Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಹನ್ » ಹವಾಮಾನ

ಸರಹನ್ ಹವಾಮಾನ

ಸರಹನ್ ಗೆ ಹೋಗಲು ಆಸಕ್ತಿಯುಳ್ಳ ಪ್ರವಾಸಿಗರು ಏಪ್ರಿಲ್ ಮತ್ತು ನವೆಂಬರ್ ತಿಂಗಳುಗಳ ಮಧ್ಯೆ ಈ ತಾಣಕ್ಕೆ ಭೇಟಿ ನೀಡಬಹುದಾಗಿದೆ. ಪ್ರವಾಸಿಗರು ಚಳಿಗಾಲದಲ್ಲಿ ಕೂಡಾ ಸರಹನ್ ಪ್ರದೇಶಕ್ಕೆ ಪ್ರವಾಸಕ್ಕೆ ಬರಲು ಯೋಜಿಸಬಹುದು.

ಬೇಸಿಗೆಗಾಲ

(ಏಪ್ರೀಲ್ ನಿಂದ ಜೂನ್) : ಸರಹನ್ ನಲ್ಲಿ ಬೇಸಿಗೆ ಏಪ್ರಿಲ್ ನಿಂದ ಆರಂಭವಾಗುತ್ತದೆ ಮತ್ತು ಜೂನ್ ತಿಂಗಳ ತನಕ ಮುಂದುವರೆಯುತ್ತದೆ. ಬೇಸಿಗೆ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ, 25 ಡಿ. ಸೆ ಮತ್ತು 10 ಡಿ. ಸೆ ನಷ್ಟು ದಾಖಲಾಗುತ್ತದೆ.

ಮಳೆಗಾಲ

(ಆಗಸ್ಟ್ ನಿಂದ ನವೆಂಬರ್) : ಮಳೆಗಾಲವು ಆಗಸ್ಟ್ ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಈ ಕಾಲದಲ್ಲಿ, ಈ ಪ್ರದೇಶವು ಮಂದ ಮತ್ತು ಸಾಧಾರಣ ಮಳೆಯನ್ನು ಪಡೆಯುತ್ತದೆ. ತುಲನಾತ್ಮಕವಾಗಿ ಹೇಳುವುದಾದರೆ ಹಗಲಿನಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಮತ್ತು ರಾತ್ರಿ ತಂಪಾಗಿರುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಮಾರ್ಚ್) : ಸರಹನ್ ನಲ್ಲಿ ಡಿಸೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳ ತನಕ ಮುಂದುವರೆಯುವ ಚಳಿಗಾಲ ಅತ್ಯಂತ ಉಪಯುಕ್ತವಾಗಿದೆ. ಹಿಮಾಚಲ ಪ್ರದೇಶದ ಇತರ ಭಾಗಗಳಿಗೆ ಹೋಲಿಸಿದರೆ, ಇಲ್ಲಿ ಚಳಿಗಾಲದಲ್ಲಿ ಬಹಳ ಕಠಿಣವಾಗಿರುವುದಿಲ್ಲ. ಚಳಿಗಾಲದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 20 ಡಿ. ಸೆ ಮತ್ತು 4 ಡಿ. ಸೆ ದಾಖಲಾಗುತ್ತದೆ. ಈ ಋತುವಿನಲ್ಲಿ ಹವಾಮಾನ ಸಾಮಾನ್ಯವಾಗಿ ಆಹ್ಲಾದಕರವಾಗಿರುತ್ತದೆ.  ಆದರೆ ತಾಪಮಾನವು  ಸೂರ್ಯಾಸ್ತದ ನಂತರ ಕುಸಿಯಬಹುದು.