಬಲಿ ಚಕ್ರವರ್ತಿಯ ನೂರು ಮಕ್ಕಳಲ್ಲಿ ಮೊದಲಿಗನಾದ ಹಾಗೂ ಪ್ರಹ್ಲಾದನ ಮೊಮ್ಮಗನಾದ ಬಾಣಾಸುರನು ಈ ರಾಜ್ಯವನ್ನು ಪರಿಪಾಲಿಸುತ್ತಿದ್ದನಂತೆ.

ಚಿತ್ರಕೃಪೆ: John Hill

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಹೀಗೆ ಸತಿಯ ಕಿವಿ ಬಿದ್ದ ಈ ಸ್ಥಳವು ಮುಂದೆ ಪಿತಾ ಸ್ಥಾನವಾಗಿ ಆರಾಧಿಸಲ್ಪಡತೊಡಗಿತು. ಬಾಣಸುರನ ನಂತರ ಕೃಷ್ಣನ ಮಕ್ಕಳಾದ ಪ್ರದ್ಯುಮ್ನ ಹಾಗೂ ಸಾಂಬಾರಿಂದ ನಂತರ ಅವರ ವಂಶಸ್ಥರಿಂದ ಈ ಪ್ರದೇಶವು ಪರಿಪಾಲಿಸಲ್ಪಟ್ಟವು.

ಚಿತ್ರಕೃಪೆ: Varun Shiv Kapur

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಶಿಮ್ಲಾದ ಭೀಮಕಾಳಿ ದೇವಾಲಯ ಎಂತಲೆ ಕರೆಯಲ್ಪಡುವ ಈ ದೇವಾಲಯದ ವಾಸ್ತುಶೈಲಿಯು ಸಾಕಷ್ಟು ಭಿನ್ನವಾಗಿದೆ. ಇದರಲ್ಲಿ ಹಿಂದು ಹಾಗೂ ಬೌದ್ಧ ಧರ್ಮಗಳ ಪ್ರಭಾವಗಳು ಎದ್ದು ಕಾಣುತ್ತವೆ. ದೇವಾಲಯವನ್ನು ಕಟ್ಟಿಗೆ ಬಳಸಿ ಅದ್ಭುತವಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ.

ಚಿತ್ರಕೃಪೆ: Vivek.Joshi.us

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಕೆಲವು ಅಂತಸ್ತುಗಳನ್ನು ಹೊಂದಿರುವ ಈ ದೇವಾಲಯದ ಮೇಲಿನ ಮಹಡಿಯಲ್ಲಿ ಭೀಮಕಾಳಿಯ ಸನ್ನಿಧಿಯಿದ್ದರೆ ಕೆಳ ಸ್ತರಗಳಲ್ಲಿ ಪಾರ್ವತಿ ದೇವಿಯ ಸನ್ನಿಧಿಯಿದೆ. ದೇವಾಲಯದಲ್ಲಿ ಬಳಸಲಾದ ಕಟ್ಟಿಗೆಯಲ್ಲಿ ಅದ್ಭುತವಾದ ಕಲೆಗಳು ಅರಳಿರುವುದನ್ನು ಕಾಣಬಹುದು.

ಚಿತ್ರಕೃಪೆ: Varun Shiv Kapur

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಇನ್ನೊಂದು ಸ್ಥಳ ಪುರಾಣದ ಪ್ರಕಾರ, ಹಿಂದೆ ಈ ಪ್ರದೇಶಗಳಲ್ಲಿ ರಾಕ್ಷಸರ ಹಾವಳಿ ಜಾಸ್ತಿಯಾಗಿತ್ತು. ಈ ಪ್ರದೇಶಗಳು ಧ್ಯಾನಕ್ಕೆ, ತಪಸ್ಸಿಗೆ ಯೋಗ್ಯವಾಗಿದ್ದುದರಿಂದ ಇಲ್ಲಿಗೆ ಬರುವ ಪ್ರತಿಯೊಬ್ಬ ಋಷಿ-ಮುನಿಗಳಿಗೆ, ಸಂತರಿಗೆ ಈ ರಾಕ್ಷಸರು ಅತಿಯಾಗಿ ಕಷ್ಟ ನೀಡಲಾರಂಭಿಸಿದರು.

