Search
  • Follow NativePlanet
Share
» »ತಿರುಮಲದಲ್ಲಿದೆ ಬಂಗಾರದ ಬಾವಿ !

ತಿರುಮಲದಲ್ಲಿದೆ ಬಂಗಾರದ ಬಾವಿ !

ಶ್ರೀದೇವಿ, ಭೂದೇವಿ ಸಮೇತವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯು ಲೀಲಾ ಮಾನವ ರೂಪದಲ್ಲಿ ಶ್ರೀ ವೈಕುಂಠಾಧಿಪತಿ ಭೂಲೋಕದಲ್ಲಿ ನೆಲೆಸಿದ್ದಾನೆ. ಆ ಮಾಹಿಮಾನ್ವಿತವಾದ ಪವಿತ್ರವಾದ ಕ್ಷೇತ್ರವೇ ತಿರುಮಲ ದೇವಾಲಯ. ಶ್ರೀ ವೆಂಕಟಾಚಲ ಕ್ಷೇತ್ರದಲ್ಲಿ ಸಂಚಾರ ಮಾ

ಶ್ರೀದೇವಿ, ಭೂದೇವಿ ಸಮೇತವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯು ಲೀಲಾ ಮಾನವ ರೂಪದಲ್ಲಿ ಶ್ರೀ ವೈಕುಂಠಾಧಿಪತಿ ಭೂಲೋಕದಲ್ಲಿ ನೆಲೆಸಿದ್ದಾನೆ. ಆ ಮಾಹಿಮಾನ್ವಿತವಾದ ಪವಿತ್ರವಾದ ಕ್ಷೇತ್ರವೇ ತಿರುಮಲ ದೇವಾಲಯ. ಶ್ರೀ ವೆಂಕಟಾಚಲ ಕ್ಷೇತ್ರದಲ್ಲಿ ಸಂಚಾರ ಮಾಟುವ ಸಮಯದಲ್ಲಿ ಸ್ವಾಮಿಯ ಅಡುಗೆಯ ತಯಾರಿಗಾಗಿ ಶ್ರೀ ಮಹಾಲಕ್ಷ್ಮೀ ಒಂದು ತೀರ್ಥವನ್ನು ಏರ್ಪಾಟು ಮಾಡಿದಳು. ಅದನ್ನೇ ಶ್ರೀ ಲಕ್ಷ್ಮೀ ತೀರ್ಥ ಎಂದು ಕರೆಯುತ್ತಾರೆ. ಹಾಗೆಯೇ ಭೂದೇವಿಯು ಕೂಡ ಒಂದು ತೀರ್ಥವನ್ನು ಏರ್ಪಾಟು ಮಾಡಿದಳು, ಅದನ್ನು ಭೂತೀರ್ಥ ಎಂದು ಹೆಸರು ಪಡೆಯಿತು. ಕಾಲನಂತರ ಈ ತೀರ್ಥಗಳೆರಡು ಅದೃಶ್ಯ ನಿಕ್ಷೇಪವಾಯಿತು.

ಮತ್ತೆ ತದನಂತರಕಾಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ವೈಖಾನಸಾಗಮನ ಎಂಬ ಶಾಸ್ತ್ರವನ್ನು ಮಾಡುವ ಸಲುವಾಗಿ ಪ್ರಧಾನ ಅರ್ಚಕನಾದ ಗೋಪಿನಾಥ ಹಾಗು ಆತನ ಸಹಾಯಕ ಆರ್ಚಕನಾದ ರಂಗದಾಸು ಎಂಬ ಸೇವಕ ತಿರುಮಲಕ್ಕೆ ಸೇರಿಕೊಂಡರು.

ಶ್ರೀ ಸ್ವಾಮಿಯ ಆರಾಧನೆಗೆ ಅತ್ಯವಶ್ಯಕವಾದ ಪುಷ್ಪಗಳಿಗಾಗಿ ತೋಟವನ್ನು ಬೆಳಸಬೇಕು ಎಂದು ತೀರ್ಮಾನಿಸಿ 2 ಬಾವಿಗಳನ್ನು ನಿರ್ಮಾಣ ಮಾಡಿದರು. ಅದೇ ಸ್ಥಳದಲ್ಲಿ ಪುರಾತನವಾದ ಕಾಲದಲ್ಲಿದ್ದ, ಶ್ರೀತೀರ್ಥ ಹಾಗು ಭೂ ತೀರ್ಥ ಆ ಸಮದಲ್ಲಿ ಬೆಳಕಿಗೆ ಬಂದಿತು. ಕಾಲನಂತರ ಆ ರಂಗದಾಸು ಮರಣ ಹೊಂದಿದನು. ನಂತರ ಇನ್ನೂ ಆ 2 ಬಾವಿಗಳು ಶಿಥಿಲವಾಯಿತು.

ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲು ತೋಟವನ್ನು ನಿರ್ಮಾಣ ಮಾಡಿ ಪುಷ್ಪಗಳನ್ನು ಸರ್ಮಪಿಸಿದ್ದರಿಂದ ಆ ರಂಗದಾಸುವಿಗೆ ಅನಂತರದ ಕಾಲದಲ್ಲಿ ಒಂದು ಚಕ್ರವರ್ತಿಯಾಗಿ ಜನಿಸಿ ಮತ್ತೇ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಸೇರಿಕೊಂಡನು.

ದೇವಾಲಯದ ಪ್ರಾಂಗಣ

ದೇವಾಲಯದ ಪ್ರಾಂಗಣ

ಮತ್ತೆ ಈ ಜನ್ಮದಲ್ಲಿಯೂ ಕೂಡ ಸ್ವಾಮಿಯನ್ನು ಆರಾಧಿಸುತ್ತಿದ್ದ ಚಕ್ರವರ್ತಿಗೆ ಸ್ವಾಮಿಯು ಕನಸ್ಸಿನಲ್ಲಿ ಬಂದು ತನ್ನ ಪೂರ್ವ ಜನ್ಮದ ವೃತ್ತಾಂತವನ್ನೆಲ್ಲಾ ತಿಳಿಸಿದನು. ಹಾಗೆಯೇ ಸ್ವಾಮಿಯು ಒಂದು ದೇವಾಲಯವನ್ನು ನಿರ್ಮಾಣ ಮಾಡಿ ಅದರ ಮೇಲೆ ಬಂಗಾರದ ವಿಮಾನವನ್ನು ನಿರ್ಮಾಣ ಮಾಡಿ, ಪೂರ್ವ ಜನ್ಮದಲ್ಲಿ ನಿರ್ಮಾಣ ಮಾಡಿದ ಶ್ರೀ ತೀರ್ಥ ಹಾಗು ಭೂ ತೀರ್ಥವನ್ನು ಮತ್ತೆ ಪುನರ್ ಸ್ಥಾಪಿಸಬೇಕು ಎಂದು ಚಕ್ರವರ್ತಿಗೆ ಆಜ್ಞಾಪಿಸಿದನು.

ತೋಡಮಾನ್ ಚಕ್ರವರ್ತಿ

ತೋಡಮಾನ್ ಚಕ್ರವರ್ತಿ

ತನ್ನ ಪೂರ್ವಜನ್ಮ ವೃತ್ತಾಂತವನ್ನು ತಿಳಿದ ಆತನು ಆಶ್ಚರ್ಯ ಪಟ್ಟು ತೋಡಮಾನ್ ಚಕ್ರವರ್ತಿಯು ಶ್ರೀತೀರ್ಥವನ್ನು ಮತ್ತೆ ಪುನರ್ ಅಭಿವೃದ್ಧಿ ಮಾಡಿ ಅದಕ್ಕೆ ಬಂಗಾರದ ಲೇಪನ ಮಾಡಿಸಿದನು. ಅದೇ ಅಂದಿನಿಂದ ಬಂಗಾರದ ಬಾವಿಯಾಗಿ ಪ್ರಸಿದ್ಧಿ ಹೊಂದಿತು.