ಚಿತ್ರಕೃಪೆ: Vivek.Joshi.us

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಸ್ಥಿತಿ ಹೀಗಿರುವಾಗ ಒಮ್ಮೆ ಅವರು ಎಲ್ಲ ದೇವತೆಗಳನ್ನು ಕುರಿತು ತಮ್ಮ ಕಷ್ಟ ನಿವಾರಿಸೆಂದು ವಿನಂತಿಸಲಾಗಿ, ಎಲ್ಲ ದೇವರುಗಳ ಶಕ್ತಿ ಒಂದೆಡೆ ಕ್ರೋಢೀಕರಣಗೊಂಡು ಆ ಶಕ್ತಿಯು ಸ್ಫೋಟಗೊಂಡು ಹುಡುಗಿಯ ರೂಪ ತಳೆಯಿತು. ನಂತರ ಆ ಹುಡುಗಿಯೆ ಕಾಲಕ್ರಮೇಣ ಎಲ್ಲ ರಾಕ್ಷಸರನ್ನು ಸಂಹರಿಸಿದಳು. ಅವಳೆ ಭೀಮಕಾಳಿಯಾಗಿ ಇಲ್ಲಿ ನೆಲೆಸಿದಳು.

ಚಿತ್ರಕೃಪೆ: Varun Shiv Kapur

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಅಲ್ಲದೆ ಈ ದೇವಾಲಯಕ್ಕೆ ಸಮ್ಬಂಧಿಸಿದಂತೆ ಹಿಂದೆ ಕೆಲವು ಪವಾಡಗಳು ಇಲ್ಲಿ ನಡೆದಿದ್ದು ಇದು ಸಾಕಷ್ಟು ಪ್ರವಾಸಿಗರ ಕುತೂಹಲ ಕೆರಳಿಸುತ್ತದೆ. ಹಿಂದೆ 1905 ರಲ್ಲೊಮ್ಮೆ ಇಲ್ಲಿ ಭೂಕಂಪನ ಉಂಟಾಗಿ ದೇವಾಲಯವು ಬಾಗಿ ಕೊಂಡಿತು.

ಚಿತ್ರಕೃಪೆ: Goutam1962

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಆದರೆ ನಂತರದಲ್ಲೆ ಭೂಮಿಯಲ್ಲಿ ಮತ್ತೊಂದು ಕಂಪನ ಉಂಟಾಗಿ ಬಾಗಿದ ಗೋಪುರದ ದೇವಾಲಯ ಮತ್ತೆ ತನ್ನ ನೈಜ ಸ್ಥಿತಿಗೆ ಮರಳಿತಂತೆ! ಇದು ಭೀಮಕಾಳಿಯ ಪವಾಡವೆಂದೆ ಇಲ್ಲಿನ ಜನರು ನಂಬುತ್ತಾರೆ ಹಾಗೂ ಆಕೆಯ ಕೃಪೆಯಿಂದ ತಾವು ಕ್ಷೇಮವಾಗಿರುವರೆಂದು ಭಾವಿಸುತ್ತಾರೆ.

ಚಿತ್ರಕೃಪೆ: Manoj Khurana

ಭೀಮಕಾಳಿ ಶಕ್ತಿಪೀಠ:

ಭೀಮಕಾಳಿ ಶಕ್ತಿಪೀಠ:

ಇಲ್ಲಿ ಸುರಂಗ ಮಾರ್ಗವೊಂದಿದ್ದು ಹಿಂದೆ ದೇವಾಲಯದ ಅರ್ಚಕರು ಪಕ್ಕದ ಹಳ್ಳಿಗೆ ತೆರಳಲು ಇದನ್ನು ಬಳಸುತ್ತಿದ್ದರೆನ್ನಲಾಗಿದೆ. 1926 ರಲ್ಲಿ ಹೊಸದಾದ ದೇವಾಲಯ ರಚನೆ ಮಾಡಿ ಅಲ್ಲಿ ಭೀಮಕಾಳಿಯ 200 ವರ್ಷಗಳ ಪುರಾತನ ವಿಗ್ರಹವನ್ನು ಇರಿಸಲಾಗಿದೆ.

ಚಿತ್ರಕೃಪೆ: Vivek.Joshi.us

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more