ಹೂವಿನ ಬಾವಿ

ಹೂವಿನ ಬಾವಿ

ಹಾಗೆಯೇ ಭೂತೀರ್ಥವನ್ನು ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ ಮೆಟ್ಟಿಲ ಬಾವಿ ಎಂದು ಪ್ರಸಿದ್ಧಿ ಹೊಂದಿತು. ಅದು ಈಗ ಹೂವಿನ ಬಾವಿಯಾಗಿದೆ. ಕಾಲಂತರದಲ್ಲಿ ಆ ಶ್ರೀ ತೀರ್ಥ ಎಂದರೆ ಬಂಗಾರು ಬಾವಿಯಾಗಿ ಸ್ವಾಮಿಯ ಅಡುಗೆ ತಯಾರಿಗೆ, ಆರ್ಚನೆಗೆ ಈ ತೀರ್ಥ ಉಪಯೋಗಿಸುತ್ತಾ ಪ್ರಮುಖವಾದ ಸ್ಥಾನವನ್ನು ಹೊಂದಿದೆ.

ಬಂಗಾರದ ಬಾವಿ

ಬಂಗಾರದ ಬಾವಿ

ಈ ಬಂಗಾರದ ಬಾವಿ ಸ್ವಾಮಿಗೆ ದರ್ಶನವನ್ನು ಮಾಡಿದ ನಂತರ ಬಂಗಾರದ ಬಾಗಿಲು ಇದೆ. ಅಲ್ಲಿಂದ ಹೊರಗೆ ಬಂದ ನಂತರ ಎದುರಿಗೆ ಇರುವ ಅಡುಗೆ ತಯಾರಿಯ ಕೊಠಡಿ ಇದೆ. ಅದರ ಎದುರಿಗೆ ಇರುವ ಮಾರ್ಗದಲ್ಲಿ ಎಂದರೆ ವಕುಳಾದೇವಿಯನ್ನು ದರ್ಶನ ಮಾಡಿಕೊಳ್ಳುವುದಕ್ಕೆ ಹೋಗುವ ಮಾರ್ಗದಲ್ಲಿಯೇ ಈ ಬಂಗಾರದ ಬಾವಿ ಇದೆ.

ಶ್ರೀ ತೀರ್ಥ

ಶ್ರೀ ತೀರ್ಥ

ಈ ಬಾವಿಯ ಸುತ್ತ ಭೂಮಿ ಮಟ್ಟದಿಂದ ಸ್ವಲ್ಪ ಎತ್ತರದಲ್ಲಿ, ಕೆತ್ತನೆ ಮಾಡುವ ಶಿಲ್ಪಕ್ಕೆ ಬಳಸುವ ಕಲ್ಲಿನಿಂದ ನಿರ್ಮಾಣ ಮಾಡಿದ್ದಾರೆ. ಈ ಕಲ್ಲಿನ ಕಟ್ಟಡ ಮೇಲೆ ಬಂಗಾರದ ಲೇಪನ ಮಾಡಿರುವ ಬಂಗಾರದ ಬಾವಿಯನ್ನು ಕಾಣಬಹುದಾಗಿದೆ. ಈ ಬಂಗಾರು ಬಾವಿಗೆ ಶ್ರೀ ತೀರ್ಥ, ಸುಂದರಸ್ವಾಮಿ ಬಾವಿ ಎಂದು ಹೆಸರು ಕೂಡ ಇದೆ.

ಪ್ರತಿ ಶುಕ್ರವಾರ

ಪ್ರತಿ ಶುಕ್ರವಾರ

ತಿರುಮಲದಲ್ಲಿ ಶ್ರೀ ವೆಂಕಟೇಶ್ವರಸ್ವಾಮಿಯ ಮೂಲವಿರಾಟನ ಮೂರ್ತಿಗೆ ಪ್ರತಿ ಶುಕ್ರವಾರದ ದಿನ ಅಭಿಷೇಕ ನಡೆಯುತ್ತದೆ. ಈ ಅಭಿಷೇಕವನ್ನು ತಿರುಮಲನಂಬಿ ಎನ್ನುವ ವ್ಯಕ್ತಿಯು 11 ನೇ ಶತಮಾನದಲ್ಲಿ ಪಾಪವಿನಾಶ ತೀರ್ಥದಿಂದ ಪ್ರತಿನಿತ್ಯವು ಈ ಪವಿತ್ರವಾದ ಜಲವನ್ನು ತೆಗೆದುಕೊಂಡು ಸ್ವಾಮಿಗೆ ಅರ್ಪಿಸುತ್ತಿದ್ದರಂತೆ.

ತಿರುಮಲನಂಬಿ

ತಿರುಮಲನಂಬಿ

ಈ ತಿರುಮಲನಂಬಿ ಭಗವದಾಮಾನುಜಾಲ ಎಂಬುವವನಿಗೆ ಗುರು ಮಾತ್ರವೇ ಅಲ್ಲದೇ ಸ್ವಂತ ಮಾವ ಕೂಡ ಆಗಿದ್ದನು. ಹೀಗೆ ಪ್ರತಿನಿತ್ಯವು ಅಭಿಷೇಕ ಜಲವನ್ನು ಸರ್ಮಪಿಸುತ್ತಾ, ಸೇವಿಸುತ್ತಾ ಇರುವ ಕಾಲದಲ್ಲಿ ತಿರುಮಲದಿಂದ ಗುರುವಾಗಿದ್ದ ಯಾಮನಾಚಾರ್ಯರು ತಿರುಮಲಕ್ಕೆ ತೆರಳಿ ಶ್ರೀನಿವಾಸ ಪ್ರಭುವನ್ನು ದರ್ಶನ ಭಾಗ್ಯ ಪಡೆದರು.

ಅಭಿಷೇಕಜಲ

ಅಭಿಷೇಕಜಲ

ಆ ಸಮಯದಲ್ಲಿ ಅತ್ಯಂತ ಭಾರಿ ಮಳೆ ಸಂಭವಿಸಿತು. ಆಗ ತಿರುಮಲದಿಂದ ಪಾಪವಿನಾಶದಿಂದ ಅಭಿಷೇಕ ಜಲವನ್ನು ತೆಗೆದುಕೊಂಡು ಬರಲು ಯಾವುದೇ ವಿಘ್ನ ನಡೆಯಬಾರದು ಎಂದು ಶ್ರೀ ಮಹಾಲಕ್ಷ್ಮೀಯನ್ನು ಹೀಗೆ ಪ್ರಾರ್ಥಿಸಿದನಂತೆ.

ಸ್ವಾಮಿ ಕೂಪ

ಸ್ವಾಮಿ ಕೂಪ

ಶ್ರೀನಿವಾಸ ಅಭಿಷೇಕಕ್ಕೆ ಇತರ ತೀರ್ಥಗಳಿಗಿಂತ ನೀನು ನೆಲೆಸಿರುವ ಶ್ರೀ ತೀರ್ಥಜಲವು ಸರ್ವಶೇಷ್ಟವಾದುದು. ಹಾಗಾಗಿಯೇ ಈ ಜಲವನ್ನು ಇನ್ನು ಮುಂದೆ ಶ್ರೀ ವೆಂಕಟೇಶ್ವರ ಸ್ವಾಮಿಯ ಅಭಿಷೇಕಕ್ಕೆ ಯೋಗ್ಯವಾಗಿರು ತಾಯಿ ಎಂದು ಕೇಳಿಕೊಂಡನು. ಬಂಗಾರು ಬಾವಿಯನ್ನು ಸುಂದರವಾದ ಭಗವಂತನ ರೂಪವೇ ಎಂದು ಅದನ್ನು ಸ್ವಾಮಿ ಕೂಪ ಎಂದು ಎಂದು ನಾಮಕರಣ ಮಾಡಲಾಯಿತು.

ಮೂರು ಬಾವಿಗಳಿವೆ

ಮೂರು ಬಾವಿಗಳಿವೆ

ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಮೂರು ಬಾವಿಗಳು ಇವೆ. ಅವುಗಳು ಯಾವುವು ಎಂದರೆ ಮೊದಲನೆಯದು ಸಂಪಂಗಿ ಪ್ರದಕ್ಷಣೆಯಲ್ಲಿ ರಾಮಾನುಜ ಕೂಟಂ, ಎರಡನೇಯದು ಹೂವಿನ ಬಾವಿ. ಮೂರನೇಯದು ಬಂಗಾರದ ಬಾವಿ. ಇದು ತಿರುಮಾಮಣಿ ಮಂಟಪದ ಎದುರಿಗೆ ಕಾಣಿಸುವ ಬಾವಿಯೇ ಬಂಗಾರದ ಬಾವಿ.

ಬಂಗಾರದ ಬಾವಿ

ಬಂಗಾರದ ಬಾವಿ

ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಕಂಡು ಈಚೆ ಕಾಲು ಇಟ್ಟ ನಂತರ ಎದುರಿನಲ್ಲಿ ಕಾಣಿಸುವುದೇ ಈ ಬಾವಿ. ಈ ಬಾವಿಯನ್ನು ಬಂಗಾರದ ಬಾವಿ ಎಂದು ಕರೆಯುತ್ತಾರೆ. ಇದನ್ನು ಬಂಗಾರದ ಲೇಪನವಿರುವುದರಿಂದ ಇದಕ್ಕೆ ಬಂಗಾರದ ಬಾವಿ ಎಂದು ಖ್ಯಾತಿ ಪಡೆಯಿತು. ಸ್ವಾಮಿಯ ಪೂಜೆಗೆ, ನೈವೇದ್ಯಕ್ಕೆ ಬೇಕಾದ ಜಲವನ್ನು ಈ ಬಾವಿಯ ನೀರನ್ನೇ ಉಪಯೋಗಿಸಲಾಗುತ್ತದೆ.

ತೋಡಮಾನ್ ಚಕ್ರವರ್ತಿ

ತೋಡಮಾನ್ ಚಕ್ರವರ್ತಿ

ಈ ಬಾವಿಯನ್ನು ರಂಗದಾಸು ನಿರ್ಮಾಣ ಮಾಡಿದನು ಎಂಬ ಪುರಾಣ ಕಥೆ ಇದೆ. ಆತನು ಪೂರ್ವ ಜನ್ಮದಲ್ಲಿ ತೋಡಮಾನ್ ಚಕ್ರವರ್ತಿ ಈ ಬಾವಿಯ ಕೆಳಗೆ ವಿರಾಜನದಿ ಹರಿಯುತ್ತಿದೆ ಎಂಬುದು ಪಂಡಿತರ ನಂಬಿಕೆಯಾಗಿದೆ.

ವಕುಳಮಾತ

ವಕುಳಮಾತ

ಈ ಬಾವಿಯಿಂದ ನೀರನ್ನು ಸೇದುವ ಪದ್ಧತಿ ವಿಜನಗರದ ರಾಜ ಕಾಲದಲ್ಲಿನ ಹಂಪಿಯಲ್ಲಿ ನೀರು ಸೇದುವ ಪದ್ಧತಿ ಹೋಲುವಂತೆ ಇದೆ ಎಂದು ಚರಿತ್ರಕಾರರು ಭಾವಿಸುತ್ತಾರೆ. ಸ್ವಾಮಿಯ ಅಭಿಷೇಕಕ್ಕೆ ಬಂಗಾರ ಬಾವಿಯ ನೀರನ್ನು ಉಪಯೋಗಿಸುತ್ತಾರೆ. ವಕುಳಮಾತ ನೆಲೆಸಿದ ಸ್ಥಳದ ಪಕ್ಕದಲ್ಲಿಯೇ ಈ ಬಂಗಾರದ ಬಾವಿಯನ್ನು ಕಾಣಬಹುದಾಗಿದೆ.

ಪುರಾಣಗಳು

ಪುರಾಣಗಳು

ವೈಕುಂಠದಿಂದ ಭೂಲೋಕಕ್ಕೆ ಬಂದ ಶ್ರೀಮನ್ನಾರಾಯಣನ ಅಡುಗೆಗಾಗಿ ಮಹಾಲಕ್ಷ್ಮೀಯು ಈ ತೀರ್ಥವನ್ನು ಏರ್ಪಾಟು ಮಾಡಿದಳು ಎಂದು ಪುರಾಣಗಳು ಹೇಳುತ್ತವೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ತಿರುಮಲಕ್ಕೆ ಸುಮಾರು 267 ಕಿ.ಮೀ ದೂರದಲ್ಲಿದ್ದು, ಹಲವಾರು ಖಾಸಗಿ, ಸರ್ಕಾರಿ ಬಸ್ಸುಗಳ ವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ಸಾಕಷ್ಟು ರೈಲುಗಳು ತಿರುಪತಿಗೆ ಇವೆ. ಹಾಗಾಗಿ ಸುಲಭವಾಗಿ ತಿರುಮಲಕ್ಕೆ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X